ಚೀನಾವನ್ನು ಹಿಂದಿಕ್ಕಿ ಈಗ ಭಾರತವಾಗಿದೆ ಜಗತ್ತಿನ `ಎಲ್ಲಕ್ಕಿಂತ ಆಕರ್ಷಕ ಉದಯೋನ್ಮುಖ ಮಾರುಕಟ್ಟೆ’ !

ನವದೆಹಲಿ – ಭಾರತವು `ಎಲ್ಲಕ್ಕಿಂತ ಆಕರ್ಷಕ ಉದಯೋನ್ಮುಖ ಮಾರುಕಟ್ಟೆ’ಯಾಗಿ ಚೀನಾವನ್ನು ಹಿಂದಿಕ್ಕಿದೆ. ಜಗತ್ತಿನಾದ್ಯಂತ ಇರುವ 85 ಸಾರ್ವಭೌಮ ಸಂಪತ್ತಿನ ಸಂಸ್ಥೆಗಳು ಹಾಗೂ 57 ಕೇಂದ್ರೀಯ ಬ್ಯಾಂಕುಗಳು ಒಮ್ಮುಖದಿಂದ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ, ಎಂಬ ವರದಿಯನ್ನು ಬಂಡವಾಳ ಹೂಡಿಕೆಯ ವ್ಯವಸ್ಥಾಪನೆಗೆ ಸಂಬಂಧಿಸಿದ ಜಾಗತಿಕ ಸಂಸ್ಥೆಯಾದ `ಇನ್ವೆಸ್ಕೊ’ ಜ್ಯಾರಿ ಮಾಡಿದೆ. ಈ ವರದಿಯಲ್ಲಿ ಸಹಭಾಗಿಯಾದ ಈ ಸಂಸ್ಥೆ ಹಾಗೂ ಬ್ಯಾಂಕುಗಳ ಒಟ್ಟೂ ಸಂಪತ್ತು 1 ಸಾವಿರದ 734 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ (21 ಟ್ರಿಲಿಯನ್ ಡಾಲರ್ಸ್) ಹೆಚ್ಚಿದೆ.

ಈ ವರದಿಯ ಅನುಸಾರ ಭಾರತದ ಕಡೆಗೆ ಸಕಾರಾತ್ಮಕ ದೃಷ್ಟಿಯಿಂದ ನೋಡಲಾಗುತ್ತಿದ್ದು ಅದರ ಸುಧಾರಿತ ವ್ಯಾಪಾರಿ ಹಾಗೂ ರಾಜಕೀಯ ಸ್ಥಿರತೆ, ಅನುಕೂಲಕರ ಸಮಾಜಘಟಕ, ಬಂಡವಾಳ ಹೂಡಿಕೆದಾರರಿಗೆ ಸ್ನೇಹಪೂರ್ಣ ವಾತಾವರಣವನ್ನು ನೀಡಲು ನಡೆಯುತ್ತಿರುವ ಪ್ರಯತ್ನಗಳಿಂದಾಗಿ ಹೆಚ್ಚಿನ ಸಂಸ್ಥೆಗಳು ಭಾರತದೆಡೆಗೆ ಹೊರಳುತ್ತಿವೆ. ಈ ವರದಿಯ ಅನುಸಾರ ಭಾರತದೊಂದಿಗೆ ಮೆಕ್ಸಿಕೋ, ಬ್ರೆಜಿಲ್ ಹಾಗೂ ದಕ್ಷಿಣ ಕೊರಿಯಾ ಈ ದೇಶಗಳ ಕಡೆಗೂ ಹೂಡಿಕೆದಾರರ ಒಲವು ಹೆಚ್ಚಾಗುತ್ತಿದೆ.