ಹಿಂದೂ ಧರ್ಮದ ಪುನರುತ್ಥಾನದಲ್ಲಿ ಪ್ರಸಾರ ಮಾಧ್ಯಮಗಳ ಪಾತ್ರ ದೊಡ್ಡದು ! – ಜೈಕೃಷ್ಣನ್ ಜಿ., ನಿರೂಪಕ, ಪಿ. ಗುರುಜ ವಾಹಿನಿ, ಚೆನ್ನೈ

ಜೈಕೃಷ್ಣನ್ ಜಿ.

ಪ್ರಸ್ತುತ ನಾವು ಹಿಂದೂ ಧರ್ಮದ ಪುನರತ್ಥಾನದ ಹೊಸ್ತಿಲಿನಲ್ಲಿದ್ದೇವೆ. ಹಿಂದೂ ಧರ್ಮದ ಪುನರುತ್ಥಾನದಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಹಿಂದೂ ಧರ್ಮದ ರಕ್ಷಣೆಗಾಗಿ ಸಾಮಾಜಿಕ ಮಾಧ್ಯಮಗಳು, ಮುದ್ರಣ ಮಾಧ್ಯಮಗಳು ಮತ್ತು ಎಲೆಕ್ಟ್ರಾನಿಕ್ ಪ್ರಸಾರ ಮಾಧ್ಯಮಗಳು ಸಾಕಷ್ಟು ಕೊಡುಗೆ ನೀಡುವುದು ಅಪೇಕ್ಷಿತವಿದೆ. ಸನಾತನ ಸಂಸ್ಥೆಯು ಕಾಲದ ಅವಶ್ಯಕತೆಯನ್ನು ಮನಗಂಡು ಗೋವಾದಲ್ಲಿ ಅತಿ ದೊಡ್ಡ ಸ್ಟುಡಿಯೋವನ್ನು (ಚಿತ್ರೀಕರಣ ಕೊಠಡಿ) ನಿರ್ಮಿಸಿದೆ. ಸನಾತನವು ಆಧ್ಯಾತ್ಮಿಕ ಸಾಧನೆಯಲ್ಲಿ ಕುಲದೇವತೆಯ ನಾಮಜಪಕ್ಕೆ ಒತ್ತು ನೀಡಿದೆ. ಇತ್ತೀಚಿನ ದಿನಗಳಲ್ಲಿ ಈ ವಿಷಯದ ‘ಕಾಂತಾರ’, ಮತ್ತು ‘ಮಲ್ಲಿಕಾಪುರಂ’ ಚಿತ್ರಗಳೂ ಬಂದಿವೆ ಎಂದು ಜೈಕೃಷ್ಣನ್ ಇವರು ಹೇಳಿದರು.

(ಸೌಜನ್ಯ – Hindu Janajagruti Samiti)

ಇಂದು ಅನೇಕರು ದಾಳಿಯ ಭಯದಿಂದ ಅಲ್ಪಸಂಖ್ಯಾತರ ಪಂಥದ ಬಗ್ಗೆ ಮಾತನಾಡುವುದಿಲ್ಲ; ಆದರೆ ಈಗ ಹಿಂದೂ ಧರ್ಮದ ಕಾರ್ಯವನ್ನು ಧೈರ್ಯದಿಂದ ಮುನ್ನಡೆಸುವ ಸಮಯ ಬಂದಿದೆ ಎಂದು ಜೈಕೃಷ್ಣನ್ ಇವರು ಹೇಳಿದರು.

ವೈಶಿಷ್ಟ್ಯಪೂರ್ಣ ಅಂಶಗಳು !

೧. ಅಧಿವೇಶನದಲ್ಲಿ ಭಾಗವಹಿಸಿರುವ ಹಿಂದೂತ್ವನಿಷ್ಠರಿಗೆ ಪರಸ್ಪರ ಭೇಟಿಯಾದ ನಂತರ ಬಹಳ ಆನಂದ ಆಗಿರುವುದು ಕಂಡುಬಂದಿತು. ಅಧಿವೇಶನದ ಬಿಡುವಿನಲ್ಲಿ ಎಲ್ಲ ಹಿಂದುತ್ವನಿಷ್ಠರು ಉತ್ಸುಕತೆಯಿಂದ ಪರಸ್ಪರ ವಿಚಾರಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಎಲ್ಲಾ ಹಿಂದುತ್ವನಿಷ್ಠರಲ್ಲಿ ಕುಟುಂಬ ಭಾವನೆ ಕಂಡು ಬಂದಿತು.

೨. ಅಧಿವೇಶನದ ನಿಮಿತ್ತ ಈ ಶಬ್ದ `ಟ್ವಿಟರ್’ ಟ್ರೆಂಡಿಂಗ್ ಇತ್ತು. ಈ ಮೂಲಕ ಹಿಂದೂ ರಾಷ್ಟ್ರದ ಚರ್ಚೆ ದೇಶದಾದ್ಯಂತ ನಡೆಯುತ್ತಿರುವುದು ಕಂಡುಬಂದಿತು.

ಅಧಿವೇಶನದ ಸ್ಥಳದಲ್ಲಿರುವ ವೈಶಿಷ್ಟಪೂರ್ಣ ಫಲಕಗಳ ಪ್ರದರ್ಶನ !

೧. ‘ಪ್ರಪಂಚದಲ್ಲಿ ಒಂದೇ ಒಂದು ಕೂಡ ಹಿಂದೂ ರಾಷ್ಟ್ರವಿಲ್ಲ’, ಇದರ ಮಾಹಿತಿ ನೀಡುವ ಕೋಷ್ಟಕ ಸಭಾಗೃಹದ ಪ್ರದರ್ಶನದಲ್ಲಿ ಹಾಕಲಾಗಿತ್ತು. ಇದರಲ್ಲಿ ಜಗತ್ತಿನಲ್ಲಿನ ಮುಸಲ್ಮಾನ್, ಕ್ರೈಸ್ತ, ಬೌದ್ಧ, ಹಾಗೂ ಇತರ ಧರ್ಮದ ರಾಷ್ಟ್ರಗಳ ಅಂಕಿ ಅಂಶಗಳನ್ನು ನೀಡಿದ್ದರು. ಇದರಲ್ಲಿ ನೀಡಿರುವ ಮಾಹಿತಿಯಲ್ಲಿ ಹಿಂದೂ ರಾಷ್ಟ್ರ ಇಲ್ಲದೆ ಇರುವುದು ಭಾರತದಲ್ಲಿ ಹಿಂದೂರಾಷ್ಟ್ರ ಸ್ಥಾಪನೆ ಮಾಡುವುದಕ್ಕಾಗಿ ಉತ್ತೇಜಿತಗೊಳಿಸುವದಾಗಿತ್ತು.

೨. ‘ಹಿಂದೂ ರಾಷ್ಟ್ರ ಹೇಗೆ ಇರುವುದು ?’ ಈ ಫಲಕಗಳ ಮೂಲಕ ‘ಹಿಂದೂ ರಾಷ್ಟ್ರದಲ್ಲಿ ‘ಆಡಳಿತಗಾರರು, ಕಾನೂನು, ಸಮಾಜ, ದಂಡನೀತಿ, ರಕ್ಷಣಾ ವ್ಯವಸ್ಥೆ, ಧರ್ಮಶಿಕ್ಷಣ ನೀಡುವ ವ್ಯವಸ್ಥೆ ಹೇಗೆ ಇರುವುದು ?’ ಇದರ ಕುರಿತು ಮಾಹಿತಿ ನೀಡಲಾಗಿತ್ತು. ಇದರ ಜೊತೆಗೆ ಆಧ್ಯಾತ್ಮಿಕ ವಿಷಯದ ಮಾಹಿತಿ, ಹಿಂದೂ ಜನಜಾಗೃತಿ ಸಮಿತಿ, ಹಿಂದೂ ವಿಧಿಜ್ಞ ಪರಿಷತ್, ಇಂತಹ ವಿವಿಧ ಭಾಗಗಳ ಕಾರ್ಯದ ಮಾಹಿತಿ ನೀಡುವ ವಿವಿಧ ಫಲಕಗಳು ಸಭಾಗೃಹದ ಸ್ಥಳದಲ್ಲಿ ಹಾಕಲಾಗಿತ್ತು.