ಭಾರತವು ವಿನಾಶದ ಜ್ವಾಲಾಮುಖಿಯ ಮೇಲೆ ಕುಳಿತಿದೆ !

ಸ್ವಾತಂತ್ರ್ಯಾನಂತರ ಮುಂದೊಂದು ದೇಶದ ರಾಜಕಾರಣಿಗಳು ಜನರ ರಕ್ತ ಕುಡಿಯುವರು ಮತ್ತು ಭಾರತ ವಾಸಿಗಳ ಶೋಕ ಮತ್ತು ಆಕ್ರೋಶಗಳಿಂದ ದೇಶದ ಆಕಾಶ ಥರಗುಟ್ಟುವುದೆಂದು ಈ ಕ್ರಾಂತಿಕಾರಿಗಳಿಗೆ ಕಲ್ಪನೆಯೂ ಇರಲಿಲ್ಲ. ಇಂದು ನಮ್ಮ ಭೂಮಿ ಮತ್ತು ಆಕಾಶ ಎಲ್ಲಿದೆ ? ಈಗ ಈ ಭೂಮಿ ಮತ್ತು ಆಕಾಶ ದರೋಡೆಕೋರರು ಹಾಗೂ ಬಂಡವಾಳಶಾಹಿಗಳಿಗೆ ಸೇರಿದೆ. ರಾಜಕಾರಣವು ಒಂದು ವೃತ್ತಿಯಾಗಿದೆ. ಇಲ್ಲಿ ಕುಟುಂಬಶಾಹಿಯ ಬಾವುಟ ಹಾರಾಡುತ್ತಿದೆ. ಕುಟುಂಬಶಾಹಿಯು ಪ್ರಜಾಪ್ರಭುತ್ವವನ್ನು ತುಳಿಯುತ್ತಿದೆ. ದೇಶಭಕ್ತರು, ನಿಷ್ಕಾಮ ಕರ್ಮಯೋಗಿಗಳು, ಜನರ ಸೇವಕರು, ಪ್ರಾಮಾಣಿಕರು ಮತ್ತು ನಿಷ್ಟಾವಂತರು ಮುಂತಾದವರಿಗೆ ರಾಜಕಾರಣದಲ್ಲಿ ಯಾವುದೇ ಮಹತ್ವವಿಲ್ಲ.
(ಆರ್ಯ ನೀತಿ, ೧೦.೧೧.೨೦೦೯)