ಕೃತಜ್ಞತಾಭಾವ

ಈಶ್ವರ ಮತ್ತು ಗುರುಗಳು ಅವನಿಗೆ ಸಾಧನೆಯಲ್ಲಿ ಸತತವಾಗಿ ಮಾರ್ಗದರ್ಶನ ಮಾಡುವುದರಿಂದ ಅವನ ಭಾವವು ಇನ್ನೂ ಹೆಚ್ಚಾಗುತ್ತದೆ ಮತ್ತು ಅವನಿಗೆ ಈಶ್ವರ ಮತ್ತು ಗುರುಗಳ ಬಗ್ಗೆ ಕೃತಜ್ಞತೆ ಅನಿಸ ತೊಡಗುತ್ತದೆ. ಸಾಧಕನ ಕೃತಜ್ಞತಾಭಾವವು ಹೆಚ್ಚಾದಂತೆ ಅವನಿಗೆ ಸಿಗುವ ಆನಂದದಲ್ಲಿ ಹೆಚ್ಚಳವಾಗುತ್ತದೆ. ಈ ಹಂತದಲ್ಲಿ ಸಾಧಕನಿಗೆ ‘ತನ್ನ ಸಾಧನೆಯಲ್ಲಿನ ಪ್ರಗತಿಯು ಕೇವಲ ಗುರುಗಳ ಸಂಕಲ್ಪದಿಂದಲೇ ಆಗಬಲ್ಲದು ಎಂಬ ಸತ್ಯದ ಅರಿವಾಗುತ್ತದೆ ಮತ್ತು ಅವನು ಗುರುಗಳ ಚರಣಗಳಲ್ಲಿ ಲೀನವಾಗತೊಡಗುತ್ತಾನೆ.

೧. ವ್ಯಾಖ್ಯೆ

ಅ. ನಾವು ಈಶ್ವರನಿಗೆ ಪ್ರಾರ್ಥನೆಯನ್ನು ಮಾಡುತ್ತೇವೆ ಮತ್ತು ಅವನು ಸಹಾಯ ಮಾಡಿದುದರಿಂದ ಅವನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಇಲ್ಲಿ ನಾವು ಮಾಡಿದ ‘ಕೃತಿಯನ್ನು (ಕೃತ) ಈಶ್ವರನು ಮಾಡಿಸಿಕೊಂಡಿರುವುದರ ಜ್ಞಾನ (ಜ್ಞ) ವಾಗುವುದು ಅಂದರೆ ‘ಕೃತಜ್ಞ. ಸಂಕ್ಷಿಪ್ತವಾಗಿ ಹೇಳುವುದಾದರೆ ‘ಕೃತಜ್ಞತೆ ಎಂದರೆ ಕರ್ತೃತ್ವದ ನಿಜವಾದ ಅರಿವು. ‘ಕೃತ ಎಂದರೆ ಸತ್ಯ, ಅಂದರೆ ಈಶ್ವರ ಮತ್ತು ಅವನಲ್ಲಿ ಮಾಡಿದ ಪ್ರಾರ್ಥನೆಯಿಂದ ನಮ್ಮ ಮನೋಭಿಷ್ಟ ಪೂರ್ಣವಾಗುವುದು, ಇದರ ಜ್ಞಾನವಾಗುವುದೆಂದರೆ ‘ಕೃತಜ್ಞ – ಶ್ರೀ. ಸಂದೀಪ ನರೇಂದ್ರ ವೈತಿ, ಮುಂಬೈ.

ಆ. ಶ್ರದ್ಧೆ ಎಂದರೆ ಕೃತಜ್ಞತೆಯ ಭಾವ ಮತ್ತು ಅವ್ಯಕ್ತ ಭಾವದ ಪರಿಣಾಮವೆಂದರೆ ಕೃತಜ್ಞತೆಯ ಭಾವ. – ಓರ್ವ ವಿದ್ವಾಂಸ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೬.೨.೨೦೦೬, ರಾತ್ರಿ ೮.೦೫)

೨. ಕೃತಜ್ಞತಾ ಭಾವ ಜೋಪಾಸನೆ ಮಾಡುವುದರ ಲಾಭ

ಕೃತಜ್ಞತೆಯ ಭಾವವನ್ನು ಜೋಪಾಸನೆ ಮಾಡುವುದರಿಂದ ಯಾವುದೇ ಕಾರಣದಿಂದ ಸಾಧಕರ ಅಹಂ ಹೆಚ್ಚಾಗುವುದಿಲ್ಲ. ಕೃತಜ್ಞತೆಯ ಭಾವದಲ್ಲಿ ಸಾಧಕರು ಸಂಪೂರ್ಣ ಶ್ರೇಯಸ್ಸನ್ನು ಗುರುಗಳಿಗೆ ಅಥವಾ ಈಶ್ವರನಿಗೆ ನೀಡುವುದರಿಂದ ಸಾಧಕರಲ್ಲಿ ಕರ್ತೃತ್ವದ ಭಾವನೆ ನಿರ್ಮಾಣವಾಗುವುದಿಲ್ಲ. ಸಾಧಕರಲ್ಲಿ ಕರ್ತೃತ್ವದ ಭಾವವು ಎಷ್ಟು ಕಡಿಮೆ ಇರುತ್ತದೆಯೋ, ಅಷ್ಟು ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ. ಆದುದರಿಂದ ಪ್ರತಿಯೊಬ್ಬರೂ ಎಷ್ಟು ಆಧ್ಯಾತ್ಮಿಕ ಉನ್ನತಿಯಾದರೂ ಗುರುಗಳ ಕುರಿತಾದ ಕೃತಜ್ಞತಾಭಾವವನ್ನು ಬಿಡಬಾರದು. ಇದರಿಂದ ಸಾಧಕರ ಅಹಂ ಕಡಿಮೆಯಂತೂ ಆಗುತ್ತದೆ, ಅಲ್ಲದೆ ಅವರಿಗೆ ಅಹಂಶೂನ್ಯ ಅವಸ್ಥೆಯನ್ನು ತಲುಪಲು ಸುಲಭವಾಗುತ್ತದೆ. ಅಹಂಶೂನ್ಯ ಅವಸ್ಥೆಯನ್ನು ತಲುಪುವುದೆಂದರೆ ‘ಮೋಕ್ಷಪ್ರಾಪ್ತಿ ಯಾಗುವುದು. ಇದರಿಂದಾಗಿ ಅನೇಕ ಸಂತರು ತಮ್ಮ ಲೇಖನ, ಅಭಂಗ ಹಾಗೂ ಇತರ ಕಾವ್ಯಗಳನ್ನು ತಮ್ಮ ಗುರುಗಳನ್ನು ಉದ್ದೇಶಿಸಿ ಅಥವಾ ಗುರುಗಳನ್ನು ಉಲ್ಲೇಖಿಸಿ ಬರೆದಿರುತ್ತಾರೆ. ಇದರಿಂದ ಆ ಲೇಖನಗಳ ಅಧ್ಯಯನ ಮಾಡುವವರಿಗೆ ಆ ಸಂತರಿಗಿಂತ ಅವರ ಗುರುಗಳ ಮಹಾತ್ಮೆಯು ಹೆಚ್ಚೆನಿಸುತ್ತದೆ ಮತ್ತು ಅವರ ಬಗ್ಗೆ ಕೃತಜ್ಞತೆ ಅನಿಸುತ್ತದೆ. – ಕು. ಮಧುರಾ ಭೋಸಲೆ

೩. ವಸ್ತುಗಳನ್ನು ಉಪಯೋಗಿಸುವ ವ್ಯಕ್ತಿಯಲ್ಲಿ ಆ ವಸ್ತುಗಳ ಬಗ್ಗೆ ಕೃತಜ್ಞತೆಯ ಭಾವವು ಎಷ್ಟು ಹೆಚ್ಚಿರುತ್ತದೆಯೋ, ಅಷ್ಟು ಆ ವಸ್ತುಗಳು ಚೈತನ್ಯಮಯವಾಗುತ್ತವೆ – ಶ್ರೀಕೃಷ್ಣ (ಸೌ. ಸ್ಮಿತಾ ಜೋಶಿಯವರ ಮಾಧ್ಯಮದಿಂದ, ೧೫.೧.೨೦೦೭)

ಕೃತಜ್ಞತಾಭಾವವು ಹೇಗೆ ಉತ್ಪನ್ನವಾಗುತ್ತದೆ ?

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಅ. ಜ್ಞಾನಪ್ರಾಪ್ತಿಯ ತಳಮಳವು ಹೆಚ್ಚಾಯಿತೆಂದರೆ, ಜೀವದ ಜಿಜ್ಞಾಸೆ ಶ್ರದ್ಧೆಯಲ್ಲಿ ರೂಪಾಂತರವಾಗುತ್ತದೆ. ಅಂದರೆ ಜ್ಞಾನವು ಸಿಕ್ಕಿದ ಬಗ್ಗೆ ಈಶ್ವರನಲ್ಲಿ ಕೃತಜ್ಞತೆಯ ಭಾವ ಉತ್ಪನ್ನವಾಗುತ್ತದೆ.

ಆ. ಕಾರ್ಯದಲ್ಲಿ ಭಾವದಲ್ಲಿ ಸಾತತ್ಯವು ಬಂದು ಅದು ಅವ್ಯಕ್ತ ಭಾವದಲ್ಲಿ ರೂಪಾಂತರವಾಗಿ ಕೃತಜ್ಞತಾಭಾವ ಮೂಡುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ