ಹುಬ್ಬಳ್ಳಿಯ ‘ನಾಟ್ಯಾಂಜಲಿ ಕಲಾ ಕೇಂದ್ರದ ಸಂಸ್ಥಾಪಕಿ ಡಾ. ಸಹನಾ ಭಟ್ (ಭರತನಾಟ್ಯಮ್ ನೃತ್ಯಾಂಗನೆ) ಇವರು ೨೦೨೨ ರಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅಲ್ಲಿ ನಡೆದ ನೃತ್ಯಗಳ ಸಂಶೋಧನಾತ್ಮಕ ಪ್ರಯೋಗಗಳಲ್ಲಿ ಅವರು ಪಾಲ್ಗೊಂಡಿದ್ದರು. ಅನಂತರ ಡಾ. ಸಹನಾ ಭಟ್ ಇವರ ಕರ್ನಾಟಕದ ವೇಣುಧ್ವನಿ ಕೆ.ಎಲ್.ಈ. ಈ ಆಕಾಶವಾಣಿ ಕೇಂದ್ರದಲ್ಲಿ ಸಂದರ್ಶನವನ್ನು ತೆಗೆದುಕೊಂಡರು. ಈ ಸಂದರ್ಶನದ ವಿಷಯ ಡಾ. ಸಹನಾ ಭಟ್ ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ನೀಡಿದ ಭೇಟಿಯ ಕಾಲಾವಧಿಯಲ್ಲಿ ‘ನೃತ್ಯ ಮತ್ತು ಸಾಧನೆ ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಅನುಭವಿಸಿದ ವಿಷಯಗಳು, ಅವರಿಗೆ ಆ ಸಮಯದಲ್ಲಿ ಬಂದ ವೈಶಿಷ್ಟ್ಯಪೂರ್ಣ ಅನುಭೂತಿಗಳು ಮತ್ತು ಅವರ ಗಮನಕ್ಕೆ ಬಂದ ಅಂಶಗಳು ಇವುಗಳನ್ನು ಒಳಗೊಂಡಿದ್ದವು. ಕಳೆದ ವಾರದ ಸಂಚಿಕೆಯಲ್ಲಿ (೨೪/೪೪) ಈ ಸಂದರ್ಶನದ ಕೆಲವು ಭಾಗವನ್ನು ತಾವು ಓದಿದ್ದೀರಿ. ಇಂದಿನ ಲೇಖನದಲ್ಲಿ ನಾವು ಅದರ ಮುಂದಿನ ಭಾಗವನ್ನು ಡಾ. ಸಹನಾ ಭಟ್ ಇವರ ಮಾತುಗಳಲ್ಲಿಯೇ ಓದಲಿದ್ದೇವೆ.
ಡಾ. ಸಹನಾ ಭಟ್
೬. ನೃತ್ಯವನ್ನು ಮಾಡುವಾಗ ನನಗೆ ಅರಿವಾಗುತ್ತಿದ್ದ ದೈವೀ ಊರ್ಜೆ ವೈಜ್ಞಾನಿಕ ಉಪಕರಣದ ಮಾಧ್ಯಮದಿಂದ ಸಿದ್ಧವಾದುದರಿಂದ ಅದರಿಂದ ಆನಂದ ಸಿಗುವುದು
ಅವರು ಹೇಳಿದಂತೆ ಸಾಮಾನ್ಯ ಮನುಷ್ಯನ ಸಕಾರಾತ್ಮಕ ಊರ್ಜೆಯ ಪ್ರಾಥಮಿಕ ನಿರೀಕ್ಷಣೆ (ಬೇಸಲೈನ್ ರೀಡಿಂಗ್) ಸಾಧಾರಣ ೧ ಮೀಟರ್ ಸಹ ಇರುವುದಿಲ್ಲ. ನೃತ್ಯದ ಮೊದಲು ನನ್ನ ಸಕಾರಾತ್ಮಕ ಊರ್ಜೆಯು ಸಹ ೧ ಮೀಟರ್‌ಗಿಂತ ಕಡಿಮೆ ಇತ್ತು; ಆದರೆ ಪ್ರಯೋಗದ ನಂತರ ಪುನಃ ರೀಡಿಂಗ್ ತೆಗೆದಾಗ ಸಕಾರಾತ್ಮಕ ಊರ್ಜೆಯು ೧೦ ಮೀಟರ್‌ಗಿಂತ ಹೆಚ್ಚಾಗಿತ್ತು, ಇದು ಆ ಪ್ರಯೋಗದಿಂದ ಸಿದ್ಧವಾಯಿತು. ನಾನು ಯಾವಾಗ ನೃತ್ಯವನ್ನು ಮಾಡುತ್ತಿದ್ದೆನೋ, ಆಗ ನನಗೂ ಬೇರೆಯೇ ಶಕ್ತಿ ಅರಿವಾಗುತ್ತಿತ್ತು. ಹಾಗೆಯೇ ನೃತ್ಯವನ್ನು ನೋಡುವವರಿಗೂ ಸಹ ಒಳ್ಳೆಯ ಸ್ಪಂದನಗಳ ಅರಿವಾಗುತ್ತಿತ್ತು; ಆದರೆ ಇದನ್ನೇ ವೈಜ್ಞಾನಿಕ ಉಪಕರಣದ ಸಹಾಯದಿಂದ ಮೀಟರ್‌ನ ಮಾಧ್ಯಮ ದಿಂದ ನೋಡಿದಾಗ ನನಗೆ ಬಹಳ ಸಮಾಧಾನ ಸಿಕ್ಕಿತು. ನನ್ನ ಇಬ್ಬರೂ ಶಿಷ್ಯರೂ (ಕು. ನಿಸರ್ಗಾ ದಯನ್ನವರ ಮತ್ತು ಕು. ಪೂಜಾ ಹೆಗಡೆ ಇವರು) ಪ್ರಯೋಗಗಳಲ್ಲಿ ಪಾಲ್ಗೊಂಡಿದ್ದರು. ಅವರಿಗೂ ಇಲ್ಲಿ ನೃತ್ಯವನ್ನು ಮಾಡಿದ ನಂತರ ಬೇರೆಯೇ ಒಳ್ಳೆಯ ಅನುಭವ ಬಂದಿತು .
೭. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ನೃತ್ಯ ಮಾಡುವಾಗ ಬಂದ ವೈಶಿಷ್ಟ್ಯಪೂರ್ಣ ಅನುಭೂತಿ
೭ ಅ. ನೃತ್ಯ ಮಾಡುವಾಗ ಶ್ರೀಕೃಷ್ಣನ ಚರಣಗಳ ಸ್ಪರ್ಶವನ್ನು ಅನುಭವಿಸಿ ಭಾವಾತೀತ ಸ್ಥಿತಿಯನ್ನು ಅನುಭವಿಸುವುದು : ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮತ್ತು ಸನಾತನ ಆಶ್ರಮದಲ್ಲಿ ಬಹಳ ಒಳ್ಳೆಯ ಸ್ಪಂದನಗಳಿವೆ. ಕಲಾವಿದನು ಭಾವುಕನಾಗಿರುತ್ತಾನೆ. ನೃತ್ಯವನ್ನು ಮಾಡುವಾಗ ಅವನು ನೃತ್ಯದೊಂದಿಗೆ ಏಕರೂಪನಾಗುತ್ತಾನೆ. ಮರುದಿನ ನಾನು ಅಲ್ಲಿ ಭಗವಾನ ಶ್ರೀಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ನೃತ್ಯವನ್ನು ಪ್ರಸ್ತುತಪಡಿಸಿದೆನು. ಪ್ರಯೋಗಕ್ಕಾಗಿ ಆ ನೃತ್ಯವನ್ನು ನಾನು ಎರಡು ಸಲ ಮತ್ತು ೨೦ ನಿಮಿಷಗಳ ವರೆಗೆ ನಿರಂತರವಾಗಿ ಮಾಡಿದೆನು. ‘ಮೊದಲ ಬಾರಿಗೆ ನಾನು ಯಾವ ನೃತ್ಯವನ್ನು ಮಾಡಿದೆನೋ, ಅದನ್ನು ನಾನು ಮಾಡಿದೆನು; ಆದರೆ ಎರಡನೇ ಸಲ ಯಾವ ನೃತ್ಯವನ್ನು ಮಾಡಿದೆನೋ, ಅದನ್ನು ನಾನು ಮಾಡಲಿಲ್ಲ, ಎಂದು ನನಗೆ ಅರಿವಾಯಿತು. ನೃತ್ಯದ ಕೊನೆಗೆ ನಾನು ‘ಶ್ರೀಕೃಷ್ಣನ ಚರಣಗಳನ್ನು ಸ್ಪರ್ಶಿಸಿ ವಂದಿಸುತ್ತೇನೆ ಮತ್ತು ನಂತರ ನೃತ್ಯ ಕೊನೆಗೊಳ್ಳುತ್ತದೆ, ಈ ಸ್ವರೂಪದ ನೃತ್ಯವಿತ್ತು; ಆದರೆ ಈ ಅಭಿನಯವನ್ನು ಮಾಡುತ್ತಿರುವಾಗಲೇ ಸಾಕ್ಷಾತ್ ಶ್ರೀಕೃಷ್ಣನು ನನ್ನ ಎದುರಿಗೆ ಬಂದನು ! ನನಗೆ ಶ್ರೀಕೃಷ್ಣನು ಕಣ್ಣುಗಳೆದುರು ಕಾಣಿಸುತ್ತಿದ್ದನು ಮತ್ತು ನಾನು ಪ್ರತ್ಯಕ್ಷದಲ್ಲಿ ಅವನ ಚರಣಗಳನ್ನು ಸ್ಪರ್ಶಿಸುತ್ತಿರುವ ಅನುಭೂತಿಯೂ ನನಗೆ ಬಂದಿತು. ಅನಂತರ ನನಗೆ ಅಲ್ಲಿಂದ ೫ ನಿಮಿಷಗಳ ಕಾಲ ಅಲುಗಾಡಲು ಸಾಧ್ಯವಾಗಲಿಲ್ಲ. ಚಿತ್ರೀಕರಣಮುಗಿಯಿತು; ಆದರೆ ನನಗೆ ಅದರ ಬಗ್ಗೆ ಯಾವುದೇ ಅರಿವೇ ಇರಲಿಲ್ಲ. ಶ್ರೀಕೃಷ್ಣನ ಚರಣಗಳ ಸ್ಪರ್ಶದ ಪೂರ್ಣ ಅನುಭವ ಪಡೆದು ಅದನ್ನು ನಾನು ಇತರರಿಗೂ ಹೇಳಿದೆನು. ಅದನ್ನು ಕೇಳಿ ಅವರೆಲ್ಲರಿಗೂ ಬಹಳ ಆನಂದವಾಯಿತು. ಇದರ ಬಗ್ಗೆ ಚರ್ಚೆಯನ್ನು ಮಾಡುತ್ತಿರುವಾಗ ‘ಸಮಯ ಹೇಗೆ ಕಳೆದು ಹೋಯಿತು ?, ಇದು ನನಗೆ ತಿಳಿಯಲೇ ಇಲ್ಲ.
೭ ಆ. ‘ಆನಂದ ಇದು ಒಂದೇ ತತ್ತ್ವವಾಗಿದೆ, ಎಂಬುದರ ಅನುಭೂತಿ ಬರುವುದು : ‘ಆನಂದವು ಒಂದು ತತ್ತ್ವವಾಗಿದೆ, ಎಂದು ನನಗೆ ಅರಿವಾಯಿತು. ರಸ, ಉತ್ಪತ್ತಿ ಮತ್ತು ಅಂತ್ಯ ಅಂದರೆ ರಸೋತ್ಪತ್ತಿ ನಮ್ಮನ್ನು ಸ್ಥಿತಪ್ರಜ್ಞ ಸ್ಥಿತಿಗೆ ಒಯ್ಯುತ್ತದೆ. ಇದು ಕಲಾವಿದನ ಒಂದು ತರ್ಕವೂ ಆಗಿರಬಹುದು. ಇದು ತರ್ಕವೋ ಅಥವಾ ದೌರ್ಬಲ್ಯವೋ ನನಗೆ ಗೊತ್ತಿಲ್ಲ; ಆದರೆ ಆ ಸ್ಥಿತಿಯಿಂದ ಹೊರಗೆ ಬರಲು ಸ್ವಲ್ಪ ಸಮಯ ತಗಲುತ್ತದೆ. ನನಗೆ ಶ್ರೀಕೃಷ್ಣನ ಚರಣಗಳನ್ನು ಸ್ಪರ್ಶ ಮಾಡಿದ ಅರಿವಾಯಿತು ಮತ್ತು ಆ ಏಕರೂಪತೆಯಿಂದ ನನಗೆ ಹೊರಗೆ ಬರಲು ಆಗಲಿಲ್ಲ. ಇಂತಹ ಅನುಭವ ನನಗೆ ಕೇವಲ ನಮ್ಮ ಕುಲದೇವರ ದೇವಸ್ಥಾನದಲ್ಲಿ ಅಥವಾ ಯಾವುದಾದರೊಂದು ವಿಶಿಷ್ಟ ಸ್ಥಳದಲ್ಲಿ ನೃತ್ಯ ಮಾಡಿದಾಗ ಬಂದಿದೆ. ಈ ಅನುಭೂತಿ ಬಂದುದರಿಂದ ನಾನು ಸ್ವಲ್ಪ ಭಾವುಕಳಾದೆ.
೮. ‘ನೃತ್ಯಕಲೆಯನ್ನು ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಅನುಭವಿಸಬೇಕು ?, ಈ ಬಗ್ಗೆ ಡಾ. ಸಹನಾ ಭಟ್ ಇವರಿಗೆ ಹೊಳೆದ ಅಂಶಗಳು
೮ ಅ. ಕಲಾವಿದನ ಕಲೆಯ ಬಗೆಗಿನ ಸಮರ್ಪಣಾಭಾವ ಬಹಳ ಹೆಚ್ಚಾದುದರಿಂದ ಅವನಿಗೆ ದೇವರ ಆಶೀರ್ವಾದ ಹೆಚ್ಚು ಲಭಿಸುವುದು : ‘ಭಕ್ತಿ ಎಲ್ಲರಲ್ಲಿಯೂ ಇರುತ್ತದೆ; ಆದರೆ ಮನುಷ್ಯನು ಯಾವಾಗ ಕಲಾವಿದನೆಂದು ಜನ್ಮಕ್ಕೆ ಬರುತ್ತಾನೆಯೋ, ಆಗ ಅವನ ಕಲೆಯ ಬಗೆಗಿನ ಸಮರ್ಪಣಾಭಾವವು ಬಹಳ ಹೆಚ್ಚಾಗುತ್ತದೆ. ಆದುದರಿಂದ ಅವನಿಗೆ ಭಗವಂತನ ಆಶೀರ್ವಾದವೂ ಹೆಚ್ಚು ಸಿಗುತ್ತದೆ, ಎಂದು ನನಗೆ ಅನಿಸುತ್ತದೆ. ಆದುದರಿಂದಲೇ ಭಗವಂತನು ನನ್ನಿಂದ ಸೇವೆಯನ್ನು ಮಾಡಿಸಿ ಕೊಂಡನು. ‘ಕಲೆಯನ್ನು ಭಗವಂತನೇ ಸೃಷ್ಟಿಸಿದ್ದಾನೆ ಮತ್ತು ಅವನೇ ಅದನ್ನು ಪ್ರಸ್ತುತ ಪಡಿಸುವವನಾಗಿದ್ದಾನೆ, ನಾನು ಮಾಧ್ಯಮಳಾಗಿದ್ದೇನೆ !, ಎಂದು ನನಗೆ ಅನಿಸುತ್ತದೆ. ಈ ವಿಷಯವನ್ನು ನಾನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರಿಗೆ ಹೇಳಿದಾಗ ಅವರಿಗೂ ಬಹಳ ಆನಂದವಾಯಿತು ಮತ್ತು ಅವರಿಗೆ ರೋಮಾಂಚನವೂ ಆಯಿತು.
೮ ಆ. ನೃತ್ಯದ ಮಾಧ್ಯಮದಿಂದ ಆಧ್ಯಾತ್ಮಿಕ ಉನ್ನತಿ ಬೇಗನೆ ಆಗುವುದು : ನೃತ್ಯವೂ ಒಂದು ಆಧ್ಯಾತ್ಮಿಕ ಸಾಧನೆಯಾಗಿದೆ. ಯಾವಾಗ ಹೊಸ ವಿದ್ಯಾರ್ಥಿಗಳು ನನ್ನ ಬಳಿ ನೃತ್ಯ ಕಲೆಯನ್ನು ಕಲಿಯಲು ಬರುತ್ತಾರೆಯೋ, ಆಗ ನಾನು ಅವರಿಗೆ ಆರಂಭದಲ್ಲಿಯೇ, ‘ನೃತ್ಯವನ್ನು ಮಾಡುವುದರಿಂದ ನಮ್ಮ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ನೃತ್ಯದಿಂದ ಶರೀರ ಸದೃಢವಾಗುತ್ತದೆ, ಹಾಗೆಯೇ ಸ್ಮರಣಶಕ್ತಿಯೂ ಹೆಚ್ಚಾಗುತ್ತದೆ. ನಮ್ಮ ಅಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳಲು ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸಲು ನೃತ್ಯವು ಒಂದು ಒಳ್ಳೆಯ ಮಾಧ್ಯಮವಾಗಿದೆ ! ಎಂದು ಹೇಳುತ್ತೇನೆ. ನೃತ್ಯದ ಮಾಧ್ಯಮ ದಿಂದ ಮನುಷ್ಯನು ಪರಿಪೂರ್ಣನಾಗಬಹುದು. ನಾವು ಶ್ರೀರಾಮ, ಶ್ರೀಕೃಷ್ಣ, ಧೀರೋದತ್ತ, ಧೀರಲಲಿತ ಇಂತಹ ವಿವಿಧ ನಾಯಕರ ಬಗ್ಗೆ ಕಲಿಯುತ್ತೇವೆ. ಇದರಲ್ಲಿ ‘ನಾಯಕ ಮತ್ತು ಭಗವಂತ ಇವರು ಒಂದೇ ಹೇಗೆ ಆಗಿದ್ದಾರೆ ಮತ್ತು ನಾಯಕ ಯಾವ ರೀತಿ ತನ್ನನ್ನು ವಿವಿಧ ಸ್ವರೂಪಗಳಲ್ಲಿ ಭಗವಂತನಿಗೆ ಸಮರ್ಪಿಸಿಕೊಳ್ಳುತ್ತಾನೆ ?, ಎಂಬುದನ್ನು ಕಲಿಯುತ್ತೇವೆ ಮತ್ತು ಓದುತ್ತೇವೆ. ಇದರಿಂದ ನನ್ನ ಗಮನಕ್ಕೆ ಬಂದುದೇನೆಂದರೆ, ಚಿಕ್ಕ ಮಕ್ಕಳಿಗೆ ಮೊದಲಿನಿಂದಲೇ ‘ನಾವು ಮಾಡುತ್ತಿರುವ ಕಲೆ ಇದು ದೇವರಿಗಾಗಿದೆ, ಎಂಬ ಭಾವದಿಂದ ಕಲಿಸಬೇಕು ಮತ್ತು ಅದರ ಮಹತ್ವವನ್ನು ಅವರ ಮನಸ್ಸಿನ ಮೇಲೆ ಬಿಂಬಿಸಬೇಕು. ಚಿಕ್ಕ ಮಕ್ಕಳಿಗೆ ‘ದೇವರ ಮೇಲೆ ಶ್ರದ್ಧೆ ಇರುತ್ತದೆ. ಒಂದು ವೇಳೆ ನಾವು ಇದೇ ಶ್ರದ್ಧೆಯನ್ನು ದೃಢ ಮಾಡುತ್ತಾ ಹೋದರೆ, ಅವರ ಕಲೆಯ ಮೇಲಿನ ಶ್ರದ್ಧೆಯೂ ಹೆಚ್ಚಾಗುತ್ತಾ ಹೋಗುತ್ತದೆ, ಉದಾ. ಅಭ್ಯಾಸ ಮಾಡುವಾಗ ಮಕ್ಕಳಲ್ಲಿ, ‘ಯಾವುದಾದರೊಂದು ವಿಷಯವನ್ನು ಗಮನವಿಟ್ಟು ಅಭ್ಯಾಸ (ಅಧ್ಯಯನ) ಮಾಡಿದರೆ ಮಾತ್ರ, ಅದು ಪೂರ್ತಿ ತಿಳಿಯುತ್ತದೆ, ಎಂಬ ವಿಶ್ವಾಸವಿರುತ್ತದೆ. ಇದನ್ನು ನಾವು ನೃತ್ಯದ ಮಾಧ್ಯಮದಿಂದಲೂ ಮಾಡಬಹುದು. ಇದನ್ನು ನಾವು ಅಧ್ಯಾತ್ಮದ ಮಾಧ್ಯಮದಿಂದಲೇ ಅವರಿಗೆ ತಿಳಿಸಿ ಹೇಳಬಹುದು, ಎಂದು ನನಗೆ ಅನಿಸುತ್ತದೆ.
– ಡಾ. ಸಹನಾ ಭಟ್ (ಭರತನಾಟ್ಯಮ್ ನೃತ್ಯಾಂಗನೆ, ನೃತ್ಯಗುರು), ಸಂಸ್ಥಾಪಕಿ ‘ನಾಟ್ಯಾಂಜಲಿ ಕಲಾ ಕೇಂದ್ರ, ಹುಬ್ಬಳ್ಳಿ