ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಪಾಲ್ಗೊಂಡ ಹೆಚ್ಚಿನ ವಕ್ತಾರರು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಚರಣಗಳಲ್ಲಿ ವಂದಿಸಿ ತಮ್ಮ ವ್ಯಾಖ್ಯಾನವನ್ನು ಪ್ರಾರಂಭಿಸುತ್ತಾರೆ. ಎಲ್ಲರಲ್ಲಿ ಗುರುಗಳ ಬಗ್ಗೆ ತುಂಬಾ ಭಾವವಿದೆ. ಪ್ರಖರ ಹಿಂದುತ್ವವಾದಿಗಳು, ವೈಚಾರಿಕ ಪ್ರಬೋಧನೆಯನ್ನು ಮಾಡುವವರು, ರಾಜಕೀಯ ಕ್ಷೇತ್ರದ ಜನರು, ನೇಪಾಳದಂತಹ ವಿದೇಶದಲ್ಲಿ ಕಾರ್ಯವನ್ನು ಮಾಡುವವರೂ ‘ಪ.ಪೂ. ಡಾಕ್ಟರರಿಂದಾಗಿ ಕಾರ್ಯವನ್ನು ಮಾಡಲು ಸಾಧ್ಯವಾಯಿತು, ಎಂದು ಹೇಳುವಾಗ ಅವರ ಕಂಠ ತುಂಬಿ ಬರುತ್ತಿತ್ತು. ಈ ಮೊದಲು ಸನಾತನದ ಸಾಧಕರ ಹೊರತು ಬೇರೆ ಯಾರಾದರೂ ಪ.ಪೂ. ಡಾಕ್ಟರರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರೆ, ‘ನಮ್ಮ ಪ.ಪೂ. ಡಾಕ್ಟರರ ಬಗ್ಗೆ ಅವರಲ್ಲಿ ಒಳ್ಳೆಯ ಭಾವವಿದೆ, ಎಂದೆನಿಸುತ್ತಿತ್ತು. ಬಹಳಷ್ಟು ಜನರಿಂದ ಅವರ ಬಗ್ಗೆ ಭಾವವ್ಯಕ್ತವಾದ ನಂತರ, ‘ಪ.ಪೂ. ಡಾಕ್ಟರರು ಕೇವಲ ಸನಾತನದವರಷ್ಟೇ ಅಲ್ಲ, ಅವರು ಎಲ್ಲರವರಾಗಿದ್ದಾರೆ, ವಿಶ್ವವ್ಯಾಪಕರಾಗಿದ್ದಾರೆ, ಅಖಿಲ ಬ್ರಹ್ಮಾಂಡದವರಾಗಿದ್ದಾರೆ ಎಂದೆನಿಸಿತು.
ಪ.ಪೂ. ಡಾಕ್ಟರರೂ ಎಲ್ಲರನ್ನೂ ತಮ್ಮ ಆಶ್ರಯದಡಿಯಲ್ಲಿ ಇಟ್ಟುಕೊಂಡಿದ್ದಾರೆ. ಅಡಚಣೆಗಳ ಸಮಯದಲ್ಲಿ ಸನಾತನದ ಸಾಧಕರಿಗೆ ಸಹಾಯವನ್ನು ಕೊಟ್ಟು, ಆಧ್ಯಾತ್ಮಿಕ ಊರ್ಜೆಯನ್ನು ಪೂರೈಸಿ ಅವರನ್ನು ಸಂಭಾಳಿಸಿಕೊಂಡಿದ್ದಾರೆ. ಹಿಂದುತ್ವಕ್ಕಾಗಿ ಅತ್ಯಂತ ಕೆಳಗಿನ ಸ್ತರದಲ್ಲಿ ಕಾರ್ಯವನ್ನು ಮಾಡುವ ಕಾರ್ಯಕರ್ತರನ್ನೂ ಪ.ಪೂ. ಡಾಕ್ಟರರು ತಮ್ಮ ಚೈತನ್ಯದಿಂದ ಬಂಧಿಸಿಟ್ಟಿದ್ದಾರೆ. ಅದನ್ನು ನೋಡಿ, ‘ಹೇ ದೇವರೇ ಇದೆಂತಹ ಪ್ರೀತಿ ? ಅನಿಸುತ್ತದೆ. – ಕು. ಸಾಯಲಿ ಡಿಂಗರೆ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಹೇ ಭಗವಂತಾ, ನಮ್ಮ ಜೊತೆಗೆ ಸೇವೆಯನ್ನು ಮಾಡಲು ನೀನು ಸಹಸಾಧಕರನ್ನು ನೀಡಿದೆ. ಸಹಪ್ರವಾಸಿ ಸಾಧಕರ ಸಾಂಗತ್ಯದಿಂದಲೇ ನಮಗೆ ಈ ಪ್ರವಾಸವು ಸಾಧ್ಯವಾಗುತ್ತಿದೆ. ಅವರ ಸಹಕಾರದಿಂದಲೇ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ. ಸಹಸಾಧಕರೇ ನಮ್ಮ ಗುಣ-ದೋಷಗಳ ನಿರೀಕ್ಷಣೆಯನ್ನು ಮಾಡಬಹುದು ಮತ್ತು ನಮಗೆ ಅವುಗಳ ಬಗ್ಗೆ ಹೇಳಬಹುದು. ಅವರ ಸತ್ಸಂಗವು ನಮಗಾಗಿ ಅಮೂಲ್ಯವಾಗಿದೆ. ಅವರ ಮಾಧ್ಯಮದಿಂದ ಗುರುತತ್ತ್ವವೇ ಕಾರ್ಯನಿರತವಾಗಿರುತ್ತದೆ ಮತ್ತು ಅದು ನಮಗೆ ಸಹಾಯ ಮಾಡುತ್ತದೆ. ಸಹಸಾಧಕರು ದೋಷಗಳನ್ನು ಹೇಳಿದ್ದರಿಂದ ಮತ್ತು ಅವರ ಸತ್ಸಂಗದಿಂದ, ಹೇ ಭಗವಂತಾ, ನಮಗೆ ನಿನ್ನ ಬಳಿ ಬರಲು ಬಹಳ ಸಹಾಯವಾಗುತ್ತಿದೆ. ಅವರಿಂದಲೇ ನಮಗೆ ಪ್ರೇಮಭಾವವನ್ನು ಹೆಚ್ಚಿಸುವ ಅವಕಾಶ ಸಿಗುತ್ತಿದೆ. ಅವರಿಂದ ಸಿಗುವ ಎಲ್ಲ ರೀತಿಯ ಸಹಾಯವು ನಮ್ಮನ್ನು ಯಾವಾಗಲೂ ಅವರ ಋಣದಲ್ಲಿಯೇ ಇಡುತ್ತದೆ. ನಿರ್ಮಲ ಪ್ರೀತಿಯ ಆಧ್ಯಾತ್ಮಿಕಸ್ತರದ ಈ ಸ್ನೇಹವನ್ನು ಅನುಭವಿಸಲು ಕೊಟ್ಟಿರುವ ದೇವರೇ, ಇದಕ್ಕಾಗಿ ನಿನಗೆ ಮನಃಪೂರ್ವಕ ಕೃತಜ್ಞತೆಗಳು !