ರಾಮಾಯಣದ ‘ನರೇಟಿವ್

(‘ನರೇಟಿವ್ ಎಂದರೆ ಕಾಲ್ಪನಿಕ ಕಥಾವಸ್ತು)

ಓಮ್ ರಾವುತ್ ನಿರ್ದೇಶನದ ಹಾಗೂ ಸಂವಾದ ಲೇಖಕ ಮನೋಜ ಮುಂತಶೀರ್ ಶುಕ್ಲಾ ಇವರ ‘ಆದಿಪುರುಷ ಈ ವಿ.ಎಫ್.ಎಕ್ಸ್. (ದೃಶ್ಯಪ್ರಭಾವ) ತಂತ್ರಜ್ಞಾನ ಯುಕ್ತ ರಾಮಾಯಣವನ್ನು ಆಧರಿಸಿದ ಚಲನಚಿತ್ರವು ಹಿಂದೂಗಳ ಟೀಕೆಗೆ ಗುರಿಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ರಾಮಾಯಣ ಎಂದಾಕ್ಷಣ, ಪ್ರಭು ಶ್ರೀರಾಮ, ಸೀತಾಮಾತೆ, ಹನುಮಂತ, ರಾವಣ ಮುಂತಾದವರ ಉಡುಗೆತೊಡುಗೆ ಸಹಿತ ತ್ರೇತಾಯುಗದಲ್ಲಿನ ರಾಮಾಯಣದ ಸುವರ್ಣಕಾಲವು ಪ್ರತಿಯೊಬ್ಬ ಹಿಂದೂವಿನ ಕಣ್ಮುಂದೆ ನಿಲ್ಲುತ್ತದೆ. ಶ್ರೀರಾಮ ಹಾಗೂ ಸೀತಾಮಾತೆ ಈ ಹೆಸರನ್ನು ಉಚ್ಚರಿಸಿದಾಗ ಅತ್ಯಂತ ಸಾತ್ತ್ವಿಕ, ಸಜ್ಜನ, ವಿನಯಶೀಲ, ಆದರೂ ಅತ್ಯಂತ ಪ್ರಭಾವೀ, ಕರ್ತೃತ್ವಶೀಲ ಹಾಗೂ ಚೈತನ್ಯದಾಯಕ ವ್ಯಕ್ತಿತ್ವ ಮನಸ್ಸಿನಲ್ಲಿ ಮೂಡಿಬರುತ್ತದೆ. ರಾಮಾಯಣದ ಎಲ್ಲ ಪಾತ್ರಗಳ ಪರಸ್ಪರರ ನಡುವಿನ ಸಂವಾದವು ಯಾರಿಗೂ ಮನಸ್ಸಿನಲ್ಲಿ ಪ್ರತಿಫಲಿತ ಕ್ರಿಯೆಯಂತೆ ಗೌರವಾದರಗಳನ್ನು ಮೂಡಿಸುತ್ತದೆ; ‘ಆದಿಪುರುಷ ಈ ಚಲನಚಿತ್ರದ ಪ್ರಸ್ತುತೀಕರಣದಲ್ಲಿ ಈ ವಿಷಯಗಳ ಅಭಾವವಿರುವುದರಿಂದ ಶ್ರೀರಾಮ, ತ್ರೇತಾಯುಗ ಹಾಗೂ ರಾಮಾಯಣದ ಕಥೆ ಇವೆಲ್ಲ ವಿಷಯಗಳಲ್ಲಿ ಹಿಂದೂಗಳ ಮನಸ್ಸಿನಲ್ಲಿನ ಭಾವಭಕ್ತಿಯ ಮೇಲೆ ದೊಡ್ಡ ಆಘಾತವಾಗಿದೆ. ಕಲೆಯ ಉಚ್ಚಮಟ್ಟದ ಪ್ರಸ್ತುತೀಕರಣಕ್ಕಾಗಿ ತಂತ್ರಜ್ಞಾನವನ್ನು ಉಪಯೋಗಿಸಿದರೆ ಆ ತಂತ್ರಜ್ಞಾನವು ಕಲೆಗೆ ಪೂರಕವಾಗುತ್ತದೆ. ‘ತಾನಾಜಿ ಚಲನಚಿತ್ರದಲ್ಲಿ ನಿರ್ದೇಶಕ ಓಮ್ ರಾವುತ್ ಇವರು ಶತ್ರುವಿನ ಮೇಲೆ ಆಕ್ರಮಣ ಮಾಡುವ ಪ್ರಸಂಗದಲ್ಲಿ ಮಾತ್ರ ಈ ತಂತ್ರಜ್ಞಾನವನ್ನು ಉಪಯೋಗಿಸಿದ್ದರು. ಈ ಚಲನಚಿತ್ರದಲ್ಲಿ ಆ ತಂತ್ರಜ್ಞಾನವನ್ನು ಪದೇ ಪದೇ ತೋರಿಸಿರುವುದರಿಂದ ‘ರಾಮಾಯಣವು ಕಾಲ್ಪನಿಕ ಕಥೆಯಾಗಿತ್ತೋ ಏನೋ ?, ಎಂದು ಒಬ್ಬ ಸಣ್ಣ ಹುಡುಗನಿಗೆ ಅನಿಸಿದರೆ ಅದರಲ್ಲಿ ತಪ್ಪಿಲ್ಲ. ದ್ರೋಣಗಿರಿ ಪರ್ವತ ಎತ್ತುವುದು ಅಥವಾ ಹನುಮಂತ ಹಾರುವ ಘಟನೆಗಾಗಿ ತಂತ್ರಜ್ಞಾನದ ಪರಿಣಾಮ ಪೂರಕವೆನಿಸಬಹುದು; ಆದರೆ ‘ಶ್ರೀರಾಮನ ಮೇಲೆ ಅನೇಕ ಬಾವಲಿ ಗಳಂತಹ ಪಕ್ಷಿಗಳು ಆಕ್ರಮಣ ಮಾಡಿದಾಗ ಅವನು ಬಾಣದಿಂದ ಅವುಗಳನ್ನು ಹೊಡೆಯುವುದು, ಇಂತಹ ಪ್ರಸಂಗವನ್ನು ತಂತ್ರಜ್ಞಾನದ ಮೂಲಕ ತೋರಿಸುವುದರಿಂದ ಈ ಚಲನಚಿತ್ರ ‘ಹಾಲಿವುಡ್ ಚಲನಚಿತ್ರದ ಹಾಗೆ ಅನಿಸುತ್ತದೆ. ಎಲ್ಲ ಪ್ರಮಾದಇಲ್ಲಿಯೇ ಆಗಿದೆ. ‘ಆಧುನಿಕ ರಾಮಾಯಣ ತೋರಿಸುವ ರಾವುತ್ ಇವರ ಕಲ್ಪನೆಯೆ ಮೂಲತಃ ತಪ್ಪಾಗಿದೆ. ರಾಮಾಯಣವು ತ್ರೇತಾಯುಗದ ಕಾಲದ್ದಾಗಿದೆ. ಹೀಗಿರುವಾಗ ಅದು ತ್ರೇತಾಯುಗದ್ದೇ ಅನಿಸಬೇಕು, ಅದು ಕಲಿಯುಗದ ಹಾಗೆ ಅನಿಸಿದರೆ ನಡೆಯುತ್ತದೆಯೇ ? ಶ್ರೀರಾಮನು ಸಾಕ್ಷಾತ್ ಅವತಾರಿ ಯಾಗಿದ್ದನು. ಅವನ ಕಾಲ ಸನಾತನ ಹಿಂದೂ ಧರ್ಮದ ಅತೀಪ್ರಾಚೀನ ಪರಂಪರೆಯ ಮಹತ್ವವನ್ನು ತೋರಿಸುವ ಅತ್ಯಂತ ತೇಜಸ್ವಿ ಹಾಗೂ ಚೈತನ್ಯದಾಯಕ ಕಾಲವಾಗಿತ್ತು. ಇಲ್ಲಿ ಚಲನಚಿತ್ರದಲ್ಲಿ ಎಲ್ಲ ಕಡೆ ಕಡು ನೀಲಿ ಹಾಗೂ ಕಪ್ಪು ಬೆಳಕಿನ ದೃಶ್ಯಗಳಿರುವುದರಿಂದ ಅದು ಕಲಿಯುಗಾಂತರ್ಗತ ಕಲಿಯುಗದ ಭೀಕರ ಕಾಲದ ಹಾಗೆ ಅನಿಸುತ್ತದೆ. ಸದ್ಯ ಎಲ್ಲೆಡೆ ಇರುವ ಮಾಲಿನ್ಯದ ವೇಗ ಹೀಗೆಯೇ ಮುಂದುವರಿದರೆ, ೩೦೦೦ ನೇ ಇಸ್ವಿಯಲ್ಲಿ ಎಂತಹ ವಾತಾವರಣ ನಿರ್ಮಾಣವಾಗುವುದೋ, ನಾವು ಆ ಕಾಲಕ್ಕೆ ಹೋಗಿದ್ದೇವೆ ಎಂದು ಈ ಚಲನಚಿತ್ರದ ಕೆಲವು ದೃಶ್ಯಗಳನ್ನು ನೋಡುವಾಗ ಅನಿಸುತ್ತದೆ. ‘ಸುವರ್ಣಲಂಕೆಯು ಕಲ್ಲಿದ್ದಲಿನ ಗಣಿಯ ಹಾಗೆ ಕಾಣಿಸುತ್ತಿದೆ ಎಂದು ಆ ವಾತಾವರಣವನ್ನು ನೋಡಿ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ರಾಮಾಯಣದಲ್ಲಿನ ಚೈತನ್ಯಮಯ ಪ್ರಸಂಗಗಳಲ್ಲಿನ ಉಲ್ಲಾಸದಾಯಕ ವಾತಾವರಣವು ಗಾಢ ಪ್ರಕಾಶದಿಂದಾಗಿ ನಿರುತ್ಸಾಹಿ, ಕೃತಕ ಹಾಗೂ ನಿಸ್ತೇಜವೆನಿಸುತ್ತದೆ. ಶಬ್ದ (ಸಂವಾದ), ರೂಪ (ದೃಶ್ಯ) ಇವುಗಳಿಂದ ಇದು ರಾಮಾಯಣಕಾಲದ್ದಲ್ಲ, ಇಲ್ಲಿ ವಿಚಿತ್ರ ಸ್ಪಂದನಗಳು ಬರುತ್ತವೆ.

ಶ್ರದ್ಧಾಸ್ಥಾನಗಳ ವಿಡಂಬನೆ !

ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುವ ಹವ್ಯಾಸದಲ್ಲಿ ಅದರ ಅತಿರೇಕ ಮಾಡಿ ಹಾಗೂ ಅಯೋಗ್ಯ ಸ್ಥಳದಲ್ಲಿ ಉಪಯೋಗಿಸಿರುವುದರಿಂದ ರಾಮಾಯಣದ ಮೂಲ ಚೌಕಟ್ಟಿಗೆ ಆಘಾತವಾಗಿದೆ. ‘ಹಿಂದೂಗಳ ಸರ್ವೋಚ್ಚ ಶ್ರದ್ಧಾಸ್ಥಾನವಾಗಿರುವ ಹಿಂದೂಗಳ ರಾಷ್ಟ್ರದ ಪ್ರೇರಣಾಸ್ರೋತ, ಹಿಂದೂಗಳ ಆದರ್ಶ ರಾಜನನ್ನು ಪ್ರತಿನಿಧಿಸುವ ರಾಮಾಯಣ ಹಾಗೂ ಅದರಲ್ಲಿನ ಪ್ರಮುಖ ಪಾತ್ರಗಳನ್ನು ಈ ರೀತಿ ನಿಸ್ತೇಜವಾಗಿ ತೋರಿಸುವುದು, ಇದು ಹಿಂದೂಗಳ ಶ್ರದ್ಧಾಸ್ಥಾನದ ದೊಡ್ಡ ವಿಡಂಬನೆಯಾಗಿದೆ. ಲೇಖಕ, ನಿರ್ದೇಶಕ, ನಿರ್ಮಾಪಕ, ಪರಿನಿರೀಕ್ಷಣ ಮಂಡಳ ಮೊದಲಾದವರಲ್ಲಿ ಯಾರಿಗೂ ಇದು ಅರಿವಾಗಲಿಲ್ಲವೇ ? ‘ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಆಧುನಿಕತೆಯ ಹೆಸರಿನಲ್ಲಿ ನಿಸ್ತೇಜವಾಗಿ ತೋರಿಸುವುದು, ಇದರಿಂದ ಸಹ ಒಂದು ‘ನೆರೇಟಿವ್ ಹರಡಬಹುದು, ಎನ್ನುವ ಅಪಾಯವನ್ನೂ ಇಲ್ಲಿ ಗಮನಿಸಬೇಕು. ಸೀತೆಯ ಉಡುಪುಗಳನ್ನು ಅಯೋಗ್ಯ ಪದ್ಧತಿಯಲ್ಲಿ ಅಥವಾ ದೇಹಪ್ರದರ್ಶನ ಮಾಡುವ ಹಾಗೆ ತೋರಿಸಲಾಗಿದೆ. ಶ್ರೀರಾಮನ ಕಾಲಿನಲ್ಲಿ ಪಾದುಕೆಯ ಬದಲು ‘ಸ್ಯಾಂಡಲ್ನಂತಹ ಚರ್ಮದ ಚಪ್ಪಲಿಯನ್ನು ತೋರಿಸಲಾಗಿದೆ. ಮಾರುತಿರಾಯರು ಕೂದಲನ್ನು ಅಯೋಗ್ಯ ಪದ್ಧತಿ ಯಲ್ಲಿ ಕಟ್ಟಿರುವಂತೆ ತೋರಿಸಲಾಗಿದೆ. ರಾವಣನಲ್ಲಿ ಪುಷ್ಪಕ ವಿಮಾನವಿತ್ತು. ಸುಂದರವಾದ ಪುಷ್ಪಕ ವಿಮಾನದ ಬದಲು ಅತ್ಯಂತ ಜಿಗುಪ್ಸೆಯನ್ನುಂಟು ಮಾಡುವ ಪಕ್ಷಿಯನ್ನು ತೋರಿಸುವುದು, ಇದು ಹಿಂದೂಗಳ ಸಾಂಸ್ಕೃತಿಕ ಅವಮಾನದ ಪರಾಕಾಷ್ಠೆಯಾಗಿದೆ. ಚಲನಚಿತ್ರದಲ್ಲಿ ಶ್ರೀರಾಮ, ಹನುಮಂತ, ರಾವಣ ಇವರ ಶರೀರದ ಮೇಲೆ ಚರ್ಮದಿಂದ ತಯಾರಿಸಿದಂತಹ ಅನೇಕ ವಸ್ತುಗಳನ್ನು ತೋರಿಸಲಾಗಿದೆ. ಇವರು ೧೮ ನೇ ಅಥವಾ ೧೯ ನೇ ಶತಮಾನದ ಪಾಶ್ಚಾತ್ಯ ದೇಶಗಳ ಸೈನಿಕರಲ್ಲ. ಅವರು ಅತ್ಯಂತ ಪ್ರಗತಿಶೀಲ ಸಂಸ್ಕೃತಿಯುಳ್ಳ ಎಲ್ಲ ‘ಲೋಕಗಳಲ್ಲಿ ಪ್ರಯಾಣ ಮಾಡುವ ಕ್ಷಮತೆ ಇರುವ ವೀರಪುರುಷರಾಗಿದ್ದಾರೆ. ಒಬ್ಬ ಟೀಕಾಕಾರರು ಈ ಹಿಂದೆ ರಾವಣನ ಪಾತ್ರವನ್ನು ಮಾಡಿದ ನಟನ ಛಾಯಾಚಿತ್ರದ ಮೇಲೆ ‘ನನ್ನಲ್ಲಿ ಅನೇಕ ದುರ್ಗುಣಗಳಿದ್ದವು; ಆದರೆ ನಾನು ‘ಚಮ್ಮಾರ ನಾಗಿರಲಿಲ್ಲ ಎಂದು ಬರೆದಿದ್ದಾರೆ. ಈ ಪ್ರತಿಕ್ರಿಯೆ ಎಲ್ಲವನ್ನೂ ಹೇಳುತ್ತದೆ. ಇನ್ನೊಬ್ಬರು ಹೇಳಿದ್ದಾರೆ, ‘ನಾವು ರಾಮಾಯಣದ ‘ಕಾರ್ಟೂನ್ ಮಾಲಿಕೆಯನ್ನು ನೋಡಿದೆವು, ಅದು ಕೂಡ ಇದಕ್ಕಿಂತ ಎಷ್ಟೋ ಚೆನ್ನಾಗಿತ್ತು. ಒಟ್ಟಾರೆ ನಿರ್ದೇಶಕರು ರಾಮಾಯಣದ ಅತ್ಯುಚ್ಚ ಸ್ಥಾನಮಾನವನ್ನು ಆಧುನಿಕತೆ ಹಾಗೂ ತಂತ್ರಜ್ಞಾನದಿಂದ ಸುಂದರವಾಗಿ ರೂಪಿಸುವ ಬದಲು ಅದನ್ನು ತುಂಬಾ ಕೀಳ್ಮಟ್ಟಕ್ಕೆ ತಂದಿದ್ದಾರೆ. ಸೀತೆಯ ದೃಷ್ಟಿಯಲ್ಲಿ ಪ್ರಭುಶ್ರೀರಾಮ ಕೇವಲ ಪತಿ ಆಗಿರಲಿಲ್ಲ, ‘ಪ್ರಭು ಶ್ರೀರಾಮ ನಾಗಿದ್ದರು. ಪ್ರಸಿದ್ಧ ಅಧ್ಯಯನಕಾರರಾದ ರಾಮಾನಂದ ಸಾಗರ ಇವರ ‘ರಾಮಾಯಣ ಈ ದೂರದರ್ಶನ ಮಾಲಿಕೆಯಲ್ಲಿನ ಸೀತೆಯ ಪಾತ್ರದ ಕಣ್ಣುಗಳಲ್ಲಿ ಗೌರವಭಾವದ ಅರಿವಾಗುತ್ತಿತ್ತು. ಆ ಮಾಲಿಕೆಯಲ್ಲಿ ಸೀತೆ, ಹನುಮಂತ, ಭರತ, ಲಕ್ಷ್ಮಣ ಇವರೆಲ್ಲರೂ ವಿನಮ್ರತೆಯಿಂದ ಮಾತನಾಡುವಾಗ ಶ್ರೀರಾಮನ ವಿಷಯದಲ್ಲಿ ಭಕ್ತಿಭಾವವು ಉಕ್ಕಿ ಬರುತ್ತಿತ್ತು. ಭಾಷೆ, ಸಂವಾದ ಮಾಡುವ ಶೈಲಿಯಿಂದ ಅವರ ಅತ್ಯುಚ್ಚ ಆದರ್ಶ ವ್ಯಕ್ತಿತ್ವವು ಎದ್ದು ಕಾಣುತ್ತಿತ್ತು. ಆದಿಪುರುಷ ಚಲನಚಿತ್ರದಲ್ಲಿ ತೋರಿಸಿದಂತೆ ಆಧುನಿಕ ಕಾಲದ ಕೀಳ್ಮಟ್ಟದ ಭಾಷೆಯನ್ನು ಹಿಂದೂ ದೇವತೆಗಳ ಬಾಯಿಯಿಂದ ಹೇಳಿಸುವುದು, ಇದನ್ನು ಯಾರೂ ಸ್ವೀಕರಿಸಲು ಸಾಧ್ಯವಿಲ್ಲ. ಕಳೆದ ೨-೩ ದಿನಗಳಲ್ಲಿ ಚಲನಚಿತ್ರವು ಎಷ್ಟು ದೊಡ್ಡ ಗಲ್ಲಾಪೆಟ್ಟಿಗೆಯನ್ನು ತುಂಬಿಸುತ್ತಿದೆಯೋ ಅದು ಕೇವಲ ಹಿಂದೂಗಳಿಗೆ ಶ್ರೀರಾಮನ ಮೇಲಿರುವ ಶ್ರದ್ಧೆಯಿಂದ ಎಂಬುದನ್ನು ನಿರ್ಮಾಪಕರು ಗಮನಿಸಬೇಕು. ಅನೇಕ ಜನರು ನಡುವೆಯೇ ಎದ್ದು ಹೋಗುತ್ತಿದ್ದರು, ಸಾಮಾಜಿಕ ಮಾಧ್ಯಮಗಳಲ್ಲಿ ಆಂದೋಲನ ಪ್ರಾರಂಭವಾಗಿದೆ ಹಾಗೂ ಚಲನಚಿತ್ರದ ವಿರುದ್ಧ ಖಟ್ಲೆ ಕೂಡ ದಾಖಲಾಗಿದೆ. ಇದು ಹಿಂದೂಗಳ ಶ್ರದ್ಧಾಸ್ಥಾನದ ಮೇಲಿನ ಆಘಾತದ ಇತ್ತೀಚೆಗಿನ ದೊಡ್ಡ ಉದಾಹರಣೆಯಾಗಿದ್ದು ಇದು ರಹಸ್ಯವಾಗಿ ಬೆಳಕಿಗೆ ಬಂದಿದೆ. ‘ಇತರ ಪಂಥೀಯರಿಗೆ ಹೀಗಾಗುತ್ತಿದ್ದರೆ, ಅವರು ಸ್ವಲ್ಪವೂ ಸಹಿಸಿಕೊಳ್ಳುತ್ತಿರಲಿಲ್ಲ ಹಾಗೂ ಅವರು ಏನು ಮಾಡುತ್ತಿದ್ದರು ?, ಇಷ್ಟನ್ನು ಮಾತ್ರ ಹಿಂದೂಗಳು ತಮಗೆ ಪ್ರಶ್ನಿಸಿಕೊಳ್ಳಬೇಕು !