೧೨ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಅಂಗೀಕರಿಸಲಾದ ಠರಾವ್‌ಗಳು

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಠರಾವುಗಳನ್ನು ’ಹರ ಹರ ಮಹಾದೇವ’ ನಂತಹ ಜಯಘೋಷದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ಠರಾವನ್ನು ಶೀಘ್ರದಲ್ಲೇ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಕಳುಹಿಸಲಾಗುವುದು.

೧. ಭಾರತದ ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ನೀಡಲು ಸಂವಿಧಾನದಿಂದ ’ಜಾತ್ಯತೀತ’ ಮತ್ತು ’ಸಮಾಜವಾದ’ ಪದಗಳನ್ನು ತೆಗೆದು, ಅಲ್ಲಿ ’ಆಧ್ಯಾತ್ಮಿಕ’ ಪದವನ್ನು ಸೇರಿಸಿ ಭಾರತವನ್ನು ’ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು !

೨. ’ನೇಪಾಳವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಬೇಕು’ ಎಂಬ ಬೇಡಿಕೆಗೆ ಈ ಅಧಿವೇಶನದಲ್ಲಿ ಸಂಪೂರ್ಣ ಬೆಂಬಲ ನೀಡಲಾಗಿದೆ.

೩. ಹಿಂದೂಗಳ ಮೂಲಭೂತ ಹಕ್ಕುಗಳನ್ನು ದಮನಿಸುವ ’ಪ್ಲೇಸೆಸ್ ಆಫ್ ವರ್ಷಿಪ್ ಆಕ್ಟ್ ೧೯೯೧’ ಕಾನೂನನ್ನು ತಕ್ಷಣ ರದ್ದುಗೊಳಿಸಿ, ಕಾಶಿ, ಮಥುರಾ, ತಾಜಮಹಲ್, ಭೋಜಶಾಲಾ ಮುಂತಾದ ಮೊಗಲ್ ಆಕ್ರಮಣಕಾರರು ಕಬಳಿಸಿರುವ ದೇವಸ್ಥಾನಗಳು ಮತ್ತು ಭೂಮಿಯನ್ನು ಪುನಃ ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು.

೪. ಸರಕಾರದ ನಿಯಂತ್ರಣದಲ್ಲಿರುವ ದೇಶಾದ್ಯಾಂತದ ಎಲ್ಲಾ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಭಕ್ತರ ಕೈಗೆ ನೀಡಬೇಕು.

೫. ದೇವಸ್ಥಾನಗಳಿರುವ ಪ್ರದೇಶವನ್ನು ’ಮದ್ಯ ಮಾಂಸ’ ಮಾರಾಟದಿಂದ ಮುಕ್ತಗೊಳಿಸಬೇಕು.

೬. ಕೇಂದ್ರ ಸರಕಾರವು ದೇಶಾದ್ಯಾಂತ ’ಗೋಹತ್ಯೆ ನಿಷೇಧ’ ಮತ್ತು ’ಮತಾಂತರ ನಿಷೇಧ’ ಕಾನೂನುಗಳನ್ನು ಜಾರಿಗೊಳಿಸಬೇಕು. ಮತಾಂತರವನ್ನು ತಡೆಗಟ್ಟಲು ಸಂವಿಧಾನದ ಪರಿಚ್ಛೇದ ೨೫ ರಲ್ಲಿ ಸುಧಾರಣೆ ಮಾಡಿ ಅದರಲ್ಲಿ ಧರ್ಮದ ಪ್ರಚಾರ (Pಡಿoಠಿಚಿgಚಿಣe) ಶಬ್ದವನ್ನು ತೆಗೆಯಬೇಕು

೭. ಧಾರ್ಮಿಕತೆಯ ಆಧಾರದ ಮೇಲೆ ’ಹಲಾಲ್ ಪ್ರಮಾಣಪತ್ರ ತಕ್ಷಣ ನಿಷೇಧಿಸಬೇಕು. ಭಾರತದಲ್ಲಿ ಎಫ್.ಎಸ್.ಎಸ್.ಎ.ಐ. (ಈSSಂI) ಮತ್ತು ಎಫ್.ಡಿ.ಎ. (ಈಆಂ) ಯಂತಹ ಸರಕಾರಿ ಸಂಸ್ಥೆಗಳಿರುವಾಗಲೂ ಧಾರ್ಮಿಕ ಆಧಾರದಲ್ಲಿ ಸಮಾನಾಂತರ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವ ‘ಹಲಾಲ ಸರ್ಟಿಫಿಕೇಶನ್ ನ ಮೇಲೆ ತಕ್ಷಣ ನಿರ್ಬಂಧ ಹೇರಬೇಕು.

೮. ವಕ್ಫ್ ಮಂಡಳಿಯ ಕಾನೂನನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಈ ಮಂಡಳಿಯಿಂದ ಐಚಿಟಿಜ ಎehಚಿಜ ಮೂಲಕ ಅತಿಕ್ರಮಿಸಿರುವ ಎಲ್ಲಾ ಭೂಮಿಯನ್ನು ವಕ್ಫ್ ಮುಕ್ತಗೊಳಿಸಬೇಕು.

೯. ಭಾರತದ ವಿರುದ್ಧ ಯುದ್ಧಮಾಡಲು ‘ಗಝವಾ-ಎ-ಹಿಂದ್ ನ ಫತ್ವಾ ಜ್ಯಾರಿಗೊಳಿಸಿದ ‘ದಾರುಲ್ ಉಲೂಮ ದೇವಬಂದ’ ಈ ಸಂಘಟನೆಯನ್ನು ತಕ್ಷಣ ನಿರ್ಬಂಧಿಸಬೇಕು

೧೦. ಗೋವಾದಲ್ಲಿ ’ಇನ್‌ಕ್ವಿಜಿಷನ್ ಅಡಿಯಲ್ಲಿ ೨೫೦ ವರ್ಷಗಳಿಂದ ಗೋಮಂತಕರ ಮೇಲೆ ನಡೆದ ಅಮಾನವೀಯ ಮತ್ತು ಕ್ರೂರ ಅತ್ಯಾಚಾರಗಳ ಕುರಿತು ಕ್ರೈಸ್ತ ಧರ್ಮಗುರು ಪೋಪ್ ಅವರು ಗೋವಾದ ಜನತೆಯಲ್ಲಿ ಕ್ಷಮೆ ಕೇಳಬೇಕು.

೧೧. ಕಾಶ್ಮೀರ ಕಣಿವೆಯಲ್ಲಿ ’ಪನುನ್ ಕಾಶ್ಮೀರ’ ಹೆಸರಿನ ಕೇಂದ್ರಾಡಳಿತ ಪ್ರದೇಶವನ್ನು ಸೃಷ್ಟಿಸಿ, ಸ್ಥಳಾಂತರಗೊಂಡಿರುವ ಕಾಶ್ಮೀರಿ ಹಿಂದೂಗಳಿಗೆ ಅಲ್ಲಿ ಪುನರ್ವಸತಿ ಕಲ್ಪಿಸಬೇಕು.

೧೨. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹಿಂದೂಗಳ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಮತ್ತು ಭಾರತದ ಸರಕಾರವು ವಿಚಾರಣೆ ನಡೆಸಿ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕು.

೧೩. ಭಾರತದಲ್ಲಿ ಅಕ್ರಮವಾಗಿ ಪ್ರವೇಶಿಸಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ವಾಪಾಸು ಕಳಿಸಲು ಸರಕಾರವು ಕಠಿಣ ಕಾನೂನನ್ನು ಜಾರಿಗೊಳಿಸಬೇಕು. ಪೌರತ್ವ ತಿದ್ದುಪಡಿ ಕಾನೂನನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು.

೧೪. ಕಳೆದ ಕೆಲವು ವರ್ಷಗಳಿಂದ ಅಹಿಂದೂಗಳ ಜನಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳವನ್ನು ಗಮನದಲ್ಲಿರಿಸಿ ದೇಶದಲ್ಲಿ ಎಲ್ಲ ಧರ್ಮೀಯರ ಸಂಖ್ಯೆಯನ್ನು ಸಂತುಲನ ಗೊಳಿಸಲು ದೇಶದಲ್ಲಿ ತಕ್ಷಣ ’ಜನಸಂಖ್ಯೆ ನಿಯಂತ್ರಣ ಕಾನೂನು’ ಜಾರಿಗೊಳಿಸಬೇಕು.

೧೫. ಮಾನವೀಯತೆಯ ದೃಷ್ಟಿಯಿಂದ ಮತ್ತು ಸಂವಿಧಾನಾತ್ಮಕ ಅಧಿಕಾರಗಳ ವಿಚಾರವನ್ನು ಮಾಡಿ ಗೋವಾದ ಮುಖ್ಯಮಂತ್ರಿ ಶ್ರೀ ಪ್ರಮೋದ ಸಾವಂತರು, ಕರ್ನಾಟಕದ ಶ್ರೀರಾಮ ಸೇನೆಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಅವರ ಮೇಲೆ ಗೋವಾ ರಾಜ್ಯವು ಹೇರಿರುವ ಪ್ರವೇಶ ನಿರ್ಬಂಧವನ್ನು ತೆಗೆದುಹಾಕಬೇಕು.

೧೬. ’ಒಟಿಟಿ’ ಮತ್ತು ’ವೆಬ್ ಸೀರೀಸ್ ಕಾನೂನಿನ ವ್ಯಾಪ್ತಿಗೆ ಸೇರಿಸಿ, ಚಲನಚಿತ್ರ ಸಂಸರ್ ಮಂಡಳಿಯಲ್ಲಿ ಹಿಂದೂ ಮತ್ತು ಆಧ್ಯಾತ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಬೇಕು.

೧೭. ಆನ್‌ಲೈನ್ ಮಾಧ್ಯಮಗಳಲ್ಲಿ ’ರಮಿ ಸರ್ಕಲ್, ’ಜುಗಾರ ಜಾಹೀರಾತು’ ಗಳು ಯುವ ಜನತೆಯನ್ನು ತಪ್ಪು ಮಾರ್ಗದಲ್ಲಿ ಸಾಗುವ ತಕ್ಷಣ ನಿಷೇಧಿಸಬೇಕು.