ಸ್ವೀಡನ್ ನಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪ್ರತಿಭಟನಾಕಾರನಿಂದ ಮಸೀದಿಯ ಹೊರಗೆ ಕುರಾನ್ ಗೆ ಬೆಂಕಿ !

  • ಟರ್ಕಿಯಿಂದ ನಿಷೇಧ !

  • ‘ಸ್ವೀಡನ್ ನ ‘ಪೊಲೀಸರು ಕ್ರಮ ಕೈಗೊಳ್ಳುವರು’ ಎಂದು ಸ್ಪಷ್ಟನೆ

ಸ್ಟಾಕಹೋಮ (ಸ್ವೀಡನ್) – ಬಕ್ರಿದ್ ದಿನದಂದು ಇಲ್ಲಿಯ ಒಂದು ಮಸೀದಿಯ ಹೊರಗೆ ಒಬ್ಬ ವ್ಯಕ್ತಿ ಕುರಾನ್ ಸುಟ್ಟಿದನು. ಅದಕ್ಕಾಗಿ ಅವನು ನ್ಯಾಯಾಲಯದಿಂದ ಅನುಮತಿ ಪಡೆದಿದ್ದನು. ನ್ಯಾಯಾಲಯವು ಈ ವ್ಯಕ್ತಿಗೆ ಒಂದು ದಿನಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಪ್ರತಿಭಟನೆ ಎಂದು ಈ ಅನುಮತಿ ನೀಡಿತ್ತು. ಈ ವ್ಯಕ್ತಿಯು ಮೊದಲು ಕುರಾನಿನ ಕೆಲವು ಪುಟಗಳನ್ನು ಹರಿದನು ಮತ್ತು ಅವುಗಳಿಂದ ತನ್ನ ಬೂಟುಗಳನ್ನು ಒರೆಸಿದನು, ನಂತರ ಅದರಲ್ಲಿ ಒಣಗಿರುವ ಹಂದಿಯ ಮಾಂಸ ಇಟ್ಟನು ಮತ್ತು ನಂತರ ಅದಕ್ಕೆ ಬೆಂಕಿ ಹಚ್ಚಿದ. ಇದರ ನಂತರ ಅವನು ಸ್ವೀಡನಿನ ಧ್ವಜ ಕೂಡ ಹರಿದನು. ಈ ಘಟನೆ ನೋಡಲು ಉಪಸ್ಥಿತ ೨೦೦ ಜನರಲ್ಲಿ ಕೆಲವು ಜನರು ಅವನನ್ನು ಬೆಂಬಲಿಸಿದರು, ಹಾಗೂ ಇನ್ನೂ ಕೆಲವು ಜನರು ವಿರೋಧಿಸುತ್ತಾ ಘೋಷಣೆ ನೀಡಿದರು. ಆ ಸಮಯದಲ್ಲಿ ಒಬ್ಬ ವ್ಯಕ್ತಿಯು ಕುರಾನ್ ಸುಟ್ಟಿರುವ ವ್ಯಕ್ತಿಯ ಮೇಲೆ ಕಲ್ಲು ಎಸೆದನು. ಅದರ ನಂತರ ಪೊಲೀಸರು ಅವನನ್ನು ವಶಕ್ಕೆ ಪಡೆದರು. ಕುರಾನ್ ಸುಟ್ಟಿರುವ ಈ ಘಟನೆಯನ್ನು ಖಂಡಿಸುತ್ತಾ ಟರ್ಕಿಯ ನಾಗರೀಕರು ಸ್ವೀಡನ್ನಿನ ರಾಷ್ಟ್ರಧ್ವಜ ಸುಟ್ಟರು.

೧. ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿದಾನ್ ಇವರು ಈ ಘಟನೆಯ ಕುರಿತು ಟ್ವೀಟ್ ಮಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರು ಇಸ್ಲಾಂನ ವಿರುದ್ಧ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ನಾವು ಅದನ್ನು ಒಪ್ಪುವುದಿಲ್ಲ. ಯಾವುದಾದರೂ ದೇಶಕ್ಕೆ ‘ನಾಟೋ’ದಲ್ಲಿ (ನಾಟೋ ಎಂದರೆ ನಾರ್ತ್ ಅಟಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ಹೆಸರಿನ ಜಗತ್ತಿನ ೨೯ ದೇಶಗಳ ಸಮಾವೇಶ ಇರುವ ಸೈನಿಕ ಸಂಘಟನೆ) ಸಹಭಾಗಿ ಆಗುವ ಸಹಯೋಗಿಯಾಗಿ ಇರುವುದಿದ್ದರೆ, ಅವರಿಗೆ ಇಸ್ಲಾಂದ ಕುರಿತು ದ್ವೇಷ ಪಸರಿಸುವ ಭಯೋತ್ಪಾದಕರ ಮೇಲೆ ನಿಯಂತ್ರಣ ಇಡಬೇಕಾಗುತ್ತದೆ.’ ಸ್ವೀಡನಿಗೆ ‘ನಾಟೋ’ ದೇಶದ ಸದಸ್ಯವಾಗಬೇಕೆಂದರೆ ಮತ್ತು ಟರ್ಕಿಯ ಬೆಂಬಲ ದೊರೆಯದಿದ್ದರೆ ಅದು ಸಾಧ್ಯವಾಗುವುದಿಲ್ಲ.

೨. ಸ್ವೀಡನಿನ ಪ್ರಧಾನ ಮಂತ್ರಿ ಉಲ್ಫ್ ಕ್ರಿಷ್ಣರಸನ್ ಇವರು, ಈ ಪ್ರತಿಭಟನೆಯ ನಮ್ಮ ಸಂಭಾವ್ಯ ‘ನಾಟೋ’ ಸದಸ್ಯರ ಮೇಲೆ ಏನು ಪರಿಣಾಮ ಬೀರುವುದು ? ಇದರ ಅಂದಾಜು ಮಾಡಬಾರದು. ಈ ರೀತಿಯ ಪ್ರತಿಭಟನೆ ಕಾನೂನಿನ ಪರೀಧಿಯಲ್ಲಿ ಬರುತ್ತದೆ; ಆದರೂ ಕೂಡ ಅದು ಅಯೋಗ್ಯವೇ. ಈ ಪ್ರಕರಣದಲ್ಲಿ ಏನು ಕ್ರಮ ಕೈಗೊಳ್ಳುವುದು ? ಇದು ಪೊಲೀಸರೇ ನಿರ್ಧರಿಸುವರು. ನಾಗರೀಕರ ವಿರೋಧದ ನಂತರ ಪೊಲೀಸರು ಕುರಾನ್ ಸುಟ್ಟಿರುವ ವ್ಯಕ್ತಿಯ ಮೇಲೆ ಒಂದು ಧರ್ಮವನ್ನು ಗುರಿ ಮಾಡಿರುವ ಪ್ರಕರಣದಲ್ಲಿ ದೂರು ದಾಖಲಿಸಿದೆ.

೩. ಈ ವರ್ಷ ಜನವರಿಯಲ್ಲಿ ಕೆಲವು ಜನರು ಸ್ವೀಡನ್ ನಲ್ಲಿ ಟರ್ಕಿಯ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿ ಕುರಾನ್ ಸುಟ್ಟಿದ್ದರು. ಇದಕ್ಕೆ ಪ್ರತ್ಯುತ್ತರವೆಂದು ಟರ್ಕಿಯ ರಾಜಧಾನಿ ಅಂಕಾರದಲ್ಲಿರುವ ಸ್ವೀಡನಿನ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಾ ಸ್ವೀಡನಿನ ಧ್ವಜ ಸುಡಲಾಗಿತ್ತು.

೪. ಫೆಬ್ರುವರಿಯಲ್ಲಿ ಸ್ವೀಡಿಶ್ ಪೊಲೀಸರು ಪ್ರತಿಭಟನಕಾರರನ್ನು ಇರಾಕಿನ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಬಿಡಲಿಲ್ಲ. ಆಗಲೂ ಕೂಡ ಕುರಾನ್ ಸುಡುವವರಿದ್ದರು. ‘ನಾಟೊ’ ವಿರೋಧಿ ಒಂದು ಗುಂಪಿನ ಮೇಲೆ ಕುರಾನ್ ಸುಡುವುದರ ಬಗ್ಗೆ ನಿಷೇಧ ಹೇರಲಾಗಿತ್ತು; ಆದರೆ ನ್ಯಾಯಾಲಯವು ಈ ನಿಷೇಧ ಈ ವರ್ಷ ಏಪ್ರಿಲ್ ನಲ್ಲಿ ರದ್ದುಪಡಿಸಿತು. ನ್ಯಾಯಾಲಯವು, ‘ದೇಶದ ಸಂವಿಧಾನದ ಪ್ರಕಾರ ಜನರು ಸಂಘಟಿತರಾಗಿ ಪ್ರತಿಭಟಿಸುವ ಅಧಿಕಾರ ಇದೆ.’ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದಾಗಿ ಹೇಳುತ್ತಾ ನ್ಯಾಯಾಲಯವು ಈ ಪ್ರತಿಭಟನೆಗೆ ಮಾನ್ಯತೆ ನೀಡಿತ್ತು.