ರಾಷ್ಟ್ರೋದ್ಧಾರಕ್ಕಾಗಿ ಲಕ್ಷಾಂತರ ಯುವಕರನ್ನು ಸಿದ್ಧಗೊಳಿಸುವ ವ್ರತಸ್ಥ ಪೂ. ಸಂಭಾಜಿರಾವ ಭಿಡೆ ಗುರೂಜಿ !

ವಿಶೇಷ ಸರಣಿ

ಯುವಕರ ರಕ್ತದಲ್ಲಿ ‘ಶ್ರೀ ಶಿವಾಜಿ ಮಹಾರಾಜ’ ಮತ್ತು ‘ಶ್ರೀ ಸಂಭಾಜಿ ಮಹಾರಾಜ’ ದೇಶಮಂತ್ರವನ್ನು ತುಂಬಿಸಿದರು !

ಪೂ. ಸಂಭಾಜಿರಾವ ಭಿಡೆ ಗುರೂಜಿ

ಭಾರತದಲ್ಲಿ ಮತ್ತು ವಿಶೇಷವಾಗಿ ಮಹಾರಾಷ್ಟ್ರದ ಭೂಮಿಯಲ್ಲಿ, ರಾಷ್ಟ್ರ-ಧರ್ಮಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ಕೆಲವು ಅಸಾಧಾರಣ ವ್ಯಕ್ತಿತ್ವಗಳಿವೆ. ಅಂತಹವರಲ್ಲಿ ಸಾಂಗಲಿಯ ಒಂದು ವ್ಯಕ್ತಿತ್ವವೆಂದರೆ ‘ಶ್ರೀ ಶಿವಪ್ರತಿಷ್ಠಾನ, ಹಿಂದುಸ್ಥಾನ’ದ ಸಂಸ್ಥಾಪಕ ಪೂ. ಸಂಭಾಜಿರಾವ ಭಿಡೆ ಗುರೂಜಿ! ತಮ್ಮ ೮೯ನೇ ವಯಸ್ಸಿನಲ್ಲಿಯೂ ಸಮಾಜದಲ್ಲಿ ಮತ್ತು ವಿಶೇಷವಾಗಿ ಯುವಕರಲ್ಲಿ ‘ಶ್ರೀ ಶಿವಾಜಿ’ ಮತ್ತು ‘ಶ್ರೀ ಸಂಭಾಜಿ’ ಎಂಬ ದೇಶಮಂತ್ರವನ್ನು ತುಂಬಿಸಲು ಹಗಲಿರುಳು ಶ್ರಮಿಸುತ್ತಿರುವ ಏಕೈಕ ವ್ಯಕ್ತಿ ಪೂ. ಸಂಭಾಜಿರಾವ ಭಿಡೆಗುರೂಜಿ! ಪೂ. ಭಿಡೆಗುರೂಜಿ ಇವರ ಮಾರ್ಗದರ್ಶನದಲ್ಲಿ ‘ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ’ದ ಕಾರ್ಯವು ಕಳೆದ ೪೦ ವರ್ಷಗಳಿಗಿಂತ ಹೆಚ್ಚು ಕಾಲ ಅವಿರತವಾಗಿ ನಡೆಯುತ್ತಿದೆ. ಇದರಲ್ಲಿ ಮುಖ್ಯವಾಗಿ ಕೋಟೆ ಅಭಿಯಾನ ಅಂದರೆ ಧಾರಾತೀರ್ಥ ಯಾತ್ರೆ, ಶ್ರೀ ದುರ್ಗಾಮಾತಾ ದೌಡ್, ‘ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ಬಲಿದಾನಮಾಸ’ ಮತ್ತು ‘ಮೂಕಪದಯಾತ್ರೆ’, ರಾಯಗಡದಲ್ಲಿ ೩೨ ಮಣ ಚಿನ್ನದ ಸಿಂಹಾಸನ ಮತ್ತು ಕಾವಲು, ಶಿವರಾಜ್ಯಾಭಿಷೇಕ ದಿನ, ‘ರಾಜ ಶ್ರೀಶಿವಛತ್ರಪತಿ ಗ್ರಂಥ’ ಪಾರಾಯಣ, ಪುಣೆ ವಿಶ್ವವಿದ್ಯಾಲಯವನ್ನು ‘ಜಿಜಾಮಾತಾ ವಿಶ್ವವಿದ್ಯಾನಿಲಯ’ ಎಂದು ಮರುನಾಮಕರಣ ಮಾಡಲು ಆಂದೋಲನ, ಇತಿಹಾಸ ಪರಿಷತ್ತು ಸೇರಿದಂತೆ ಅನೇಕ ಉಪಕ್ರಮಗಳು ರಾಷ್ಟ್ರೋದ್ಧಾರ, ರಾಷ್ಟ್ರೋನ್ನತಿ ಮತ್ತು ರಾಷ್ಟ್ರಸಾಕ್ಷಾತ್ಕಾರದ ಅರಿವು ಮೂಡಿಸಲು ನಿರಂತರವಾಗಿ ವರ್ಷವಿಡೀ ನಡೆಯುತ್ತವೆ.

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆ ಮತ್ತು ಶಿಲೇದಾರರು ಮಾಡಿದ ತ್ಯಾಗವು ಅತ್ಯುನ್ನತವಾಗಿದೆ, ಅದೇ ರೀತಿ ಇಂದು ಅನೇಕ ಹಿಂದುತ್ವವಾದಿ ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೇದಾರ’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮತ್ತು ಅವರ ಹಿಂದೂ ಧರ್ಮರಕ್ಷಣೆಯ ಹೋರಾಟದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೇದಾರ’ ಸರಣಿಯ ಮೂಲಕ ಇತರರಿಗೂ ಪ್ರೇರಣೆ ಸಿಗುತ್ತದೆ !


ಪೂ. ಭಿಡೆಗುರೂಜಿ ಅವರ ಅದ್ಭುತ ಪರಿಚಯ

ಪೂ. ಭಿಡೆಗುರೂಜಿ ಉನ್ನತ ವಿದ್ಯಾಭ್ಯಾಸವನ್ನು ಹೊಂದಿದ್ದು, ಅವರು ಅಣು ವಿಜ್ಞಾನದಲ್ಲಿ ‘ಎಂ.ಎಸ್ಸಿ’ ಮಾಡಿದ್ದಾರೆ. ಪೂ. ಭಿಡೆಗುರೂಜಿ ಅವರ ವಿಶೇಷತೆಯೆಂದರೆ ಅವರು ಬರಿಗಾಲಿನಲ್ಲಿ ನಡೆಯುತ್ತಾರೆ. ಸಾಮಾನ್ಯ ಕೋಣೆಯಲ್ಲಿ ವಾಸಿಸುತ್ತಾರೆ, ಇಂದಿಗೂ ಅವರು ಧೋತರವನ್ನು ಧರಿಸುತ್ತಾರೆ ಮತ್ತು ಅವರ ಹತ್ತಿರ ಬಹಳ ಕಡಿಮೆ ಬಟ್ಟೆಗಳಿವೆ. ನಗರದಲ್ಲಿ ಸೈಕಲ್‌ನಿಂದ ಮತ್ತು ಬೇರೆ ಕಡೆಗೆ ಎಸ್‌ಟಿ ಬಸ್‌ನಿಂದ ಪ್ರಯಾಣಿಸುತ್ತಾರೆ. ಅವರು ಬೆಳಿಗ್ಗೆ ೪ ಗಂಟೆಗೆ ಏಳುತ್ತಾರೆ ಮತ್ತು ಕೃಷ್ಣಾ ನದಿಯ ದಡದಲ್ಲಿ ತಮ್ಮ ಧಾರಕರಿಗಳೊಂದಿಗೆ ಸೂರ್ಯನಮಸ್ಕಾರ, ಜೋರ್, ಬಸ್ಕಿ, ದಂಡಬೈಠಕ್ ಹಾಕುತ್ತಾರೆ. ‘ಶ್ರೀ ಶಿವಪ್ರತಿಷ್ಠಾನದ ಧಾರಕರಿಗಳು ಧರ್ಮಕಾರ್ಯಕ್ಕಾಗಿ ದೇಹವನ್ನು ಸುದೃಢವಾಗಿರಿಸಿಕೊಳ್ಳಬೇಕು’ ಎಂಬುದು ಅವರ ನಿಯಮವಾಗಿದೆ. ಪೂ. ಗುರೂಜಿಯವರು ಮಹಾರಾಷ್ಟ್ರದ ಬಹುತೇಕ ಎಲ್ಲಾ ಕೋಟೆಗಳನ್ನು ಕಾಲ್ನಡಿಗೆಯಲ್ಲಿ ಸುತ್ತಿದ್ದಾರೆ ಮತ್ತು ಅವರಿಗೆ ಅವುಗಳ ಹೆಸರುಗಳು ಬಾಯಿಪಾಠ ಆಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪೂ. ಗುರೂಜಿಯವರನ್ನು ಗೌರವಿಸುತ್ತಾರೆ. ಪೂ. ಗುರೂಜಿಯವರ ಸ್ಮರಣಶಕ್ತಿ ಅತ್ಯಂತ ತೀಕ್ಷ್ಣವಾಗಿದ್ದು, ಅವರು ಒಮ್ಮೆ ಭೇಟಿಯಾದ ವ್ಯಕ್ತಿಯನ್ನು ಎಂದಿಗೂ ಮರೆಯುವುದಿಲ್ಲ. ಅವರ ನುಡಿಗಳು ಅತ್ಯಂತ ತೇಜಸ್ವಿಯಾಗಿದ್ದು, ಧೈರ್ಯಶಾಲಿಯಾಗಿದ್ದು, ಅವರು ಯಾವಾಗಲೂ ಪ್ರಚಾರದಿಂದ ದೂರವಿರುತ್ತಾರೆ. ಯಾತ್ರೆಗಾಗಿ ಬರುವ ಸಾವಿರಾರು ಜನರನ್ನು ಬೆಟ್ಟ, ಕಣಿವೆ, ಬಿಸಿಲು ಗಾಳಿ, ಚಳಿಯನ್ನು ಸಹಿಸಿಕೊಂಡು ಯಾವುದೇ ರೀತಿಯ ತೊಂದರೆ ಅಥವಾ ಗಾಯವಿಲ್ಲದೇ ಕರೆದುಕೊಂಡು ಬರುವುದು ಪೂ. ಗುರೂಜಿಯವರಿಂದ ಮಾತ್ರ ಸಾಧ್ಯ. ಪೂ. ಗುರೂಜಿಯವರ ದೇವರು ಮತ್ತು ಶ್ರೀ ಛತ್ರಪತಿ ಶಿವಾಜಿ ಇವರ ಮೇಲಿನ ನಂಬಿಕೆಯಿಂದಲೇ ಇದು ಸಾಧ್ಯವಾಗಿದೆ.

ಆಸೇತುಹಿಮಾಚಲ ಹಿಂದವೀ ಸ್ವರಾಜ್ಯವನ್ನು ನಿರ್ಮಿಸುವುದೇ ನಮ್ಮ ಗುರಿ! – ಪೂ. ಭಿಡೆಗುರೂಜಿ

ಛತ್ರಪತಿ ಶಿವಾಜಿ ಮಹಾರಾಜರ ಬಳಿ ಅನೇಕ ಮಾವಳೆಗಳು ಪ್ರಾಣಾರ್ಪಣೆ ಮಾಡಲು ಸಿದ್ಧರಿದ್ದರು. ತಾನಾಜಿ ಮಾಲುಸರೆಯಂತಹ ಅನೇಕರು ಅದನ್ನು ಮಾಡಿ ತೋರಿಸಿದರು. ಈ ತ್ಯಾಗವನ್ನು ಕಲಿಯಲು ಕೋಟೆದುರ್ಗಗಳ ಮಡಿಲಲ್ಲಿ ಈ ಶಿವಾಜಿ ವಿಶ್ವವಿದ್ಯಾಲಯಗಳಿವೆ. ಈ ವಿಶ್ವವಿದ್ಯಾಲಯಗಳು ಧರ್ಮ ಮತ್ತು ದೇಶವನ್ನು ರಕ್ಷಿಸುವಂತಹವು. ಇದರಿಂದ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ (ಆಸೇತು ಹಿಮಾಚಲ) ಹಿಂದವೀ ಸ್ವರಾಜ್ಯವನ್ನು ನಿರ್ಮಿಸುವುದೇ ನಮ್ಮ ಗುರಿಯಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರನ್ನು ಅನುಭವಿಸಬೇಕೆಂದಿರುವವರು ಒಮ್ಮೆಯಾದರೂ ಕೋಟೆಗಳ ಯಾತ್ರೆ ಮಾಡಬೇಕು! ? – ರಾವ್‌ಸಾಹೇಬ ದೇಸಾಯಿ, ರಾಷ್ಟ್ರೀಯ ಅಧ್ಯಕ್ಷರು, ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ

ಇಂದು ಛತ್ರಪತಿ ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜರ ಹೆಸರಿನಲ್ಲಿ ಅನೇಕರು ಸಂಘಟನೆಗಳನ್ನು ಸ್ಥಾಪಿಸಿದ್ದಾರೆ; ಆದರೆ ಸಂಘಟನೆಗಳು ಯುವಕರನ್ನು ಜಾತಿ-ಜಾತಿಗಳಲ್ಲಿ ಸಿಲುಕಿಸುತ್ತಿವೆ. ನಿಜವಾದ ಇತಿಹಾಸವನ್ನು ಹೇಳದೆ ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ಆದ್ದರಿಂದ ನಿಜವಾದ ಛತ್ರಪತಿ ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜರನ್ನು ಅನುಭವಿಸಬೇಕೆಂದಿರುವವರು ಒಮ್ಮೆಯಾದರೂ ಕೋಟೆ ಅಭಿಯಾನ ಮಾಡಬೇಕು.

ಕೋಟೆ ಅಭಿಯಾನದಲ್ಲಿ ಮಾರ್ಗದರ್ಶನ ನೀಡಿದ ಗಣ್ಯರು !

ಸಮರ್ಥ ಸಂಪ್ರದಾಯದ ಪೂ. (ದಿವಂಗತ) ಮಾರುತಿಬುವಾ ರಾಮದಾಸಿ, ಪೂ. (ದಿವಂಗತ) ಸುನಿಲ ಚಿಂಚೋಲಕರ, ಭಾರತಾಚಾರ್ಯ (ಪ್ರಾ) ಪೂ. ಸು.ಗ. ಶೇವಡೆ, ಹಿರಿಯ ಇತಿಹಾಸ ಸಂಶೋಧಕ ಶಿವಶಾಹೀರ ಬಾಬಾಸಾಹೇಬ ಪುರಂದರೆ, ‘ಸ್ವದೇಶಿ ಆಂದೋಲನ’ದ ಜನಕ ದಿವಂಗತ ರಾಜೀವ ದೀಕ್ಷಿತ್, ಇತಿಹಾಸ ಸಂಶೋಧಕ ದಿವಂಗತ ನಿನಾದ ಬೇಡೆಕರ, ಹಿರಿಯ ಪತ್ರಕರ್ತ ಶ್ರೀ. ಅರವಿಂದ ವಿಠ್ಠಲ ಕುಲಕರ್ಣಿ, ಡಾ. ಸಚ್ಚಿದಾನಂದ ಶೇವಡೆ, ‘ಪಾಣಿಪತ್’ಕಾರ ಶ್ರೀ. ವಿಶ್ವಾಸ ಪಾಟೀಲ, ಸ್ವಾತಂತ್ರ್ಯವೀರ ಸಾಹಿತ್ಯ ಅಧ್ಯಯನಕಾರ ಶ್ರೀ. ದುರ್ಗೇಶ ಪರುಳಕರ, ‘ಹಿಂದೂ ರಾಷ್ಟ್ರ ಸೇನೆ’ ಸಂಸ್ಥಾಪಕ ಶ್ರೀ. ಧನಂಜಯ ದೇಸಾಯಿ, ಶ್ರೀ. ದಾ.ವಿ. ಕುಲಕರ್ಣಿ. ಶ್ರೀ. ಭಾ.ನಾ. ಸರದೇಸಾಯಿ, ಶ್ರೀ. ಪಂಡಿತರಾವ ಗೋಗಟೆ, ಇತಿಹಾಸ ವ್ಯಾಖ್ಯಾನಕಾರ ಶ್ರೀ. ಅಮರ ಅಡಕೆ, ‘ಸುದರ್ಶನ’ ಸುದ್ದಿವಾಹಿನಿಯ ಡಾ. ಸುರೇಶ ಚವ್ಹಾಣಕೆ, ‘ಹಿಂದೂ ಜನಜಾಗೃತಿ ಸಮಿತಿ’ಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನಿಲ ಘನವಟ, ಸಮಿತಿಯ ಶ್ರೀ. ಮನೋಜ ಖಾಡಯೆ

ಉಪಸ್ಥಿತ ರಾಜಕೀಯ ನಾಯಕರು : ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ, ಅಂದಿನ ಗೃಹಸಚಿವ ದಿವಂಗತ ರಾ.ರಾ. ಪಾಟೀಲ, ಅಂದಿನ ಅರಣ್ಯ ಸಚಿವ ದಿವಂಗತ ಡಾ. ಪತಂಗರಾವ ಕದಂ, ಅಂದಿನ ಮನಸೆಯ ಶಾಸಕ ದಿವಂಗತ ರಮೇಶ ವಾಂಜಳೆ, ಅಂದಿನ ಸಚಿವ ವಿಜಯ ಶಿವತಾರೆ, ಅಂದಿನ ಗೃಹ ರಾಜ್ಯ ಸಚಿವ ರಂಜಿತ್ ಪಾಟೀಲ ಸೇರಿದಂತೆ ಅನೇಕ ಶಾಸಕರು, ಸಂಸದರು, ಸಚಿವರು, ಹಾಗೂ ಸರ್ವಪಕ್ಷಗಳ ಜನಪ್ರತಿನಿಧಿಗಳು

‘ಶ್ರೀ ಶಿವಪ್ರತಿಷ್ಠಾನ, ಹಿಂದುಸ್ಥಾನ’ದ ಕೆಲವು ಪ್ರಮುಖ ಉಪಕ್ರಮಗಳು

೧. ದೇಶ ಮತ್ತು ಧರ್ಮದ ಉತ್ಥಾನಕ್ಕಾಗಿ ಧಾರಾತೀರ್ಥ ಯಾತ್ರೆ (ಕೋಟೆ ಅಭಿಯಾನ) !

ಯುವಕರ ರಕ್ತದಲ್ಲಿ ‘ಶ್ರೀ ಶಿವಾಜಿ ಮಹಾರಾಜ’ ಮತ್ತು ‘ಶ್ರೀ ಸಂಭಾಜಿ ಮಹಾರಾಜ’ ಎಂಬ ದೇಶಮಂತ್ರವನ್ನು ತುಂಬಿಸಲು, ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮನೋಭಾವದ ಯುವ ಪೀಳಿಗೆಯನ್ನು ನಿರ್ಮಿಸಲು ಮತ್ತು ಯುವ ಪೀಳಿಗೆಯನ್ನು ಗುರಿ ಆಧಾರಿತವಾಗಿಸಲು ‘ಶ್ರೀ ಶಿವಪ್ರತಿಷ್ಠಾನ, ಹಿಂದುಸ್ಥಾನ’ದ ವತಿಯಿಂದ ಪ್ರತಿವರ್ಷ ಧಾರಾತೀರ್ಥ ಕೋಟೆ ಯಾತ್ರೆಯನ್ನು ಆಯೋಜಿಸಲಾಗುತ್ತದೆ.

೧ ಅ. ಅಭಿಯಾನದ ಉದ್ದೇಶ ಮತ್ತು ವ್ಯಾಪ್ತಿ: ಈ ಅಭಿಯಾನವು ದೇಶ ಮತ್ತು ಧರ್ಮದ ಉತ್ಥಾನಕ್ಕಾಗಿ ಇರುತ್ತದೆ. ದೇಶದ ಪ್ರತಿಯೊಬ್ಬ ಯುವಕನು ಸೈನಿಕ ಮನೋಭಾವದವನಾಗಿ ಸಿದ್ಧನಾಗುವುದು ಅವಶ್ಯಕ. ಈ ಯುವಕನು ಶ್ರೀ ಶಿವಾಜಿ ಮತ್ತು ಶ್ರೀ ಸಂಭಾಜಿ ಈ ರಕ್ತದ ಗುಂಪಿಗೆ ಸೇರಿದವನಾಗಿರಬೇಕು. ಈ ವಿದ್ಯೆಯನ್ನು ಕಲಿಯಲು ಸಹ್ಯಾದ್ರಿಯಂತಹ ಇನ್ನೊಂದು ವಿಶ್ವವಿದ್ಯಾಲಯವಿಲ್ಲ. ಮರಾಠಿ ಯುವಕರು ೪ ದಿನಗಳ ಕಾಲ ಒಟ್ಟಿಗೆ ಸೇರುತ್ತಾರೆ. ಭಾರತೀಯ ಸೈನಿಕರು ಕೋಟೆಿಯಲ್ಲಿ ಯಾವ ಸ್ಥಿತಿಯನ್ನು ಅನುಭವಿಸುತ್ತಾರೋ, ಆ ಪರಿಸ್ಥಿತಿಯನ್ನು ಈ ಯುವಕರು ೪ ದಿನಗಳಲ್ಲಿ ಅನುಭವಿಸುತ್ತಾರೆ. ಈ ಅಭಿಯಾನವು ಸುಮಾರು ೧೩೦ ರಿಂದ ೧೬೦ ಕಿಲೋಮೀಟರ್ ದೂರವನ್ನು ಹೊಂದಿರುತ್ತದೆ. ೨೦೦೬ ರಿಂದ ನಡೆಯುತ್ತಿರುವ ಯಾತ್ರೆಗಳು ೨೫ ಸಾವಿರ ಧಾರಕರಿಗಳ ಸಂಖ್ಯೆಯನ್ನು ದಾಟಿದೆ.

ಯಾತ್ರೆ ಪ್ರಾರಂಭವಾದ ನಂತರ, ಧಾರಕರಿಗಳಿಗೆ ದೇವರು, ದೇಶ, ಧರ್ಮ, ಛತ್ರಪತಿ ಶಿವಾಜಿ ಮಹಾರಾಜರ ಹೊರತಾಗಿ ಬೇರೇನೂ ತಿಳಿಯುವುದಿಲ್ಲ. ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಯಾವ ಯಾವ ಸ್ಥಳಗಳಿಗೆ ಹೋದರೋ, ಆ ಸ್ಥಳದ ಪರಾಕ್ರಮವನ್ನು ನೆನಪಿಸಿಕೊಂಡು, ಅಲ್ಲಿ ಗುರಿಮಂತ್ರ, ಪ್ರೇರಣಾಮಂತ್ರವೆಂದು ಆ ಪ್ರಸಂಗಗಳನ್ನು ನೆನಪಿಸಿಕೊಳ್ಳುವಲ್ಲಿ ಪ್ರತಿಯೊಬ್ಬ ಯುವಕನು ಮಗ್ನನಾಗುತ್ತಾನೆ. ಇಂದು ಮಹಾರಾಷ್ಟ್ರದಲ್ಲಿ ಅಭಿಯಾನದ ಮೂಲಕ ೧೦೦ಕ್ಕೂ ಹೆಚ್ಚು ಕೋಟೆಗಳನ್ನು ಯುವಕರು ಕಾಲ್ನಡಿಗೆಯಲ್ಲಿ ಸುತ್ತಿದ್ದಾರೆ.

೧ ಆ. ಧಾರಾತೀರ್ಥ ಯಾತ್ರೆಗಳಿಂದ ಮರಾಠಿ ಕೆಚ್ಚು : ಅನೇಕ ಮಾವಳೆಗಳು ಮತ್ತು ಕ್ರಾಂತಿಕಾರಿಗಳ ರಕ್ತವು ಕೋಟೆಗಳಲ್ಲಿ ಚೆಲ್ಲಿದೆ. ಈ ಕೋಟೆಗಳು ಛತ್ರಪತಿ ಶಿವರಾಯರು ಮತ್ತು ಅವರ ಮಾವಳೆಗಳು ನಮಗಾಗಿ ಇಟ್ಟಿರುವ ‘ಅಮೂಲ್ಯ ನಿಧಿ’. ಕಠಿಣ ಮಾರ್ಗದಲ್ಲಿ ಕಣಿವೆಗಳು, ಬೆಟ್ಟಗಳು, ಹಳ್ಳಕೊಳ್ಳಗಳ ಮೂಲಕ ನಡೆಯುವುದು; ಬಯಲಿನಲ್ಲಿ ಮಲಗುವುದು, ಅವಿರತವಾಗಿ ನಡೆಯುವುದು, ಬಿಸಿಲು-ಗಾಳಿಯ ಚಿಂತೆಯಿಲ್ಲ. ಈ ವ್ರತದಿಂದ ಮರಾಠಿ ಕೆಚ್ಚು ಬರುತ್ತದೆ.

೧ ಇ. ಅಭಿಯಾನದ ಸಾಧ್ಯಾಸಾಧ್ಯತೆ

೧. ಯಾತ್ರೆಗೆ ಹೋದಾಗ ದೈಹಿಕ ಸಾಮರ್ಥ್ಯದ ಪರೀಕ್ಷೆಯಾಗುತ್ತದೆ. ಕಣಿವೆಗಳು, ಬೆಟ್ಟಗಳು, ಕಾಡಿನ ಮರಗಳು, ಕೋಟೆಗಳಿಂದ ಕಾರ್ಯಕರ್ತನು ಎಷ್ಟು ದೂರ ನಡೆದಿದ್ದಾನೆ ಎಂಬುದನ್ನು ಮರೆಯುತ್ತಾನೆ. ೪ ದಿನಗಳಿಗೆ ಸಾಕಾಗುವಷ್ಟು ಆಹಾರವನ್ನು ಜೊತೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಹೀಗಿದ್ದರೂ ಶ್ರೀ ಛತ್ರಪತಿ ಶಿವಾಜಿಯವರ ಪಾದಸ್ಪರ್ಶದಿಂದ ಪವಿತ್ರಗೊಂಡ ಕೋಟೆಗಳನ್ನು ನೋಡಿದಾಗ ಹಸಿವಿನ ನೆನಪೇ ಇರುವುದಿಲ್ಲ. ಯಾವ ಕಾರ್ಯಕರ್ತನು ಒಂದು ಯಾತ್ರೆಯನ್ನು ಪೂರ್ಣಗೊಳಿಸುತ್ತಾನೋ ಅವನು ಈ ದೇಶದ ಯಾವುದೇ ಭಾಗಕ್ಕೆ ಭಯವಿಲ್ಲದೆ ಹೋಗಬಹುದು.

೨. ೩ ದಿನಗಳ ಕಾಲ ಚಳಿ, ಬಿಸಿಲು, ಗಾಳಿಯನ್ನು ಎದುರಿಸುತ್ತಾ ಶ್ರೀ ಛತ್ರಪತಿ ಶಿವಾಜಿ ಮತ್ತು ಅವರ ಮಾವಳೆಗಳು ಹೇಗೆ ವಾಸಿಸುತ್ತಿದ್ದರು, ಬೆಳೆದರು, ಹೋರಾಡಿದರು ಎಂಬುದನ್ನು ಅನುಭವಿಸಬಹುದು. ಅನೇಕ ಸ್ಥಳಗಳಲ್ಲಿ ಮಾರ್ಗಗಳು ಕಠಿಣವಾಗಿರುತ್ತವೆ, ನೀರು ಕೂಡ ಸಿಗುವುದಿಲ್ಲ; ಆದರೆ ಇದರ ಅರಿವು ಯಾರಿಗೂ ಇರುವುದಿಲ್ಲ. ಇದರಿಂದ ಅವರಲ್ಲಿ ಸಂಘಟಿತ ಭಾವನೆ ಮೂಡಲು ಸಹಾಯವಾಗುತ್ತದೆ. ಕೆಲವು ಸೇನಾ ಅಧಿಕಾರಿಗಳು ‘ಸೇನೆಗಿಂತ ಕಠಿಣ ತರಬೇತಿಯನ್ನು ಈ ಅಭಿಯಾನದಲ್ಲಿ ಅನುಭವಿಸಬಹುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಪುಸ್ತಕದ ಓದಿಗಿಂತ ಅಭಿಯಾನದಿಂದ ಕೋಟೆಗಳು ಹೃದಯದಲ್ಲಿ ನಾಟುತ್ತವೆ.

೩. ಮೋಕ್ಷ ಮತ್ತು ಸಮಾಧಾನಕ್ಕಾಗಿ ಅನೇಕರು ತೀರ್ಥಯಾತ್ರೆ ಮಾಡುತ್ತಾರೆ. ವಾರಕರಿಯರು ಕೂಡ ಪಂಢರಪುರದ ವಾರಿಗೆ ನಿಷ್ಠೆಯಿಂದ ಹೋಗುತ್ತಾರೆ. ‘ಶ್ರೀ ಶಿವಪ್ರತಿಷ್ಠಾನ, ಹಿಂದುಸ್ಥಾನ’ದ ವಾರಿಯು ದೇಶ-ಧರ್ಮದ ಉತ್ಥಾನಕ್ಕಾಗಿ ಇರುತ್ತದೆ. ದೇಶದ ಪ್ರತಿಯೊಬ್ಬ ಯುವಕನು ಸೈನಿಕ ಮನೋಭಾವದವನಾಗಿ ಸಿದ್ಧನಾಗುವುದು ಅವಶ್ಯಕ. ಈ ಯುವಕನು ಶ್ರೀ ಶಿವಾಜಿ ಮಹಾರಾಜ ಮತ್ತು ಶ್ರೀ ಸಂಭಾಜಿ ಮಹಾರಾಜರ ರಕ್ತದ ಗುಂಪಿಗೆ ಸೇರಿದವನಾಗಿರಬೇಕು.

೨. ೩೪ ವರ್ಷಗಳಿಂದ ನಿರಂತರವಾಗಿ ಆಚರಿಸುತ್ತಿರುವ ‘ರಾಯಗಡ ವ್ರತ’ !

ಪೂ. ಗುರೂಜಿಯವರ ಮಾರ್ಗದರ್ಶನದಲ್ಲಿ ಸಾಂಗ್ಲಿಯ ಧಾರಕರಿಗಳು ಪ್ರತಿದಿನ ೩೦೦ ಕಿಲೋಮೀಟರ್ ದೂರವನ್ನು ಕ್ರಮಿಸಿ ರಾಯಗಡದ ಪೂಜೆಗಾಗಿ ಹೋಗುತ್ತಿದ್ದಾರೆ. ಬಿಸಿಲು, ಗಾಳಿ, ಮಳೆ ಏನೇ ಇದ್ದರೂ, ೧೪ ಜನವರಿ ೧೯೯೧ ರಿಂದ ಈ ಪೂಜೆ ನಡೆಯುತ್ತಿರುವುದರಿಂದ ಅದು ‘ರಾಯಗಡ ವ್ರತ’ವಾಗಿದೆ. ಶ್ರೀ ಛತ್ರಪತಿ ಶಿವಾಜಿಯವರ ಸಿಂಹಾಸನದ ಸ್ಥಳದ ಪೂಜೆ ನಡೆಯುತ್ತಿರಲಿಲ್ಲ. ನಾಗರಿಕರ ದೇಹ, ಮನಸ್ಸು, ಧನದ ತ್ಯಾಗವಾಗಬೇಕು ಎಂಬ ಉದ್ದೇಶದಿಂದ ಪೂಜೆಯು ಪ್ರಾರಂಭವಾಯಿತು.

ಎರಡು ದಿನಗಳ ಪೂಜೆಗಾಗಿ ಬೇಕಾಗುವ ಹಾರಗಳನ್ನು ಬಸ್‌ನಲ್ಲಿ ಸುರಕ್ಷಿತವಾಗಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ‘ಶ್ರೀ ರಾಯಗಡ ಪುಷ್ಪಸಾಗರ’ ಅಂಗಡಿಯ ಮಾಲೀಕರಾದ ಶ್ರೀ ಜಾಧವ ಸಹೋದರರು ಕೇವಲ ೩೦ ರೂಪಾಯಿಗಳಿಗೆ ೧೧ ದೊಡ್ಡ ಹಾರಗಳನ್ನು ನೀಡುತ್ತಿದ್ದಾರೆ. ಇಂದು ತಲುಪುವ ಧಾರಕನು ರಾಯಗಡದಲ್ಲಿ ವಾಸಿಸಿ ನಾಳೆಯ ಪೂಜೆಯನ್ನು ಪೂರ್ಣಗೊಳಿಸಿ ಹಿಂತಿರುಗುತ್ತಾನೆ.

ಪ್ರಸ್ತುತ ಕೆಲವು ಕೋಟೆಗಳಲ್ಲಿ ಯುವಕರು ವ್ಯಸನಗಳನ್ನು ಮಾಡುವುದು ಮತ್ತು ಇತರ ತಪ್ಪು ಕೆಲಸಗಳನ್ನು ಮಾಡುತ್ತಾರೆ. ಈ ವ್ರತದಿಂದ ರಾಯಗಡದ ಪ್ರವಾಸಿಗರ ಮೇಲೆ ನಿಯಂತ್ರಣವಿದೆ. ಅನೇಕರು ತಮ್ಮ ಹುಟ್ಟುಹಬ್ಬ, ಯಾರದಾದರೂ ಸ್ಮೃತಿದಿನ, ವಿಶೇಷ ದಿನವನ್ನು ರಾಯಗಡಕ್ಕೆ ಹೋಗಲು ನಿಗದಿಪಡಿಸಿದ್ದಾರೆ. ಈ ವ್ರತದಿಂದ ಸಾಂಗ್ಲಿಕರ ಪರಿಚಯ ‘ಛತ್ರಪತಿ ಶಿವರಾಯರ ಪೂಜಾರಿ’ ಎಂದಾಗಿದೆ. ಈ ವ್ರತಕ್ಕೆ ಹೋಗುವ ಮೊದಲು, ಹೋಗುವಾಗ ಮತ್ತು ಅಲ್ಲಿ ಹೋದ ನಂತರ ಧಾರಕರಿಗಳು ‘ರಾಜ ಶಿವಛತ್ರಪತಿ’ ಗ್ರಂಥವನ್ನು ಓದುತ್ತಾರೆ!

ಈ ವ್ರತದಲ್ಲಿ ೧೫ ವರ್ಷದ ಯುವಕರಿಂದ ೮೦ ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಭಾಗವಹಿಸುತ್ತಾರೆ. ಅನೇಕರ ಎರಡನೇ ಪೀಳಿಗೆಯವರು ಕೂಡ ಈ ವ್ರತದಲ್ಲಿ ಭಾಗವಹಿಸಿದ್ದಾರೆ.

೩. ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ಬಲಿದಾನಮಾಸ

ಛತ್ರಪತಿ ಸಂಭಾಜಿ ಮಹಾರಾಜರು ಹಿಂದೂ ಧರ್ಮಕ್ಕಾಗಿ ಬಲಿದಾನ ನೀಡಿದರು. ಔರಂಗಜೇಬನು ಬಂಧಿಸಿದ ದಿನದಿಂದ ಛತ್ರಪತಿ ಸಂಭಾಜಿ ಮಹಾರಾಜರು ಅನ್ನ ಮತ್ತು ನೀರನ್ನು ತ್ಯಜಿಸಿದರು ಮತ್ತು ಒಂದು ತಿಂಗಳ ಕಾಲ ಕಠಿಣ ಹೋರಾಟ ಮಾಡಿದರು. ಅವರ ಬಲಿದಾನದ ನೆನಪಿಗಾಗಿ ‘ಶ್ರೀ ಶಿವಪ್ರತಿಷ್ಠಾನ, ಹಿಂದುಸ್ಥಾನ’ದ ವತಿಯಿಂದ ಪ್ರತಿವರ್ಷ ಫಾಲ್ಗುಣ ಶುಕ್ಲ ಪ್ರತಿಪದದಿಂದ ಫಾಲ್ಗುಣ ಅಮಾವಾಸ್ಯೆಯವರೆಗೆ ‘ಧರ್ಮವೀರ ಬಲಿದಾನ ಮಾಸ’ವನ್ನು ಆಚರಿಸಲಾಗುತ್ತದೆ.

ಫಾಲ್ಗುಣ ಅಮಾವಾಸ್ಯೆಯಂದು ಛತ್ರಪತಿ ಸಂಭಾಜಿ ಮಹಾರಾಜರ ದೇಹವನ್ನು ತುಂಡು ಮಾಡಿ ಕೊಲ್ಲಲಾಯಿತು. ಆ ಸಮಯದಲ್ಲಿ ಅವರ ಅಂತ್ಯಕ್ರಿಯೆಯ ಮರೆವಣಿಗೆ ಹೊರಡಿಸಲು ಸಾಧ್ಯವಾಗಲಿಲ್ಲ. ಅವರ ಹೊರಡಿಸದ ಅಂತ್ಯಕ್ರಿಯೆಯ ನೆನಪಿಗಾಗಿ ಫಾಲ್ಗುಣ ಅಮಾವಾಸ್ಯೆಗೆ ಮೌನ ಪಾದಯಾತ್ರೆ ನಡೆಸಿ ಛತ್ರಪತಿ ಸಂಭಾಜಿ ಮಹಾರಾಜ್ ಇವರ ಪ್ರತಿಕಾತ್ಮಕ ಚಿತೆಗೆ ಅಗ್ನಿ ನೀಡುತ್ತಾರೆ. ಈ ಬಲಿದಾನದ ನೆನಪಿನಲ್ಲಿ ಧಾರಕರಿಗಳು ಇಂದು ಮಾತ್ರ ಕಾಲಿಗೆ ಚಪ್ಪಲಿಗಳನ್ನು ಧರಿಸುದಿಲ್ಲ, ಕೂದಲು ಕತ್ತರಿಸುವುದಿಲ್ಲ, ದೂರದರ್ಶನ ನೋಡುವುದಿಲ್ಲ, ಇಂತಹ ಇಷ್ಟವಾದಂತಹ ವಸ್ತುಗಳನ್ನು ತ್ಯಜಿಸುತ್ತಾರೆ.

೪. ದುರ್ಗಾಮಾತಾ ದೌಡ್

ಛತ್ರಪತಿ ಶಿವಾಜಿ ಮಹಾರಾಜರ ರಕ್ತದಲ್ಲಿನ ರೋಷ, ಹೋರಾಟ ಪೂ. ಗುರೂಜಿಯವರ ಜೀವನದಲ್ಲಿ ಪ್ರತಿಕ್ಷಣವೂ ಕಾಣುತ್ತದೆ. ಅವರ ಓಟದಿಂದ ಅವರ ರಕ್ತದಲ್ಲಿ ದೇಶ, ಧರ್ಮದ ಬಗ್ಗೆ ಕಳಕಳಿ ಮತ್ತು ಹಂಬಲ ಕಾಣುತ್ತದೆ. ಅದೇ ಪ್ರವೃತ್ತಿ ಯುವ ಪೀಳಿಗೆಯಲ್ಲಿ ಬರುವುದಕ್ಕಾಗಿ ಶ್ರೀ ದುರ್ಗಾ ಮಾತಾದೌಡ್ ಆಯೋಜನೆ ಮಾಡಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ೫.೩೦ ಗಂಟೆಗೆ ಈ ಓಟ ಪ್ರಾರಂಭವಾಗುತ್ತದೆ.

ನವರಾತ್ರಿಯ ಸಮಯದಲ್ಲಿ ಇಂದು ಯಾವ ರೀತಿ ವೈಯಕ್ತಿಕ ಮಟ್ಟದಲ್ಲಿ ನವರಾತ್ರಿ ಆಚರಿಸುತ್ತಾರೆ, ಅದೇ ರೀತಿ ದೇವರು, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಸಾಮಾಜಿಕ ನವರಾತ್ರಿ ಆಚರಿಸಬೇಕು ಮತ್ತು ಅದು ಎಂದರೆ ಶ್ರೀ ದುರ್ಗಾ ಮಾತಾ ದೌಡ್ ಆಗಿದೆ. ಈ ಓಟದಲ್ಲಿ ಅಗ್ರಸ್ಥಾನದಲ್ಲಿ ಕೇಸರಿ ಧ್ವಜ ಇರುತ್ತದೆ. ಶಿವತೀರ್ಥದಿಂದ ಮೊದಲು ಧಾರಕರಿಗಳು ಮಾಧವನಗರ ರಸ್ತೆಯಲ್ಲಿರುವ ಶ್ರೀದುರ್ಗಾ ಮಾತಾ ದೇವಸ್ಥಾನದವರೆಗೆ ಓಡುತ್ತಾ ಹೋಗುತ್ತಾರೆ. ಅಲ್ಲಿ ಶ್ರೀದುರ್ಗಾ ಮಾತೆಗೆ ಆರತಿ ಮಾಡುತ್ತಾರೆ. ಅದರ ನಂತರ ಶ್ರೀ ದುರ್ಗಾ ಮಾತೆಯ ಆಶೀರ್ವಾದ ಪಡೆದು ಬೇರೆ ಬೇರೆ ಮಾರ್ಗದಿಂದ ಧಾರಕರಿಗಳು ವಿವಿಧ ಸ್ಫೂರ್ತಿಗೀತೆಗಳನ್ನು ಹೇಳುತ್ತಾ ಹೋಗುತ್ತಾರೆ. ಈ ಓಟ ಕೇವಲ ಮಹಾರಾಷ್ಟ್ರದಲ್ಲಷ್ಟೇ ಅಲ್ಲದೆ ಅದು ಗೋವಾ, ಕರ್ನಾಟಕದ ಜೊತೆಗೆ ಇತರ ರಾಜ್ಯಗಳಲ್ಲಿಯೂ ಹರಡಿದೆ.

ಪೂ. ಭಿಡೆಗುರೂಜಿಯ ಸಂಪರ್ಕಕ್ಕೆ ಬಂದ ನಂತರ ಯುವಕರಲ್ಲಿ ಆಗಿರುವ ಬದಲಾವಣೆ

ಪೂ. ಭಿಡೆ ಗುರೂಜಿಯವರ ಸಂಪರ್ಕಕ್ಕೆ ಬರುವ ಮೊದಲು ಅನೇಕ ಯುವಕರಿಗೆ ದೇವರು, ದೇಶ ಮತ್ತು ಧರ್ಮದ ಬಗ್ಗೆ ಅರಿವಿರಲಿಲ್ಲ. ಮಂಡಳದ ಹೆಸರಿನಲ್ಲಿ ಕಾರ್ಯಕರ್ತರು ಮೌಜು ಮಸ್ತಿ ಮಾಡುವುದು ಇಷ್ಟೇ ಅವರಿಗೆ ತಿಳಿದಿತ್ತು ; ಆದರೆ ಪೂ. ಗುರೂಜಿಯವರ ಸಂಪರ್ಕದಿಂದ ಅದೆಲ್ಲವೂ ಬದಲಾಗಿದೆ. ಪ್ರತಿಯೊಬ್ಬ ಯುವಕನು ದೇಶ ಕಾರ್ಯಕ್ಕಾಗಿ ಸಮಯ ನೀಡಬೇಕು. ತನ್ನ ಸಂಸಾರ ನಡೆಸುವಾಗ ದೇಶದ ಸಂಸಾರ ಹೇಗೆ ನಡೆಸಬೇಕು, ಎಂಬ ಬೋಧನೆಯನ್ನು ಪೂ. ಗುರೂಜಿಯವರು ಬಿಂಬಿಸುತ್ತಾರೆ. ಆದ್ದರಿಂದ ಸಾವಿರಾರು ಧಾರಕರಿಗಳ ಜೀವನ ಕೃತಾರ್ಥವಾಗಿದೆ.