‘ಉಪ ಜೀವನೋಪಾಯ ‘ಮುಖ್ಯ ಅಲ್ಲ!


ಉದ್ಯೋಗ, ಅಂದರೆ ಹಣ ಸಂಪಾದಿಸುವುದನ್ನು ‘ಜೀವನೋಪಾಯ ಹೀಗೆನ್ನುತ್ತಾರೆ. ಉದಾಹರಣೆಗೆ ‘ಕೃಷಿಯೇ ಆತನ ಜೀವನೋಪಾಯದ ಸಾಧನವಾಗಿದೆ ಎಂದು ನಾವು ಹೇಳುತ್ತೇವೆ. ಇದರರ್ಥ ಕೃಷಿಯ ಮೂಲಕ ಆ ವ್ಯಕ್ತಿಯ ಉದರ ನಿರ್ವಹಣೆ ನಡೆಯುತ್ತದೆ. ಇದನ್ನು ‘ಮುಖ್ಯ ಜೀವನೋಪಾಯ ಅಥವಾ ‘ಪ್ರಾಥಮಿಕ ಜೀವನೋಪಾಯ ಎಂದು ಕರೆಯಲಾಗುವುದಿಲ್ಲ. ಇದರರ್ಥ ಜೀವನ ನಡೆಸಲು ಉಪಜೀವನಕ್ಕೆ ‘ಉಪದಷ್ಟೇ ಮಹತ್ವವಿದೆ. ಆದರೆ ಇಂದು ಜೀವನೋಪಾಯಕ್ಕೆ ಅಂದರೆ ಉದ್ಯೋಗಕ್ಕೆ ಪ್ರಮುಖ ಸ್ಥಾನ ಸಿಕ್ಕಿದೆ. ‘ಉಪ ಎಂದರೆ ತುಲನಾತ್ಮಕವಾಗಿ ಚಿಕ್ಕದಾದ (ಕಡಿಮೆ) ಪ್ರಾಮುಖ್ಯತೆಯಿರುವ ವಿಷಯಕ್ಕೆ ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಹೆಚ್ಚು-ಕಡಿಮೆ ಶೇಕಡಾ ೮೦ ರಷ್ಟು ಸಮಯವನ್ನು ನೀಡುತ್ತಾರೆ ! ಮಾನವ ಜನ್ಮದ ನಿಜವಾದ ಉದ್ದೇಶವೆಂದರೆ ‘ಈಶ್ವರಪ್ರಾಪ್ತಿ. ದೇವರನ್ನು ಪಡೆಯಲು ಸಾಧನೆಯು ಅನಿವಾರ್ಯವಾಗಿದೆ. ಹೆಚ್ಚು ಹೆಚ್ಚು ಸಮಯವನ್ನು ಮಾನವ ಜನ್ಮದ ನಿಜವಾದ ಉದ್ದೇಶವನ್ನು ಪೂರೈಸಲು ಬಳಸುವುದು ಅವಶ್ಯಕವಿದ್ದರೂ ಜೀವನೋಪಾಯಕ್ಕೆ ಹೆಚ್ಚು ಹೆಚ್ಚು ಸಮಯವನ್ನು ನೀಡಲಾಗುತ್ತಿದೆ.

ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವು ನಾಲ್ಕು ಪುರುಷಾರ್ಥಗಳಾಗಿವೆ. ಅವುಗಳಲ್ಲಿ ‘ಧರ್ಮ ಮತ್ತು ಮೋಕ್ಷ ಈ ಪುರುಷಾರ್ಥಗಳನ್ನು ಸಾಧಿಸಲು ನಿಜವಾದ ಅರ್ಥದಲ್ಲಿ ಪ್ರಯತ್ನಿಸಬೇಕು, ಆದರೆ ಅರ್ಥ ಮತ್ತು ಕಾಮವನ್ನು ಪುರುಷಾರ್ಥಗಳು ಪ್ರಾರಬ್ಧದಿಂದ ಬರುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಇಂದು ಪರಿಸ್ಥಿತಿ ತದ್ವಿರುದ್ಧವಾಗಿರು ವಂತಿದೆ. ಧರ್ಮ ಮತ್ತು ಮೋಕ್ಷದ ಪುರುಷಾರ್ಥಗಳನ್ನು ದೇವರಿಗೆ ಬಿಟ್ಟು, ಪ್ರಾರಬ್ಧಕ್ಕಧೀನವಾಗಿರುವ ಅರ್ಥ ಮತ್ತು ಕಾಮ ಈ ಪುರುಷಾರ್ಥಗಳ ಪ್ರಾಪ್ತಿಗಾಗಿ ಪರಾಕಾಷ್ಠೆಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮನುಷ್ಯನ ನಿಜವಾದ ಉದ್ದೇಶವು ಹಣ ಸಂಪಾದಿಸುವುದಲ್ಲ, ಆದರೆ ಧರ್ಮವನ್ನು ಆಚರಿಸುವುದು ಮತ್ತು ಮೋಕ್ಷವನ್ನು ಪಡೆಯುವುದಾಗಿದೆ.

ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮನುಷ್ಯನು ತನ್ನ ಸಮಯವನ್ನು ಸತ್ ಕಾರ್ಯಕ್ಕಾಗಿ ಉಪಯೋಗಿಸಬೇಕು. ಅನೇಕ ಜನರು ಹಣದ ಹಿಂದೆ ಓಡಿ ಎಷ್ಟು ದಣಿದಿದ್ದಾರೆಂದರೆ ಅವರು ಚಿಕ್ಕ ಪ್ರಾಯದಲ್ಲೇ ಅನೇಕ ರೋಗಗಳಿಗೆ ಬಲಿಯಾಗುತ್ತಾರೆ. ಸಾವಿನ ನಂತರ ಹಣವು ನಮ್ಮೊಂದಿಗೆ ಬರುವುದಿಲ್ಲ, ಆದರೆ ನಮ್ಮ ಸಾಧನೆ ನಮ್ಮ ಜೊತೆ ಬರುತ್ತದೆ. ಇದನ್ನು ನೆನಪಿನಲ್ಲಿಡಿ ಮತ್ತು ನಿಮ್ಮ ಸಮಯದ ಆಯೋಜನೆ ಮಾಡಬೇಕು. ಇಲ್ಲದಿದ್ದರೆ, ಜೀವನದ ಪ್ರಮುಖ ವರ್ಷಗಳು ಜೀವನೋಪಾಯದ ವಿಧಾನದಲ್ಲಿ ಕಳೆದುಹೋಗುತ್ತವೆ ಮತ್ತು ಸಾಧಿಸಬೇಕಾದದ್ದು ಉಳಿದು ಹೋಗುತ್ತದೆ. ಯಾವುದೇ ಹವ್ಯಾಸವನ್ನು ಬೆಳೆಸಿಕೊಳ್ಳಲಾಗಲಿಲ್ಲ, ಕುಟುಂಬಕ್ಕೆ ಸಮಯ ನೀಡಲಾಗಲಿಲ್ಲ, ಸಮಾಜಕ್ಕೆ ಒಳ್ಳೆಯದನ್ನು ಮಾಡಲಾಗಲಿಲ್ಲ, ದೇವರು ಮತ್ತು ಧರ್ಮಕ್ಕಾಗಿ ಸಮಯವನ್ನು ನೀಡಲಾಗಲಿಲ್ಲ, ಎಂದಾಗಬಾರದು. ಅದಕ್ಕಾಗಿ ‘ಉಪ ಜೀವನೋಪಾಯವು ‘ಮುಖ್ಯ ಜೀವನೋಪಾಯವಲ್ಲ ಎಂಬುದನ್ನು ಸದಾಕಾಲ ನೆನಪಿನಲ್ಲಿಟ್ಟುಕೊಳ್ಳೋಣ.

– ಸೌ. ಗೌರಿ ಕುಲಕರ್ಣಿ, ಫೋಂಡಾ, ಗೋವಾ.