|
ನವದೆಹಲಿ – ‘ಒಪೆನಹಾಯಮರ’ ಈ ಚಲನಚಿತ್ರ ಭಾರತದಲ್ಲಿ ಪ್ರದರ್ಶನಗೊಂಡಿದೆ. ಈ ಚಲನಚಿತ್ರದಲ್ಲಿನ ಮುಖ್ಯ ಪಾತ್ರ ನಿರ್ವಹಿಸುವ ನಾಯಕ ಸಿಲಿಯನ್ ಮರ್ಫಿ ಮತ್ತು ಚಲನಚಿತ್ರದಲ್ಲಿನ ನಟಿ ಇವರ ನಡುವಿನ ಶಾರೀರಿಕ ಸಂಬಂಧದ ಚಿತ್ರಿಕರಣದ ದೃಶ್ಯದಲ್ಲಿ ಸಿಲಿಯನ್ ಮರ್ಫಿ ಎಂದರೆ ಒಪೆನಹಾಯಮರ ಇವನು ಶ್ರೀಮದ್ಭಗವದ್ಗೀತೆಯನ್ನು ಓದುತ್ತಿರುವಂತೆ ತೋರಿಸಲಾಗಿದೆ. ಇದಕ್ಕೆ ಹಿಂದೂ ಮತ್ತು ಅದರ ಸಂಘಟನೆಗಳಿಂದ ತೀವ್ರ ವಿರೋಧವಾಗುತ್ತಿದೆ. ಈಗ ಇದರ ಬಗ್ಗೆ ಕೇಂದ್ರ ಸಚಿವ ಅನುರಾಗ ಠಾಕೂರ ಇವರು ಕೇಂದ್ರ ಚಲನಚಿತ್ರ ನಿರೀಕ್ಷಣ ಮಂಡಳಿಯಿಂದ (ಸೆನ್ಸಾರ್ ಬೋರ್ಡ್ ನಿಂದ ) ಇಂತಹ ದೃಶ್ಯಗಳನ್ನು ತೋರಿಸುವುದಕ್ಕೆ ಅನುಮತಿ ಹೇಗೆ ದೊರೆಯಿತು? ಎಂದು ಪ್ರಶ್ನೆ ಕೇಳಿದ್ದಾರೆ. ಹಾಗೂ ಈ ದೃಶ್ಯವನ್ನು ತೆಗೆದುಹಾಕುವಂತೆ ಸಮಾಜದಿಂದ ಸೆನ್ಸಾರ್ ಬೋರ್ಡಿನ ಮೇಲೆ ಒತ್ತಡ ತರಲಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.
‘ओपनहायमर’मधील सेक्स करताना भगवद्गीता वाचण्याचा सीन हटवणार; मंत्री अनुराग ठाकूर यांनी सेन्सॉर बोर्डला खडसावले#Oppenheimer #Controversy #ChristopherNolan #CillianMurphy #AnuragThakur #CBFC https://t.co/J3hsxMiR02
— LoksattaLive (@LoksattaLive) July 24, 2023
ಸಂಪಾದಕೀಯ ನಿಲುವುಸೆನ್ಸಾರ್ ಬೋರ್ಡ್ ಕೇಂದ್ರ ಸರಕಾರದ ಆಧೀನದಲ್ಲಿ ಇರುವಾಗ ಅದರಿಂದ ಇಂತಹ ತಪ್ಪುಗಳು ಹೇಗೆ ನಡೆಯುತ್ತವೆ ? ಈ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಸಾಮಾನ್ಯವಾಗಿ ಉದ್ಭವಿಸುತ್ತದೆ. ಸರಕಾರವು ಈ ಮಂಡಳದಲ್ಲಿ ಹಿಂದೂ ಧರ್ಮದ ಅಭ್ಯಾಸಕರು ಮತ್ತು ಹಿಂದೂ ಧರ್ಮಾಭಿಮಾನಿ ಜನರನ್ನು ನೇಮಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! |