ಬೆಂಗಳೂರಿನ ಉದ್ಯಮಿ ಶ್ರೀ. ಜಯರಾಮ ಎಸ್. (೭೩ ವರ್ಷ) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ಜನನ-ಮರಣ ಚಕ್ರದಿಂದ ಮುಕ್ತ !

ಶ್ರೀ. ಜಯರಾಮ (ಎಡಗಡೆ) ಇವರ ಸತ್ಕಾರ ಮಾಡುತ್ತಿರುವ ಪೂ. ರಮಾನಂದ ಗೌಡ

ಬೆಂಗಳೂರು – ಸಾಧನೆ ಬಗ್ಗೆ ತಳಮಳ, ಸಂತರ ಬಗ್ಗೆ ಭಾವ, ಆಜ್ಞಾಪಾಲನೆ ಮಾಡುವುದು ಇಂತಹ ಅನೇಕ ದೈವಿ ಗುಣಗಳಿರುವ ಬೆಂಗಳೂರಿನ ಉದ್ಯಮಿ ಶ್ರೀ. ಜಯರಾಮ ಎಸ್. (೭೩ ವರ್ಷ) ಇವರು ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನನ ಮರಣ ಚಕ್ರದಿಂದ ಬಿಡುಗಡೆಯಾದರು ಎಂದು ಜೂನ್ ೮ ರಂದು ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ (ಪೂ. ಅಣ್ಣ) ಇವರು ಸತ್ಸಂಗವೊಂದರಲ್ಲಿ ಘೋಷಿಸಿದರು. ಇದನ್ನು ಕೇಳಿ ನೆರೆದಿದ್ದ ಎಲ್ಲ ಸಾಧಕರಿಗೂ ಭಾವಜಾಗೃತಿಯಾಯಿತು. ಅವರು ಭಗವಾನ ಶ್ರೀಕೃಷ್ಣ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತಪಡಿಸಿದರು. ಈ ವೇಳೆ ಪೂ. ರಮಾನಂದ ಗೌಡ ಇವರು ಶ್ರೀ. ಜಯರಾಮ ಇವರಿಗೆ ಅವರ ಇಷ್ಟದೇವತೆ ಪ್ರಭು ಶ್ರೀರಾಮನ ಭಾವಚಿತ್ರವನ್ನು ನೀಡಿ ಸತ್ಕಾರ ಮಾಡಿದರು. ಅನಂತರ ಶ್ರೀ. ಜಯರಾಮ ಇವರು ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು,

ಶ್ರೀ. ಜಯರಾಮ ಇವರ ಮನೋಗತ ನಾನು ಅನೇಕ ವರ್ಷಗಳಿಂದ ನನ್ನ ಗುರುಗಳು ಯಾರು ? ಎಂದು ವಿಚಾರ ಮಾಡುತ್ತಿದ್ದೆ. ಒಂದು ದಿನ ನನಗೆ ಸನಾತನ ಸಂಸ್ಥೆಯ ಸಾಧನಾವೃದ್ಧಿ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು, ಅನಂತರ ನಿರಂತರವಾಗಿ ನಾನು ಶೇ. ೬೧ ತಲುಪಿ ಪ್ರಗತಿ ಮಾಡಿಕೊಳ್ಳಬೇಕು ಎಂದು ಅನಿಸುತ್ತಿತ್ತು. ಹಗಲು ರಾತ್ರಿ ಅದೇ ವಿಚಾರ ಮಾಡುತ್ತಿದ್ದೆ. ಬೆಂಗಳೂರಿನಲ್ಲಿ ಜಿಲ್ಲಾ ಅಧಿವೇಶನದ ಸಮಯದಲ್ಲಿ ಸಂತರ ಭೇಟಿಯಾಗಿ ‘ನನಗೆ ಶೇ. ೬೧ ಮಾಡಿಕೊಳ್ಳಬೇಕಾದರೆ ನಾನು ಹೇಗೆ ಪ್ರಯತ್ನ ಮಾಡಲಿ ? ಎಂದು ಕೇಳಿದೆ. ಆಗ ನನ್ನ ಸಾಧನೆಯಲ್ಲಿ ಧ್ಯೇಯ ಇಟ್ಟು ಪ್ರಯತ್ನ ಮಾಡಲು ಹೇಳಿದರು ಮತ್ತು ಇತರ ಮಾರ್ಗದರ್ಶನ ಮಾಡಿದರು. ಅನಂತರ ನಾನು ಅವರು ಹೇಳಿದಂತೆ ಪ್ರಯತ್ನ ಪ್ರಾರಂಭ ಮಾಡಿದೆ. ಇತ್ತೀಚೆಗೆ ಕೆಲವು ದಿನಗಳ ಕಾಲ ನನಗೆ ಪೂ. ಅಣ್ಣನವರೊಂದಿಗೆ ಇರಲು ಅವಕಾಶ ಸಿಕ್ಕಿತು. ಆಗ ನನಗೆ ‘ನನ್ನದು ಶೇ. ೬೧ ಅಧ್ಯಾತ್ಮಿಕ ಸ್ತರ ಆಗಬೇಕು, ಎಂಬ ಇಚ್ಛೆ ನಾಶವಾಯಿತು ಮತ್ತು ಕೇವಲ ಪೂ. ಅಣ್ಣನವರೊಂದಿಗೆ ಇರಬೇಕು ಮತ್ತು ಸಾಧನೆ ಹೆಚ್ಚಿಸಬೇಕು ಎಂದು ಅನಿಸಲು ಪ್ರಾರಂಭವಾಯಿತು. ಕಳೆದ ಕೆಲವು ದಿನಗಳಿಂದ ನನಗೆ ಸಂತರ ಜೊತೆ ಇದ್ದದ್ದು ನೆನಪಾಗುವುದು ಮತ್ತು ಸಂತರ ಜೊತೆಗೆ ಪ್ರಭು ಶ್ರೀರಾಮ ಕಾಣುವುದು ಹೀಗೆ ಆಗುತ್ತಿತ್ತು. ಇದರಿಂದ ನಿರಂತರ ಭಾವಜಾಗೃತಿಯಾಗುತ್ತಿತ್ತು. ಇಂದು ಸಂತರ ದಿವ್ಯ ಉಪಸ್ಥಿತಿಯಲ್ಲಿ ನನ್ನ ಆಧ್ಯಾತ್ಮಿಕ ಪ್ರಗತಿಯಾಯಿತು ಎಂದು ಘೋಷಣೆ ಮಾಡಿದ್ದು ತುಂಬಾ ಕೃತಜ್ಞತೆ ಅನಿಸಿ ಆನಂದವಾಗುತ್ತಿದೆ.

ಸಂತರ ಆಜ್ಞಾಪಾಲನೆಯನ್ನು ಕೂಡಲೇ ಮಾಡುವ ಶ್ರೀ. ಜಯರಾಮ ! – ಓರ್ವಸಾಧಕ

ಶ್ರೀ. ಜಯರಾಮ ಇವರು ಹಿರಿಯ ಉದ್ಯಮಿಗಳಾಗಿದ್ದಾರೆ. ಬೆಂಗಳೂರಿನಲ್ಲಿ ೩ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಇವರು ಚಿಕ್ಕಂದಿನಿಂದಲೇ ಪ್ರಭು ಶ್ರೀರಾಮನ ಭಕ್ತರಾಗಿದ್ದಾರೆ. ಏನೇ ಕೃತಿ ಮಾಡುವುದಿದ್ದರೂ ಪ್ರಭು ಶ್ರೀ ರಾಮನಿಗೆ ಪ್ರಾರ್ಥನೆ ಮಾಡಿಯೇ ಮಾಡುತ್ತಿದ್ದರು. ಅವರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರನ್ನು ಸ್ವಾವಲಂಬಿ ಮಾಡಿದ್ದಾರೆ. ಅಜ್ಞಾಪಾಲನೆ ಎಂದು ಅವರು ಸಂತರು ಹೇಳಿದ ಕೃತಿಯನ್ನು ಕೂಡಲೇ ಮಾಡುತ್ತಾರೆ. ಅವರ ಕೃತಿಗಳಿಂದ ನಮಗೂ ಪ್ರೇರಣೆ ಸಿಗುತ್ತದೆ.