ಶಾಲೆಗಳಲ್ಲಿ ಸ್ಮಾರ್ಟ್‌ ಫೋನ್‌ ಗಳನ್ನು ನಿಷೇಧಿಸಿ ! – ಯುನೆಸ್ಕೋ

ಯುನೆಸ್ಕೋದ ಶಿಫಾರಸು

(ಯುನೆಸ್ಕೋ ಎಂದರೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಙಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ)

ಹೊಸದೆಹೆಲಿ – ಅಭ್ಯಾಸಗಳಲ್ಲಿನ ಅಡಚಣೆಗಳನ್ನು ತಡೆಗಟ್ಟಲು, ಕಲಿಕೆಯನ್ನು ಸುಧಾರಿಸಲು ಮತ್ತು ಮಕ್ಕಳನ್ನು ಸೈಬರ್‌ ಅಪರಾಧದಿಂದ ರಕ್ಷಿಸಲು ಶಾಲೆಗಳಲ್ಲಿ ಸ್ಮಾರ್ಟ್‌ ಫೋನ್‌ ಗಳನ್ನು ನಿಷೇಧಿಸುವುದನ್ನು ಯುನೆಸ್ಕೋ ಅಂದರೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ತನ್ನ ೨೦೨೩ ರ ‘ಗ್ಲೋಬಲ್ ಎಜುಕೇಶನ್ ಮಾನಿಟರ್’ ವರದಿಯಲ್ಲಿ ಶಿಫಾರಸು ಮಾಡಿದೆ.

೧. ಯುನೆಸ್ಕೋ ಪ್ರಕಾರ, ಇಂದು ಅನೇಕ ಶಾಲೆಗಳು ಆನ್ ಲೈನ್‌ ಶಿಕ್ಷಣವನ್ನು ನೀಡುತ್ತವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಆನ್‌ ಲೈನ್‌ ಶಿಕ್ಷಣವನ್ನು ಸಹ ಸುಗಮಗೊಳಿಸಿದೆ; ಆದರೆ ಈ ಸೌಲಭ್ಯದಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಮಾಡಿದ ಹೊಸ ಪ್ರಯೋಗಗಳು ಯಾವಾಗಲೂ ಒಳ್ಳೆಯದಲ್ಲ. ಪ್ರತಿಯೊಂದು ಬದಲಾವಣೆಯು ಪ್ರಗತಿಗೆ ಕಾರಣವಾಗುವುದಿಲ್ಲ. ಹೊಸದನ್ನು ಮಾಡಬೇಕಾಗಿದ್ದರೂ, ಅದನ್ನು ಮಾಡಬೇಕು ಎಂದು ಅರ್ಥವಲ್ಲ. ಮೊಬೈಲ್‌ ಫೋನ್‌ ಗಳ ಅತಿಯಾದ ಬಳಕೆಯು ಶೈಕ್ಷಣಿಕ ಕಾರ್ಯಕ್ಷಮತೆಯನ್ನು ನಿಧಾನಗೊಳಿಸುತ್ತದೆ. ಮೊಬೈಲ್‌ ಫೋನ್‌ ಗಳನ್ನು ನಿರಂತರವಾಗಿ ನೋಡುವುದರಿಂದ ಮಕ್ಕಳ ಭಾವನಾತ್ಮಕ ಸ್ಥಿರತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಮಕ್ಕಳು ಕಿರಿ ಕಿರಿ ಮತ್ತು ಕೋಪಗೊಳ್ಳುತ್ತಾರೆ ಎಂದು ಯುನೆಸ್ಕೋ ತೀರ್ಮಾನಿಸಿದೆ.

೨. ಯುನೆಸ್ಕೊದ ಮಹಾಸಂಚಾಲಕ ಆಂಡ್ರೆ ಅಝೌಲೆ ಇವರು, ಆನ್‌ ಲೈನ್‌ ಶಿಕ್ಷಣವನ್ನು ಒದಗಿಸುವಾಗ ಶಿಕ್ಷಣದ ಸಾಮಾಜಿಕ ಪರಿಣಾಮಗಳನ್ನು ನಿರ್ಲಕ್ಷಿಸಬಾರದು. ಡಿಜಿಟಲ್‌ ಕ್ರಾಂತಿಯು ಅಪಾರ ಸಾಮರ್ಥ್ಯವನ್ನು ಹೊಂದಿದೆ; ಆದರೆ ಸಮಾಜದಲ್ಲಿ ಅದಕ್ಕೆ ನಿಯಂತ್ರಣವಿಲ್ಲ. ‘ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್‌ ಕ್ರಾಂತಿ ಹೇಗೆ ಬಳಕೆಯಾಗುತ್ತಿದೆ’, ಎಂಬುದರ ಬಗ್ಗೆ ಗಮನಹರಿಸಬೇಕು. ಶಿಕ್ಷಣದಲ್ಲಿ ಡಿಜಿಟಲ್‌ ಕ್ರಾಂತಿ ವಿದ್ಯಾರ್ಥಿಗಳ ಅಭಿವೃದ್ಧಿಗೆ ಆಗಬೇಕು. ಈ ಬದಲಾವಣೆ ವಿದ್ಯಾರ್ಥಿಗಳಿಗೆ ಅಪಾಯವಾಗಬಾರದು. ವಿದ್ಯಾರ್ಥಿಗಳ ಅಗತ್ಯಗಳಿಗೆ ಆದ್ಯತೆ ನೀಡಿ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನಕ್ಕೆ ಆನ್‌ ಲೈನ್‌ ಸೌಲಭ್ಯಗಳು ಪರ್ಯಾಯವಾಗಿರಬಾರದು. ಶಿಕ್ಷಕರು ಮೊದಲಿಗರಾಗಬೇಕು. ಚೀನಾದ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್‌ ಕ್ರಾಂತಿ ನಡೆದಿದ್ದರೂ, ಮಿತಿಗಳನ್ನು ನಿಗದಿಪಡಿಸಲಾಗಿದೆ. ಒಟ್ಟು ಸಮಯದ ಶಿಕ್ಷಣ ಶೇಕಡಾ ೩೦ ರಷ್ಟು ಮಾತ್ರ ಡಿಜಿಟಲ್‌ ಮಾಧ್ಯಮದ ಮೂಲಕ ನೀಡಲಾಗುತ್ತದೆ.

ಸಂಪಾದಕೀಯ ನಿಲುವು

ಸ್ಮಾರ್ಟ್ ಫೋನ್ ಗಳಿಂದ ಮಕ್ಕಳ ಮೇಲೆ ಬೀರುವ ದುಷ್ಪರಿಣಾಮಗಳನ್ನು ನೋಡಿ ಪೋಷಕರು ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಮಕ್ಕಳನ್ನು ಅದರಿಂದ ದೂರವಿಡಬೇಕು !