ವಿಶ್ವ ಆರೋಗ್ಯ ಸಂಸ್ಥೆ ಕೃತಕ ಸಿಹಿಕಾರಕಗಳನ್ನು ‘ಕ್ಯಾನ್ಸರ್ ಕಾರಕ’ ಎಂದು ಘೋಷಿಸಲಿದೆ !

ತಂಪು ಪಾನೀಯ, ಶಕ್ತಿ ವರ್ಧಕ ಪಾನೀಯ, ‘ಚ್ಯುಯಿಂಗಂ’ ಮೇಲೆ ಪರಿಣಾಮ !

ಲಂಡನ (ಬ್ರಿಟನ್) – ವಿಶ್ವ ಆರೋಗ್ಯ ಸಂಸ್ಥೆ ಮುಂದಿನ ತಿಂಗಳಲ್ಲಿ ಕೃಕತವಾಗಿ ತಯಾರಿಸಲಾಗುವ ಸಿಹಿ ಪದಾರ್ಥ (ನಾನ್ ಸೆಕ್ರೈಡ್ ಸ್ವೀಟ್ನರ್) ‘ಕ್ಯಾನ್ಸರ್ ರೋಗ ವರ್ಧಕ’ ಎಂದು ಘೋಷಿಸಲಿದೆ. ಈ ನಿರ್ಣಯದಿಂದ ಎಲ್ಲಾ ರೀತಿಯ ತಂಪು ಪಾನೀಯ, ಶಕ್ತಿ ವರ್ಧಕ ಪಾನೀಯ, ಚುಯಿಂಗಂ, ಇವುಗಳ ಮೇಲೆ ಪರಿಣಾಮ ಬೀರುವುದು. ಬರುವ ಜುಲೈ ೧೪ ರಂದು ಈ ಕುರಿತು ಘೋಷಣೆ ಆಗಲಿದೆ.

೧. ವಿಶ್ವ ಆರೋಗ್ಯ ಸಂಸ್ಥೆಯ ‘ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್’ (ಐ.ಎ.ಆರ್‌.ಸಿ) ಈ ಸಂಸ್ಥೆಯಿಂದ ಈ ಹಿಂದೆ ತೂಕ ನಿಯಂತ್ರಣ ಮಾಡುವುದಕ್ಕಾಗಿ ‘ನಾನ್ ಶುಗರ್ ಸ್ವೀಟ್ನರ್’ ದ ಉಪಯೋಗ ಮಾಡಬಾರದೆಂದು ಖಾದ್ಯ ಪದಾರ್ಥ ತಯಾರಿಸುವ ಕಂಪನಿಗಳಿಗೆ ಸಲಹೆ ನೀಡಿತ್ತು. ಇದಕ್ಕೆ ವಿರೋಧವಾಗಿತ್ತು. ಆದ್ದರಿಂದ ಈಗ ಕೃತಕವಾಗಿ ತಯಾರಿಸಲಾಗುವ ಸಿಹಿ ಪದಾರ್ಥದ ಬಗ್ಗೆ ನಿರ್ಣಯ ತೆಗೆದಕೊಂಡ ನಂತರ ವಿರೋಧವಾಗುವ ಸಾಧ್ಯತೆ ಇದೆ.

೨. ಐ ಎ ಆರ್.ಸಿ ಸಂಸ್ಥೆಯು, ಕೃತಕ ಸಿಹಿ ಪದಾರ್ಥಗಳಿಗೆ ಕ್ಯಾನ್ಸರ್ ರೋಗ ವರ್ಧಕ ಪದಾರ್ಥ ಎಂದು ಘೋಷಿಸುವ ಉದ್ದೇಶ ಭ್ರಮೆ ನಿರ್ಮಾಣ ಮಾಡುವುದು ಆಗಿಲ್ಲ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವುದಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವಾಗಿದೆ.

೩. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ನಲ್ಲಿ ಕಳೆದ ವರ್ಷ ೧ ಲಕ್ಷ ಜನರ ಸಮೀಕ್ಷೆ ನಡೆಸಲಾಗಿದೆ. ಇದರಿಂದ, ಯಾರು ಕೃತಕವಾಗಿ ತಯಾರಿಸಿರುವ ಸಿಹಿ ಪದಾರ್ಥದ ಸೇವನೆ ಮಾಡುತ್ತಾರೆ ಅವರಿಗೆ ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಗಮನಕ್ಕೆ ಬಂದಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ವಿದೇಶಿ ತಂಪು ಪಾನೀಯ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವುದನ್ನು ನೋಡಿದರೆ ಸಂಬಂಧಿತ ವಿದೇಶಿ ಕಂಪನಿಗಳು ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ಒತ್ತಡ ತಂದು ಅವರಿಗೆ ಈ ಘೋಷಣೆ ಮಾಡಲು ಬಿಡುವುದಿಲ್ಲ. ಇದನ್ನು ತಿಳಿದು ಭಾರತ ಸರಕಾರ ಸ್ವತಃ ಇಂತಹ ಪದಾರ್ಥಗಳ ಮಾರಾಟವನ್ನು ದೇಶದಲ್ಲಿ ಕೂಡಲೇ ನಿಷೇಧಿಸಬೇಕು !