ಶ್ರೀರಾಮಮಂದಿರವನ್ನು ಕಟ್ಟಿದೆವು, ಈಗ ರಾಮರಾಜ್ಯಕ್ಕಾಗಿ ಪ್ರಯತ್ನಿಸೋಣ ! – ಸದ್ಗುರು ನಿಲೇಶ್ ಸಿಂಗಬಾಳ, ಧರ್ಮಪ್ರಚಾರಕ, ಹಿಂದೂ ಜನಜಾಗೃತಿ ಸಮಿತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಏಳನೇ ದಿನ (30 ಜೂನ್)

ಉದ್ಭೋಧನ ಸತ್ರ : ಹಿಂದೂತ್ವದ ರಕ್ಷಣೆ

ವಿದ್ಯಾಧಿರಾಜ ಸಭಾಂಗಣ – ಹಿಂದೂ ರಾಷ್ಟ್ರವು ಒಂದು ಶಿವಧನುಷ್ಯದಂತಿ. ರಾಮಾಯಣದಲ್ಲಿ ಶಿವಧನುಷ್ಯವನ್ನು ಎತ್ತಲು ಮಹಾಬಲಿ ಯೋಧರಿಗೆ ಸಾಧ್ಯವಾಗಲಿಲ್ಲ, ಅದನ್ನು ಶ್ರೀರಾಮನು ಆಟದಂತೆ ಎತ್ತಿ ಮುರಿದನು. ಮಹಾಭಾರತದ ಯುದ್ಧ 18 ವರ್ಷಗಳ ಕಾಲ ನಡೆಯಬೇಕಿತ್ತು, ಆ ಯುದ್ಧವನ್ನು ಶ್ರೀಕೃಷ್ಣನು ಕೇವಲ 18 ದಿನಗಳಲ್ಲಿ ಮುಗಿಸಿದನು. ಅದೇ ರೀತಿ ಯೋಗ್ಯ ಕ್ಷಣ ಬಂದಾಗ ಈ ಕಲಿಯುಗದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ದೇವರಿಗೆ ಸಮಯ ತಗಲುವುದಿಲ್ಲ. ಈ ಶ್ರದ್ಧೆಯನ್ನಿಟ್ಟು ಹಿಂದೂ ರಾಷ್ಟ್ರಕ್ಕಾಗಿ ನಾವು ನಿರಂತರ ಪ್ರಯತ್ನಿಸಬೇಕಾಗಬಹುದು. ಅಯೋಧ್ಯೆಯಲ್ಲಿ ಇತ್ತೀಚೆಗೆ ಶ್ರೀ ರಾಮಲಲ್ಲಾ ವಿರಾಜಮಾನನಾದ ನಂತರ ದೇಶಕ್ಕೆ ಆಧ್ಯಾತ್ಮಿಕ ಅಧಿಷ್ಠಾನ ಸಿಕ್ಕಿತು. ಈಗ ದೇಶಕ್ಕೆ ರಾಮರಾಜ್ಯದ ಅಗತ್ಯವಿದೆ. ಅದಕ್ಕಾಗಿ ಮೊದಲು ಜನರು ತಮ್ಮ ವೈಯಕ್ತಿಕ ಜೀವನದಲ್ಲಿ ರಾಮರಾಜ್ಯವನ್ನು ತರಲು ಸಾಧನೆ ಮಾಡಬೇಕು, ನೈತಿಕ ಮತ್ತು ಸದಾಚಾರಿ ಜೀವನವನ್ನು ಅನುಸರಿಸುವ ಸಂಕಲ್ಪ ಮಾಡಬೇಕು. ಸಾತ್ವಿಕ ಸಮಾಜದ ಮುಂದಾಳುತ್ವದಿಂದಲೇ ಆಧ್ಯಾತ್ಮದ ಮೇಲೆ ಆಧಾರಿತ ರಾಷ್ಟ್ರರಚನೆ, ಅಂದರೆ ರಾಮರಾಜ್ಯ ಸಾಧ್ಯವಿದೆ. ಆದ್ದರಿಂದ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯವನ್ನು ತರಲು ಸಂಕಲ್ಪ ಮಾಡೋಣ, ಎಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನಿಲೇಶ್ ಸಿಂಗಬಾಳ ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ : ದಿಶಾದರ್ಶನ ಮತ್ತು ಸಂವಾದ’ ವಿಷಯದ ಬಗ್ಗೆ ಮಾತನಾಡುವಾಗ ಹೇಳಿದರು.

ಸದ್ಗುರು ನಿಲೇಶ್ ಸಿಂಗಬಾಳ ಅವರು ಮಾತುಮುಂದುವರೆಸಿ,

1. ಹಿಂದೂ ಸಂಘಟನೆಗಳ ಏಕೀಕರಣದಿಂದ ಹಿಂದೂ ‘ಇಕೋಸಿಸ್ಟಮ್’ (ಹಿಂದೂ ವ್ಯವಸ್ಥೆ), ಹಿಂದೂತ್ವನಿಷ್ಠ ಸರ್ಕಾರದೊಂದಿಗೆ ಚರ್ಚೆ ನಡೆಸುವ ಸಂವಾದ ಗುಂಪು ಮತ್ತು ಹಿಂದೂಗಳ ಪ್ರಶ್ನೆಗಳನ್ನು ಗಮನಿಸಲು ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ ಎಂಬ ‘ಒತ್ತಡ ಗುಂಪು’ ಸೃಷ್ಟಿಸುವ ಸಂಕಲ್ಪವನ್ನು ಕಳೆದ ವರ್ಷದಿಂದಲೇ ಕಾರ್ಯಗತಗೊಳಿಸುವ ಪ್ರಯತ್ನದಲ್ಲಿ ಇದ್ದೇವೆ.

2. ಮಂದಿರ ಮಹಾಸಂಘದ ಮೂಲಕ ನಡೆದ ಪ್ರಯತ್ನಗಳಿಂದ ಪ್ರೇರಣೆ ಪಡೆದು ತಮಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಮಂದಿರದೊಂದಿಗೆ ಸಂಪರ್ಕವನ್ನು ಹೆಚ್ಚಿಸಲು, ಮಂದಿರಗಳಲ್ಲಿ ವಿಭಿನ್ನ ಮಾಧ್ಯಮಗಳಿಂದ ಧರ್ಮಶಿಕ್ಷಣವನ್ನು ನೀಡಲು ಪ್ರಯತ್ನಿಸುವುದು ಮತ್ತು ಮಂದಿರದಲ್ಲಿ ವಸ್ತ್ರಸಂಹಿತೆಯನ್ನು ಅನುಸರಿಸಲು ಪ್ರಯತ್ನಿಸುವುದು, ಇದು ಕಾಲಕ್ಕೆ ಅಗತ್ಯವಾಗಿದೆ.

3. ಹಿಂದೂತ್ವನಿಷ್ಠರನ್ನು ಗುರಿಯಾಗಿಸಿ ಅವರನ್ನು ಕಾನೂನು ಕೊಂಡಿಯಲ್ಲಿ ಸಿಲುಕಿಸುವ ಯೋಜಿತ ಸಂಚುಗಳು ನಡೆಯುತ್ತಿವೆ. ಕಾನೂನು ಕೊಂಡಿಯಲ್ಲಿ ಸಿಲುಕಿಸಿ ಹಿಂದೂತ್ವವಾದಿಗಳ ಚಳವಳಿಯನ್ನು ದುರ್ಬಲಗೊಳಿಸಲು ನೋಡುತ್ತಿರುವವರಿಗೆ ಪ್ರತಿಕ್ರಿಯಿಸಲು ಭವಿಷ್ಯದಲ್ಲಿ ವಕೀಲರ ಪಂಕ್ತಿ ಕೂಡ ನಮಗೆ ನಿರ್ಮಿಸಬೇಕಾಗುತ್ತದೆ ಎಂದು ಹೇಳಿದರು.