‘ಹಲಾಲಮುಕ್ತ ಭಾರತ’ ಸಾಕಾರಗೊಳಿಸಲು ಜಾಗೃತಿ ಅಭಿಯಾನವನ್ನು ನಡೆಸೋಣ ! – ಪ್ರಶಾಂತ ಸಂಬರಗಿ, ಬೆಂಗಳೂರು

ಪ್ರಶಾಂತ ಸಂಬರಗಿ

ರಾಮನಾಥಿ – ಹಿಂದೂ ವ್ಯಾಪಾರಿಗಳ ವ್ಯಾಪಾರೋದ್ಯಮಗಳನ್ನು ಮುಸಲ್ಮಾನರು ಕಬಳಿಸಿದ್ದಾರೆ. ಮಟನ, ಚಿಕನ ಮಾರಾಟದ ವ್ಯಾಪಾರಗಳಲ್ಲಿ ಮುಸಲ್ಮಾನರು ಏಕಸ್ವಾಮ್ಯತೆಯನ್ನು ಸ್ಥಾಪಿಸಿದ್ದಾರೆ. ಇದನ್ನು ದುರುಪಯೋಗಿಸಿಕೊಂಡು ಮುಸಲ್ಮಾನರು `ಹಲಾಲ’ ಚಿಕನ-ಮಟನ ಮಾರಾಟ ಮಾಡುತ್ತಿದ್ದಾರೆ. ಮುಸಲ್ಮಾನರ ಈ ಏಕಸ್ವಾಮ್ಯತೆಯನ್ನು ಮುರಿಯಲು ನಿರುದ್ಯೋಗಿ ಹಿಂದೂ ಯುವಕರು ಈ ವ್ಯಾಪಾರದೆಡೆಗೆ ಹೊರಳಬೇಕು. ಶೇ. 15 ರಷ್ಟು ಮುಸಲ್ಮಾನರು ಶೇ. 75 ರಷ್ಟು ಹಿಂದೂಗಳ ಮೇಲೆ `ಹಲಾಲ’ ಪದ್ಧತಿಯನ್ನು ಹೇರಿದ್ದಾರೆ. `ಹಲಾಲ’ ನಿಂದ ಬಿಡುಗಡೆ ಹೊಂದುವಲ್ಲಿ ಕಾನೂನಿನ ನಿಯಮಗಳು ಮತ್ತು ಪರ್ಯಾವರಣದ ನಿಯಮಗಳ ಗುರಾಣಿಯನ್ನು ಮುಂದೆ ಮಾಡಲಾಗುತ್ತಿದೆ. ಹಿಂದೂಗಳು `ಹಲಾಲ’ ಚಿಕನ-ಮಟನ ತಿನ್ನದೇ `ಝಟಕಾ’ ಚಿಕನ-ಮಟನ ತಿನ್ನುವ ನಿರ್ಧಾರ ಮಾಡಬೇಕು. ಇದಕ್ಕಾಗಿ ಹಿಂದೂಗಳು ಗ್ರಾಹಕರ ಹಕ್ಕು ಕಾನೂನಿನ ಆಧಾರವನ್ನು ಪಡೆದುಕೊಳ್ಳಬೇಕು. `ಹಲಾಲಮುಕ್ತ ಭಾರತ’ ಸಾಕಾರಗೊಳಿಸಲು ಹಿಂದೂಗಳು ಜಾಗೃತಿ ಅಭಿಯಾನ ಕೈಕೊಳ್ಳಬೇಕು ಎಂದು ಬೆಂಗಳೂರಿನ ಹಿಂದುತ್ವನಿಷ್ಠ ಶ್ರೀ. ಪ್ರಶಾಂತ ಸಂಬರಗಿಯವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಸಮಯದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

(ಸೌಜನ್ಯ – Hindu Janajagruti Samiti)

ಶ್ರೀ. ಪ್ರಶಾಂತ ಸಂಬರಗಿಯವರು ತಮ್ಮ ಮಾತನ್ನು ಮುಂದುವರಿಸಿ, ಹಿಂದೂ ಜನಜಾಗೃತಿ ಸಮಿತಿಯು `ಹಲಾಲ’ ವಿಷಯದಲ್ಲಿ ಜಾಗೃತಿ ಮೂಡಿಸುವಲ್ಲಿ ಬಹುದೊಡ್ಡ ಕಾರ್ಯವನ್ನು ಮಾಡಿದೆ. `ಹಲಾಲ’ ನಿಂದ ಮುಕ್ತಿ ಪಡೆಯಲು ಹಿಂದೂಗಳು ಗ್ರಾಹಕರ ಹಕ್ಕು ಕಾನೂನಿನ ಆಧಾರವನ್ನು ಪಡೆದುಕೊಂಡು ಗ್ರಾಹಕರ ವೇದಿಕೆಗೆ ಮನವಿ ಸಲ್ಲಿಸಬೇಕು. ಗ್ರಾಹಕ ವೇದಿಕೆಯು `ಝಟಕಾ’ ಮಾಂಸಕ್ಕೆ ಅನುಮತಿ ನೀಡುವ ತೀರ್ಪನ್ನು ನೀಡಿದೆ. ಹಿಂದೂಗಳಿಗೆ `ಝಟಕಾ’ ಮಾಂಸವನ್ನು ಒದಗಿಸುವ ಉದ್ದೇಶದಿಂದ ನಾವು ಕಾರ್ಯದಳವನ್ನು ಸಿದ್ಧಪಡಿಸಿದ್ದೇವೆ. ಈ ಕಾರ್ಯದಳದ ಮಾಧ್ಯಮದಿಂದ ನಿರುದ್ಯೋಗಿ ಹಿಂದೂ ಯುವಕರಿಗೆ `ಝಟಕಾ’ ಮಾಂಸವನ್ನು ಒದಗಿಸುವ ಅಂಗಡಿಗಳನ್ನು ಪ್ರಾರಂಭಿಸಲು ಸಹಾಯ ಮಾಡಲಾಗುತ್ತಿದೆಯೆಂದು ಶ್ರೀ ಸಂಬರಗಿಯವರು ನುಡಿದರು.