‘ಹಿಂದೂಫೋಬಿಯಾದ (ಹಿಂದೂದ್ವೇಷದ) ಭಯಾನಕ ಸ್ಥಿತಿ !

ಜಗತ್ತಿನಲ್ಲಿ ವಿವಿಧ ಸ್ಥಳಗಳಿಂದ ಕೇಳಿಬರುವ ‘ಹಿಂದೂಫೋಬಿಯಾ ಅಂದರೆ ಹಿಂದೂದ್ವೇಷ ಮತ್ತು ಹಿಂಸಾಚಾರದ ಹೆಚ್ಚುತ್ತಿರುವ ಘಟನೆಗಳು ಅತ್ಯಂತ ಗಂಭೀರ ಮತ್ತು ಚಿಂತೆಯ ವಿಷಯವಾಗಿವೆ. ಅನೇಕ ದೇಶಗಳಲ್ಲಿ ಹಿಂದೂ ವ್ಯಕ್ತಿಗಳು, ಹಿಂದೂ ಪ್ರತೀಕಗಳು, ದೇವಸ್ಥಾನ ಇತ್ಯಾದಿಗಳ ಮೇಲಾಗುವ ಆಕ್ರಮಣಗಳು ನಿತ್ಯದ ವಿಷಯಗಳೇ ಆಗಿವೆ.

ಬ್ರಿಟನ್‌ನಲ್ಲಿ ‘ದಿ ಹೆನ್ರಿ ಜಾಕ್ಸನ್ ಸೊಸಾಯಟಿ ಸಿದ್ಧಪಡಿಸಿರುವ ‘ಎಂಟಿ ಹಿಂದೂ ಹೇಟ್ ಇನ್ ಸ್ಕೂಲ್ಸ ಈ ವರದಿಯಿಂದ ಹಿಂದೂ ಸಮಾಜದ ಮೇಲಿನ ಆಕ್ರಮಣಗಳು ನಮ್ಮ ಮುಂದೆ ಬಂದವು. ಈ ವರದಿಯಲ್ಲಿ ಬ್ರಿಟನ್‌ನ ಶಾಲೆಗಳಲ್ಲಿ ಹಿಂದೂಗಳ ಬಗ್ಗೆ ದ್ವೇಷವನ್ನು ಹರಡಲಾಗುತ್ತಿರುವುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ದೇವತೆಗಳ ಪೂಜೆ, ಗೋಪೂಜೆ, ಹಿಂದೂಗಳಲ್ಲಿರುವ ಜಾತಿವ್ಯವಸ್ಥೆ ಮುಂತಾದ ವಿಷಯಗಳ ಮೇಲೆ ಹಿಂದೂ ಮಕ್ಕಳನ್ನು ಚುಡಾಯಿಸಲಾಗುತ್ತದೆ ಮತ್ತು ಅಪಮಾನಿಸಲಾಗುತ್ತದೆ. ಮುಸಲ್ಮಾನ ಮಕ್ಕಳಂತೂ ಹಿಂದೂ ಮಕ್ಕಳನ್ನು ‘ಕಾಫಿರ ಎಂದೇ ಕರೆಯುತ್ತಾರೆ.

ಈ ಅಧ್ಯಯನದಲ್ಲಿ ೯೯೮ ಹಿಂದೂ ಪೋಷಕರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ. ಶೇ. ೫೧ ರಷ್ಟು ಪೋಷಕರು ತಮ್ಮ ಮಕ್ಕಳಿಗೆ ಹಿಂದೂದ್ವೇಷವನ್ನು ಎದುರಿಸಬೇಕಾಗಿ ಬಂದಿದೆ ಎಂದು ಹೇಳಿದ್ದಾರೆ ಮತ್ತು ಶೇ. ೧೯ ರಷ್ಟು ಪೋಷಕರು ‘ಶೈಕ್ಷಣಿಕ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಬ್ರಿಟನ್‌ನಲ್ಲಿ ಹಿಂದೂದ್ವೇಷದ ಕುರಿತಾದ ಅಧ್ಯಯನದ ಮೇಲಾಧಾರಿತ ಮೊದಲ ವರದಿಯಾಗಿದೆ. ‘ಹಿಂದೂವಿರೋಧಿ ಅಪಪ್ರಚಾರವು ಹಿಂದೂದ್ವೇಷದ ಪ್ರಮುಖ ಕಾರಣವಾಗಿದೆ ಎಂದು ಆ ವರದಿಯಲ್ಲಿ ನಮೂದಿಸಲಾಗಿದೆ.

೧. ವರದಿಯಲ್ಲಿರುವ ಪ್ರಮುಖ ಉದಾಹರಣೆಗಳು

ಅ. ‘ಸಸ್ಯಾಹಾರಿ ಆಗಿದ್ದಾಳೆಂದು ಚುಡಾಯಿಸಿ ಓರ್ವ ಬಾಲಕಿಯ ಮೇಲೆ ಗೋಮಾಂಸವನ್ನು ಎಸೆಯಲಾಯಿತು ಮತ್ತು ‘ನೀವು ಇಸ್ಲಾಂನ್ನು ಸ್ವೀಕರಿಸಿದರೆ, ನಾವು ನಿನ್ನನ್ನು ಪೀಡಿಸುವುದನ್ನು ನಿಲ್ಲಿಸುತ್ತೇವೆ ಎಂದು ಅವಳಿಗೆ ಹೇಳಲಾಯಿತು.

ಆ. ಒಬ್ಬ ವಿದ್ಯಾರ್ಥಿಗೆ, ನಿಮ್ಮ ಹಿಂದೂ ಧರ್ಮದ ಅಧ್ಯಯನ ಮಾಡುವುದೆಂದರೆ ಮೂರ್ಖತನವೇ ಆಗಿದೆ; ಏಕೆಂದರೆ ನಿಮ್ಮಲ್ಲಿ ೩೩ ಕೋಟಿ ದೇವತೆಗಳೊಂದಿಗೆ ಆನೆ, ಮಂಗ, ಹಾವು, ಇಲಿ ಮತ್ತು ನಿರ್ಜೀವ ಮೂರ್ತಿಗಳನ್ನು ಕೂಡ ಪೂಜಿಸುತ್ತಾರೆ ಎಂದು ಹೇಳಲಾಯಿತು.

ಇ. ಓರ್ವ ಕ್ರೈಸ್ತ ವ್ಯಕ್ತಿಯು ಓರ್ವ ಹಿಂದೂ ಬಾಲಕನಿಗೆ, ‘ನಮ್ಮ ಯೇಸು ನಿಮ್ಮೆಲ್ಲ ದೇವತೆಗಳನ್ನು ನರಕಕ್ಕೆ ಕಳುಹಿಸುವನು ಎಂದು ಬೆದರಿಸಿ ಹೇಳಿದನು.

ಈ. ಹಿಂದೂ ಧರ್ಮದಲ್ಲಿ ಪವಿತ್ರವೆಂದು ತಿಳಿಯಲಾಗುವ ‘ಸ್ವಸ್ತಿಕ ಚಿಹ್ನೆಯನ್ನು ಹಿಟ್ಲರನ ಚಿಹ್ನೆಯೊಂದಿಗೆ ತುಲನೆ ಮಾಡಿ ಹಿಂದೂ ಮಕ್ಕಳನ್ನು ಗುರಿಪಡಿಸಿದ ಘಟನೆಗಳು ನಡೆದಿವೆ.

ಉ. ವರದಿಯಲ್ಲಿ ಹಿಂದೂ ಮಕ್ಕಳು ಇಸ್ಲಾಂ ಅಥವಾ ಕ್ರೈಸ್ತ ಧರ್ಮದ ವಿರುದ್ಧ ಟೀಕೆ-ಟಿಪ್ಪಣಿಗಳನ್ನು ಮಾಡಿರುವ ಉಲ್ಲೇಖಗಳಿಲ್ಲ. ಆದುದರಿಂದ ಮುಸಲ್ಮಾನ ಅಥವಾ ಕ್ರೈಸ್ತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯಾವ ಘಟನೆಯ ಪ್ರತ್ಯುತ್ತರವೆಂದು ಹೀಗೆ ಮಾಡುತ್ತಿದ್ದಾರೆ ಎಂಬ ನಿಷ್ಕರ್ಷವನ್ನು ತೆಗೆಯಲು ಬರುವುದಿಲ್ಲ.

೨. ಪ್ರಾಬಲ್ಯವಾದದಲ್ಲಿ ಶ್ವೇತವರ್ಣೀಯರು ಮತ್ತು ಹಿಂದೂವಿರೋಧಿ ಹಿಂಸಾಚಾರದಲ್ಲಿ ಮುಸಲ್ಮಾನರು ಮುಂಚೂಣಿಯಲ್ಲಿ

ಯುರೋಪ-ಅಮೇರಿಕಾದೊಂದಿಗೆ ಅನೇಕ ದೇಶಗಳಲ್ಲಿ ಸದ್ಯಕ್ಕೆ ನಡೆದಿರುವ ಹಿಂದೂಗಳ ವಿರುದ್ಧದ ಚಳುವಳಿ ಮತ್ತು ಹಿಂಸಾಚಾರದ, ಅಂದರೆ ‘ಹಿಂದೂಫೋಬಿಯಾದ ಒಂದು ಚಿಕ್ಕ ವಿಷಯ ಈ ವಸ್ತುನಿಷ್ಠ ವರದಿಯಲ್ಲಿ ಪ್ರಕಟವಾಗಿದೆ. ಧರ್ಮ ಮತ್ತು ಜನಾಂಗೀಯ ದ್ವೇಷದ ಬಗ್ಗೆ ಸಂಶೋಧನೆಯನ್ನು ಮಾಡುವ ಅಮೇರಿಕನ್ ಸಂಸ್ಥೆಯ ‘ನೆಟವರ್ಕ ಕಾಂಟೆಜಿಅನ್ ರಿಸರ್ಚ ಇನ್ಸಟಿಟ್ಯೂಟ ತನ್ನ ಅಧ್ಯಯನ ವರದಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹಿಂದೂವಿರೋಧಿ ಟಿಪ್ಪಣಿಗಳಲ್ಲಿ ಶೇಕಡಾ ೧ ಸಾವಿರದಷ್ಟು ಹೆಚ್ಚಳವಾಗಿದೆ. ಶ್ವೇತವರ್ಣೀಯರು ವರ್ಚಸ್ವವಾದಿ ಮತ್ತು ಮುಸಲ್ಮಾನರು ಹಿಂದೂವಿರೋಧಿ ಪ್ರಚಾರ ಮತ್ತು ಹಿಂಸಾಚಾರಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಉಲ್ಲೇಖಿಸಿದೆ.

೩. ಹಿಂದೂಗಳ ವಿರುದ್ಧ ದ್ವೇಷವನ್ನು ಹರಡುವಲ್ಲಿ ಮುಂಚೂಣಿಯಲ್ಲಿರುವ ಪಾಕಿಸ್ತಾನ, ಅಮೇರಿಕಾ ಮತ್ತು ಬ್ರಿಟನ್

ಈ ವರದಿಗನುಸಾರ ಹಿಂದೂಗಳು ಮತ್ತು ಭಾರತೀಯರ ವಿರುದ್ಧ ದ್ವೇಷವನ್ನು ಹರಡುವಲ್ಲಿ ಪಾಕಿಸ್ತಾನಿಗಳು ಮುಂಚೂಣಿಯಲ್ಲಿದ್ದಾರೆ. ಪಾಕಿಸ್ತಾನದಿಂದ ಹಿಂದೂಗಳ ವಿರುದ್ಧ ಪ್ರತಿದಿನ ಸಾವಿರಾರು ದ್ವೇಷಭರಿತ ‘ಟ್ವೀಟ್ಗಳನ್ನು ಮಾಡಲಾಗುತ್ತದೆ. ಅಮೇರಿಕಾದ ಡೆಮೊಕ್ರಾಟಿಕ್ ಪಕ್ಷದ ಮುಖಂಡರ ಒಂದು ಗುಂಪು ಪ್ರಚಾರದ ಒಂದು ಭಾಗವೆಂದು ಇಂತಹ ವಿಷಯಗಳಿಗೆ ನೀರುಗೊಬ್ಬರ ಹಾಕುತ್ತದೆ. ಬ್ರಿಟನ್‌ನ ಲೇಬರ ಪಕ್ಷದ ಮುಖಂಡರೂ ಹಿಂದೂ ಧರ್ಮ ಮತ್ತು ಅವರ ರೂಢಿ-ಪರಂಪರೆಗಳನ್ನು ಗೇಲಿ ಮಾಡುವುದರಲ್ಲಿ ಧನ್ಯತೆಯನ್ನು ಕಾಣುತ್ತಾರೆ.

೪. ಇತರ ಧರ್ಮದವರು ಹಿಂದೂಗಳೊಂದಿಗೆ ನಡೆದುಕೊಳ್ಳುವ ರೀತಿ ಮತ್ತು ಅವರ ತಪ್ಪು ತಿಳುವಳಿಕೆ

ಇತರ ದೇಶಗಳ ಸಮಸ್ಯೆಯೆಂದರೆ, ಅವರು ಹಿಂದೂ ಧರ್ಮ ಮತ್ತು ಹಿಂದೂ ಸಮಾಜವನ್ನು ತಮ್ಮ ಧರ್ಮದ ದೃಷ್ಟಿಕೋನದಿಂದ ಅರ್ಥೈಸುತ್ತಾರೆ. ಬ್ರಿಟಿಷ್ ಅಧ್ಯಯನದಲ್ಲಿ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಪಠ್ಯಪುಸ್ತಕಗಳಲ್ಲಿ ಹಿಂದೂ ಧರ್ಮದ ನಿಂದನೆ, ತಮಾಷೆ ಮತ್ತು ಗೇಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಅಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿ ಹಿಂದೂ ಧರ್ಮ ಮತ್ತು ಹಿಂದೂಗಳ ವಿಷಯದಲ್ಲಿ ತಪ್ಪು ತಿಳುವಳಿಕೆಗಳು ಉಂಟಾಗುತ್ತವೆ. ಅಬ್ರಾಹಮಿಕ್(ಅಬ್ರಾಹಂಮ್ ನನ್ನು ನಂಬುವ ಜ್ಯೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಪಂಥ) ಧರ್ಮದ ದೃಷ್ಟಿಕೋನದಿಂದ ಹಿಂದೂ ಧರ್ಮದ ವ್ಯಾಖ್ಯೆ ನೀಡಲು ಸಾಧ್ಯವೇ ಇಲ್ಲ; ಆದರೆ ಸಮಸ್ಯೆ ಇಷ್ಟೇ ಇದ್ದರೆ, ಅವರನ್ನು ಅನೇಕ ದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕಾರ್ಯ ಮಾಡುವ ಹಿಂದೂ ಸಂಘಟನೆಗಳು, ವಿವಿಧ ಪಂಥಗಳು, ಸಂಪ್ರದಾಯ, ಯೋಗ, ಅಧ್ಯಾತ್ಮ, ತತ್ವಜ್ಞಾನ ಇತ್ಯಾದಿ ಸಂಸ್ಥೆಗಳಲ್ಲಿ ಆಸಕ್ತಿಯನ್ನು ವಹಿಸಿ ಹಿಂದೂ ಧರ್ಮವನ್ನು ತಿಳಿದುಕೊಳ್ಳಲು ಪ್ರಯತ್ನಿಸಲು ಸಾಧ್ಯವಾಗುತ್ತಿತ್ತು. ಕ್ರೈಸ್ತರ ನಡುವಳಿಕೆಯ ಬಗ್ಗೆ ಏನು ಹೇಳುವುದು ? ಭಾರತದೊಂದಿಗೆ ಏಷ್ಯಾ ಮತ್ತು ಆಫ್ರಿಕಾಗಳ ಮೇಲೆ ರಾಜ್ಯ ಮಾಡುವ ಬ್ರಿಟಿಷರಿಗೆ ವೈಟ್ಸ್ ಮೆನ್ಸ್ ಬರ್ಡನ್ ಇವನು, ‘ಈ ದೇಶಗಳಲ್ಲಿರುವ ಜನರನ್ನು ಸುಸಂಸ್ಕೃತಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ಆದ್ದರಿಂದಲೇ ನಾವು ಅವರ ಮೇಲೆ ರಾಜ್ಯವನ್ನು ಮಾಡುತ್ತಿದ್ದೇವೆ ಎಂಬ ತತ್ತ್ವಜ್ಞಾನವನ್ನು ಹೇಳಿದ್ದಾನೆ. ಈ ಶ್ರೇಷ್ಠ ಸಭ್ಯತೆ ಮತ್ತು ಸಂಸ್ಕೃತಿಯ ಅರಿವು ಈಗಲೂ ಮುಗಿದಿಲ್ಲ. ಈ ಕಾರಣಕ್ಕಾಗಿ ಈ ದೇಶಗಳಲ್ಲಿಯೂ ನಾವು ಧಾರ್ಮಿಕ-ಸಾಂಸ್ಕೃತಿಕ ಪ್ರಾಬಲ್ಯವಾದದ ಗುಂಪುಗಳನ್ನು ಮತ್ತು ಕ್ರೈಸ್ತರ ಅತಿರೇಕವನ್ನು ನೋಡುತ್ತಿದ್ದೇವೆ. ಇದರಿಂದ ಮುಸಲ್ಮಾನರ ದೃಷ್ಟಿಕೋನ ಸ್ಪಷ್ಟವಾಗಲಾರದು. ಇಸ್ಲಾಂ ಕಟ್ಟರತಾವಾದ ಇದು ಒಂದು ಧಾರ್ಮಿಕ ಪ್ರಾಬಲ್ಯವಾದದ ವಿಶ್ವಾಸವಾಗಿದ್ದು, ಅದು ‘ಇಸ್ಲಾಂ ಏಕೈಕ ಧರ್ಮವಾಗಿದ್ದು ಇತರ ಧರ್ಮಗಳ ಅಸ್ತಿತ್ವ ಇಸ್ಲಾಂಗೆ ವಿರುದ್ಧವಾಗಿವೆ ಎನ್ನುವುದು ಅದರ ತಿಳುವಳಿಕೆಯಾಗಿದ್ದು, ಈ ಕಾರಣದಿಂದ ಪ್ರತಿಯೊಂದು ಧರ್ಮವನ್ನು ಅವರು ಗುರಿ ಮಾಡುತ್ತಿರುತ್ತಾರೆ. ‘ಭಾರತದ ಹೊರಗಿರುವ ಹಿಂದೂಗಳು ತಮ್ಮ ಶಿಕಾರಿಗಳಾಗಿದ್ದಾರೆ ಎಂದು ಅವರಿಗೆ ಅನಿಸುತ್ತದೆ; ಏಕೆಂದರೆ ಹಿಂದೂಬಹುಸಂಖ್ಯಾತರಾಗಿರುವ ಮತ್ತೊಂದು ದೇಶ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ.

೫. ಜಗತ್ತಿನಾದ್ಯಂತ ಹೆಚ್ಚುತ್ತಿರುವ ಭಾರತದ ಮತ್ತು ಹಿಂದೂಗಳ ಪ್ರಭಾವ ಮತ್ತು ಇದರಿಂದ ಹಿಂದೂಗಳಲ್ಲಿ ಹೆಚ್ಚುತ್ತಿರುವ ಆತ್ಮವಿಶ್ವಾಸ

ಈ ಪರಿಸ್ಥಿತಿ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ಹಿಂದೂಗಳ ವಿರುದ್ಧ ಅಪಪ್ರಚಾರ, ದ್ವೇಷ ಮತ್ತು ಹಿಂಸಾಚಾರಗಳಲ್ಲಿ ಹೆಚ್ಚಳವಾಗಿದೆ; ಆದರೆ ಏಕೆ ? ಏಕೆಂದರೆ ಮುಂಬರುವ ಕಾಲದಲ್ಲಿ ಹಿಂದೂ ಸಂಘಟನೆಗಳು ಜಗತ್ತಿನಾದ್ಯಂತ ವ್ಯಾಪಕ ಸ್ತರದಲ್ಲಿ ಕಾರ್ಯವನ್ನು ಮಾಡಬೇಕಾಗುವುದು. ಎಲ್ಲೆಲ್ಲಿ ಹಿಂದೂಗಳು ವಾಸಿಸುತ್ತಿದ್ದಾರೆಯೋ, ಅಲ್ಲಲ್ಲಿ ಅವರು ಅನೇಕ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಬೌದ್ಧಿಕ ಸೃಜನಶೀಲ ಉಪಕ್ರಮಗಳನ್ನು ನಡೆಸುತ್ತಿದ್ದಾರೆ. ಅವರ ಪ್ರಭಾವವೂ ಹೆಚ್ಚಾಗಿದೆ. ಜಗತ್ತಿನಲ್ಲಿ ಭಾರತೀಯ ಜನಾಂಗದವರು ಸುಮಾರು ೩೫ ಲಕ್ಷ ಜನರಿದ್ದಾರೆ. ಅವರಲ್ಲಿ ಹಿಂದೂಗಳ ಸಂಖ್ಯೆ ಅತ್ಯಧಿಕವಾಗಿದೆ. ಹಿಂದೂಗಳು ಅನೇಕ ದೇಶಗಳಲ್ಲಿ ಕೇವಲ ಉನ್ನತ ಹುದ್ದೆಗಳಲ್ಲಿ ಮಾತ್ರವಲ್ಲ, ಉದ್ಯೋಗ, ವಿಜ್ಞಾನ, ಸಾಂಸ್ಕೃತಿಕ, ಶೈಕ್ಷಣಿಕ, ಪ್ರಸಾರ ಮಾಧ್ಯಮಗಳು ಇತ್ಯಾದಿಗಳಲ್ಲಿಯೂ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ ಬಳಿಕ ಚಿಕ್ಕ ಚಿಕ್ಕ ದೇಶಗಳಲ್ಲಿರುವ ಭಾರತೀಯ ಜನಾಂಗದ ಸಮೂಹಗಳನ್ನೂ ಉದ್ದೇಶಿಸಿ ಮಾತನಾಡಿದರು ಮತ್ತು ಅವರಲ್ಲಿ ತಮ್ಮ ಸಂಸ್ಕೃತಿ ಮತ್ತು ಸಭ್ಯತೆಯ ವಿಷಯದಲ್ಲಿ ಅಭಿಮಾನದ ಭಾವನೆ ಮತ್ತು ಭಾರತದ ವಿಷಯದಲ್ಲಿ ಭಾವನಾತ್ಮಕ ಸೆಳೆತವನ್ನು ಮೂಡಿಸಲು ಪ್ರಯತ್ನಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಸಹಿತ ಅನೇಕ ಹಿಂದೂ ಸಂಘಟನೆಗಳು ಅಲ್ಲಿ ಸುದೀರ್ಘ ಕಾಲದಿಂದಲೂ ಕಾರ್ಯನಿರತವಾಗಿವೆ. ಇದರಿಂದ ಪ್ರಧಾನ ಮಂತ್ರಿಗಳ ಸಭೆಗಳ ವ್ಯಾಪಕ ಪರಿಣಾಮವನ್ನು ನೋಡಲು ಸಾಧ್ಯವಾಯಿತು. ನಮ್ಮ ಹಬ್ಬ-ಧಾರ್ಮಿಕ ಉತ್ಸವಗಳಿಂದ ಹಿಡಿದು ಭಾರತದ ಸ್ವಾತಂತ್ರ್ಯದಿನದ ವರೆಗಿನ ಕಾರ್ಯಕ್ರಮಗಳನ್ನು ವಿವಿಧ ದೇಶಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಂದಿನ ಭಾರತೀಯರು ಮತ್ತು ಭಾರತೀಯ ಮೂಲದ ಹಿಂದೂಗಳು ಯಾರ ಅಂಜಿಕೆಯಿಲ್ಲದೇ ತಮ್ಮ ಸಂಸ್ಕೃತಿ, ಸಭ್ಯತೆ ಮತ್ತು ಅಧ್ಯಾತ್ಮದ ಬಗ್ಗೆ ಮಾತನಾಡತೊಡಗಿದ್ದಾರೆ. ಭಾರತದ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಪ್ರಭಾವದಿಂದ ಅವರ ಆತ್ಮವಿಶ್ವಾಸ ಹೆಚ್ಚಾಗಿದೆ.

೬. ‘ಹಿಂದೂ ಫೋಬಿಯಾವನ್ನು ಯಾರು ಹೆಚ್ಚಿಸಿದರು ?

ಯಾವುದೇ ಸಮಾಜ ಜಾಗೃತವಾದರೆ, ತಮ್ಮನ್ನೇ ಶ್ರೇಷ್ಠವೆಂದು ತಿಳಿದುಕೊಳ್ಳುವವರಿಗೆ ತೊಂದರೆಯೆನಿಸುವುದು ಸ್ವಾಭಾವಿಕವೇ ಆಗಿದೆ. ಹಿಂದೂಗಳು ಆವೇಶದಿಂದ ಪ್ರತಿಕ್ರಿಯೆ ಗಳನ್ನು ಕೊಡುತ್ತಿದ್ದರೂ, ಯಾವುದೇ ಧರ್ಮ, ಪಂಥ ಅಥವಾ ಸಮುದಾಯದ ವಿರುದ್ಧ ದ್ವೇಷ ಅಥವಾ ಹಿಂಸಾಚಾರ ಮಾಡುವುದಿಲ್ಲ, ಏಕೆಂದರೆ ಅದು ಅವರ ಸ್ವಭಾವದಲ್ಲಿಯೇ ಇಲ್ಲ. ಆದರೆ ಸಂಘ ಮತ್ತು ಮೋದಿ ಸರಕಾರದ ವಿಚಾರಧಾರೆ ‘ಇತರ ಧರ್ಮಗಳನ್ನು ಹೊಸಕಿ ಹಾಕಲಿದೆ, ಮುಸಲ್ಮಾನರ ಮೇಲೆ ಅತ್ಯಾಚಾರಗಳು ಆಗುತ್ತಿವೆ, ಅವರ ಧಾರ್ಮಿಕ ಕಾರ್ಯದಲ್ಲಿ ಅಡಚಣೆಗಳನ್ನು ತರಲಾಗುತ್ತಿದೆ ಎಂದು ಹೇಳುತ್ತಾ ಪಾಕಿಸ್ತಾನ ಮತ್ತು ಅದರಿಂದ ಪ್ರಭಾವಿತಗೊಂಡಿರುವ ಮುಸಲ್ಮಾನರ ಗುಂಪು ‘ಹಿಂದೂಫೋಬಿಯಾವನ್ನು ಹೆಚ್ಚಿಸಿದೆ. ಇಂತಹ ಭಾಷೆಯನ್ನು ಇಂಗ್ಲೆಂಡ್‌ನ ಮಸೀದಿಗಳಲ್ಲಿ ಮಾತನಾಡುವುದು, ಈಗ ಸಾಮಾನ್ಯವಾಗಿದೆ. ಅಮೇರಿಕಾ ಮತ್ತು ಇತರ ದೇಶಗಳಲ್ಲಿಯೂ ಇದೇ ಪರಿಸ್ಥಿತಿಯಿದೆ. ಇದನ್ನು ಹೇಗೆ ಎದುರಿಸುವುದು ? ಎಂಬ ಪ್ರಶ್ನೆ ನಮ್ಮ ಮುಂದಿದೆ. ಭಾರತವು ಕಳೆದ ವರ್ಷ ಸಂಯುಕ್ತ ರಾಷ್ಟ್ರದಲ್ಲಿ ಎರಡು ಸಲ ಈ ವಿಷಯವನ್ನು ಎತ್ತಿದೆ. ಇದರಿಂದ ಈ ವಿಷಯ ಸಂಯುಕ್ತ ರಾಷ್ಟ್ರದ ಸದಸ್ಯ ದೇಶಗಳವರೆಗೆ ತಲುಪಿದ್ದು, ‘ಜಾಗತಿಕ ಸಂಘಟನೆಗಳು ತಮ್ಮ ಚರ್ಚೆಗಳಲ್ಲಿ ಮತ್ತು ಪ್ರಸ್ತಾವನೆಗಳಲ್ಲಿ ಅದನ್ನು ಸೇರಿಸಬೇಕು ಎನ್ನುವುದು ಭಾರತದ ಪ್ರಯತ್ನವಾಗಿದೆ.

೭. ಜಾಗೃತ ಹಿಂದೂ ಮತ್ತು ಹಿಂದೂ ಸಂಘಟನೆಗಳು ಪ್ರಾರಂಭಿಸಿರುವ ಚಳುವಳಿಯ ಪರಿಣಾಮ

‘ಹಿಂದೂಫೋಬಿಯಾವನ್ನು ಹರಡುವ ಪ್ರಯತ್ನ ಪ್ರಾರಂಭವಾದ ಬಳಿಕ ಜಾಗೃತ ಹಿಂದೂ ಮತ್ತು ಹಿಂದೂ ಸಂಘಟನೆಗಳು ಕೂಡ ಸಮಾನಾಂತರ ಸಕಾರಾತ್ಮಕ ಚಳುವಳಿಯನ್ನು ಪ್ರಾರಂಭಿಸಿವೆ.ಇದರ ಪರಿಣಾಮವೆಂದರೆ ಕಳೆದ ತಿಂಗಳು ಅಮೇರಿಕೆಯ ಜಾರ್ಜಿಯಾದಲ್ಲಿ ‘ಹಿಂದೂ ಫೋಬಿಯಾದ ವಿರುದ್ಧ ಠರಾವನ್ನು ಮಂಡಿಸಲಾಯಿತು ಮತ್ತು ಒಪ್ಪಿಕೊಳ್ಳಲಾಯಿತು. ಈ ಠರಾವಿನಲ್ಲಿ ಕೇವಲ ಹಿಂದೂ ಧರ್ಮ, ಸಭ್ಯತೆ ಮತ್ತು ಸಂಸ್ಕೃತಿಯ ಸತ್ಯವಷ್ಟೇ ಅಲ್ಲ ಅದರ ಜೊತೆಗೆ, ಅಮೇರಿಕಾದ ಹಿಂದೂಗಳ ಯೋಗದಾನವನ್ನು ಒಪ್ಪಿಕೊಳ್ಳಲಾಗಿದೆ. ಹಿಂದೂಫೋಬಿಯಾ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಶಿಪಾರಸ್ಸನ್ನೂ ಕೂಡ ಮಾಡಲಾಗಿದೆ. ಇದು ಹಿಂದೂ ಸಂಘಟನೆಗಳ ಪ್ರಯತ್ನದ ಪರಿಣಾಮವಾಗಿದೆ.

೮. ಸಕ್ರಿಯ ಹಿಂದೂಗಳು ಸದ್ಯದ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾಡಬೇಕಾದ ಪ್ರಯತ್ನ

ಇವರೆಲ್ಲರ ನಿಷ್ಕರ್ಷವೇನೆಂದರೆ, ಪ್ರತಿಕೂಲ ಪರಿಸ್ಥಿತಿಯನ್ನು ಕೂಡ ಅವಕಾಶವೆಂದು ತಿಳಿದುಕೊಂಡು ಹಿಂದೂಗಳು ತಮ್ಮ ಧರ್ಮ, ಸಂಸ್ಕೃತಿ, ಭಾರತೀಯ ರಾಷ್ಟ್ರವಾದದ ಸಂಕಲ್ಪನೆ ಇತ್ಯಾದಿಗಳ ವ್ಯಾಪಕ ಪ್ರಚಾರವನ್ನು ಮಾಡಬೇಕು. ಜಗತ್ತಿನಾ ದ್ಯಂತದ ಹಿಂದೂಗಳಲ್ಲಿ ಆತ್ಮವಿಶ್ವಾಸ ಮೂಡದಿದ್ದರೆ, ಈ ಸಾಂಸ್ಕೃತಿಕ ಮತ್ತು ಶಾರೀರಿಕ ಆಕ್ರಮಣಗಳನ್ನು ಎದುರಿಸಲೂ ಸಾಧ್ಯವಾಗಲಾರದು, ಅಷ್ಟೇ ಅಲ್ಲ ಹಿಂದೂ ಧರ್ಮ, ಸಭ್ಯತೆ ಮತ್ತು ಸಂಸ್ಕೃತಿಯ ಸ್ವೀಕಾರಾರ್ಹತೆಯನ್ನೂ ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಹಿಂದೂ ಧರ್ಮ ಇತರ ಯಾವುದೇ ಧರ್ಮ ದೊಂದಿಗೆ ಸಂಘರ್ಷವನ್ನು ಮಾಡುವುದಿಲ್ಲ; ಏಕೆಂದರೆ ಅದು ಅದರ ಸ್ವಭಾವದಲ್ಲಿಯೇ ಇಲ್ಲ. ಇಸ್ಲಾಮಿ ಭಯೋತ್ಪಾದಕರು ತಮ್ಮ ನಡುವಳಿಕೆಯಿಂದ ಸಂಪೂರ್ಣ ಜಗತ್ತನ್ನು ಹೆದರಿಸಿದ್ದಾರೆ. ಕಾರಾಗೃಹದಲ್ಲಿರುವ ಕ್ರೈಸ್ತರನ್ನು ಮುಸಲ್ಮಾನರ ಆಕ್ರಮಣದಿಂದ ರಕ್ಷಿಸಲು ಬ್ರಿಟನ್‌ನಲ್ಲಿಯೇ ಅನೇಕ ಕ್ರೈಸ್ತರು ಕಾನೂನು ಹೋರಾಟವನ್ನು ಪ್ರಾರಂಭಿಸಿದ್ದಾರೆ. ಅನೇಕ ದೇಶಗಳಲ್ಲಿ ಇದೇ ಪರಿಸ್ಥಿತಿಯಿದೆ. ಇಂತಹದರಲ್ಲಿ ಹಿಂದೂ ಸಮಾಜ ತನ್ನ ಧರ್ಮ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಇಂತಹ ಭೂಮಿಕೆಯನ್ನು ನಿಭಾಯಿಸಬಲ್ಲದು, ಇದರಿಂದ ಸರ್ವಧರ್ಮ ಸಮಭಾವದಂತಹ ಆಚರಣೆ ಜಾಗತಿಕ ಸಮುದಾಯ ಅಂಗೀಕರಿಸುವ ಸಾಧ್ಯತೆ ಮತ್ತಷ್ಟು ಬಲಶಾಲಿ ಆಗಲಿದೆ.

ಶ್ರೀ ಅವಧೇಶ ಕುಮಾರ (ಆಧಾರ : ‘ಹಿಂದಿ ಭಾರತವಾಣಿ ಮತ್ತು ‘ತರುಣ ಭಾರತ, ೧೬.೫.೨೦೨೩)