೧. ದೇವಸ್ಥಾನಗಳಲ್ಲಿ ಕಳ್ಳತನ ಮಾಡುವವರನ್ನು ಗುರುತಿಸಿ !
ಮುರಾದಾಬಾದ (ಉತ್ತರಪ್ರದೇಶ) ದಲ್ಲಿ ೨ ದೇವಸ್ಥಾನ ಗಳಲ್ಲಿನ ಕಳವು ಪ್ರಕರಣದಲ್ಲಿ ನಯಿಮ್ ಎಂಬ ಕಳ್ಳನನ್ನು ಬಂಧಿಸಲಾಗಿದೆ. ಅವನ ವಿರುದ್ಧ ಈ ಹಿಂದೆಯೇ ೫ ಅಪರಾಧಗಳು ದಾಖಲಾಗಿವೆ.
೨. ಓಡಿಶಾ ರೈಲು ದುರಂತವನ್ನು
‘ರೈಲ್ ಜಿಹಾದ್ ಎನ್ನಬಹುದೇ ? ಬಾಲಾಸೋರ (ಓಡಿಶಾ) ದಲ್ಲಿ ಜೂನ್ ೨ ರಂದು ಸಂಭವಿಸಿದ ರೈಲು ದುರಂತದ ತನಿಖೆ ಮಾಡುತ್ತಿರುವ ಸಿಬಿಐ ‘ಸೊರೊ ಸೆಕ್ಷನ್ ಸಿಗ್ನಲ್ ನ ಕಿರಿಯ ಅಭಿಯಂತ ಅಮೀರ್ ಖಾನ್ ಇವನ ಮನೆಗೆ ಬೀಗ ಜಡಿಯಲಾಗಿದೆ.
೩. ಭಾರತದಲ್ಲಿ ಇತರ ಧರ್ಮದವರ ಹಬ್ಬಗಳನ್ನು ಎಂದಾದರೂ ನಿಷೇಧಿಸಬಹುದೇ ?
ಪಾಕಿಸ್ತಾನದಲ್ಲಿ ಉಚ್ಚ ಶಿಕ್ಷಣ ಆಯೋಗವು ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಹಬ್ಬವನ್ನು ಆಚರಿಸಲು ನಿಷೇಧಿಸಿದೆ. ಇಂತಹ ಹಬ್ಬಗಳನ್ನು ಆಚರಿಸುವುದೆಂದರೆ ಇಸ್ಲಾಂನ ಗುರುತಿನಿಂದ ಪ್ರತ್ಯೇಕಿಸಿದಂತಾಗುತ್ತದೆಯೆಂದು ಆಯೋಗವು ಹೇಳಿದೆ.
೪. ಇಸ್ಲಾಮಿಕ್ ರಾಷ್ಟ್ರ ಎಂದರೆ ‘ಸ್ವರ್ಗವೇ ?
ಹಿಂದೂ ರಾಷ್ಟ್ರದ ಅರ್ಥ ದೇಶದ ವಿಭಜನೆ ಮಾಡುವುದು, ದೇಶವನ್ನು ನರಕಕ್ಕೆ ತಳ್ಳುವುದು ಎಂದಿದೆ ಎಂಬುದಾಗಿ ಬಿಹಾರದ ಆಡಳಿತಾರೂಢ ರಾಷ್ಟ್ರೀಯ ಜನತಾ ದಳದ ಮುಖಂಡ ಶಿವಾನಂದ ತಿವಾರಿ ಇವರು ಹೇಳಿದ್ದಾರೆ.
೫. ಬರಾಕ್ ಒಬಾಮಾ ಇವರು ಇಸ್ಲಾಮಿ ದೇಶಗಳಲ್ಲಿನ ಹಿಂದೂಗಳ ರಕ್ಷಣೆಯ ಕುರಿತು ಏಕೆ ಮಾತನಾಡುವುದಿಲ್ಲ?
ಭಾರತದ ಮುಸಲ್ಮಾನರ ರಕ್ಷಣೆಯ ಕುರಿತು ಅಮೇರಿಕದ ರಾಷ್ಟ್ರಾಧ್ಯಕ್ಷ ಬಾಯಡೇನ ಇವರು ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಬೇಕು, ಎಂದು ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಸಲಹೆ ನೀಡಿದ್ದರು.
೬. ಹಿಂದೂಗಳು ಧರ್ಮಾಚರಣೆ ಮಾಡಬೇಕು !
ತೆಲಂಗಾಣದ ರಾಜ್ಯಪಾಲೆ ತಮಿಳಿಸಾಯಿ ಸೌಂದರ ರಾಜನ್ ಇವರು ಮಾರ್ಗದರ್ಶನ ಮಾಡುವಾಗ, ಗರ್ಭಿಣಿ ಯರು ‘ರಾಮಾಯಣ ಮತ್ತು ‘ಸುಂದರಕಾಂಡವನ್ನು ಓದಬೇಕು, ಎಂದು ಹೇಳಿದರು.
೭. ಇಂತಹ ವಿರೋಧವನ್ನು ಸರಕಾರ ಬಗ್ಗುಬಡಿಯಬೇಕು !
ನಾವು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತೇವೆ. ಆದರೆ ಬೀದಿಗಿಳಿಯಲ್ಲ. ಈ ಕಾನೂನಿನ ಮೂಲಕ ಮುಸಲ್ಮಾನರಲ್ಲಿ ಒಡಕುಂಟು ಮಾಡಿ ಅವರನ್ನು ದೂರ ಮಾಡಬೇಕೆಂದು ಉದ್ದೇಶಿಸಲಾಗಿದೆ ಎಂದು ‘ಜಮೀಯತ ಉಲೇಮಾ-ಎ-ಹಿಂದ್ನ ಮುಖ್ಯಸ್ಥ ಮೌಲಾನಾ ಅರ್ಶದ ಮದನಿ ಇವರು ಹೇಳಿದ್ದಾರೆ.