ಅರುಣಾಚಲ ಪ್ರದೇಶದಲ್ಲಿನ ಆಟಗಾರರಿಗೆ ‘ಸ್ಟೆಪಲ್ಡ್ ವೀಸಾ’ ನೀಡಿರುವುದರಿಂದ ಚೀನಾದಲ್ಲಿನ ಸ್ಪರ್ಧೆಗೆ ಭಾರತದಿಂದ ಬಹಿಷ್ಕಾರ

ಭಾರತೀಯ ಆಟಗಾರರು ವಿಮಾನ ನಿಲ್ದಾಣದಿಂದ ಹಿಂತಿರುಗಿದರು !

(‘ಸ್ಟೇಪಲ್ಡ ವೀಸಾ’ ಎಂದರೆ ಒಂದು ದೇಶಕ್ಕೆ ಹೋಗುಲು ಇರುವ ಅನುಮತಿ ಪಾಸ್ಪೋರ್ಟ್ ಮೇಲೆ ಸ್ಟ್ಯಾಂಪ್ ಹಾಕದೆ ಬೇರೆ ಕಾಗದ ಮೇಲೆ ಮಾಹಿತಿ ಬರೆದು ಅದರ ಮೇಲೆ ಸ್ಟ್ಯಾಂಪ್ ಹಾಕಿ ಆ ದಾಖಲೆ ಪಾಸ್ ಪೋರ್ಟ್ ಗೆ ‘ಸ್ಟೆಪಲ್ ಪಿನ್’ ಮಾಡಿ ಜೋಡಿಸುವುದು)

ನವ ದೆಹಲಿ – ಚೀನಾದಲ್ಲಿ ‘ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್’ ಈ ಹೆಸರಿನಿಂದ ನಡೆಯುವ ಮಾರ್ಷಲ್ ಆರ್ಟ್ ಸ್ಪರ್ಧೆಗಾಗಿ ಭಾರತ ತಮ್ಮ ತಂಡ ಕಳುಹಿಸದೇ ಇರುವ ನಿರ್ಣಯ ತೆಗೆದುಕೊಂಡಿದೆ. ಈ ತಂಡವನ್ನು ವಿಮಾನ ನಿಲ್ದಾಣದಿಂದ ಹಿಂತಿರುಗಿ ಕರೆಸಲಾಗಿದೆ. ಈ ತಂಡದಲ್ಲಿ ಅರುಣಾಚಲ ಪ್ರದೇಶದ ೩ ಆಟಗಾರರ ಸಮಾವೇಶವಿದೆ; ಆದರೆ ಚೀನಾದಿಂದ ವೀಸಾ ನೀಡುವಾಗ ಇತರ ಆಟಗಾರರಿಗೆ ‘ಸ್ಟ್ಯಾಂಪ್ ವಿಸಾ’ (ಪಾಸ್ಪೋರ್ಟ್ ಮೇಲೆ ಸ್ಟ್ಯಾಂಪ್ ಹಾಕಿ ನೀಡುವ ಅನುಮತಿ) ನೀಡಿದರೆ ಅರುಣಾಚಲ ಪ್ರದೇಶದಲ್ಲಿನ ಈ ಮೂರು ಆಟಗಾರರಿಗೆ ‘ಸ್ಟೇಪಲ್ಡ್ ವಿಸಾ’ ನೀಡಿದ್ದಾರೆ. ಇದನ್ನು ಖಂಡಿಸಿ ಭಾರತ ತನ್ನ ತಂಡವನ್ನು ಹಿಂದೆ ಕರೆಸಿದ್ದಾರೆ.

(ಸೌಜನ್ಯ – NewsX)

ಇದರ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ ಬಾಗಾಚಿ ಇವರು, ಚೀನಾದ ಈ ನಿರ್ಣಯ ಸ್ವೀಕರಿಸಲು ಸಾಧ್ಯವಿಲ್ಲ, ಈ ರೀತಿಯ ಕೃತಿಗಳಿಗೆ ಯೋಗ್ಯ ರೀತಿಯಲ್ಲಿ ಉತ್ತರ ನೀಡುವ ಅಧಿಕಾರ ಭಾರತಕ್ಕೆ ಇದೆ. ಭಾರತ ಕಾನೂನು ರೀತಿಯ ವೀಸಾ ಇರುವ ನಾಗರೀಕರಿಗೆ ವೀಸಾ ನೀಡುವಾಗ ಅವರ ಪ್ರಾದೇಶಿಕತೆಯ ಆಧಾರದ ಮೇಲೆ ಅವರಲ್ಲಿ ಭೇದ ಭಾವ ಮಾಡಬಾರದು, ಎಂದು ನಮ್ಮ ನಿಲುವು ದೃಢವಾಗಿದೆ. ನಾವು ಈ ಸಂದರ್ಭದಲ್ಲಿ ನಮ್ಮ ನಿಲುವು ಚೀನಾದ ಸರಕಾರಕ್ಕೆ ತಿಳಿಸಿದ್ದೇವೆ.

‘ವೀಸಾಗಾಗಿ ತಡವಾಗಿ ಅರ್ಜಿ ಸಲ್ಲಿಸಿರುವುದರಿಂದ ‘ಸ್ಟೇಪಲ್ಡ್ ವಿಸಾ’ ! (ಅಂತೆ) – ಚೀನಾದ ದಾವೆ

ಈ ವಿಷಯವಾಗಿ ಚೀನಾದಿಂದ ಪ್ರತಿಕ್ರಿಯೆ ಬಂದಿದೆ. ಚೀನಾ, ಸಂಬಂಧಪಟ್ಟ ೩ ಆಟಗಾರರು ಜುಲೈ ೧೬ ರಂದು ವೀಸಾಗೆ ಅರ್ಜಿ ಸಲ್ಲಿಸಿದರು. ಅಲ್ಲಿಯವರೆಗೆ ಇತರ ಆಟಗಾರರ ಅರ್ಜಿ ಮುಂದೆ ಕಳುಹಿಸಲಾಗಿತ್ತು. ಆದ್ದರಿಂದ ಈ ೩ ಆಟಗಾರರ ದಾಖಲೆ ಸ್ವೀಕರಿಸಲಿಲ್ಲ. ಆದ್ದರಿಂದ ಅವರಿಗೆ ಮತ್ತೆ ಅರ್ಜಿ ಸಲ್ಲಿಸಲು ಹೇಳಿದೆವು. ಅದರ ನಂತರ ಚೀನಾ ರಾಯಭಾರಿ ಕಚೇರಿಯಿಂದ ಅವರ ಪಾಸ್ಪೋರ್ಟ್ ‘ಸ್ಟೇಪಲ್ಡ್ ವೀಸಾ’ ಸಹಿತ ಹಿಂತಿರುಗಿಸಿದೆ.

ನಿರಂತರವಾಗಿ ಭಾರತ ವಿರೋಧಿ ಕೃತ್ಯ ಎಸಗುವ ಚೀನಾ !

೨೦೧೧ ರಲ್ಲಿ ಚೀನಾದ ಗ್ವಾನ್ಗಝೋನಲ್ಲಿನ ಸ್ಪರ್ಧೆಗಾಗಿ ಅರುಣಾಚಲ ಪ್ರದೇಶದ ೫ ಆಟಗಾರರಿಗೆ ಕೂಡ ಇದೇ ರೀತಿ ಸ್ಟೆಪಲ್ಡ್ ವೀಸಾ ನೀಡಿತ್ತು. ೨೦೧೩ ರಲ್ಲಿ ಕೂಡ ಯೂತ್ ವರ್ಲ್ಡ್ ಚಾಂಪಿಯನ್ಶಿಪ್ ಗಾಗಿ ಹೋಗುವ ೨ ಆಟಗಾರರಿಗೆ ಸ್ಟೇಪಲ್ಡ್ ವೀಸಾ ನೀಡಿತ್ತು. ೨೦೧೬ ರಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡದ ವ್ಯವಸ್ಥಾಪಕರು ಅರುಣಾಚಲ ಪ್ರದೇಶದವರಾಗಿರುವುದರಿಂದ ಅವರಿಗೆ ಚೀನಾದ ವೀಸಾ ದೊರೆತಿರಲಿಲ್ಲ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಭಾರತವು ಚೀನಾಗೆ ಈ ರೀತಿಯ ಪ್ರತ್ಯುತ್ತರ ನೀಡುವುದು ಅವಶ್ಯಕವಾಗಿದೆ !