ಕಾಲದ ವ್ಯತ್ಯಾಸ(ಅಂತರ) ಮತ್ತು ಅಧಿಕ ಮಾಸದಲ್ಲಿನ ವರ್ಜ್ಯ ಕರ್ಮಗಳು

ಅಧಿಕ ಮಾಸದ ಶಾಸ್ತ್ರೀಯ ಮಾಹಿತಿ

ಕಳೆದ ಎರಡು ಭಾಗಗಳಲ್ಲಿ ನಾವು ಅಧಿಕ ಅಥವಾ ಕ್ಷಯಮಾಸ ಅಂದರೆ ಮಲಮಾಸವೆಂಬ ಸಂಜ್ಞೆ ಇದೆಯೋ, ಆ ಬಗ್ಗೆ ಮತ್ತು ಅಧಿಕ ಮಾಸದಲ್ಲಿ ಯಾವ ಕರ್ಮಗಳನ್ನು ಮಾಡಬೇಕು ? ಮತ್ತು ಯಾವ ಕರ್ಮಗಳನ್ನು ಮಾಡಬಾರದು ? ಈ ಬಗೆಗಿನ ಮಾಹಿತಿಯನ್ನು ತಿಳಿದುಕೊಂಡೆವು. ಇಂದಿನ ಲೇಖನದಲ್ಲಿ ಕಾಲದ ಭೇದವನ್ನು(ಅಂತರವನ್ನು) ತಿಳಿದುಕೊಳ್ಳೋಣ.

(ಭಾಗ ೩)

೬. ಸೌರ(ಸೂರ್ಯ) ಮತ್ತು ಚಂದ್ರ ಈ ಎರಡೂ ಸಂವತ್ಸರಗಳಲ್ಲಿನ ೧೧ ದಿನಗಳ ಅಂತರವನ್ನು ದೂರ ಮಾಡಲು ಅಧಿಕ ಮಾಸ

ವರ್ಷ, ಅಯನ(ಸೂರ್ಯನ ವೇಗ), ಋತು, ಮಾಸ, ಪಕ್ಷ ಮತ್ತು ದಿನಗಳು ಹೀಗೆ ೬ ಪ್ರಕಾರದ ಕಾಲಗಳಿವೆ. ಚಂದ್ರ, ಸೌರ, ಸವನ, ನಕ್ಷತ್ರ ಮತ್ತು ಬಾರ್ಹಸ್ಪತ್ಯ ಹೀಗೆ ೬ ಪ್ರಕಾರದ ವರ್ಷಗಳಿವೆ. ಚಂದ್ರಮಾಸ, ಎಂದರೆ ಶುಕ್ಲ ಪಾಡ್ಯದಿಂದ ಅಮಾವಾಸ್ಯೆಯವರೆಗೆ ದಿನಗಳು ಸೇರಿ ಒಂದು ತಿಂಗಳು ಆಗುತ್ತದೆ ಮತ್ತು ಈ ರೀತಿ ಚೈತ್ರದಿಂದ ಫಾಲ್ಗುಣದವರೆಗೆ ೧೨ ತಿಂಗಳುಗಳ ೩೫೪ ದಿನಗಳಿಂದ ಒಂದು ಚಂದ್ರ ವರ್ಷವಾಗುತ್ತದೆ. ಅಧಿಕ ಮಾಸವಿದ್ದರೆ ೧೩ ಮಾಸಗಳ ಚಂದ್ರವರ್ಷವಾಗುತ್ತದೆ. ೬೦ ಸಂವತ್ಸರಗಳು ಇವು ಚಂದ್ರಮಾಸಕ್ಕನುಸಾರವೇ ಆಗುತ್ತವೆ. ಸೂರ್ಯನು ಮೇಷದಿಂದ ಮೀನ ರಾಶಿಯವರೆಗೆ ೧೨ ರಾಶಿಗಳನ್ನು ಆಕ್ರಮಿಸುತ್ತಾನೆ, ಆಗ ೩೬೫ ದಿನಗಳ ಸೌರ ವರ್ಷವಾಗುತ್ತದೆ.

ವೇದಮೂರ್ತಿ ಭೂಷಣ ದಿಗಂಬರ ಜೋಶಿ

೩೬೦ ದಿನಗಳ ವರ್ಷಕ್ಕೆ ‘ಸಾವನ ವರ್ಷ’ ಎನ್ನಲಾಗುತ್ತದೆ. ‘ಸಾವನ ಮಾಸ’ವು ೩೦ ದಿನಗಳದ್ದಾಗಿರುತ್ತದೆ. ೧೨ ನಕ್ಷತ್ರ ಮಾಸಗಳ ವರ್ಷಕ್ಕೆ ‘ನಕ್ಷತ್ರ ಮಾಸ’ ಎಂಬ ಸಂಜ್ಞೆ ಇದೆ ಮತ್ತು ಅದು ೩೨೪ ದಿನಗಳದ್ದಾಗಿರುತ್ತದೆ. ಚಂದ್ರನು ಅಶ್ವಿನಿಯಿಂದ ರೇವತಿಯವರೆಗೆ ೨೭ ನಕ್ಷತ್ರಗಳನ್ನು ಆಕ್ರಮಿಸಿದರೆ, ನಕ್ಷತ್ರ ಮಾಸವಾಗುತ್ತದೆ. ಮೇಷ ಇತ್ಯಾದಿ ಪ್ರತಿಯೊಂದು ರಾಶಿಯನ್ನು ಬ್ರಹಸ್ಪತಿ ಗ್ರಹವು ಆಕ್ರಮಿಸಿದರೆ ‘ಬಾರ್ಹಸ್ಪತ್ಯ ವರ್ಷ’ವಾಗುತ್ತದೆ. ಇದು ೩೬೧ ದಿನಗಳದ್ದಾಗಿರುತ್ತದೆ. ಸೌರ ಮತ್ತು ಚಂದ್ರ ಈ ಎರಡೂ ಸಂವತ್ಸರಗಳಲ್ಲಿನ ೧೧ ದಿನಗಳ ಅಂತರ ಸಹ ಸುಯೋಗ್ಯ ಗಣಿತದಿಂದ ಸಮತೋಲನವಾಗಬೇಕು ಮತ್ತು ಆಕಾಶದಲ್ಲಿನ ಗ್ರಹಗಳ ಸ್ಥಿತಿ ಪಂಚಾಂಗ ಗಣಿತವು ಪರಸ್ಪರರಿಗೆ ಪೂರಕವಾಗಬೇಕೆಂದು ಪರಿಪೂರ್ಣ ಕಾಲಗಣನೆಯನ್ನು ಸೃಷ್ಟಿಸಲು (ಮಲಮಾಸ) ಅಧಿಕ ಮಾಸವಿದೆ.

೭. ಅಧಿಕ ಮಾಸದಲ್ಲಿ ವರ್ಜಿತ ಕರ್ಮಗಳು

ಅ. ಉಪಾಖ್ಯ(ಚಿಕ್ಕ ಆಖ್ಯಾನ), ಉತ್ಸರ್ಜನ (ಶ್ರಾವಣಿ), ಅಷ್ಟಕಾಶ್ರಾದ್ಧಗಳನ್ನು ಮಾಡಬಾರದು.

ಆ. ಜಾವಳ(ಚೌಲಕರ್ಮ), ಮುಂಜಿ, ವಿವಾಹ, ಸಂಕಲ್ಪಪೂರ್ವಕ ತೀರ್ಥಯಾತ್ರೆ, ವಾಸ್ತುಕರ್ಮ, ಗೃಹಪ್ರವೇಶ, ದೇವರ ಪ್ರತಿಷ್ಠಾಪನೆ, ಬಾವಿ, ಕೊಳ, ತೋಟ, ಉದ್ಯಾನಗಳ ಬಿಡುಗಡೆ (ಶುದ್ಧಿಕರಣಪೂರ್ವಕ ಲೋಕಾರ್ಪಣೆ) ಮಾಡಬಾರದು.

ಇ. ಹೊಸ ಬಟ್ಟೆಗಳನ್ನು ಮತ್ತು ಆಭರಣಗಳನ್ನು ಧರಿಸಬಾರದು, ತುಲಾದಾನ, ಮಹಾದಾನಗಳನ್ನು ನೀಡಬಾರದು.

ಈ. ಈ ಹಿಂದೆ ನೋಡದ ದೇವರು, ತೀರ್ಥ ಮತ್ತು ತೀರ್ಥಕ್ಷೇತ್ರಗಳ ದರ್ಶನವನ್ನು ಮಾಡಬಾರದು,

ಉ. ಸನ್ಯಾಸ ಗ್ರಹಣ, ಕಾಮ್ಯವೃಷೋತ್ಸರ್ಗ, ದೇವರಿಗೆ ದವನವನ್ನು ಅರ್ಪಿಸುವುದು, ದೇವರ ಸ್ಥಾನ(ಮಡಿಲನ್ನು) ಬದಲಾಯಿಸುವುದು, ನಾಗಬಲಿ, ಶ್ರವಣಕರ್ಮ ಇವೆಲ್ಲವುಗಳನ್ನು ಅಧಿಕ ಮಾಸದಲ್ಲಿ ವರ್ಜಿಸಬೇಕು.

ಊ. ಹಾಗೆಯೇ ಯಜ್ಞಕರ್ಮ ಮತ್ತು ಅಗ್ನಿಸ್ಥಾಪನೆ (ಅಗ್ನಿಹೋತ್ರ ಸ್ವೀಕಾರ) ಮಾಡಬಾರದು.

ಎ. ಈ ಮಾಸದಲ್ಲಿ ರಾಜ್ಯಾಭಿಷೇಕವೂ ವರ್ಜ್ಯವಿದೆ.

ಮುಂದಿನ ಸಂಚಿಕೆಯಲ್ಲಿ ಈ ಲೇಖನದ ಕೊನೆಯ ಭಾಗದಲ್ಲಿ ನಾವು ‘ಅಧಿಕ ಮಾಸದಲ್ಲಿ ಏನು ಮಾಡಬೇಕು ? ಮತ್ತು ಯಾವ ಆಚರಣೆಗಳನ್ನು ಮಾಡಬೇಕು ?’, ಇವುಗಳ ಬಗ್ಗೆ ತಿಳಿದುಕೊಳ್ಳೋಣ.

– ವೇದಮೂರ್ತಿ ಭೂಷಣ ದಿಗಂಬರ ಜೋಶಿ, ವೆಂಗುರ್ಲಾ, ಜಿಲ್ಲೆ ಸಿಂಧುದುರ್ಗ (೧೬.೭.೨೦೨೩)