ಜಾಗತಿಕ ತಾಪಮಾನ ಹೆಚ್ಚಳದ ಪ್ರಕೋಪ : ಅಮೇರಿಕಾ, ಯುರೋಪ್ ಮತ್ತು ಆಫ್ರಿಕಾ ಖಂಡದಲ್ಲಿ ಹಾಹಾಕಾರ !

ವಿಜ್ಞಾನ ಮತ್ತು ತಂತ್ರಜ್ಞಾನದ ಅತಿಯಾದ ಉಪಯೋಗದ ಫಲವಿದು, ಇದನ್ನು ತಿಳಿದುಕೊಳ್ಳಿ !

 

ರೋಮ (ಇಟಲಿ) – ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಗತಿಯಿಂದ ಜಾಗತಿಕ ತಾಪಮಾನದಲ್ಲಿ ಹೆಚ್ಚಳದ ವಿಪತ್ತು ಭಯಾನಕವಾಗುತ್ತಿದೆ. ಭೀಕರ ಉಷ್ಣತೆಯ ಅಲೆಗಳ ನಂತರ ಅಲ್ಲಿ ಉತ್ತರ ಭಾರತದಲ್ಲಿ ಆಗುತ್ತಿರುವ ಅತಿವೃಷ್ಟಿಯಿಂದ ೯೦ ಜನರು ಸಾವನ್ನಪ್ಪಿದ್ದಾರೆ, ಇಲ್ಲಿ ಅಮೇರಿಕಾ, ಯುರೋಪ್, ಆಫ್ರಿಕಾ ದೇಶದ ನಾಗರೀಕರು ಉಷ್ಣತೆಯಿಂದ ತೊಂದರೆಗೀಡಾಗಿರುವುದು ನೋಡುತ್ತಿದ್ದೇವೆ. ಆದ್ದರಿಂದ ತಾಪಮಾನದ ಹೊಸ ದಾಖಲೆ ನಿರ್ಮಾಣವಾಗುತ್ತಿದೆ.

ಭೀಕರ ಉಷ್ಣತೆಯಿಂದ ನಿವ್ವಳ ೧೧ ಕೋಟಿ ಅಮೇರಿಕಾ ನಾಗರೀಕರಿಗೆ ಪೆಟ್ಟು !

ಕಳೆದ ೧೬ ದಿನಗಳಲ್ಲಿ ಅಮೆರಿಕಾದ ಕ್ಯಾಲಿಫೋರ್ನಿಯಾದಿಂದ ಟೆಕ್ಸ್ಸಾಸ್ ವರೆಗೆ ಭಯಂಕರ ಉಷ್ಣತೆ ಇದೆ. ಅಮೇರಿಕಾದ ಮೂರನೆಯ ಒಂದು ಭಾಗದಷ್ಟು ಜನರು ಅಂದರೆ ನಿವ್ವಳ ೧೧ ಕೋಟಿ ಜನರು ತೊಂದರೆಗೀಡಾಗಿದ್ದಾರೆ. ಹವಾಮಾನ ಇಲಾಖೆಯಿಂದ ಭಯಾನಕ ಉಷ್ಣತೆಯ ಸೂಚನೆ ಜಾರಿಗೊಳಿಸಿದೆ. ಜಗತ್ತಿನ ಎಲ್ಲಕ್ಕಿಂತ ಉಷ್ಣಸ್ಥಾನಗಳಲ್ಲಿ ಒಂದಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ‘ಡೆತ್ ವ್ಯಾಲಿ’ ಯ ತಾಪಮಾನ ಈಗ ೪೮ ಡಿಗ್ರಿ ಸೆಲ್ಸಿಎಸ್ ಆಗಿದ್ದು ಅದು ೫೪ ಡಿಗ್ರಿ ಸೆಲ್ಸಿಎಸ್ ವರೆಗೆ ಹೆಚ್ಚುವ ಸಾಧ್ಯತೆ ಹೇಳಲಾಗಿದೆ. ಉಷ್ಣತೆಯಿಂದ ಕೆನಡಾದಲ್ಲಿನ ಕಾಡುಗಳಿಗೆ ಬೆಂಕಿತಗಲಿದ್ದು ಇಲ್ಲಿಯವರೆಗೆ ಎರಡುವರೆ ಕೋಟಿ ಎಕರೆ ಭೂಮಿ ಸುಟ್ಟು ಭಸ್ಮವಾಗಿದೆ.

(ಸೌಜನ್ಯ – DawnNews English)

ರೋಮ (ಇಟಲಿ)ನಲ್ಲಿ ಎಲ್ಲಕ್ಕಿಂತ ಹೆಚ್ಚಿನ ತಾಪಮಾನ ತಲುಪುವ ಸಾಧ್ಯತೆ !

ಯುರೋಪಿಯನ್ ದೇಶ ಇಟಲಿಯಲ್ಲಿ ಉಷ್ಣತೆಯಿಂದ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ಸರಕಾರವು ರೋಮ್, ಬೋಲೋಗ್ನಾ ಮತ್ತು ಫ್ಲೋರೆನ್ಸ್ ಸಹಿತ ೧೬ ನಗರಗಳಲ್ಲಿ ‘ರೆಡ್ ಅಲರ್ಟ್’ ಜಾರಿಗೊಳಿಸಿದೆ. ಹವಾಮಾನ ಇಲಾಖೆಯಿಂದ ಇಲ್ಲಿಯವರೆಗೆ ಸರ್ವಾಧಿಕ ಉಷ್ಣತೆ ಸಹಿಸಲು ನಾಗರೀಕರು ಸಿದ್ಧರಿರಬೇಕು ಎಂದು ನಾಗರಿಕರಿಗೆ ಎಚ್ಚರಿಕೆ ನೀಡಿದೆ. ರಾಜಧಾನಿ ರೋಮದಲ್ಲಿ ಜುಲೈ ೧೪ ರಂದು ೪೦ ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ತಲುಪಬಹುದು ಹಾಗೂ ಜುಲೈ ೧೯ ರಂದು ೪೩ ಡಿಗ್ರಿಯವರೆಗೆ ಹೋಗುವ ಸಾಧ್ಯತೆ ಹೇಳಲಾಗಿದೆ. ರೋಮದಲ್ಲಿ ಇಲ್ಲಿಯವರೆಗೆ ೪೦.೫ ಡಿಗ್ರಿ ಸೆಲ್ಸಿಯಸ್ ಸರ್ವಾಧಿಕ ತಾಪಮಾನ ಆಗಸ್ಟ್ ೨೦೦೭ ರಲ್ಲಿ ದಾಖಲಾಗಿತ್ತು.
ಸಾರ್ದೀನಿಯಾ ಮತ್ತು ಸಿಸಿಲಿ ಈ ಮೆಡಿಟರೇನಿಯನ್ ದ್ವೀಪದಲ್ಲಿನ ತಾಪಮಾನ ೪೮ ಡಿಗ್ರಿ ಸಿಲ್ಸಿಎಸ್ ವರೆಗೆ ತಲುಪುವ ಸಾಧ್ಯತೆ ಇದೆ, ಹೀಗಾದರೆ ಇದು ಯುರೋಪಿನಲ್ಲಿನ ಇಲ್ಲಿಯವರೆಗಿನ ಎಲ್ಲಕ್ಕಿಂತ ಹೆಚ್ಚಿನ ತಾಪಮಾನ ಇರುವುದು. ಫ್ರಾನ್ಸ್ ನಲ್ಲಿ ಉಷ್ಣತೆಯ ಅಲೆಯಿಂದ ಬರಗಾಲ ಬೀಳುವ ಸಾಧ್ಯತೆ ಹೇಳಲಾಗಿದೆ. ಜುಲೈ ೧೮ ರಿಂದ ಭಯಾನಕ ಉಷ್ಣತೆಯಿಂದ ಈ ಮೊದಲಿನ ಎಲ್ಲಾ ದಾಖಲೆಗಳನ್ನು ಮುರಿಯುತ್ತದೆ ಎಂದು ಹೇಳಲಾಗಿದೆ. ಸ್ಪೇನ್ ನಲ್ಲಿ ಉಷ್ಣಾಂಶ ಕಳೆದ ಕೆಲವು ದಿನಗಳಿಂದ ೪೦ ಡಿಗ್ರಿ ಸೆಲ್ಸಿಎಸ್ ಕ್ಕಿತಲೂ ಹೆಚ್ಚಾಗಿದೆ.

ಆಫ್ರಿಕಾ ದೇಶ ಮೋರೋಕ್ಕೊದಲ್ಲಿ ಉಷ್ಣತೆಯಿಂದ ಹಾಹಾಕಾರ !

ಉತ್ತರ ಆಫ್ರಿಕಾ ದೇಶ ಮೋರೋಕ್ಕೊದಲ್ಲಿ ಕೂಡ ತೀವ್ರ ಉಷ್ಣತೆಯಿಂದ ಹೊಸಹೊಸ ದಾಖಲೆಗಳು ನಿರ್ಮಾಣವಾಗುತ್ತಿದೆ. ಇಲ್ಲಿ ಜುಲೈ ೧೫ ಮತ್ತು ೧೬ ರಂದು ಅನೇಕ ಪ್ರಾಂತಗಳಲ್ಲಿ ೪೭ ಡಿಗ್ರಿ ಸೆಲ್ಸಿಎಸ್ ತಾಪಮಾನವಿತ್ತು. ಇಷ್ಟು ಹೆಚ್ಚು ತಾಪಮಾನ ಆಗಸ್ಟ್ ತಿಂಗಳಲ್ಲಿ ದಾಖಲಿಸಲಾಗುತ್ತದೆ. 15 ದಿನಗಳ ಹಿಂದೆ ಎಷ್ಟೊಂದು ತಾಪಮಾನ ಹೆಚ್ಚಿರುವುದರ ಬಗ್ಗೆ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಇನ್ನೊಂದು ಕಡೆಗೆ ನೀರಿನ ಕೊರತೆ ಆಗಿರುವುದು ಕಂಡು ಬರುತ್ತಿರುವ ಜಾರ್ಡನನಲ್ಲಿ ಅಜಲುನದ ಕಾಡಿನಲ್ಲಿ ಬೆಂಕಿ ಹತ್ತಿರುವುದರಿಂದ ಅಲ್ಲಿಯ ಪರಿಸ್ಥಿತಿ ಇನ್ನೂ ಹಾಳಾಗಿದೆ. ಈ ಬೆಂಕಿ ಆರಿಸುವುದಕ್ಕಾಗಿ ಜಾರ್ಡನ್ ಸರಕಾರದಿಂದ ೨೧೪ ಟನ್ ನೀರು ಉಪಯೋಗಿಸಲಾಗಿದೆ. ಇರಾಕದಲ್ಲಿ ಟಿಗರಿಸ್ ನದಿ ಬತ್ತಿದ್ದು ಅಲ್ಲಿ ೫೦ ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳದ ಸಾಧ್ಯತೆ ಬಗ್ಗೆ ಹೇಳಲಾಗುತ್ತದೆ.