ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಆಧ್ಯಾತ್ಮಿಕ ಬಲದಿಂದಲೇ ಸಂಪೂರ್ಣ ದೇಶದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ! – ನ್ಯಾಯವಾದಿ ವಿಷ್ಣು ಶಂಕರ ಜೈನ್
೨೦೧೪ ರಲ್ಲಿ ನಾನು ಮೊದಲ ಬಾರಿಗೆ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಪರ್ಕಕ್ಕೆ ಬಂದೆ. ಅನಂತರ ದೇವಸ್ಥಾನಗಳ ಮುಕ್ತಿಯ ಈ ಹೋರಾಟಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಂದಾಗಿ ಆಧ್ಯಾತ್ಮಿಕ ಅಧಿಷ್ಠಾನ ಲಭಿಸಿತು.
ಈ ಅಧಿವೇಶನದಿಂದಾಗಿ ಕಾಶಿಯಲ್ಲಿ ಜ್ಞಾನವಾಪಿ ಮುಕ್ತಿಗಾಗಿ ಹೋರಾಟ ನಿಸ್ಸಂದೇಹವಾಗಿ ಆರಂಭವಾಗಿದೆ. ಈಗ ಕಾಶಿಯ ನಂತರ ಮಥುರಾ ಮತ್ತು ಕಿಷ್ಕಿಂಧೆಯ ಮುಕ್ತಿಗಾಗಿ ಹೋರಾಟ ನಡೆಸಲಾಗುವುದು ಎಂದು ‘ಕಾಶಿಯಲ್ಲಿ ಜ್ಞಾನವಾಪಿ ಮುಕ್ತಿಗಾಗಿ ಹೋರಾಟ ಮಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಮಾಹಿತಿ ನೀಡಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕಾಶಿ ನಂತರ ಮಥುರಾ ವಿಷಯದಲ್ಲೂ ‘ವಕ್ಫ್ ಕಾಯ್ದೆ ಮತ್ತು ‘ಪ್ಲೇಸಸ್ ಆಫ್ ವರ್ಶಿಪ್ ಎಕ್ಟ್ ಅನ್ವಯವಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದೆ. ಇದರೊಂದಿಗೆ ಎರಡೂ ಸ್ಥಳಗಳ ಸಮೀಕ್ಷೆ ನಡೆಸುವಂತೆ ಪುರಾತತ್ವ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ. ಹನುಮಂತನ ಜನ್ಮಸ್ಥಳವಾದ ಕಿಷ್ಕಿಂಧೆಗೆ ಸಂಬಂಧಿಸಿದ ಕರ್ನಾಟಕ ರಾಜ್ಯದ ಕಾನೂನನ್ನು ಅಸಂವಿಧಾನಿಕ ಎಂದು ಉಚ್ಚನ್ಯಾಯಾಲಯ ಘೋಷಿಸಿದೆ. ದೇಶಾದ್ಯಂತ ವಿವಿಧ ರಾಜ್ಯ ಸರಕಾರಗಳು ದೇವಾಲಯಕ್ಕೆ ಸಂಬಂಧಿಸಿದಂತೆ ಮಾಡಿರುವ ಎಲ್ಲಾ ಕಾನೂನುಗಳು ಸಂವಿಧಾನದ ೧೯, ೨೧, ೨೫, ೨೬ ಮತ್ತು ೨೭ ರ ಉಲ್ಲಂಘನೆಯಾಗಿದೆ. ಆದ್ದರಿಂದ ಕೇಂದ್ರ ಸರಕಾರ ಕಾನೂನು ರೂಪಿಸಿ ಈ ಎಲ್ಲ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲಾ ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಶ್ರೀ. ವಿಷ್ಣು ಜೈನ ಇವರು ತಿಳಿಸಿದರು. ಮಥುರಾದ ಶ್ರೀಕೃಷ್ಣಜನ್ಮಸ್ಥಳವನ್ನು ಮುಕ್ತ ಮಾಡಲು ಕಳೆದ ೧೦ ವರ್ಷಗಳಿಂದ ನಾವು ಜಿಲ್ಲಾ ನ್ಯಾಯಾಲಯ, ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಪ್ರಯತ್ನಿಸುತ್ತಿದ್ದೇವೆ. ಪ್ರಯಾಗರಾಜ ನ್ಯಾಯಾಲಯವು ಈ ಅರ್ಜಿಯನ್ನು ದಾಖಲಿಸಿಕೊಂಡಿದ್ದು ಶ್ರೀಕೃಷ್ಣಜನ್ಮಭೂಮಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ಮಾಹಿತಿಯನ್ನು ನ್ಯಾಯಾಲಯವು ಕೇಳಿದೆ. ಇದರಿಂದ ವಿವಿಧ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಹೋರಾಟಕ್ಕಾಗಿ ನಮ್ಮ ಸಮಯ ವ್ಯರ್ಥವಾಗಬೇಕೆಂಬ ಅವರ ಸಂಚು ವಿಫಲವಾಗಿದೆ.