ಗೋವಾದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನ’ಕ್ಕೆ ೩೦೦ ಕ್ಕೂ ಹೆಚ್ಚು ಹಿಂದೂಗಳ ಸಹಭಾಗ
ಖಾಲಿಸ್ತಾನದಲ್ಲಿ ಭಯೋತ್ಪಾದನೆ, ಶ್ರೀರಾಮನವಮಿ-ಹನುಮಾನಜಯಂತಿಯಂತಹ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿದ ಗಲಭೆಗಳು, ಸಲಿಂಗ ವಿವಾಹಕ್ಕೆ ಬೆಂಬಲ, ಲಿವ್ ಇನ್ ರಿಲೇಶನ್‌ಶಿಪ್ನಲ್ಲಿ ವ್ಯಭಿಚಾರ ಒಪ್ಪಿಗೆ, ಹೆಚ್ಚುತ್ತಿರುವ ಅಶ್ಲೀಲತೆ, ಅನೈತಿಕತೆಯನ್ನು ಸಾಂವಿಧಾನಿಕಗೊಳಿಸುವ ಪ್ರಯತ್ನಗಳು ಇಂತಹ ಅನೇಕ ಸವಾಲುಗಳನ್ನು ಹಿಂದೂಗಳು ಪ್ರಸ್ತುತ ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಸೆಕ್ಯುಲರ್ ರಾಜ್ಯವ್ಯವಸ್ಥೆಯಲ್ಲಿ ಯಾವುದೇ ಉತ್ತರವಿರದೇ ಶಾಶ್ವತ ಹಿಂದೂ ರಾಷ್ಟ್ರವೇ ಅದಕ್ಕೆ ಉತ್ತರವಾಗಿದೆ. ಸನಾತನ ಧರ್ಮದರ್ಶನದಲ್ಲಿ ಹಿಂದೂ ವಿಶ್ವದ, ಅಂದರೆ ವೈಶ್ವಿಕ ಹಿಂದೂ ರಾಷ್ಟ್ರದ ವಿಚಾರವಿದೆ. ಆದ್ದರಿಂದ ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಅಂದರೆ ಒಂದು ರೀತಿಯ ಜನಮಂಥನವಾಗಿದೆ. ಈ ಜನಮಂಥನದಿಂದ ಒಟ್ಟಾಗಿರುವ ಈ ಹಿಂದು ಶಕ್ತಿಯು ಹಿಂದು ರಾಷ್ಟ್ರ ನಿರ್ಮಾಣದ ವಿಶ್ವಕಲ್ಯಾಣಕಾರಿ ಕಾರ್ಯಕ್ಕಾಗಿ ಜೋಡಿಸಲ್ಪಡುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರು ಪ್ರತಿಪಾದಿಸಿದರು. ಅಧಿವೇಶನದ ಸವಿಸ್ತಾರ ವಾರ್ತೆಗಾಗಿ ಭೇಟಿ ನೀಡಿ – shoಡಿಣuಡಿಟ.ಚಿಣ/xಆಇ೪೬