ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಆನ್‌ಲೈನ್ ವಿಶೇಷ ಸಂವಾದ : ‘ಫ್ರಾನ್ಸ್‌ನ ಕಿಡಿ ಭಾರತದ ತನಕ ತಲುಪುವುದೇ ?
ಮುಂಬಯಿ – ‘ಯುರೋಪಿನಲ್ಲಿ ಸೆಕ್ಯುಲರ್ ದೇಶವೆಂದು ಫ್ರಾನ್ಸ್‌ನ ಉದಾಹರಣೆ ನೀಡಲಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಫ್ರಾನ್ಸ್ ದೇಶವು ನಿರಾಶ್ರಿತರಿಗೆ ತನ್ನ ಗಡಿಯಲ್ಲಿ ಆಶ್ರಯ ನೀಡಿತ್ತು. ಈಗ ಫಾನ್ಸ್‌ನಲ್ಲಿ ನಡೆಯುತ್ತಿರುವ ಗಲಭೆಗಳು ಒಮ್ಮಿಂದೊಮ್ಮೆಲೆ ನಡೆದ ಗಲಭೆಗಳಲ್ಲ; ೩೦ ರಿಂದ ೪೦ ವರ್ಷಗಳಿಂದ ನಡೆಯುತ್ತಿದ್ದ ತಯಾರಿಯಾಗಿದೆ. ಇಂದು ಫ್ರಾನ್ಸ್‌ನಲ್ಲಿ ಹೇರಲಾದ ಜಾತ್ಯತೀತತೆಯ ವೈಫಲ್ಯದ ಗಂಭೀರ ಪರಿಣಾಮವನ್ನು ಫಾನ್ಸ್‌ನ ನಾಗರಿಕರು ಅನುಭವಿಸುತ್ತಿದ್ದಾರೆ. ಯುರೋಪಿನಲ್ಲಿನ ಇತರ ದೇಶಗಳು ಈಗ ಎಚ್ಚರದಿಂದಿದ್ದು, ಫ್ರಾನ್ಸ್‌ನಲ್ಲಿ ಘಟಿಸುತ್ತಿರುವ ಘಟನೆಗಳು ಎಲ್ಲಿ ಬೇಕಿದ್ದರೂ ಘಟಿಸಬಹುದು. ಇಂದು ಭಾರತದಲ್ಲಿ ಕಾನೂನುಬಾಹಿರವಾಗಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶದ ಮುಸಲ್ಮಾನರು ಅನೇಕ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಈ ನುಸುಳುಕೋರರ ಬಗ್ಗೆ ಭಾರತ ಸರಕಾರವು ಕಠಿಣ ಕ್ರಮ ಕೈಗೊಳ್ಳದಿದ್ದರೆ ಭಾರತದ ಸ್ಥಿತಿಯೂ ಫ್ರಾನ್ಸ್‌ನಂತೆಯೇ ಆಗುವುದು, ಎಂದು ‘ಒಡಿಶಾದ ಭುವನೇಶ್ವರದಲ್ಲಿನ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ನ ಸಂಯೋಜಕರು ಹಾಗೂ ಅಭ್ಯಾಸಕರಾದ ಶ್ರೀ. ಅನೀಲ ಧೀರ ಇವರು ಎಚ್ಚರಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಫ್ರಾನ್ಸ್‌ನ ಕಿಡಿ ಭಾರತದ ತನಕ ತಲುಪುವುದೇ ? ಈ ವಿಷಯದ ‘ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.