ಜಗತ್ತಿನಾದ್ಯಂತ ಭಾರತದ ವಿಕಾಸದ ಡಂಗುರ !

ಒಂದೆಡೆ ಅನೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತ ವಿರುವಾಗ ಭಾರತದ ಅರ್ಥವ್ಯವಸ್ಥೆ ಮಾತ್ರ ಉತ್ತಮ ಸ್ಥಿತಿಯಲ್ಲಿದೆ. ಗ್ಲೋಬಲ್ ರೇಟಿಂಗ್ ಏಜನ್ಸಿ ‘ಎಸ್ ಎಂಡ್ ಪಿ ಯ ವರದಿಗನುಸಾರ ಮುಂದಿನ ೩ ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆಯು ಶೇ. ೬.೭ ರಷ್ಟು ಹೆಚ್ಚಾಗುವುದು. ಜಾಗತಿಕ ಮಟ್ಟದಲ್ಲಿ ‘ನಾನೇ ಮುಂದೆ ಎನ್ನುವ ಜಂಭದಲ್ಲಿರುವ ಚೀನಾದ ಅರ್ಥವ್ಯವಸ್ಥೆಯ ಬಲೂನಿನ ಗಾಳಿ ನಿಧಾನವಾಗಿ ಸೋರುತ್ತಿದೆ. ನಿಧಿಯ ಅವಶ್ಯಕತೆ ಉಂಟಾದಾಗ ಬಲವಂತವಾಗಿ ಜನಸಾಮಾನ್ಯರ ಹಣವಿರುವ ಬ್ಯಾಂಕ್‌ಗಳನ್ನು ವಶಪಡಿಸಿಕೊಳ್ಳುವುದು, ಕೊರೋನಾದಿಂದ ಉದ್ಭವಿಸಿದ ಪರಿಸ್ಥಿತಿ ಇಂತಹ ಅನೇಕ ಕಾರಣಗಳಿಂದ ಚೀನಾದ ಆರ್ಥಿಕ ವಿಕಾಸ ದರ ಶೇ. ೫.೫ ರಿಂದ ಶೇ. ೫.೨ ಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರು ಜೂನ್ ೨೭ ರಂದು ದೇಶದ ಪ್ರಗತಿಯಲ್ಲಿ ಅಮೂಲ್ಯವಾದ ಸಹಕಾರ ನೀಡುವ ೫ ಹೊಸ ‘ವಂದೇ ಭಾರತ ರೈಲುಗಳಿಗೆ ಹಸಿರು ಪತಾಕೆ ತೋರಿಸಿದರು. ಈ ಘಟನೆ ದೇಶ ಸತತವಾಗಿ ಆರ್ಥಿಕ ಪ್ರಗತಿಯ ಕಡೆಗೆ ಪ್ರಯಾಣ ಮಾಡುತ್ತಿರುವುದರ ಸಂಕೇತವಾಗಿದೆ. ಕಳೆದ ೧೦ ವರ್ಷಗಳಿಂದ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಸತತ ಸುಧಾರಣೆಯಾಗುತ್ತಿದ್ದು ಈ ಅವಧಿಯಲ್ಲಿ ಜಾಗತಿಕ ಸ್ತರದಲ್ಲಿ ಭಾರತಕ್ಕೆ ಸೆಡ್ಡು ಹೊಡೆಯುವ ಕ್ಷಮತೆ ಯಾರಲ್ಲಿಯೂ ಇಲ್ಲ.

ಭಾರತೀಯ ಅರ್ಥವ್ಯವಸ್ಥೆಯ ದಾಪುಗಾಲು !

ಬೆಲೆಯೇರಿಕೆ ಹಾಗೂ ಬ್ಯಾಂಕ್‌ಗಳಲ್ಲಿನ ಅಡಚಣೆಗಳಿಂದಾಗಿ ಅಮೇರಿಕಾ ಸದ್ಯ ಆರ್ಥಿಕ ಹಿಂಜರಿತದ ಹೊಸ್ತಿಲಲ್ಲಿ ನಿಂತಿದೆ. ಯುರೋಪಿನ ಅರ್ಥವ್ಯವಸ್ಥೆ ಕೊರೊನಾದ ನಂತರ ಸ್ಥಿರವಾಗಲೆ ಇಲ್ಲ, ಇಷ್ಟು ಮಾತ್ರವಲ್ಲ, ಯುರೋಪ್‌ನಲ್ಲಿನ ಅತಿ ದೊಡ್ಡ ಅರ್ಥವ್ಯವಸ್ಥೆ ಆಗಿದ್ದ ಜರ್ಮನಿ ಸದ್ಯ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ಶ್ರೀಲಂಕಾ, ಪಾಕಿಸ್ತಾನದಂತಹ ಅನೇಕ ಸಣ್ಣ ದೇಶಗಳು ದಿವಾಳಿಯಾಗಿವೆ. ತದ್ವಿರುದ್ಧ ಭಾರತದ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಕ್ರಮೇಣ ಸುಧಾರಣೆಯಾಗುತ್ತಿದ್ದು ೨೦೧೭-೧೮ ರ ವರೆಗೆ ೮೫ ಸಾವಿರದ ೩೯೦ ಕೋಟಿ ರೂಪಾಯಿಗಳ ನಷ್ಟವನ್ನು ಭರಿಸುತ್ತಿದ್ದ ಬ್ಯಾಂಕ್‌ಗಳು ೨೦೨೩-೨೪ ರಲ್ಲಿ ೧ ಲಕ್ಷದ ೪ ಕೋಟಿ ರೂಪಾಯಿಗಳಷ್ಟು ಲಾಭದಲ್ಲಿವೆ. ೨೦೧೪ ರಲ್ಲಿ ಭಾರತೀಯ ಅರ್ಥವ್ಯವಸ್ಥೆ ೧೦ ನೇ ಕ್ರಮಾಂಕದಲ್ಲಿತ್ತು, ಈಗ ಅದು ೫ ನೇ ಕ್ರಮಾಂಕದಲ್ಲಿದ್ದು ೨೦೨೭ ರ ವರೆಗೆ ಅದು ೩ ನೇ ಕ್ರಮಾಂಕಕ್ಕೆ ತಲುಪುವ ದಿಕ್ಕಿನಲ್ಲಿ ಸಾಗುತ್ತಿದೆ.

ಪ್ರಧಾನಮಂತ್ರಿಗಳ ಯಶಸ್ವಿ ಅಮೇರಿಕಾ ಪ್ರವಾಸ !

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೇರಿಕಾ ಪ್ರವಾಸವು ಯಶಸ್ವಿಯಾಗಿದ್ದು ಮುಂಬರುವ ಕಾಲದಲ್ಲಿ ಅಲ್ಲಿನ ದೈತ್ಯ ಕಂಪನಿಗಳು ಭಾರತದಲ್ಲಿ ಅಬ್ಜಾವಧಿ ಡಾಲರ್ಸ್ ಹೂಡಿಕೆ ಮಾಡಲಿಕ್ಕಿವೆ. ಅಮೇಝಾನ್ ಕಂಪನಿ ೨ ಸಾವಿರದ ೬೦೦ ಕೋಟಿ ರೂಪಾಯಿ, ಗೂಗಲ್ ೧ ಸಾವಿರ ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಲಿಕ್ಕಿದೆ. ಗುಜರಾತ್‌ನಲ್ಲಿ ಗೂಗಲ್‌ನ ‘ಜಾಗತಿಕ ಫಿನ್‌ಟೆಕ್ ಒಪರೇಶನ್ ಸೆಂಟರ್ ನಿರ್ಮಿಸಲಿದೆ. ಅಮೇರಿಕಾದ ‘ಮೈಕ್ರಾನ್ ಈ ಕಂಪನಿ ೨.೫ ಅಬ್ಜ ಡಾಲರ್ಸ್ ಹೂಡಿಕೆ ಮಾಡಿ ‘ಸೆಮಿಕಂಡಕ್ಟರ್ ಪ್ಲಾಂಟ್ ನಿರ್ಮಾಣ ಮಾಡಲಿದೆ. ಇಂದಿನ ವರೆಗೆ ಅಮೇರಿಕಾ ಹಾಗೂ ಇತರ ದೇಶಗಳಲ್ಲಿನ ಹೆಚ್ಚಿನ ಕಂಪನಿಗಳು ಚೀನಾಗೆ ಆದ್ಯತೆಯನ್ನು ನೀಡುತ್ತಿದ್ದವು. ಈಗ ಮಾತ್ರ ಚಿತ್ರಣ ಬದಲಾಗುತ್ತಿದ್ದು ಎಲನ್ ಮಸ್ಕ್ ಇವರ ‘ಟೆಸ್ಲಾ ಕಂಪನಿ ಕೂಡ ಭಾರತದಲ್ಲಿ ದೊಡ್ಡ ಹೂಡಿಕೆಯನ್ನು ಮಾಡಲಿಕ್ಕಿದೆ. ಇದು ಭಾರತದ ವಿಶ್ವಾಸಾರ್ಹತೆ ಹೆಚ್ಚುತ್ತಿರುವುದರ ಲಕ್ಷಣವಾಗಿದೆ.

‘ಮೇಕ್ ಇನ್ ಇಂಡಿಯಾದ ಲಾಭ !

ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಸರಕಾರ ದೇಶದಲ್ಲಿನ ಉದ್ಯೋಗ, ಉದ್ದಿಮೆಯನ್ನು ವಿಕಸಿತಗೊಳಿಸಲು, ಅವುಗಳ ಸಮಸ್ಯೆಗಳನ್ನು ನಿವಾರಿಸಲು ಯಾವತ್ತೂ ಪ್ರಯತ್ನಿಸಿಲ್ಲ. ಇಲ್ಲಿನ ಕಠಿಣ ನಿಯಮ, ಭೂಮಿಯನ್ನು ಪಡೆಯುವಲ್ಲಿನ ಅಡ ಚಣೆ, ಅನ್ಯಾಯಕಾರಿ ತೆರಿಗೆಯ ಪದ್ಧತಿ, ಕೆಂಪುಪಟ್ಟಿಯಲ್ಲಿ ಸಿಲುಕಿದ ಆಡಳಿತ ಇತ್ಯಾದಿಗಳಿಂದ ಇಲ್ಲಿ ಯಾವುದೇ ಹೊಸ ಉದ್ಯೋಗವನ್ನು ಆರಂಭಿಸಲು ಕಠಿಣವೆನಿಸುತ್ತಿತ್ತು. ತದ್ವಿರುದ್ಧ ಚೀನಾದಲ್ಲಿ ಕಚ್ಚಾವಸ್ತುಗಳನ್ನು ಪೂರೈಸುವುದರಿಂದ ಹಿಡಿದು ರಫ್ತಾಗುವ ವರೆಗಿನ ಎಲ್ಲ ಸೌಲಭ್ಯಗಳನ್ನು ಅಲ್ಲಿನ ಸರಕಾರ ಸಣ್ಣ ಸಣ್ಣ ಉದ್ಯಮಿಗಳಿಗೂ ಪೂರೈಸಿತು. ಇದರಿಂದ ಜಾಗತಿಕ ಸ್ತರದಲ್ಲಿ ಚೀನಾದ ವರ್ಚಸ್ಸು ನಿರ್ಮಾಣವಾಯಿತು.

‘ನಾವು ಕಚ್ಚಾ ಸಾಮಗ್ರಿಗಳಿಗಾಗಿ, ಪ್ರತಿಯೊಂದು ಸಣ್ಣಪುಟ್ಟ ವಿಷಯದಲ್ಲಿ ಪರಕೀಯರನ್ನು ಅವಲಂಬಿಸಿರುವವರೆಗೆ, ದೇಶದ ಪ್ರಗತಿ ಆಗುವುದಿಲ್ಲ, ಎಂಬುದನ್ನು ಗುರುತಿಸಿ ಪ್ರಧಾನಮಂತ್ರಿ ಮೋದಿಯವರು ‘ಮೇಕ್ ಇನ್ ಇಂಡಿಯಾವನ್ನು ಘೋಷಿಸಿ ದರು. ಉದ್ಯೋಗದಲ್ಲಿನ ಪ್ರತಿಯೊಂದು ಘಟಕದಿಂದ ಹಿಡಿದು ರಕ್ಷಣಾಕ್ಷೇತ್ರದಲ್ಲಿಯೂ ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್, ಯುದ್ಧ ನೌಕೆ, ತೋಪು ಇತ್ಯಾದಿ ತಯಾರಿಕೆಗೆ ಒತ್ತು ಕೊಟ್ಟರು. ಇದಕ್ಕೆ ಬೇಕಾಗುವ ಎಲ್ಲ ಬಿಡಿಭಾಗಗಳು ಭಾರತದಲ್ಲೇ ತಯಾರಾಗಿ ಭಾರತೀಯ ಅರ್ಥ ವ್ಯವಸ್ಥೆಗೂ ವೇಗ ಸಿಕ್ಕಿತು. ಅಂತರಿಕ್ಷದಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗ ತೊಡಗಿದಾಗ ಭಾರತದತ್ತ ನೋಡುವ ಜಗತ್ತಿನ ದೃಷ್ಟಿಕೋನ ಬದಲಾಯಿತು. ರಷ್ಯಾ, ಫ್ರಾನ್ಸ್ ಹಾಗೂ ಅಮೇರಿಕಾಗಳು ಉಪಗ್ರಹವನ್ನು ಹಾರಿಸಲು ಸಣ್ಣ ದೇಶಗಳಿಂದ ದೊಡ್ಡ ಮೊತ್ತ ತೆಗೆದುಕೊಳ್ಳುತ್ತವೆ. ಭಾರತ ಈ ಕ್ಷೇತ್ರದಲ್ಲಿ ಪ್ರಗತಿ ಮಾಡಿ ಈ ದೇಶಗಳಿಗಿಂತ ಮೂರುಪಟ್ಟು ಕಡಿಮೆ ಬೆಲೆಯಲ್ಲಿ ಈ ಉಪಗ್ರಹಗಳನ್ನು ಹಾರಿಸಲು ಪ್ರಾರಂಭಿಸಿತು. ಒಂದೇ ಬಾರಿ ೧೦೦ ಕ್ಕಿಂತಲೂ ಹೆಚ್ಚು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸುವ ಕ್ಷಮತೆಯನ್ನು ವಿಕಸಿತಗೊಳಿಸಿತು.

ರಾಷ್ಟ್ರಹಿತೈಷಿ ನೇತೃತ್ವವೇ ಬೇಕು !

ಸದ್ಯ ಜಾಗತಿಕ ಮಟ್ಟದಲ್ಲಿ ವಿಚಾರ ಮಾಡಿದರೆ ಪರಿಸ್ಥಿತಿ ರಭಸದಿಂದ ಬದಲಾಗುತ್ತಿದೆ. ರಷ್ಯಾ-ಯುಕ್ರೇನ್ ಯುದ್ಧವಿರಲಿ, ಈಜಿಪ್ತ್‌ನಲ್ಲಿನ ಸಂಘರ್ಷವಿರಲಿ, ಚೀನಾದ ತೈವಾನ್ ಸಹಿತ ಇತರ ದೇಶಗಳನ್ನು ಕಬಳಿಸುವ ಮಹತ್ವಾಕಾಂಕ್ಷೆಯನ್ನು ನೋಡುವಾಗ ಮುಂಬರುವ ಕಾಲದಲ್ಲಿ ಇವೆಲ್ಲ ಯುದ್ಧಜನ್ಯ ಸ್ಥಿತಿಯನ್ನು ಎದುರಿಸುತ್ತಾ ರಾಷ್ಟ್ರದ ವಿಕಾಸ ಮಾಡುವ ಪ್ರಖರ ನೇತೃತ್ವದ ಅವಶ್ಯಕತೆಯಿದೆ. ಅನೇಕ ಸಂತರು ಮುಂಬರುವ ಕಾಲ ಆಪತ್ಕಾಲ-ಯುದ್ಧಕಾಲವಾಗಿರುವುದು ಎಂದು ಹೇಳಿ ರುವುದರಿಂದ ವಿಕಾಸದ ಪ್ರಯಾಣ ಮುಂದುವರಿಯುತ್ತಿರು ವಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರಲ್ಲಿ ಸಾಧನೆಯ ಬೀಜವನ್ನು ಬಿತ್ತುವುದೂ ಅಷ್ಟೇ ಆವಶ್ಯಕವಾಗಿದೆ ! ಹೀಗೆ ಮುಂದುವರಿದಲ್ಲಿ ಜಾಗತಿಕ ಸ್ತರದ ನೇತೃತ್ವವೂ ಭಾರತದ ಬಳಿ ಬರುವುದು ಹಾಗೂ ಹಿಂದೂ ರಾಷ್ಟ್ರದಿಂದ ಹಿಂದೂ ವಿಶ್ವದ ಸಂಕಲ್ಪನೆ ಸಾಕಾರವಾಗುವುದು ಕಾಣಿಸುವುದು !