ಉದ್ಯಮಿಗಳು ಸಾಧನೆ ಮಾಡಿದರೆ ಅವರ ವ್ಯಾವಹಾರಿಕ ಹಾಗೂ ಆಧ್ಯಾತ್ಮಿಕ ಉನ್ನತಿಯಾಗುವುದು ! – ರವೀಂದ್ರ ಪ್ರಭೂದೇಸಾಯಿ, ಸಂಚಾಲಕರು, ಪೀತಾಂಬರಿ ಉದ್ಯೋಗ ಸಮೂಹ

ರವೀಂದ್ರ ಪ್ರಭೂದೇಸಾಯಿ, ಸಂಚಾಲಕರು, ಪೀತಾಂಬರಿ ಉದ್ಯೋಗ ಸಮೂಹ

ರಾಮನಾಥಿ (ಫೋನ್ದ), ಜೂನ್ 21 (ವಾರ್ತೆ) – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ, ಸಂತ ಭಕ್ತರಾಜ ಮಹಾರಾಜರು ಹಾಗೂ ಪರಾತ್ಪರ ಗುರು ಪಾಂಡೆ ಮಹಾರಾಜರ ಮಾರ್ಗದರ್ಶನದಿಂದಾಗಿಯೇ ಉದ್ಯೋಗ ಮಾಡುವಾಗ ಧರ್ಮಸೇವೆಯನ್ನು ಮಾಡಬಲ್ಲೆನು. ಪರಾತ್ಪರ ಗುರು ಪಾಂಡೆ ಮಹಾರಾಜರು ನನಗೆ `ಉದ್ + ಯೋಜಕ = ಉದ್ಯೋಜಕ’ ಎಂಬ ಉದ್ಯೋಗದ ವ್ಯಾಖ್ಯೆಯನ್ನು ಹೇಳಿದ್ದರು. ಅವರು `ಧರ್ಮವು ಐಹಿಕ ಮತ್ತು ಪಾರಲೌಕಿಕ ಉನ್ನತಿ ಮಾಡುತ್ತದೆ. ಇಂದು ಕಲಿಯುಗದಲ್ಲಿ ಅರ್ಥಶಕ್ತಿಯ ಅಪಾರ ಪ್ರಭಾವವಿದೆ. ಇದರಿಂದಾಗಿ ಅರ್ಥಶಕ್ತಿಯನ್ನು ದುರ್ಲಕ್ಷಿಸಿದರೆ ನಮಗೆ ಹಾನಿಯಾಗಬಹುದು. ನಿಮ್ಮ ಸಂಸ್ಥೆಯಲ್ಲಿನ ಕೆಲಸಗಾರರ ಐಹಿಕ ಮತ್ತು ಆಧ್ಯಾತ್ಮಿಕ ಉನ್ನತಿ ಮಾಡಿಸಿಕೊಳ್ಳುವುದು, ನಿಮ್ಮ ಜವಾಬ್ದಾರಿಯಾಗಿದೆ, ಎಂದು ಹೇಳಿದ್ದರು. ನಮ್ಮ `ಪೀತಾಂಬರಿ’ ಪೌಡರ್ ಉತ್ಪಾದನೆಯು ದೇವತೆಗಳ ಮೂರ್ತಿಯನ್ನು ಸ್ವಚ್ಛಗೊಳಿಸಲು ಬಳಕೆಯಾಗುತ್ತದೆ. ಆನಂತರ ನಾವು ಪೂಜೆಗೆ ಸಂಬಂಧಿಸಿದ ಅನೇಕ ಉತ್ಪಾದನೆಗಳನ್ನು ನಿರ್ಮಿಸಿದೆವು.

`ಈಶ್ವರನ ಮಾಹಿತಿಯನ್ನು ಸಮಾಜದ ವರೆಗೆ ತಲುಪಿಸುವವನು ದೇವರಿಗೆ ಅತ್ಯಂತ ಪ್ರಿಯನಾಗಿರುತ್ತಾನೆ. ಶನಿಯ ಸಾಡೇಸಾತಿಯನ್ನು ದೂರಗೊಳಿಸಲು ಶನಿಯ ಉಪಾಸನೆಯನ್ನು ಮಾಡಲಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟು ನಾವು `ಶನಿ ಉಪಾಸನೆ’ ಎಂಬ ಊದುಬತ್ತಿಯನ್ನು ನಿರ್ಮಿಸಿದೆವು. ಅದರ ಪೊಟ್ಟಣದ ಮೇಲೆ `ಶನಿಯ ಉಪಸನೆಯನ್ನು ಹೇಗೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ನೀಡಿದೆವು. ತಾವೂ ತಮ್ಮ ಉತ್ಪಾದನೆಗಳ ಪೊಟ್ಟಣದ ಮೇಲೆ ಆನಂದಪ್ರಾಪ್ತಿಗಾಗಿ ಕುಲದೇವತೆ ಹಾಗೂ ಶ್ರೀ ಗುರುದೇವ ದತ್ತ ಈ ನಾಮಜಪಗಳ ಮಹತ್ತ್ವವನ್ನು ಹೇಳುವ ಮಾಹಿತಿಯನ್ನು ನೀಡಬಹುದು. ಇದರಿಂದ ಸಾಧನೆಯು ಸಾವಿರಾರು ಜನರನ್ನು ತಲುಪಬಹುದು. ಸದ್ಯ ಪ್ರತಿಯೊಬ್ಬರೂ ವ್ಯಸ್ತರಾಗಿರುತ್ತಾರೆ. ಅವರಿಗೆ `ಸಾಧನೆಯು ಮುದಿತನದಲ್ಲಿ ಮಾಡುವ ಕೆಲಸವಾಗಿದೆ, ಎಂದು ಅನಿಸುತ್ತದೆ. ಉದ್ಯೋಗ ಮಾಡುವವರು, ಉದ್ಯೋಗ ಮಾಡುವಾಗ ಅನೇಕ ಅಡಚಣೆಗಳು ಬರುತ್ತವೆ ಈ ಎಲ್ಲ ಅಡಚಣೆಗಳು ಸಾಧನೆಯನ್ನು ಮಾಡುವುದರಿಂದಾಗುವ ದೇವರ ಕೃಪೆಯಿಂದ ದೂರವಾಗಲು ಸಹಾಯವಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನನ್ನ ಸಂಸ್ಥೆಯಲ್ಲಿನ ಎಲ್ಲ 15 ವಿಭಾಗಗಳಲ್ಲಿನ ಕೆಲಸಗಾರರಿಂದ ಪ್ರತಿದಿನ ವೈಶ್ವಿಕ ಪ್ರಾರ್ಥನೆ ಹಾಗೂ ಮಾರುತಿ ಸ್ತೋತ್ರವನ್ನು ಹೇಳಿಸಲಾಗುತ್ತದೆ. ಇದರೊಂದಿಗೆ 1500 ಕೆಲಸಗಾರರಿಗೆ ಸತ್ಸಂಗ ಲಭಿಸುವಂತೆ ಆಯೋಜನೆ ಮಾಡಲಾಗಿದೆ. ನಮ್ಮ ಸಂಸ್ಥೆಯಲ್ಲಿನ ಕೆಲಸಗಾರರು ಸಾತ್ತ್ವಿಕರಾಗಿದ್ದರೆ ಅಲ್ಲಿ ಭ್ರಷ್ಟಾಚಾರವಾಗುವುದಿಲ್ಲ. ಅವರಿಂದ ಸಾಧನೆಯನ್ನು ಮಾಡಿಸಿಕೊಳ್ಳುವುದರಿಂದ ನಮ್ಮ ಲಾಭವೂ ಹೆಚ್ಚುತ್ತದೆ, ಹಾಗೆಯೇ ಹಿಂದೂ ಧರ್ಮದ ಸೇವೆಯಾಗುತ್ತದೆ.