ದೇವರಲ್ಲಿ ಶ್ರದ್ಧೆ ಇರುವುದರ ಮಹತ್ವ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಶೇಷನಾಗನ ಹೆಡೆಗಳ ದರ್ಶನವಾಗುವುದು ಮತ್ತು ನಂತರ ಒಂದು ಸೆಕೆಂಡ್‌ನಲ್ಲಿ ಶೇಷನಾಗನ ೭ ಮುಖಗಳು ವ್ಯಾಘ್ರ (ಹುಲಿ) ಮುಖವಾಗಿ ರೂಪಾಂತರವಾದಂತೆ ಕಾಣಿಸುವುದು ಮತ್ತು ಆ ದೃಶ್ಯದ ಭಾವಾರ್ಥ ‘ಸೂಕ್ಷ್ಮಯುದ್ಧದಲ್ಲಿ ಶೇಷನಾಗನೊಂದಿಗೆ ದೇವಿಯ ವಾಹನ ಹುಲಿಯೂ ಸಹಾಯಕ್ಕೆ ಬಂತು, ಎಂದಾಗಿರುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

‘೧೧.೨.೨೦೨೧ ರಂದು ನಾನು ಮಧ್ಯಾಹ್ನ ಮಲಗಿದ್ದಾಗ ಇದ್ದಕ್ಕಿದ್ದಂತೆಯೇ ನನಗೆ ಶೇಷನಾಗನ ಹೆಡೆಗಳ ದರ್ಶನವಾಯಿತು ಮತ್ತು ಒಂದು ಸೆಕೆಂಡ್‌ನಲ್ಲಿ ಶೇಷನ ೭ ಮುಖಗಳು ವ್ಯಾಘ್ರ (ಹುಲಿ) ಮುಖವಾಗಿ ರೂಪಾಂತರ ವಾದುದು ಕಾಣಿಸಿತು. ಆ ಸಮಯದಲ್ಲಿ ‘ದೇವರು, ಇಂದು ನಡೆಯಲಿರುವ ಸೂಕ್ಷ್ಮ ಯುದ್ಧದಲ್ಲಿ ಶೇಷನಾಗನೊಂದಿಗೆ ದೇವಿಯ ವಾಹನವಾಗಿರುವ ಹುಲಿಯೂ ಸಹಾಯಕ್ಕೆ ಬಂದಿದೆ, ಎಂದು ಹೇಳುತ್ತಿದ್ದಾರೆ ಎಂದು ನನಗನಿಸಿತು. ನಮಗೆ ‘ದೇವರು ಸೂಕ್ಷ್ಮದಲ್ಲಿ ನಮಗಾಗಿ ಏನೆಲ್ಲ ಮಾಡುತ್ತಿದ್ದಾರೆ !, ಎಂಬುದರ ಕಲ್ಪನೆ ಮಾಡಲಾಗುವುದಿಲ್ಲ. ಗುರುಕೃಪೆಯಿಂದ ದೇವರು ಆಪತ್ಕಾಲದಲ್ಲಿಯೂ ನಮ್ಮ ರಕ್ಷಣೆಯನ್ನು ಮಾಡಲಿಕ್ಕಿದ್ದಾರೆ. ಸೂಕ್ಷ್ಮದಲ್ಲಿ ಏನಾದರೂ ಕಾಣಿಸಿದರೆ ನಮಗೆ, ‘ದೇವರು ನಮ್ಮೊಂದಿಗೆ ಇದ್ದಾರೆ ಎಂದು ಅನಿಸುತ್ತದೆ; ಆದರೆ ಪ್ರತಿಯೊಂದು ಕ್ಷಣ ನಮ್ಮಲ್ಲಿ, ‘ದೇವರು ಯಾವಾಗಲೂ ನನ್ನೊಂದಿಗಿದ್ದಾನೆ. ಅವನು ನನ್ನ ಪ್ರತಿಯೊಂದು ಕರ್ಮವನ್ನು ನೋಡುತ್ತಿದ್ದಾನೆ. ಅವನೇ ನನ್ನ ಆಧಾರವಾಗಿದ್ದಾನೆ. ಅವನೇ ನನ್ನ ಸಾಧನೆಯನ್ನು ಮಾಡಿಸಿಕೊಳ್ಳುವವನಿದ್ದಾನೆ ಮತ್ತು ಅವನೇ ನನ್ನ ರಕ್ಷಣೆಯನ್ನು ಮಾಡಲಿಕ್ಕಿದ್ದಾನೆ ಎಂಬಂತಹ ಶ್ರದ್ಧೆ ಇರಬೇಕು. ಸತತವಾಗಿ ನಮ್ಮ ಅನುಸಂಧಾನ ಅವನೊಂದಿಗಿರಬೇಕು, ಹಾಗೆ ಆದಾಗಲೇ ಅಖಂಡವಾಗಿ ನಮ್ಮ ಸಾಧನೆಯಾಗುತ್ತದೆ. ‘ಭಗವಂತಾ, ‘ನಮಗೆ ಅಂತಹ ಬುದ್ಧಿ ಮತ್ತು ಶಕ್ತಿ ನೀಡಿರಿ, ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆಯಾಗಿದೆ. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೧೨.೨.೨೦೨೧)