ರಾಮನಾಥಿ, ಜೂನ್ ೨೦ (ವಾರ್ತೆ ) – ಭಾರತ ಮತ್ತು ನೇಪಾಳದ ಜನರಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಂಬಂಧವಿದೆ. ಭಾರತದಲ್ಲಿನ ಕೆಲವು ಪ್ರಸಾರ ಮಾಧ್ಯಮಗಳು, ಬುದ್ಧಿಜೀವಿಗಳು, ರಾಜಕೀಯ ಪಕ್ಷಗಳು, ಸಮಯ ಸಮಯದಲ್ಲಿ ನೇಪಾಳದ ಕುರಿತು ವಿವಾದಗ್ರಸ್ತ ಹೇಳಿಕೆ ನೀಡಿ ಭಾರತ ಮತ್ತು ನೇಪಾಳದಲ್ಲಿ ವಿವಾದವನ್ನು ಹುಟ್ಟುಹಾಕುತ್ತಾರೆ. ಇದರಿಂದ ನೇಪಾಳದ ಜನರಲ್ಲಿ ಭಾರತದ ಬಗ್ಗೆ ನಕಾರಾತ್ಮಕತೆ ಯನ್ನು ಮೂಡಿಸಲಾಗುತ್ತಿದೆ. ವೈದಿಕ ಸನಾತನ ಧರ್ಮ ಇದು ನೇಪಾಳದ ಧರ್ಮವಾಗಿದೆ. ಭಾರತ ಮತ್ತು ನೇಪಾಳ ಇವುಗಳಲ್ಲಿ ವರ್ಷಾನು ವರ್ಷದಿಂದ ಬಂಧುತ್ವದ ಭಾವನೆ ಇದೆ. ನೇಪಾಳ ಋಷಿಮುನಿಗಳ ತಪೋಭೂಮಿಯಾಗಿದೆ. ಆದರೆ ಕಳೆದ ಒಂದು ದಶಕಗಳಿಂದ ನೇಪಾಳನ್ನು ಜಾತ್ಯಾತೀತ ಎಂದು ಘೋಷಿಸಿ ಸಮಸ್ತ ಹಿಂದೂಗಳ ಶ್ರದ್ಧೆಯ ಮೇಲೆ ಪ್ರಹಾರ ಮಾಡಲಾಗಿದೆ. ನೇಪಾಳ ಬೇಗನೆ ಹಿಂದೂ ರಾಷ್ಟ್ರವಾಗುವುದು. ನೇಪಾಳ ಸಹಿತ ಸಂಪೂರ್ಣ ವಿಶ್ವವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಧ್ಯೇಯವನ್ನು ಹಿಂದೂಗಳು ಇಟ್ಟುಕೊಳ್ಳಬೇಕು. ಅದಕ್ಕಾಗಿ ಎಲ್ಲಾ ಹಿಂದೂಗಳು ಒಗ್ಗೂಡಬೇಕು ಎಂದು ನೇಪಾಳದ ಓಂ ರಕ್ಷಾ ವಾಹಿನಿಯ ಪ್ರಮುಖ ಚಿರಣ ವೀರ ಪ್ರತಾಪ ಖಡ್ಗ ಇವರು ಕರೆ ನೀಡಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೆಯ ದಿನ (೨೦.೬.೨೦೨೩ ರಂದು ) ಉಪಸ್ಥಿತರನ್ನುಸಂಬೋಧಿಸುತ್ತಿದ್ದರು.
(ಸೌಜನ್ಯ – Hindu Janajagruti Samiti)