ಭಾರತೀಯ ಖಗೋಳ ಶಾಸ್ತ್ರಜ್ಞ ಅಶ್ವಿನ್ ಶೇಖರ್ ಅವರ ಹೆಸರನ್ನು ಸಣ್ಣ ಗ್ರಹಕ್ಕೆ ಹೆಸರಿಸುವ ಮೂಲಕ ಗೌರವ

ಇಲ್ಲಿಯವರೆಗೆ ಕೇವಲ 5 ಭಾರತೀಯರಿಗೆ ಈ ಗೌರವ ಸಿಕ್ಕಿದೆ !

ಪ್ಯಾರಿಸ್ (ಫ್ರಾನ್ಸ) – ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (`ಐಎಯು) ಅಶ್ವಿನ್ ಶೇಖರ ಈ ಭಾರತೀಯ ಖಗೋಳ ಶಾಸ್ತ್ರಜ್ಞನ ಹೆಸರಿನಿಂದ ಒಂದು ಚಿಕ್ಕ ಗ್ರಹವನ್ನು ಹೆಸರಿಸುವ ಮೂಲಕ ಅವರನ್ನು ಗೌರವಿಸಿದೆ. ಈ ಹಿಂದೆ ಕೇವಲ 5 ಭಾರತೀಯರಿಗೆ ಈ ಗೌರವ ಲಭಿಸಿತ್ತು. ಆಧುನಿಕ ಭಾರತದಲ್ಲಿ ಶೇಖರ ಇವರು ಈ ಗೌರವವನ್ನು ಪಡೆದ ಮೊದಲ ಖಗೋಳ ಶಾಸ್ತ್ರಜ್ಞರಾಗಿದ್ದಾರೆ.

ವಿದೇಶಿ ಪ್ರಸಾರಮಾಧ್ಯಮಾನುಸಾರ ಜೂನ 21 ರಂದು ಅಮೇರಿಕಾದ ಅರಿಝೋನಾದಲ್ಲಿ ಆಯೋಜಿಸಿರುವ `ಕ್ಷುದ್ರಗ್ರಹ ಧೂಮಕೇತು ಉಲ್ಕಾ ಸಮ್ಮೇಳನ’ ದಲ್ಲಿ ಅಶ್ವಿನ್ ಶೇಖರರನ್ನು ಗೌರವಿಸಲಾಯಿತು. `ಐಎಯೂ’ ಅನುಸಾರ ಅಶ್ವಿನ್ ಶೇಖರ ಆಧುನಿಕ ಭಾರತದ ಮೊದಲ ಉಲ್ಕಾ ಖಗೋಳಶಾಸ್ತ್ರಜ್ಞರಾಗಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಮಹತ್ವಪೂರ್ಣ ಕೊಡುಗೆಯನ್ನು ನೀಡಿದ್ದಾರೆ. ಅಶ್ವಿನ್ ಶೇಖರ್ ಅವರ ಹೆಸರಿನಿಂದ ಸಂಬೋಧಿಸಲಾಗಿರುವ ಚಿಕ್ಕ ಗ್ರಹಗಳ ಹೆಸರು ಈಗ `(33928) ಅಶ್ವಿನ್ ಶೇಖರ= 200 ಎಲ್ಜೆ 27’ ಎಂದು ಹೆಸರಿಸಲಾಗಿದೆ. ಕೇವಲ 38 ವರ್ಷ ವಯಸ್ಸಿನ ಅಶ್ವಿನ್ ಶೇಖರ ಅವರು ಪ್ರಸ್ತುತ ಫ್ರಾನ್ಸ ಸರಕಾರದ ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಪ್ಯಾರಿಸ್ ನಲ್ಲಿರುವ ವೀಕ್ಷಣಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ. ರಾಮನ್ ಮತ್ತು ಸುಬ್ರಹ್ಮಣ್ಯಮ್ ಚಂದ್ರಶೇಖರ ಹಾಗೆಯೇ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್, ಖಗೋಳ ಶಾಸ್ತ್ರಜ್ಞ ಡಾ. ವಿಕ್ರಮ ಸಾರಾಭಾಯಿ ಮತ್ತು `ಐಎಯು ಮನಾಲಿ’ ಯ ಮಾಜಿ ಅಧ್ಯಕ್ಷ ಕಲ್ಲಟ್ ವೇಣು ಬಪ್ಪು ಅವರ ಹೆಸರನ್ನು ಇಡಲಾಗಿದೆ.