ರಾಮನಾಥ ದೇವಸ್ಥಾನ – ಯಾವ ದೇಶದಲ್ಲಿ ಶೇಕಡಾ ೮೦ ರಷ್ಟು ಜನರು ಸನಾತನ ಧರ್ಮದವರಿದ್ದಾರೆ, ಅದೇ ದೇಶದಲ್ಲಿ ಸನಾತನ ಧರ್ಮದ ಶ್ರದ್ಧೆಗೆ ಸಂಬಂಧಿಸಿದ ಗೋಮಾತೆಯ ಹತ್ಯೆ ನಡೆಯುತ್ತಿದೆ. ಯಾವಾಗ ದೇಶದಲ್ಲಿ ಗೋಹತ್ಯೆ ಆರಂಭವಾಯಿತೋ ಅಂದಿನಿಂದ ಅಖಂಡ ಭಾರತದ ತುಂಡು ತುಂಡುಗಳಾಯಿತು. ಗೋಮಾತೆ ಇದು ಭೂಮಾತೆಯ ರೂಪವಾಗಿದೆ. ಯಾವ ಭೂಮಿಯ ಮೇಲೆ ಆಕೆಯ ತುಂಡುಗಳಾಗುವುದು ಆ ಭೂಮಿಯು ಕೂಡ ತುಂಡಾಗುವುದು. ಆದ್ದರಿಂದ ಅಖಂಡ ಭಾರತ ಬೇಕಿದ್ದರೆ ಮತ್ತು ಅದರ ವಿಭಜನೆ ನಿಲ್ಲಿಸುವುದಿದ್ದರೆ ಗೋಹತ್ಯೆ ನಿಲ್ಲಿಸುವುದು ಅವಶ್ಯಕವಾಗಿದೆ, ಎಂದು ಗೋರಕ್ಷಾದಳದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಸತೀಶ ಕುಮಾರ ಇವರು ‘ವೈಷ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ೫ ನೇ ದಿನದಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತದಲ್ಲಿನ ಗೋವುಗಳನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗುತ್ತದೆ. ಮತ್ತು ಅದಕ್ಕಾಗಿ ನಕಲಿ ನೋಟು ಹಾಗೂ ಮಾದಕ ವಸ್ತುಗಳನ್ನು ಭಾರತಕ್ಕೆ ಕಳುಹಿಸಲಾಗುತ್ತದೆ. ಈ ವ್ಯವಸಾಯದಿಂದ ದೊರೆತಿರುವ ಹಣದಿಂದ ದೇಶದಲ್ಲಿ ಭಯೋತ್ಪಾದನೆ ಪಸರಿಸಲಾಗುತ್ತದೆ. ಆದ್ದರಿಂದ ಗೋಕಳ್ಳ ಸಾಗಾಣಿಕೆ ನಿಲ್ಲಿಸುವುದು ಒಂದು ಧರ್ಮ ಕಾರ್ಯವಾಗಿದೆ. ಪಾಂಡವರಿಗೆ ಕೇವಲ ೫ ಗ್ರಾಮಗಳಿಗಾಗಿ ಯುದ್ಧ ಮಾಡಬೇಕಾಯಿತು. ನಮಗೆ ಹಿಂದೂ ರಾಷ್ಟ್ರ ಬೇಕಿದೆ. ಆದ್ದರಿಂದ ಅದು ಸಂಘರ್ಷ ಮಾಡದೆ ಸಿಗುವುದಿಲ್ಲ. ಸಂಘರ್ಷ ಮಾಡುವಾಗ ಮೃತ್ಯು ಆದರೂ ಕೂಡ ಮೋಕ್ಷ ಸಿಗುವುದು ಮತ್ತು ಬದುಕಿದರೆ ಹಿಂದೂ ರಾಷ್ಟ್ರ ಸಿಗುವುದು. ಹಿಂದೂ ರಾಷ್ಟ್ರದ ಧ್ವನಿ ದೊಡ್ಡ ರೂಪ ತಾಳಿದೆ ಎಂದು ಹೇಳಿದರು.
(ಸೌಜನ್ಯ – Hindu Janajagruti Samiti)
ಖಲಿಸ್ತಾನಿ ಭಯೋತ್ಪಾದನೆ ಇದು ಹಿಂದೂ ಮತ್ತು ಶಿಕ್ಖರನ್ನು ಬೇರ್ಪಡಿಸುವ ಪ್ರಯತ್ನವಾಗಿದೆ. ಸ್ವತಂತ್ರ ಖಲೀಸ್ಥಾನ ಯಾರಿಗೂ ಬೇಕಿಲ್ಲ. ವಿದೇಶಿ ಶಕ್ತಿಗಳು ಹಣದ ಬಲದಲ್ಲಿ ಭಾರತದಲ್ಲಿನ ನಿರಪರಾಧಿ ಜನರ ಹತ್ಯೆ ಮಾಡುತ್ತಿದ್ದಾರೆ ಎಂದು ಹೇಳಿದರು.