ಭಗವಂತನಿಗೆ (ಪಾಂಡುರಂಗನಿಗೆ) ಯಾವುದರಿಂದ ಆನಂದವಾಗುತ್ತದೆ, ಭಕ್ತನು ಆ ರೀತಿಯಲ್ಲಿ ವರ್ತಿಸುವುದು ಆವಶ್ಯಕವಿದೆ. ಇದಕ್ಕಾಗಿ ಅವನು ಭಾವ ಸ್ತರದಲ್ಲಿದ್ದು ಪ್ರತಿಯೊಂದು ಕಾರ್ಯವನ್ನು ಮಾಡಬೇಕು. ವಾರಕರಿಗಳು ದೇವರನ್ನು ಭೇಟಿಯಾಗಲು ಉತ್ಸುಕರಾಗಿರುವುದರಿಂದ ಅವರು ಹಾಗೆ ಮಾಡುತ್ತಾರೆ. ಅವರು ಪಾಂಡುರಂಗನ ಹೆಸರನ್ನು ಜಪಿಸುತ್ತಾ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾ ಭಗವಂತನನ್ನು ಭೇಟಿಯಾಗಲು ಆನಂದದಿಂದ ಹೋಗುವಾಗ ದಾರಿಯಲ್ಲಿ ಅವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ; ಆದರೆ ಪಾಂಡುರಂಗನ ಭೇಟಿಯ ಉತ್ಸುಕತೆಯಿಂದಾಗಿ ವಾರಕರಿಗಳಿಗೆ ಅದೇನೂ (ಸಂಕಟದ ಬಗ್ಗೆ) ಅನಿಸುವುದಿಲ್ಲ. ಭಗವಂತನು ಅವರಲ್ಲಿರುವ ಭಾವವನ್ನು ಅರಿತು ಅವರ ಭೇಟಿಗಾಗಿ ಸದಾ ಕಾಲ ಉತ್ಸುಕನಾಗಿರುತ್ತಾನೆ.
ಹೇಗೆ ತಾವರೆಯ ಎಲೆಯು ನೀರಿನ ಮೇಲಿದ್ದರು ಸಹ ಅದಕ್ಕೆ ನೀರಿನ ಸ್ಪರ್ಶವಾಗುವುದಿಲ್ಲವೋ, ಅದೇ ರೀತಿಯಲ್ಲಿ ಪ್ರತಿಯೊಂದು ಕಾರ್ಯವನ್ನು ಮಾಡುವಾಗ ಶಾಶ್ವತ ಚೈತನ್ಯದ ಸಾನಿಧ್ಯದಲ್ಲಿ ಇದ್ದರೆ ಆ ಜೀವವು ಮಾಯೆಯ ಭೌತಿಕ ಭೋಗಗಳ ಭವಬಂಧನದಿಂದ ತೇಲಿ ಹೋಗಿ ನಿರಂತರ ಆನಂದದಲ್ಲಿರುತ್ತದೆ. ಅಂತಹ ಭಕ್ತನು ಭಗವಂತನಿಗೆ ಪ್ರಿಯನಾಗಿರುತ್ತಾನೆ.
– ಪರಾತ್ಪರ ಗುರು ಪರಶರಾಮ ಮಾಧವ ಪಾಂಡೆ ಮಹಾರಾಜರು