ಪೊಲೀಸ ಇಲಾಖೆಯ ಓರ್ವ ಅಧಿಕಾರಿಯೂ ಭಾಗಿ
ಶ್ರೀನಗರ – ಕಾಶ್ಮೀರ ವಿಶ್ವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ(ಪಿ.ಆರ್.ಒ) ಫಹೀಮ್ ಅಸ್ಲಾಂ, ಪೊಲೀಸ ಪೇದೆ ಅರ್ಶಿದ್ ಅಹ್ಮದ್ ಮತ್ತು ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹುಸೇನ ಮೀರ್ ಇವರನ್ನು ಪಾಕಿಸ್ತಾನ ಭಯೋತ್ಪಾದಕರಿಗೆ ಸಹಾಯ ಮಾಡಿರುವ ಆರೋಪದಡಿಯಲ್ಲಿ ಉಪರಾಜ್ಯಪಾಲ ಮನೋಜ ಸಿಹ್ನಾ ಇವರು ನೌಕರಿಯಿಂದ ವಜಾಗೊಳಿಸಿದ್ದಾರೆ. ಭಯೋತ್ಪಾದನೆ ವಿಚಾರಸರಣಿಯ ಪ್ರಚಾರ ಮತ್ತು ಭಯೋತ್ಪಾದನೆಗಾಗಿ ಹಣವನ್ನು ಸಂಗ್ರಹಿಸುವುದು ಆರೋಪ ಇವರ ಮೇಲಿದೆ. ಈ ಮೂವರು ಆರೋಪಿಗಳು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐ.ಎಸ್.ಐ. ಹಾಗೆಯೇ ಇಸ್ಲಾಮಿಕ್ ಸ್ಟೇಟ ಈ ಭಯೋತ್ಪಾದಕ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದರು.
(ಸೌಜನ್ಯ : ANI News)
1. ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ, ವಜಾಗೊಂಡ ಮೂವರ ಮೇಲೆ ಬಹಳ ದಿನಗಳಿಂದ ನಿಗಾ ಇರಿಸಲಾಗಿತ್ತು.
2. ಕಾಶ್ಮೀರ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಹೀಮ್ ಅಸ್ಲಮ್ ಮೇ 23, 2020 ರಂದು ಸಾಮಾಜಿಕ ಮಾಧ್ಯಮದಲ್ಲಿ ಒಂದು `ಪೋಸ್ಟ’ ಪ್ರಸಾರ ಮಾಡಿ ಅದರಲ್ಲಿ, `ಒಂದು ಸತ್ಯ ಎಂದಿಗೂ ಬದಲಾಯಿಸಲಾಗದು. ಕಾಶ್ಮೀರ ಯಾವಾಗಲೂ ಪಾಕಿಸ್ತಾನದೊಂದಿಗೆ ಈದ್ ಆಚರಿಸುತ್ತದೆ. ನಾವು ಪಾಕಿಸ್ತಾನದೊಂದಿಗೆ ಇರುತ್ತೇವೆ’, ಎಂದು ಬರೆದಿದ್ದ. ಮತ್ತೊಂದು ಪೋಸ್ಟನಲ್ಲಿ ಫಹೀಮ್ ಕಾಶ್ಮೀರದಲ್ಲಿ ಹತ್ಯೆಗೀಡಾದ ಭಯೋತ್ಪಾದಕರನ್ನು ಹೊಗಳಿದ್ದಾನೆ.
ಸಂಪಾದಕರ ನಿಲುವು* ಇಂತಹ ದೇಶದ್ರೋಹಿಗಳನ್ನು ವಜಾ ಮಾಡುವ ಬದಲು ಗಲ್ಲಿಗೇರಿಸಬೇಕು * ‘ಪೊಲೀಸ ಪಡೆಯಲ್ಲಿ ಹೆಚ್ಚಿನ ಮುಸಲ್ಮಾನರನ್ನು ಭರ್ತಿ ಮಾಡಿರಿ’ ಎಂದು ಒತ್ತಾಯಿಸುವವರಿಗೆ ಅಲ್ಲಿಯ ಮತಾಂಧ ಪೊಲೀಸರಿಂದ ನಡೆಸುತ್ತಿರುವ ದೇಶದ್ರೋಹಿ ಕೃತ್ಯಗಳ ವಿಷಯದಲ್ಲಿ ಏನು ಹೇಳುವರು ? * ಕಾಶ್ಮೀರದ ಭಯೋತ್ಪಾದನೆಯನ್ನು ಅಂತ್ಯಹಾಡುವ ಮೊದಲು ಅವರನ್ನು ಬೆಂಬಲಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿರಿ ! |