ಜಪಾನಿನ ಆಕಾಶದಲ್ಲಿ ಚೀನಾದ ಬೇಹುಗಾರಿಕೆಯ ಬಲೂನ್ ಪತ್ತೆ !

  • ೨೦೨೧ ರಲ್ಲಿ ಬಲೂನ್ ಘಟನೆ ಈಗ ಬಹಿರಂಗ

  • ಅಗತ್ಯವಿದ್ದಾಗ ಬಲೂನ್ ನಾಶ ಮಾಡುವಂತೆ ಜಪಾನ್ ಘೋಷಣೆ

ಟೋಕಿಯೋ (ಜಪಾನ) – ಭಾರತ ಮತ್ತು ಅಮೆರಿಕಾದ ನಂತರ ಈಗ ಚೀನಾ ಬೇಹುಗಾರಿಕೆಗಾಗಿ ಉಪಯೋಗಿಸುತ್ತಿರುವ ಬಲೂನ್ ಎಂದರೆ ‘ಸ್ಪಾಯ್ ಬಲೂನ್’ ಜಪಾನಿನ ಆಕಾಶದಲ್ಲಿ ಕಂಡಿದೆ. ಬಿಬಿಸಿಯ ಹೇಳಿಕೆಯ ಪ್ರಕಾರ, ಸಪ್ಟೆಂಬರ್ ೨೦೨೧ ರಲ್ಲಿ ಈ ಬಲೂನಗಳು ಜಪಾನಿನಲ್ಲಿ ಕಂಡಿದ್ದವು; ಆದರೆ ಅದರ ಛಾಯಾಚಿತ್ರಗಳು ಈಗ ಮೊದಲ ಬಾರಿಗೆ ಬೆಳಕಿಗೆ ಬಂದಿವೆ. ‘ಬಿಬಿಸಿ ಪನೋರಾಮ’ ಈ ಎಐ ತಂತ್ರಜ್ಞಾನದ ಮೂಲಕ ಕಾರ್ಯನಿರತ ಇರುವ ಒಂದು ಕಂಪನಿಯ ಸಹಾಯದಿಂದ ಜಪಾನಿನಲ್ಲಿ ಇಂತಹ ಅನೇಕ ಚೀನಾ ಬಲೂನಗಳ ಉಪಗ್ರಹ ಛಾಯಾಚಿತ್ರಗಳು ಪ್ರಕಟಗೊಳಿಸಿದೆ. ಈ ಹಿಂದೆ ಅಮೇರಿಕಾದಲ್ಲಿ ಕೂಡ ಈ ರೀತಿಯ ಚೀನಾ ಬಲೂನು ಕಂಡಿದ್ದವು

೧. ಎಐ ತಂತ್ರಜ್ಞಾನದ ಆಧಾರಿತ ಕಾರ್ಯನಿರತ ಇರುವ ಈ ಕಂಪನಿಯ ಮಾಲಿಕತ್ವ ಕೋರಿ ಜಸಕೋಲ್ಸಿಕಿ ಇವರು, ಈ ಬಲೂನು ಉತ್ತರ ಚೀನಾದಿಂದ ಬಿಡಲಾಗಿದೆ. ಈ ಬಲೂನ್ ಪೂರ್ವ ಏಷ್ಯಾ ದಾಟುತ್ತಿರುವದು ಕಾಣಿಸಿತು. ಇಂತಹ ಬಲೂನ್ ಬಹಳ ದೊಡ್ಡ ಆಕಾರದಾಗಿರುತ್ತದೆ ಮತ್ತು ಮಾಹಿತಿ ಸಂಗ್ರಹಿಸುವುದಕ್ಕಾಗಿ ಉಪಕರಣಗಳಿಂದ ಸಜ್ಜಾಗಿರುತ್ತದೆ ಎಂದು ಹೇಳಿದರು.

೨. ಜಪಾನಿನ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುವ ಯುಕೋ ಮುರಕಾಮಿ ಇವರು, ”ಜಪಾನ ಸರಕಾರ ಈ ರೀತಿಯ ಬಲೂನಿನ ಚಟುವಟಿಕೆಯ ಮೇಲೆ ನಿಗಾ ವಹಿಸಿದೆ. ಅವಶ್ಯಕತೆ ಅನಿಸಿದರೆ ದೇಶ ಮತ್ತು ನಾಗರೀಕರ ರಕ್ಷಣೆಗಾಗಿ ಅದನ್ನು ನಾಶ ಮಾಡಲಾಗುವುದು ಎಂದು ಹೇಳಿದರು.

೩. ಮಾಜಿ ‘ಸಿ ಐ ಎ’ ಈ ಅಮೇರಿಕಾ ಬೇಹುಗಾರಿಕೆ ಸಂಸ್ಥೆಯಲ್ಲಿನ ವಿಶ್ಲೇಷಕ ಜಾನ್ ಕಲ್ವರ್ ಇವರು, ”ಚೀನಾ ಕಳೆದ ೫ ವರ್ಷಗಳಿಂದ ಈ ರೀತಿಯ ಬಲೂನ್ ಉಪಯೋಗಿಸುತ್ತಿದೆ. ಈ ಬಲೂನ್ ಅನೇಕ ಬಾರಿ ಪೃಥ್ವಿಯ ಪ್ರದಕ್ಷಿಣೆ ಹಾಕುತ್ತಿರುತ್ತದೆ. ಇದು ಒಂದು ಸುಧೀರ್ಘ ಅಭಿಯಾನದ ಭಾಗವಾಗಿದೆ ಎಂದು ಬಿಬಿಸಿಗೆ ಹೇಳಿದರು.

೪. ‘ನ್ಯೂಯಾರ್ಕ್ ಟೈಮ್ಸ್’ನ ವಾರ್ತೆಯ ಪ್ರಕಾರ, ‘ಸಿಐಎ’ ಹೀಗೆ ಕೂಡ ಹೇಳಿದೆ, ಏನೆಂದರೆ ಚೀನಾ ಬೇಹುಗಾರಿಕೆಗಾಗಿ ಉಪಯೋಗಿಸುವ ಬಲೂನಿನ ಮೂಲಕ ಜಗತ್ತಿನಾದ್ಯಂತ ಇರುವ ದೇಶಗಳ ಸೈನ್ಯ ಕೇಂದ್ರಗಳ ಮೇಲೆ ಗಮನ ಇರಿಸುತ್ತಿದೆ. ಚೀನಾ ಕಳೆದ ಅನೇಕ ವರ್ಷಗಳಿಂದ ಇದನ್ನು ಮಾಡುತ್ತಿದ್ದು ಅದು ಇಲ್ಲಿಯವರೆಗೆ ೧೨ ದೇಶಗಳಲ್ಲಿ ಈ ರೀತಿಯ ಬಲೂನ್ ಕಳುಹಿಸಿ ರಹಸ್ಯ ಮಾಹಿತಿ ಸಂಗ್ರಹಿಸಿದೆ. ತೈವಾನಿನ ಪರಿಸರದಲ್ಲಿ ಕೂಡ ಈ ರೀತಿಯ ಬಲೂನ್ ಕಾಣಿಸಿದೆ.

ಸಂಪಾದಕರ ನಿಲುವು

ಧೂರ್ತ ಚೀನಾದ ಕಿತಾಪತಿಗೆ ಉತ್ತರವೆಂದು ಎಲ್ಲಾ ದೇಶಗಳು ಒಟ್ಟಾಗಿ ಸೇರಿ ಅದನ್ನು ಬಹಿಷ್ಕರಿಸಬೇಕು ಮತ್ತು ಅದರ ಜೊತೆಗಿನ ಎಲ್ಲಾ ರೀತಿಯ ಸಂಬಂಧ ಮುರಿಯಬೇಕು !

೨೦೨೨ ರಲ್ಲಿ ಚೀನಾ ಬಲೂನಿನಿಂದ ಭಾರತದಲ್ಲಿ ಕೂಡ ಬೆಹುಗಾರಿಕೆ ಮಾಡಿದೆ !

ಅಮೇರಿಕಾದ ರಕ್ಷಣಾ ತಜ್ಞರಾದ ಎಚ್.ಐ. ಸಟನ್ ಇವರು, ಜನವರಿ ೨೦೨೨ ರಲ್ಲಿ ಚೀನಾದ ಇಂತಹ ಬಲೂನಗಳಿಂದ ಭಾರತದ ಸೇನಾ ನೆಲೆಗಳ ಬೆಹುಗಾರಿಕೆ ಮಾಡಿತ್ತು. ಆ ಸಮಯದಲ್ಲಿ ಅಂದಮಾನ ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಮೇಲೆ ಚೀನಾದ ಬಲೂನ್ ಹಾರಾಡುತ್ತಿರುವುದು ಕಂಡಿತ್ತು. ಆ ಸಮಯದಲ್ಲಿ ಅದರ ಛಾಯಾಚಿತ್ರಗಳ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದ್ದವು. ಆ ಸಮಯದಲ್ಲಿ ಭಾರತದಿಂದ ಇದರ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತಪಡಿಸಲಾಗಿರಲಿಲ್ಲ.

ಸಂಪಾದಕರ ನಿಲುವು

ಧೂರ್ತ ಚೀನಾದ ಇಂತಹ ಚಟುವಟಿಕೆಯ ಮೇಲೆ ಅಂಕುಶ ಇಡಲು ಭಾರತವು ಇತರ ದೇಶಗಳನ್ನು ಸಂಘಟಿತಗೊಳಿಸಿ ಚೀನಾಗೆ ತಿಳಿಯುವ ಭಾಷೆಯಲ್ಲಿ ಉತ್ತರ ನೀಡಬೇಕು !