ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಹೇಳಿದ ಗುರುಮಹಾತ್ಮೆ !

ಸದ್ಗುರು ಡಾ. ಚಾರುದತ್ತ ಪಿಂಗಳೆ

‘೧೩.೧೨.೨೦೨೩ ರಂದು ಸದ್ಗುರು ಡಾ. ಚಾರುದತ್ತ ಪಿಂಗಳೆಕಾಕಾ ಇವರು ಪೂ. ಕುಸುಮ ಜಲತಾರೆಅಜ್ಜಿ (ಸನಾತನದ ೯೫ ನೇ ವ್ಯಷ್ಟಿ ಸಂತರು, ವಯಸ್ಸು ೮೪ ವರ್ಷ) ಇವರನ್ನು ಸಹಜವಾಗಿ ಭೇಟಿಯಾಗಲು ರಾಮನಾಥಿ ಆಶ್ರಮದಲ್ಲಿನ ಅವರ ಕೋಣೆಗೆ ಬಂದಿದ್ದರು. ಆ ಸಮಯದಲ್ಲಿ ಸಹಜವಾಗಿ ಮಾತನಾಡುವಾಗ ಸದ್ಗುರು ಡಾ. ಚಾರುದತ್ತ ಪಿಂಗಳೆಕಾಕಾ ಇವರು ಗುರುಗಳ ಬಗ್ಗೆ ಕೆಲವು ಅಮೂಲ್ಯ ಅಂಶಗಳನ್ನು ಹೇಳಿದರು. ಅವುಗಳನ್ನು ಮುಂದೆ ಕೊಡುತ್ತಿದ್ದೇನೆ.

ಶ್ರೀ. ಯೋಗೇಶ ಜಲತಾರೆ

೧. ಗುರುದೇವರು ವಾತ್ಸಲ್ಯಮೂರ್ತಿಗಳು !

‘ಗುರುಗಳು ವಾತ್ಸಲ್ಯಮೂರ್ತಿಯಾಗಿರುವುದರಿಂದ ನಿಜವಾದ ಗುರುಗಳು ಶಿಷ್ಯನಿಗೆ ಎಂದಿಗೂ ಬೈಯ್ಯುವುದಿಲ್ಲ. ಒಂದು ವೇಳೆ ನಿಜವಾದ ಗುರುಗಳು ಶಿಷ್ಯನನ್ನು ಬೈಯ್ಯುತ್ತಿದ್ದರೂ, ಅದರ ಕಾರ್ಯಕಾರಣಭಾವವು ಅಗ್ರಾಹ್ಯವಾಗಿರುವುದರಿಂದ ಅದನ್ನು ತಿಳಿದುಕೊಳ್ಳಲು ನಮ್ಮಿಂದ ಎಂದಿಗೂ ಸಾಧ್ಯವಿಲ್ಲ. ಗುರುಗಳು ತಮ್ಮ ಪ್ರತಿಯೊಂದು ಕೃತಿಯಿಂದ ಶಿಷ್ಯನ ಕಲ್ಯಾಣವನ್ನೇ ಮಾಡುತ್ತಿರುತ್ತಾರೆ. ಆದ್ದರಿಂದ ಯಾವುದಾದರೊಬ್ಬ ಸಾಧಕನ ಸ್ವಭಾವದೋಷ ಮತ್ತು ಅಹಂಕಾರವನ್ನು ಅವನ ಗಮನಕ್ಕೆ ತಂದುಕೊಟ್ಟಿದ್ದಲ್ಲಿ, ಅದು ಆ ಸಾಧಕನ ಮೇಲಾಗಿರುವ ಗುರುಗಳ ಅಪಾರ ಕೃಪೆಯೇ ಆಗಿರುತ್ತದೆ. ‘ಆ ಒಂದು ಸತ್ಸಂಗದಿಂದ ಸಾಧಕನ ಎಷ್ಟು ಜನ್ಮಗಳ ಪ್ರಾರಬ್ಧವು ತೀರುತ್ತದೆ, ಎಂಬುದನ್ನು ನಾವು ಊಹಿಸಲೂ ಸಾಧ್ಯವಿಲ್ಲ.

೨. ಗುರುಗಳು ಶಿಷ್ಯನನ್ನು ಬಂಧನದಿಂದ ಹೇಗೆ ಮುಕ್ತಗೊಳಿಸುತ್ತಾರೆ ?

ಗುರುಗಳು ಯಾವುದಾದರೊಬ್ಬ ಸಾಧಕನನ್ನು ಅಥವಾ ಶಿಷ್ಯನನ್ನು ಮುಕ್ತಗೊಳಿಸಲು ಮೊದಲು ಅವನನ್ನು ಎಲ್ಲ ರೀತಿಯ ಸಮಸ್ಯೆಗಳಿಂದ ಮುಕ್ತಗೊಳಿಸುತ್ತಾರೆ. ಅವರು ಅವನಿಗೆ ಸಂಬಂಧಿಕರ ಬಂಧನದಿಂದ ಬಿಡಿಸುತ್ತಾರೆ ಮತ್ತು ಅನಂತರ ಶಿಷ್ಯನನ್ನು ಉದ್ಧರಿಸುತ್ತಾರೆ. ‘ಗುರುಗಳು ಶಿಷ್ಯನನ್ನು ಸಂಬಂಧಿಕರಿಂದ ಮುಕ್ತಗೊಳಿಸುತ್ತಾರೆ, ಇದರ ಅರ್ಥ ‘ಅವರು ಸಂಬಂಧಿಕರಿಂದ ದೂರವಿರಲು ಹೇಳುವುದಿಲ್ಲ, ಮೊದಲು ಸಂಬಂಧಿಕರನ್ನು ಉದ್ಧರಿಸಿ ಬಂಧುಗಳ ಬಗೆಗಿನ ಶಿಷ್ಯನ ಮನಸ್ಸಿನಲ್ಲಿರುವ ಚಿಂತೆಯನ್ನು ದೂರಗೊಳಿಸುತ್ತಾರೆ. ಆದ್ದರಿಂದ ಶಿಷ್ಯನಿಂದ ಉತ್ತಮ ಸಾಧನೆಯಾಗಿ ಮುಂದೆ ಅವನಿಗೂ ಎಲ್ಲ ವಿಷಯಗಳಿಂದ ಮುಕ್ತನಾಗಲು ಸಾಧ್ಯವಾಗುತ್ತದೆ, ಉದಾ. ಯಾವುದಾದರೊಬ್ಬ ಶಿಷ್ಯನಿಗೆ ತಾಯಿ-ತಂದೆಯರ ಕಾಳಜಿ ಇದ್ದರೆ ಗುರುಗಳು ಅವನ ತಾಯಿ-ತಂದೆಯರನ್ನು ಮುಕ್ತಗೊಳಿಸುತ್ತಾರೆ. ಯಾವುದಾದರೊಬ್ಬನಿಗೆ ಅವನ ಕುಟುಂಬದಲ್ಲಿನ ವ್ಯಕ್ತಿಯ ಬಗ್ಗೆ ಕಾಳಜಿ ಅನಿಸುತ್ತಿದ್ದರೆ ಗುರುಗಳು ಆ ವ್ಯಕ್ತಿಗೂ ಸಾಧನೆಯ ಯೋಗ್ಯ ಮಾರ್ಗವನ್ನು ತೋರಿಸುತ್ತಾರೆ. ಆದ್ದರಿಂದ ಶಿಷ್ಯನ ಮನಸ್ಸಿನಲ್ಲಿನ ಕಾಳಜಿಯ ವಿಚಾರಗಳು ತಾನಾಗಿಯೇ ಕಡಿಮೆ ಯಾಗುತ್ತವೆ ಮತ್ತು ಅವನು ಸಾಧನೆಯನ್ನು ಚೆನ್ನಾಗಿ ಮಾಡಬಹುದು. ‘ಗುರುಗಳು ಸಾಧಕನನ್ನು ಅಥವಾ ಶಿಷ್ಯನನ್ನು ಬಂಧನದಿಂದ ಮುಕ್ತಗೊಳಿಸುತ್ತಾರೆ, ಅಂದರೆ ಅವರು ಅವನನ್ನು ಎಲ್ಲ ಚಿಂತೆಗಳಿಂದ ಮುಕ್ತಗೊಳಿಸುತ್ತಾರೆ.

೩. ಗುರುಗಳು ಕೊರೊನಾ ಮಹಾಮಾರಿಯ ಕಾಲದಲ್ಲಿ ಕೆಲವು ಸಾಧಕರ ಪ್ರಾಣಾರ್ಪಣೆ ಮಾಡುವ ಹಂತವನ್ನು ಪೂರ್ಣಗೊಳಿಸಿದ್ದಾರೆ !

ಕೊರೊನಾ ಮಹಾಮಾರಿಯ ಕಾಲದಲ್ಲಿ ಅನೇಕ ಸಾಧಕರು ತಮ್ಮ ಪ್ರಾಣದ ಪರಿವೆ ಮಾಡದೇ ಅನೇಕ ವೃದ್ಧ ಸಾಧಕರ ಸೇವೆಯನ್ನು ಮಾಡಿದರು. ಕೆಲವೊಮ್ಮೆ ಅವರಿಗೆ ವೃದ್ಧ ಸಾಧಕರೊಂದಿಗೆ ಆಸ್ಪತ್ರೆಯಲ್ಲಿ ಅವರ ‘ವಾರ್ಡನಲ್ಲಿಯೇ ಉಳಿಯಬೇಕಾಯಿತು; ಆದರೂ ಈ ಸಾಧಕರಿಗೆ ಕೊರೊನಾದ ಸೋಂಕು ತಗಲಿಲ್ಲ. ‘ಆ ಸಮಯದಲ್ಲಿ ಅವರ ರಕ್ಷಣೆಯನ್ನು ಯಾರು ಮಾಡಿದರು ? ಗುರುಗಳೇ ಅಲ್ಲವೇ ! ಈ ಪ್ರಸಂಗದಿಂದ ಗುರುಗಳು ಒಂದು ರೀತಿಯಲ್ಲಿ ಸಾಧಕರ ಪ್ರಾಣಾರ್ಪಣೆ ಮಾಡುವ ಸಿದ್ಧತೆಯನ್ನೂ ಮಾಡಿಕೊಂಡರು, ಎಂಬುದು ಗಮನಕ್ಕೆ ಬರುತ್ತದೆ; ಏಕೆಂದರೆ ನಿಜವಾದ ಶಿಷ್ಯನು ಗುರುಗಳಿಗಾಗಿ ತನು-ಮನ-ಧನ ಅಷ್ಟೇ ಅಲ್ಲ, ಸಮಯ ಬಂದಾಗ ಪ್ರಾಣವನ್ನೂ ಅರ್ಪಿಸುತ್ತಾನೆ. ಅದೇ ರೀತಿ ಆ ಸಾಧಕರು ತಮ್ಮ ಪ್ರಾಣದ ಪರಿವೆಯನ್ನು ಮಾಡದೇ ಸಾಧಕರ ಸೇವೆಯನ್ನು ಮಾಡಿದರು. ಆದ್ದರಿಂದ ಗುರುಗಳಿಗಾಗಿ ಅವರ ಪ್ರಾಣಾರ್ಪಣೆ ಮಾಡುವ ಹಂತವು ಪೂರ್ಣವಾಯಿತು.

– ಶ್ರೀ. ಯೋಗೇಶ ಜಲತಾರೆ, ‘ಸನಾತನ ಪ್ರಭಾತದ ಸಮೂಹ ಸಂಪಾದಕರು, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೧೨.೨೦೨೩)