ಹಿಂದೂಗಳ ಹತ್ಯೆ ಸರಣಿ ತಡೆದು, ಹಿಂದೂಗಳಿ ರಕ್ಷಣೆ ನೀಡಿ ! – ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದ ಬೇಡಿಕೆ

ಬೆಂಗಳೂರಿನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದ ಬೇಡಿಕೆ !

‘ವಕ್ಫ್ ಬೋರ್ಡ್ ಕಾಯ್ದೆ’ ರದ್ದುಗೊಳಿಸಲು ಬೇಡಿಕೆ !

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರ ಮೇಲೆ ವಿವಿಧ ರೀತಿಯ ಆಕ್ರಮಣಗಳು ಹೆಚ್ಚಾಗಿವೆ. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರಿಗೆ ಥಳಿಸುವುದು ಮತ್ತು ಭಯ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಯುತ್ತಿವೆ. ಜೈನ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಮತ್ತು ಯುವ ಬ್ರಿಗೇಡ್ ನ ವೇಣುಗೋಪಾಲ ಇವರ ಹತ್ಯೆ, ಸೇರಿದಂತೆ ಇನ್ನೂ ಹಲವಾರು ಘಟನೆಗಳು ಹಿಂದೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಅಷ್ಟೇ ಅಲ್ಲದೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಪ್ರತಿ ರವಿವಾರ ನಡೆಯುತ್ತಿದ್ದ ನಾಗರಕಟ್ಟೆಯ ಪೂಜೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಬಕ್ರೀದ್ ಸಮಯದಲ್ಲಿ ಬಾದಾಮಿ, ಶಿಕಾರಿಪುರ, ಶಿರಸಿ ಸೇರಿದಂತೆ ಹಲವೆಡೆ ಅಕ್ರಮವಾಗಿ ಗೋಹತ್ಯೆ ಮಾಡಿ, ಗೋವಿನ ಎಲಬುಗಳನ್ನು ದೇವಸ್ಥಾನ, ಹಿಂದೂಗಳ ಮನೆಯ ಎದುರು ಎಸೆಯುತ್ತಿದ್ದಾರೆ, ಹಾಗಾಗಿ ಹಿಂದೂ ಕಾರ್ಯಕರ್ತರಿಗೆ, ಹಿಂದೂ ಧರ್ಮಕ್ಕಾಗಿ ಹೋರಾಡುವವರಿಗೆ ರಕ್ಷಣೆ ನೀಡಬೇಕು ಹಾಗೂ ಹಿಂದೂಗಳ ಮೇಲೆ ಆಕ್ರಮಣ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ‘ಫ್ರೀಡಂ ಪಾರ್ಕ್’ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ ನಡೆಸಲಾಯಿತು. ಈ ವೇಳೆ ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪುನೀತ್ ಕೆರೆಹಳ್ಳಿ, ರಾಷ್ಟ್ರೀಯ ಹಿಂದೂ ಪರಿಷತ್ ನ ಶ್ರೀ. ವಿಕ್ರಮ ಶೆಟ್ಟಿ, ಶ್ರೀ ರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಶ್ರೀ. ಸುಂದರೇಶ, ‘ಹಿಂದವೀ ಜಟ್ಕಾ ಮೀಟ್’ನ ಶ್ರೀ. ಮುನೇಗೌಡ, ಹಿಂದೂ ಮಹಾಸಭಾದ ಶ್ರೀ. ಸುರೇಶ ಜೈನ್, ಶ್ರೀ. ಪ್ರಶಾಂತ ಸಂಬರಗಿ, ಶ್ರೀ. ರೋಹಿತ ಚಕ್ರತೀರ್ಥ, ಪ್ರಫೆಸರ್ ಎಸ್. ಆರ್ ಲೀಲಾ, ಶ್ರೀ. ಅಡ್ಡಂಡ ಕಾರ್ಯಪ್ಪ, ಶ್ರೀ. ಸುರೇಶ ಗೌಡ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ ಗೌಡ ಸೇರಿದಂತೆ 10 ಕ್ಕೂ ಹೆಚ್ಚು ಸಂಘಟನೆಗಳ 350 ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.

1. ಪ್ರೊಫೆಸರ್ ಎಸ್. ಆರ್ ಲೀಲಾ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಅವರು 9 ದೇಶಗಳಿಂದ ತಮ್ಮ ಪ್ರಥಮ ಸರಕಾರಕ್ಕೆ ಮಾನ್ಯತೆ ಪಡೆದಿದ್ದರು. ಅವರು ಅಧಿಕಾರಕ್ಕೆ ಬಂದಿದ್ದೇ ಆಗಿದ್ದರೆ ಈ ದೇಶ ಇಂದು ವಿಭಜನೆಯಾಗುತ್ತಿರಲಿಲ್ಲ, ಎಂದು ಸಂವಿಧಾನ ಅಧ್ಯಯನಕಾರರು ಹೇಳುತ್ತಿದ್ದಾರೆ. ಇಸ್ರೋದ ನಮ್ಮ ಹೆಮ್ಮೆಯ ವಿಜ್ಞಾನಿಗಳು ‘ಚಂದ್ರಯಾನ – 3‘ ಉಡಾವಣೆಯ ಮೊದಲು ದೇವಸ್ಥಾನಕ್ಕೆ ಹೋಗಿ ಬಂದಿರುವುದನ್ನು ಕೆಲವು ಬುದ್ಧಿಜೀವಿಗಳು ದೇವಸ್ಥಾನಕ್ಕೆ ಹೋಗುವುದು ವಿಜ್ಞಾನಕ್ಕೆ ಈ ವಿರುದ್ಧ’ ಎಂದು ಆರೋಪಿಸಿದ್ದಾರೆ. ವಿಜ್ಞಾನಿಗಳು ಇವರಿಂದ ಪಾಠ ಕಲಿಯಬೇಕಾ ? ಎಂದು ಪ್ರಶ್ನಿಸಿದರು.

2. ಚಿಂತಕ ಶ್ರೀ. ರೋಹಿತ ಚಕ್ರತೀರ್ಥ ಇವರು ಮಾತನಾಡಿ, ರಾಜ್ಯದಲ್ಲಿ ಹಿಂದುಗಳ ಹತ್ಯೆ ನಡೆಯುತ್ತಲೇ ಇದೆ, ಆರ್ಥಿಕ ಅಶಿಸ್ತು ಇದೆ, ಹಾಗೆ ಚುನಾವಣೆಗೆ ಮುನ್ನ ಸ್ವಾತಂತ್ರ್ಯ ಹೋರಾಟಗಾರರ ಪಾಠಗಳನ್ನು ತೆಗೆದಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಕೋಲಾಹಲ ಎಬ್ಬಿಸಿದ ಚಿಂತಕರು ಈಗ ಪಠ್ಯಕ್ರಮಗಳನ್ನು ತೆಗೆದಿದ್ದರೂ ಸಹ ಏನು ಮಾತನಾಡದೆ ಕಾಂಗ್ರೆಸ್ ನ ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ` ಎಂದರು.

3. ಶ್ರೀ. ಅಡ್ಡಂಡ ಕಾರ್ಯಪ್ಪ ಇವರು ಮಾತನಾಡಿ, ಬದಲಾವಣೆ ಜಗದ ನಿಯಮವಾಗಿದೆ, ನಮ್ಮ ದೇಶವನ್ನು 500 ವರ್ಷಗಳ ಕಾಲ ಮುಸ್ಲಿಮರು ಆಳ್ವಿಕೆ ನಡೆಸಿ ನಮ್ಮ ದೇವಸ್ಥಾನಗಳ ಲೂಟಿ ಮಾಡಿದರು, ಹಿಂದೂಗಳ ಮತಾಂತರ ಮಾಡಿದರು. ಬ್ರಿಟೀಷರು, ಫ್ರೆಂಚರು ಮತ್ತು ಪೋರ್ಚುಗೀಸರು ಕೆಲವು ವರ್ಷಗಳ ಕಾಲ ದೇಶದಲ್ಲಿ ಆಳ್ವಿಕೆ ನಡೆಸಿದರು. ಆದರೂ ನಮ್ಮ ದೇಶ ಹಾಗೂ ಹಿಂದೂ ಧರ್ಮಕ್ಕೆ ಯಾವುದೇ ಧಕ್ಕೆಯಾಗಲಿಲ್ಲ, ಎಷ್ಟೋ ವರ್ಷಗಳ ಅಯೋಧ್ಯೆಯ ರಾಮ ಮಂದಿರದ ಹೋರಾಟ ಮಾಡಿದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.