ಭಾರತ ಸರಕಾರ ಟ್ವಿಟರ್ ಮೇಲೆ ನಿಷೇಧ ಹೇರುವವರಿದ್ದರಂತೆ !

  • ಟ್ವಿಟರ್ ನ ಹಿಂದೂದ್ವೇಷಿ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಇವರ ದಾವೆ

  • ಕೃಷಿ ಕಾನೂನ ವಿರೋಧದ ಆಂದೋಲನದ ಸಮಯದಲ್ಲಿ ಸರಕಾರದ ವಿರುದ್ಧ ವಾರ್ತೆ ನೀಡಿದ್ದರಿಂದ ಟ್ವಿಟರ್ ನಿಷೇಧಿಸುವಂತೆ ಆದೇಶ ನೀಡಿರುವ ದಾವೆ !

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಮಾಜಿ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ

ವಾಷಿಂಗ್ಟನ್ (ಅಮೇರಿಕಾ) – ಟ್ವಿಟರ್ ನ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಇವರು ಭಾರತ ಸರಕಾರದ ಮೇಲೆ ಆರೋಪ ಮಾಡಿದ್ದಾರೆ. ಕಮ್ಯುನಿಸ್ಟ್ ವಿಚಾರಧಾರೆಯ ಹಿಂದೂ ದ್ವೇಷಿ ಡಾರ್ಸೆ ಇವರು, ಭಾರತದಲ್ಲಿ ಕೃಷಿ ಕಾನೂನಿನ ವಿರುದ್ಧ ಆಂದೋಲನ ನಡೆಯುತ್ತಿತ್ತೋ, ಆಗ ಭಾರತ ಸರಕಾರವು ಟ್ವಿಟರ್ ಮೇಲೆ ಒತ್ತಡ ತಂದಿತ್ತು. ಸರಕಾರವು ಇದರ ವಿರುದ್ಧ ಲೇಖನ ಬರೆಯುವ ಕೆಲವು ಪತ್ರಕರ್ತರ ಟ್ವಿಟರ್ ಖಾತೆ ಬಂದ್ ಮಾಡಲು ನಮಗೆ ಮೇಲಿಂದ ಮೇಲೆ ಹೇಳುತ್ತಿತ್ತು. ಅದೇ ರೀತಿ ನಾವು ಈ ಕ್ರಮ ಕೈಗೊಳ್ಳದಿದ್ದರೇ, ಭಾರತದಲ್ಲಿ ನಮ್ಮ ಮೇಲೆ ನಿಷೇಧ ಹೇರಲಾಗುವುದು, ಭಾರತದಲ್ಲಿ ನಮ್ಮ ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಲಾಗುವುದು ಎಂದು ನಮಗೆ ಬೆದರಿಕೆ ನೀಡಲಾಗಿತ್ತು ಎಂದು ಹೇಳಿದರು. ಈ ಬಗ್ಗೆ ಇಲ್ಲಿಯವರೆಗೆ ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಇವರು ಸರಕಾರವನ್ನು ಟಿಕಿಸಿದ್ದಾರೆ. ಜಾಕ್ ಡಾರ್ಸೆ ಇವರು ಈ ರೀತಿಯ ದಾವೆ ಟರ್ಕಿಯ ಸರಕಾರದ ಮೇಲೆ ಕೂಡ ಮಾಡಿದ್ದಾರೆ.

ಸಂಪಾದಕರ ನಿಲುವು

ಹಿಂದುತ್ವನಿಷ್ಠ ಸಂಘಟನೆ ಮತ್ತು ವ್ಯಕ್ತಿಯ ಟ್ವಿಟರ್ ಖಾತೆಯ ವಿರೋಧದಲ್ಲಿ ಅನ್ಯಾಯವಾಗಿ ಕ್ರಮ ಕೈಗೊಳ್ಳುವುದರ ಹಿಂದೆ ಜಾಕ್ ಡಾರ್ಸೆ ಇವರಂತಹ ಹಿಂದೂ ದ್ವೇಷಿಗಳೇ ಇದ್ದರು, ಇದು ಎಲ್ಲರಿಗೆ ತಿಳಿದಿರುವ ಸತ್ಯವಾಗಿದೆ. ಆದ್ದರಿಂದ ಹಿಂದೂದ್ವೇಷಿ ಡಾರ್ಸೆ ಇವರಿಂದ ಇಂತಹ ದಾವೆ ಮಾಡುವುದು, ಇದರಲ್ಲಿ ಆಶ್ಚರ್ಯ ಏನು ಇಲ್ಲ !

ಕೃಷಿ ಕಾನೂನಿನ ವಿರೋಧ ಮಾಡುವುದರ ಹಿಂದೆ ಖಲಿಸ್ತಾನಿ ಭಯೋತ್ಪಾದಕರು ಮತ್ತು ಜಿಹಾದಿ ಶಕ್ತಿಯ ಕೈವಾಡವಿತ್ತು. ಇಂತಹ ಪ್ರತ್ಯೇಕತಾವಾದಿ ಶಕ್ತಿಗಳಿಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡುವ ಪತ್ರಕರ್ತರ ಕೃತ್ಯಗಳ ಮೇಲೆ ಕ್ರಮ ಕೈಗೊಳ್ಳಲೇಬೇಕು, ಎಂದು ಕೇಂದ್ರ ಸರಕಾರ ಡಾರ್ಸೆ ಇವರಿಗೆ ತಪರಾಕಿ ನೀಡಬೇಕು !