ಜಿಜ್ಞಾಸುಗಳಿಗೆ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಲು ಆಗಬೇಕೆಂದು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕರ್ಮ, ಭಕ್ತಿ ಮತ್ತು ಜ್ಞಾನ ಈ ಮೂರು ಯೋಗಮಾರ್ಗಗಳ ಸಂಗಮವಾಗಿರುವ ‘ಗುರುಕೃಪಾಯೋಗವನ್ನು ಹೇಳಿದ್ದಾರೆ. ಇದರಲ್ಲಿ ‘ವ್ಯಕ್ತಿಗಳೆಷ್ಟೋ ಅಷ್ಟೇ ಪ್ರಕೃತಿಗಳು ಮತ್ತು ಅಷ್ಟೇ ಸಾಧನೆಯ ಮಾರ್ಗಗಳು ಎಂಬ ಅಧ್ಯಾತ್ಮದ ಸಿದ್ಧಾಂತಕ್ಕನುಸಾರ, ಹಾಗೆಯೇ ೪ ವರ್ಣ ಮತ್ತು ೪ ಆಶ್ರಮಗಳ ಪ್ರಕಾರ, ಅದರಂತೆಯೇ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ, ಭಾವಜಾಗೃತಿಯ ಪ್ರಯತ್ನ, ನಾಮಸ್ಮರಣೆ, ಸೇವೆ, ಸತ್ಸಂಗ, ತ್ಯಾಗ, ಪ್ರೀತಿ ಮತ್ತು ಸಾಕ್ಷೀಭಾವ ಈ ಹಂತಗಳಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಕಲಿಸುತ್ತಿರುವುದರಿಂದ ಸಾಧಕರಿಗೆ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ೩ ಜುಲೈ ೨೦೨೩ ರ ತನಕ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿ ೧೨೪ ಸಾಧಕರು ಸಂತರಾಗಿದ್ದಾರೆ, ೧ ಸಾವಿರದ ೪೧ ಮಂದಿ ಸಾಧಕರು ಸಂತತ್ವದ ಕಡೆಗೆ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಈ ಸಾಧನೆಯ ಮಾರ್ಗವನ್ನು ವಿದೇಶಗಳಲ್ಲಿರುವ ಜಿಜ್ಞಾಸುಗಳೂ ಆಚರಿಸುತ್ತಿರುವುದರಿಂದ ಅವರ ಜೀವನವದ ಉದ್ಧಾರವೂ ಆಗುತ್ತಿದೆ.
ಗುರುದೇವರೇ, ನಾವು ತಮಗೆ ಕೃತಜ್ಞರಾಗಿದ್ದೇವೆ !
* ‘ಮನುಷ್ಯ ಜನ್ಮದ ಧ್ಯೇಯವು ಈಶ್ವರಪ್ರಾಪ್ತಿಯೇ ಆಗಿದೆ, ಇದನ್ನು ಕಲಿಸಿದ್ದಕ್ಕಾಗಿ…
* ‘ಜೀವನದಲ್ಲಿನ ಶೇ. ೮೦ ರಷ್ಟು ದುಃಖದ ಕಾರಣಗಳು ಆಧ್ಯಾತ್ಮಿಕವಾಗಿರುತ್ತವೆ, ಇದನ್ನು ಕಲಿಸಿದ್ದಕ್ಕಾಗಿ…
* ‘ಅಧ್ಯಾತ್ಮದಲ್ಲಿ ಪ್ರಗತಿಯನ್ನು ಮಾಡಬೇಕಾಗಿರುತ್ತದೆ, ಇದನ್ನು ಕಲಿಸಿದ್ದಕ್ಕಾಗಿ…
* ಅಧ್ಯಾತ್ಮವು ಅನುಭೂತಿಯ ಶಾಸ್ತ್ರವಾಗಿದೆ, ಇದನ್ನು ಕಲಿಸಿದ್ದಕ್ಕಾಗಿ…
* ‘ಸಾಧನೆಯಲ್ಲಿ ಕೃತಿಗೆ ಶೇ ೯೮ ರಷ್ಟು ಮಹತ್ವವಿದೆ ಇದನ್ನು ಕಲಿಸಿದ್ದಕ್ಕಾಗಿ…
* ‘ಅಧ್ಯಾತ್ಮವು ಸ್ಪಂದನಗಳ ಶಾಸ್ತ್ರವಾಗಿದೆ, ಎಂಬುದನ್ನು ಕಲಿಸಿ ಸ್ಪಂದನಗಳನ್ನು ಗುರುತಿಸಲು ಕಲಿಸುತ್ತಿರುವುದರ ಬಗ್ಗೆ…
* ತ್ಯಾಗ, ಸಂಯಮ, ಶಿಸ್ತು, ನೇತೃತ್ವ, ಆಯೋಜನೆ ಇತ್ಯಾದಿ ಗುಣಗಳನ್ನು ಸಾಧಕರಲ್ಲಿ ನಿರ್ಮಾಣ ಮಾಡುತ್ತಿರುವುದರ ಬಗ್ಗೆ…
* ಎಲ್ಲರ ಮೇಲೆ ಪ್ರೇಮವನ್ನು ಮಾಡಲು ಬರಬೇಕೆಂದು ಪ್ರಯತ್ನವನ್ನು ಮಾಡಿಸಿಕೊಳ್ಳುತ್ತಿರುವುದರ ಬಗ್ಗೆ…
* ಸಗುಣದಿಂದ ನಿರ್ಗುಣದ ಕಡೆಗೆ ಹೋಗಲು ಮತ್ತು ವ್ಯಾಪಕವಾಗಲು ಕಲಿಸುತ್ತಿರುವುದರ ಬಗ್ಗೆ…
* ಸಾಧಕರಲ್ಲಿ ಸ್ಥಳ ಮತ್ತು ಕಾಲ ಇವುಗಳ ಆಚೆಗೆ ಹೋಗಿ ಸೂಕ್ಷ್ಮಜ್ಞಾನವನ್ನು ಪಡೆಯಲು ಬರುವ ಕ್ಷಮತೆಯನ್ನು ನಿರ್ಮಾಣಮಾಡಿದ್ದಕ್ಕಾಗಿ…
* ಸಾಧಕರ ಸಾಧನೆಯ ಕಡೆಗೆ ವೈಯಕ್ತಿಕ ಗಮನ ಕೊಡಲು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ವರದಿಯನ್ನು ಕೊಡುವ ಪದ್ಧತಿಯನ್ನು ನಿರ್ಮಾಣ ಮಾಡಿದ್ದಕ್ಕಾಗಿ…
* ಸ್ವೇಚ್ಛೆ, ಪರೇಚ್ಛೆ, ಮತ್ತು ಈಶ್ವರೇಚ್ಛೆ ಈ ರೀತಿ ಹಂತ ಹಂತಗಳಿಂದ ಪ್ರಯತ್ನ ಮಾಡಿದರೆ ಮನೋಲಯ ಮತ್ತು ಬುದ್ಧಿಲಯವಾಗಿ ಪ್ರಗತಿಯಾಗುತ್ತದೆ, ಇದನ್ನು ಕಲಿಸಿದ್ದಕ್ಕಾಗಿ…
* ದೋಷ ಮತ್ತು ಅಹಂ ಇವು ಕೆಟ್ಟ ಶಕ್ತಿಗಳ ಪ್ರವೇಶದ್ವಾರಗಳಾಗಿವೆ, ಇದನ್ನು ಕಲಿಸಿದ್ದಕ್ಕಾಗಿ !
* ದೋಷ ಮತ್ತು ಅಹಂ ಇವುಗಳಿಂದ ನಕಾರಾತ್ಮಕತೆ ಮತ್ತು ಕಪ್ಪು ಶಕ್ತಿಯ ಆವರಣ ಹೆಚ್ಚುತ್ತದೆ ಮತ್ತು ವಾತಾವರಣವು ರಜತಮಪ್ರಧಾನ ಆಗುತ್ತದೆ, ಇದನ್ನು ಗಮನಕ್ಕೆ ತಂದು ಕೊಟ್ಟಿದ್ದಕ್ಕಾಗಿ !
* ‘ದೋಷ ಮತ್ತು ಅಹಂ ಇವುಗಳ ಸಂದರ್ಭದಲ್ಲಿ ಮನಸ್ಸಿನ ಆಳವಾದ ಅಭ್ಯಾಸ ಮಾಡಿ ಮತ್ತು ಸ್ವಯಂಸೂಚನೆಗಳನ್ನು ಕೊಟ್ಟು ಅವುಗಳನ್ನು ಹೇಗೆ ಕಡಿಮೆ ಮಾಡಬೇಕು ?, ಇದರ ಮಾರ್ಗದರ್ಶನವನ್ನು ವ್ಯಷ್ಟಿ ವರದಿಸೇವಕರ ಮಾಧ್ಯಮದಿಂದ ಮಾಡಿದ್ದಕ್ಕಾಗಿ !
* ಕ್ಷಮಾಯಾಚನೆ, ವಿವಿಧ ಪ್ರಾಯಶ್ಚಿತ್ತ ಮತ್ತು ಶಿಕ್ಷಾಪದ್ಧತಿಯ ಮಾಧ್ಯಮದಿಂದ ಪಾಪಕ್ಷಾಲನೆಯನ್ನು ಮಾಡಿಕೊಳ್ಳಬಹುದು, ಇದನ್ನು ಗಮನಕ್ಕೆ ತಂದು ಕೊಟ್ಟಿದ್ದಕ್ಕಾಗಿ !
* ‘ನಮ್ಮನ್ನು ನಾವು ಬದಲಾಯಿಸುವುದೆಂದರೆ ಸಾಧನೆ ಇದನ್ನು ಹೇಳಿದಕ್ಕಾಗಿ !
* ಸಂತರು ಮತ್ತು ಸದ್ಗುರುಗಳ ನಿರಂತರ ಸತ್ಸಂಗ ಮತ್ತು ಮಾರ್ಗದರ್ಶನವನ್ನು ನೀಡಿ ಸಾಧಕರಿಗೆ ಚಿತ್ತಶುದ್ಧಿಯನ್ನು ಮಾಡಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ !