ಐಸ್‌ಕ್ರೀಮ್ ಇದು ನಮ್ಮೆಲ್ಲರ ಅತ್ಯಂತ ಪ್ರಿಯವಾದ ವಿಷಯ ! ಐಸ್‌ಕ್ರೀಮ್‌ನಲ್ಲಿನ ಮುಖ್ಯ ಪದಾರ್ಥ ಯಾವುದು ? ಅನೇಕರು ಹಾಲು ಎಂದೇ ಉತ್ತರವನ್ನು ಕೊಡುವರು; ಆದರೆ ಐಸ್‌ಕ್ರೀಮ್ ಅನ್ನು ಹಾಲಿನಿಂದ ತಯಾರಿಸುವುದಿಲ್ಲ, ಅದನ್ನು ಎಣ್ಣೆ ಮತ್ತು ವನಸ್ಪತಿ ತುಪ್ಪದ (ಡಾಲ್ಡಾ) ಮಿಶ್ರಣದಿಂದ ! ಸುಳ್ಳು ಎನಿಸುತ್ತದೆ ಅಲ್ಲವೇ ? ಆದರೆ ಕೊಬ್ಬರಿ ಎಣ್ಣೆ ಮತ್ತು ವನಸ್ಪತಿ ತುಪ್ಪದ ಬೇಸ್ (ಆಧಾರ)ನ್ನು ಬಳಸಿ ಅದರಲ್ಲಿ ಹಾಲಿನ ಪೌಡರ್ ಮತ್ತು ‘ಫ್ಲೆವರ್ಸ’ (ರುಚಿಗಾಗಿ ಬಳಸುವ ಪದಾರ್ಥ), ಹಾಗೆಯೇ ಇತರ ‘ಪ್ರಿಝರ್ವೆಟೀವಸ್’ (ಆಹಾರವು ದೀರ್ಘಕಾಲ ಹಾಳಾಗದಂತೆ ಅದರಲ್ಲಿ ಹಾಕಲಾಗುವ ರಾಸಾಯನಿಕ) ಗಳನ್ನು ಹಾಕಿ ಐಸ್‌ಕ್ರೀಮ್‌ಅನ್ನು ತಯಾರಿಸ ಲಾಗುತ್ತದೆ. ಎಣ್ಣೆ ಬಳಸುವುದರಿಂದ ಐಸ್‌ಕ್ರೀಮ್ ಹೆಚ್ಚು ದಿನ ಬಾಳಿಕೆ ಬರುತ್ತದೆ. ಅದು ಕಡಿಮೆ ಬೆಲೆಗೆ ತಯಾರಾಗುತ್ತದೆ. ಆದ್ದರಿಂದ ಅನೇಕ ದೊಡ್ಡ ದೊಡ್ಡ ಕಂಪನಿಗಳು ಇದೇ ಪದಾರ್ಥ ಗಳಿಂದ ಐಸ್‌ಕ್ರೀಮ್‌ಅನ್ನು ತಯಾರಿಸುತ್ತಾರೆ. ಐಸ್‌ಕ್ರೀಮ್ ತಿನ್ನು ವಾಗ ನಿಮ್ಮ ಬಾಯಿ ಜಿಡ್ಡಾಗುವುದು, ಇದು ನಿಮಗೆ ಎಂದಿನಂತೆ ಅನುಭವವಾಗಿರಬಹುದು. ನಮಗೆ ಅದರಲ್ಲಿನ ಹಾಲಿನಿಂದ ಹಾಗೆ ಆಗುತ್ತದೆ, ಎಂದು ಎನಿಸುತ್ತದೆ. ಪ್ರತ್ಯಕ್ಷದಲ್ಲಿ ಮಾತ್ರ ಎಣ್ಣೆಯಿಂದಾಗುತ್ತದೆ. ನಿಜ ಹೇಳುವುದಾದರೆ ಐಸ್‌ಕ್ರೀಮ್ ತಿಂದು ನಮ್ಮ ಬಾಯಿ ಜಿಡ್ಡಾಗುತ್ತದೆ. ಹೀಗಿರುವಾಗ ಈ ವಿಷಯದ ಬಗ್ಗೆ ಯಾರು ಏಕೆ ಕ್ರಮ ಕೈಗೊಳ್ಳುವುದಿಲ್ಲ ? ಇಲ್ಲಿಯೇ ನಿಜವಾದ ಗುಟ್ಟು ಇದೆ. ಆಹಾರ ಮತ್ತು ಔಷಧ ಆಡಳಿತದ ನಿಯಮಕ್ಕನುಸಾರ ಅಗತ್ಯವಿರುವ ‘ಫ್ಯಾಟ್’ (ಕೊಬ್ಬಿನ ಪ್ರಮಾಣವನ್ನು) ಪ್ರಮಾಣವನ್ನು ಈ ಐಸ್ ಕ್ರೀಮ್‌ನಲ್ಲಿ ಪೂರೈಸಿರುವುದರಿಂದ ಅದರಲ್ಲಿ ಇತರ ಯಾವ ಪದಾರ್ಥಗಳಿವೆ? ಎಂಬುದರ ಬಗೆಗೆ ಯಾರಿಗೂ ಅದರ ಬಗ್ಗೆ ಏನೂ ಕರ್ತವ್ಯ ಇರುವುದಿಲ್ಲ ಅಥವಾ ಅದರಲ್ಲಿನ ಪದಾರ್ಥಗಳ ಹೆಸರುಗಳನ್ನು ಪಾಕೀಟಿನ ಮೇಲೆ ಉಲ್ಲೇಖಿಸಿದ್ದರೂ ನಾವು ಅದನ್ನು ಓದುವುದೇ ಇಲ್ಲ. ಪ್ರತ್ಯಕ್ಷದಲ್ಲಿ ಕೇವಲ ಹಾಲಿನಿಂದ ತಯಾರಿಸಿದ ಐಸ್‌ಕ್ರೀಮ್ ಇದು ‘ಡೈರಿ ಐಸ್‌ಕ್ರೀಮ್’ ಎಂಬ ಹೆಸರಿನಲ್ಲಿ ಸಿಗುತ್ತದೆ. ಅದು ಸ್ವಲ್ಪ ದಿನವೇ ಬಾಳಿಕೆ ಬರುತ್ತದೆ.
(ಆಧಾರ : ದ ಡೇಲಿ ಮೇಲ್, ಯುನೈಟೆಡ್ ಕಿಂಗ್‌ಡಮ್, ೧೧ ಡಿಸೆಂಬರ್ ೨೦೧೪)
ಈ ಪದ್ಧತಿಯಿಂದ ಎಣ್ಣೆ-ವನಸ್ಪತಿತುಪ್ಪ (ಡಾಲಡಾ) ಈ ಮಿಶ್ರಣದಿಂದ ತಯಾರಿಸಿದ ಐಸ್‌ಕ್ರೀಮ್‌ನಿಂದ ಆರೋಗ್ಯಕ್ಕೆ ಅಪಾಯವಿದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಪ್ರಜ್ಞಾವಂತರಿಗೆ ಹೆಚ್ಚು ಹೇಳುವ ಅಗತ್ಯವಿಲ್ಲ !
– ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ತಜ್ಞರು, ಡೊಂಬಿವಲಿ, ಮುಂಬೈ.