ಛತ್ತೀಸಗಡದಲ್ಲಿ ೪ ವರ್ಷಗಳಲ್ಲಿ ಹಿಂದೂಗಳ ಮತಾಂತರದಲ್ಲಿ ಹೆಚ್ಚಳ ! – ಸೌ. ಜ್ಯೋತಿ ಶರ್ಮಾ, ಪ್ರಾಂತೀಯ ಸಹಸಂಯೋಜಕರು, ಹಿಂದು ಜಾಗರಣ ಮಂಚ್, ಛತ್ತೀಸಗಡ

ಸೌ. ಜ್ಯೋತಿ ಶರ್ಮಾ, ಪ್ರಾಂತೀಯ ಸಹಸಂಯೋಜಕರು, ಹಿಂದು ಜಾಗರಣ ಮಂಚ್, ಛತ್ತೀಸಗಡ

ವಿದ್ಯಾಧಿರಾಜ ಸಭಾಗೃಹ, ೧೯ ಜೂನ್ (ವಾರ್ತೆ) – ಯಾವುದೇ ರಾಜ್ಯದಲ್ಲಿ ಆಗಲಾರದಷ್ಟು ಹಿಂದೂಗಳ ಮತಾಂತರ ಛತ್ತೀಸಗಡನಲ್ಲಿ ನಡೆಯುತ್ತಿದೆ. ಕಳೆದ ೪ ವರ್ಷಗಳಲ್ಲಿ ಇದರಲ್ಲಿ ಬಹಳ ಹೆಚ್ಚಳವಿದೆ. ಕ್ರೈಸ್ತ ಧರ್ಮಪ್ರಚಾರಕರು ಹಣ ಮತ್ತು ಪಡಿತರದ ಆಮಿಷ ಒಡ್ಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಮತಾಂತರಿಸುತ್ತಿದ್ದಾರೆ. ಇಂತಹ ಮತಾಂತರಿಗಳು ಹಿಂದು ಧರ್ಮದಲ್ಲಿ ‘ಘರವಾಪಸಿ’ (ಹಿಂದೂ ಧರ್ಮಕ್ಕೆ ಮರು-ಪ್ರವೇಶ) ಆಗುವುದು ಆವಶ್ಯಕವಾಗಿದೆ, ಎಂದು ಹಿಂದು ಜಾಗರಣ ಮಂಚ್‌ನ ಪ್ರಾಂತೀಯ ಸಹಸಂಯೋಜಕರಾದ ಸೌ. ಜ್ಯೋತಿ ಶರ್ಮಾ ಇವರು ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದ ನಾಲ್ಕನೇ ದಿನ ಮಾಡಿದರು.

‘ಛತ್ತೀಸಗಡನಲ್ಲಿ ಮತಾಂತರದ ‘ಮೊಡ್ಸ್ ಆಪರೆಂಡಿ’ (ವ್ಯಕ್ತಿ ಅಥವಾ ಸಮೂಹ ಇವರ ಕಾರ್ಯ ಮಾಡುವ ವಿಶಿಷ್ಟ ಪದ್ಧತಿ) ಈ ಬಗ್ಗೆ ಮಾತನಾಡುವಾಗ ಸೌ. ಶರ್ಮಾ ಇವರು, ‘ಪ್ರತಿಯೊಂದು ಮನೆಯಲ್ಲಿ ಏನಾದರೂ ಅಡಚಣೆ ಇರುತ್ತದೆ. ಈ ಅಡಚಣೆಗಳ ಲಾಭವನ್ನು ಕ್ರೈಸ್ತ ಧರ್ಮಪ್ರಚಾರಕರು ತೆಗೆದುಕೊಳ್ಳುತ್ತಾರೆ. ಅವರು ಮತಾಂತಕ್ಕಾಗಿ ಹಿಂದು ಮಹಿಳೆಯರಿಗೆ ಆರ್ಥಿಕ ಲಾಭ, ಮತ್ತು ಮಕ್ಕಳಿಗೆ ಶಿಕ್ಷಣ ಮತ್ತು ನೌಕರಿಯ ಆಮಿಷ ಒಡ್ಡುತ್ತಾರೆ. ಅದಕ್ಕಾಗಿ ಅವರಿಗೆ ಹತ್ತಿರದ ಚರ್ಚ್‌ಗೆ ಕರೆಯಲಾಗುತ್ತದೆ. ಅದಕ್ಕನುಸಾರ ಮನೆಯಲ್ಲಿ ಪುರುಷರು ಕೆಲಸಕ್ಕೆ ಹೋದನಂತರ ಈ ಮಹಿಳೆಯರು ಚರ್ಚ್‌ಗೆ ಹೋಗುತ್ತಾರೆ. ಅಲ್ಲಿಗೆ ಹೋದ ನಂತರ ‘ನಿಮ್ಮ ದೇವರು ಚೆನ್ನಾಗಿಲ್ಲ’, ಎಂದು ಹೇಳಲಾಗುತ್ತದೆ. ಅವರು ಹೇಳಿದಂತೆ ಹಿಂದು ಮಹಿಳೆಯರು ದೇವರ ಪೂಜೆ ಮಾಡುವುದು ಮತ್ತು ತುಳಸಿಪೂಜೆ ಮಾಡುವುದನ್ನು ನಿಲ್ಲಿಸುತ್ತಾರೆ. ಎರಡನೇ ರವಿವಾರದಿಂದ ಸಂತ್ರಸ್ತ ಮಹಿಳೆಯರಿಗೆ ಹಣ ಮತ್ತು ಪಡಿತರ ಸಿಗುವುದು ಆರಂಭವಾಗುತ್ತದೆ. ಅವರ ಸಂಪೂರ್ಣ ಮತಾಂತರವಾದ ೬ ತಿಂಗಳುಗಳ ನಂತರ ಇಂತಹ ಮಹಿಳೆಯರಿಗೆ ಆದಾಯದಲ್ಲಿನ ೧೦ ನೇ ಪಾಲನ್ನು ದಾನ ಮಾಡಲು ಹೇಳಲಾಗುತ್ತದೆ. ಹಣವಿಲ್ಲದವರಿಗೆ, ಪಾದ್ರಿಗಳಿಗೆ ಪಡಿತರ ನೀಡಲು ಹೇಳಲಾಗುತ್ತದೆ. ಇದರಿಂದ ಮನೆಗಳಲ್ಲಿ ಜಗಳಗಳು ಆರಂಭವಾಗುತ್ತವೆ. ಇಂತಹ ಮತಾಂತರಿತ ಹಿಂದುಗಳನ್ನು ಘರವಾಪಸಿ ಮಾಡಲು ನಾವು ಪ್ರಯತ್ನಿಸುತ್ತೇವೆ. ಮತಾಂತರ ಮಾಡಿದ ಬಗ್ಗೆ ಪುರಾವೆ ಇದ್ದರೆ ಮತಾಂತರಿಸಿದ ಕ್ರೈಸ್ತ ಧರ್ಮಪ್ರಚಾರಕರ ಮೇಲೆ ಅಪರಾಧವನ್ನೂ ದಾಖಲಿಸಬಹುದು”, ಎಂದು ಹೇಳಿದರು.