ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇವರಿಂದ ಟೊರಂಟೊದ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ !

ಟೊರಂಟೊ (ಕೆನಡಾ) – ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಇವರು ಇತ್ತೀಚೆಗೆ ಬಿ.ಎ.ಪಿ.ಎಸ್. ಶ್ರೀ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಿ.ಎ.ಪಿ.ಎಸ್. ನಿರ್ದೇಶಕರ ಮಂಡಳಿಯು ಪ್ರಧಾನಮಂತ್ರಿ ಟ್ರುಡೋರನ್ನು ಸ್ವಾಗತಿಸಿದರು. ದೇವಸ್ಥಾನದಲ್ಲಿ ಟ್ರುಡೋ ಅವರು ಮಹಂತ ಸ್ವಾಮಿ ಮಹಾರಾಜರನ್ನು ಭೇಟಿಯಾದರು. ಆ ಸಮಯದಲ್ಲಿ ಮಹಂತರು ಟ್ರುಡೊರನ್ನು ಹಾರ ಹಾಕಿ ಗೌರವಿಸಿದರು. ಮಹಂತ ಸ್ವಾಮಿ ಮಹಾರಾಜರು ಪ್ರಧಾನಮಂತ್ರಿಗಳ ಮಣಿಕಟ್ಟಿಗೆ `ನಾಡಾ ಛಡಿ’ ಎಂಬ ಪವಿತ್ರ ದಾರವನ್ನು ಕಟ್ಟಿದರು. ಈ ದಾರ ಏಕತೆ ಮತ್ತು ಸ್ನೇಹದ ಮೌಲ್ಯಗಳ ಪ್ರತೀಕವೆಂದು ಪರಿಗಣಿಸಲಾಗಿದೆ.

ದೇವಸ್ಥಾನದ ಪವಿತ್ರ ವಾತಾವರಣದಲ್ಲಿ ಪ್ರಧಾನಮಂತ್ರಿ ಟ್ರುಡೊ ಎಲ್ಲ ಕೆನಡಿಯನ್ ಜನರ ಸಮೃದ್ಧಿ ಮತ್ತು ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಅವರು ಶ್ರೀ ನೀಲಕಂಠ ವರ್ಣೀಯ ಅಭಿಷೇಕ ವಿಧಿಯಲ್ಲಿ ಭಾಗವಹಿಸಿದರು. ತದನಂತರ ಅವರು ಸಭಾಂಗಣಕ್ಕೆ ತೆರಳಿ ಭಕ್ತರು ಮತ್ತು ಹಿತಚಿಂತಕರನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿ ಟ್ರುಡೊ ಬಿ.ಎ.ಪಿ.ಎಸ್. ದೇವಸ್ಥಾನದ ಸಮುದಾಯಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

(ಸೌಜನ್ಯ: cpac)

ಸಂಪಾದಕರ ನಿಲುವು

* ಕೆನಡಾದಲ್ಲಿ ಖಲಿಸ್ತಾನಿಗಳು ದೇವಸ್ಥಾನಗಳ ಮೇಲೆ ಹಾಗೆಯೇ ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ. ಖಲಿಸ್ತಾನಿಗಳನ್ನು ಟ್ರುಡೊ ಬೆಂಬಲಿಸುತ್ತಾರೆ. ಹಾಗಾಗಿ ಟ್ರುಡೋ ಹಿಂದೂಗಳ ದೇವಸ್ತಾನಕ್ಕೆ ಭೇಟಿ ನೀಡಿರುವುದು ತೋರಿಕೆಯಾಗಿದೆ. ಕೆನಡಾದಲ್ಲಿರುವ ಹಿಂದೂ ಸಮುದಾಯದ ಮತಗಳನ್ನು ಪಡೆಯಲು ಇಂತಹ ಕೃತ್ಯಗಳನ್ನು ಮಾಡುವ ಟ್ರುಡೊರನ್ನು ಅಲ್ಲಿನ ಹಿಂದೂಗಳು ಛೀಮಾರಿ ಹಾಕುವುದು ಆವಶ್ಯಕವಾಗಿದೆ !