ವಿದ್ಯಾಧಿರಾಜ ಸಭಾಗೃಹ, ೧೮ ಜೂನ್ (ಸುದ್ಧಿ.) – ಸಂವಿಧಾನದ ಮೂಲಪ್ರತಿಯ ಪುಟಗಳಲ್ಲಿ ಎಲ್ಲಿಯೂ ಪೈಗಂಬರ ಮತ್ತು ಯೇಸುಕ್ರಿಸ್ತರ ಚಿತ್ರಗಳಿರಲಿಲ್ಲ, ಆದರೆ ಕೇವಲ ಶ್ರೀರಾಮ, ಶ್ರೀಕೃಷ್ಣ ಮತ್ತು ಬುದ್ಧರ ಚಿತ್ರಗಳಿದ್ದವು. ಕುರುಕ್ಷೇತ್ರದಲ್ಲಿ ಗೀತೋಪದೇಶವನ್ನು ಮಾಡುವ ಶ್ರೀಕೃಷ್ಣನ ಚಿತ್ರವಿತ್ತು. ಆ ಸಂವಿಧಾನವನ್ನು ಅಂದಿನ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತ್ತು. ಅಂದರೆ ಭಾರತದ ಆತ್ಮವಾದ ಸನಾತನ ಧರ್ಮಕ್ಕೆ ಮಾತ್ರ ಮಾನ್ಯತೆ ದೊರಕಿತ್ತು. ಆದುದರಿಂದ ಧರ್ಮನಿರಪೇಕ್ಷತೆಯ ಬಗ್ಗೆ ಡಂಗುರ ಸಾರಿದರೂ ಭಾರತದ ಆತ್ಮ ಬದಲಾಗುವುದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ (ಡಾ.) ಎಸ್.ಸಿ. ಉಪಾಧ್ಯಾಯ ಇವರು ಹೇಳಿದರು.
(ಸೌಜನ್ಯ – Hindu Janajagruti Samiti)
ಭಾರತ ‘ಹಿಂದು ರಾಷ್ಟ್ರ’ವಾಗಿದೆ. ಸರ್ವೋಚ್ಚ ನ್ಯಾಯಾಲಯದ ಧ್ಯೇಯವಾಕ್ಯವನ್ನು ‘ಯಥೊ ಧರ್ಮಃ ತತೊ ಜಯಃ |’ ಎಂದು ಬರೆಯಲಾಗಿದೆ. ಸರ್ವೋಚ್ಚ ನ್ಯಾಯಾಲಯವು, ‘ಧರ್ಮವಿರುವಲ್ಲಿ ಸತ್ಯವಿದೆ ಮತ್ತು ಎಲ್ಲಿ ಸತ್ಯವಿರುವಲ್ಲಿ ಜಯವಿದೆ’, ಎಂದು ಹೇಳುತ್ತದೆ. ಹಿಂದು ಜನಜಾಗೃತಿ ಬಹಳ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ. ಇದೇ ರೀತಿ ಹಿಂದುಗಳನ್ನು ಸಂಘಟಿಸಬೇಕು. ಭಾರತದ ಬೀದಿಬೀದಿಗಳಲ್ಲಿ ಜಾಗೃತ ಹಿಂದೂಗಳಿದ್ದಾರೆ, ಅವರನ್ನು ಸಂಘಟಿಸಬೇಕು. ಮತಾಂಧರು ನೂರಾರು ಸಂಖ್ಯೆಗಳಲ್ಲಿ ಹಿಂದುಗಳ ಮೇಲೆ ಆಕ್ರಮಣ ಮಾಡುತ್ತಿದ್ದರೆ, ಹಿಂದೂಗಳ ಸಾವಿರಾರು ಸ್ವಯಂಸೇವಕರು ಸಹ ಸಿದ್ಧರಿರಬೇಕು.