ಭಾರತೀಯ ಸೈನಿಕನ ಪತ್ನಿಗೆ ಕಿರುಕುಳ ನೀಡಿ ಥಳಿಸಿರುವವರ ಬಂಧನ

ಸೈನಿಕನು ವಿಡಿಯೋ ಪ್ರಸಾರ ಮಾಡಿ ಕ್ರಮ ಕೈಗೊಳ್ಳಲು ಆಗ್ರಹ !

ಹವಾಲ್ದಾರ್ ಪ್ರಭಾಕರನ್ ಘಟನೆಯ ಮಾಹಿತಿ ಪೊಲೀಸರಿಗೆ ನೀಡುತ್ತಾ ಸಹಾಯಕ್ಕಾಗಿ ಮನವಿ ಮಾಡಿದರು

ಚೆನ್ನೈ (ತಮಿಳುನಾಡು) – ಭಾರತೀಯ ಸೈನಿಕನ ಪತ್ನಿಗೆ ಕಿರುಕುಳ ನೀಡಿ ಥಳಿಸಿರುವ ಪ್ರಕರಣದಲ್ಲಿ ಪೊಲೀಸರು ರಾಮ ಮತ್ತು ಹರಿಪ್ರಸಾದ ಈ ಇಬ್ಬರನ್ನು ಬಂಧಿಸಿದ್ದಾರೆ. ಹವಾಲ್ದಾರ್ ಪ್ರಭಾಕರನ್ ಎಂದು ಈ ಸೈನಿಕನ ಹೆಸರಾಗಿದ್ದು ಅವರು ಇದರ ಕುರಿತು ಒಂದು ವಿಡಿಯೋ ತಯಾರಿಸಿ ಈ ಘಟನೆಯ ಮಾಹಿತಿ ಪೊಲೀಸರಿಗೆ ನೀಡುತ್ತಾ ಸಹಾಯಕ್ಕಾಗಿ ಮನವಿ ಮಾಡಿದ್ದರು. ಪ್ರಭಾಕರನ್ ತಮಿಳುನಾಡಿನಲ್ಲಿ ಪಡವೇಡು ಗ್ರಾಮದ ನಿವಾಸಿಯಾಗಿದ್ದಾರೆ. ಪ್ರಸ್ತುತ ಅವರು ಕಾಶ್ಮೀರದಲ್ಲಿ ನೇಮಕಗೊಂಡಿದ್ದಾರೆ. ಪ್ರಭಾಕರನ್ ಇವರ ಪತ್ನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

೧. ಪ್ರಭಾಕರನ್ ಇವರು, ನನ್ನ ಪತ್ನಿ ತಮಿಳುನಾಡಿನಲ್ಲಿನ ಒಂದು ಗ್ರಾಮದಲ್ಲಿ ಬಾಡಿಗೆ ಅಂಗಡಿ ನಡೆಸುತ್ತಾಳೆ; ಆದರೆ ಕೆಲವು ಜನರು ಆಕೆಗೆ ಬಹಳ ದಿನಗಳಿಂದ ಕಿರುಕುಳ ನೀಡುತ್ತಿದ್ದಾರೆ. ಗೂಂಡಾಗಳು ಅಂಗಡಿಯಲ್ಲಿನ ಸಾಮಾನು ಹೊರಗೆ ಎಸೆದಿದ್ದಾರೆ. ಅವರು ನನ್ನ ಕುಟುಂಬದವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಮತ್ತು ಹೆದರಿಸಿದ್ದಾರೆ. ನನ್ನ ಪತ್ನಿಯನ್ನು ಅರೆನಗ್ನಗೊಳಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಾನು ಪೋಲಿಸ್ ಅಧಿಕಾರಿಗಳ ಬಳಿ ಮನವಿ ಕಳುಹಿಸಿದ್ದೇನೆ ಅವರು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ. ದಯವಿಟ್ಟು ಪೊಲೀಸ ಮಹಾ ಸಂಚಾಲಕರು ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

೨. ಭಾರತೀಯ ಸೈನ್ಯದ ಪ್ರಭಾಕರನ್ ಇವರ ಕುಟುಂಬದವರಿಗೆ ಸಂಪೂರ್ಣ ಸುರಕ್ಷೆಯ ಆಶ್ವಾಸನೆ ನೀಡಿದ್ದಾರೆ. ಸ್ಥಳೀಯ ಸೈನ್ಯಾಧಿಕಾರಿ ಕುಟುಂಬದ ಸಂಪರ್ಕದಲ್ಲಿ ಇದ್ದಾರೆ ಮತ್ತು ಸೈನಿಕನ ಕುಟುಂಬದವರ ಸುರಕ್ಷತೆಯ ಖಾತ್ರಿ ಪಡಿಸುವುದಕ್ಕಾಗಿ ಸ್ಥಳೀಯ ಪೊಲೀಸ ಮತ್ತು ನಗರ ಆಡಳಿತದವರ ಜೊತೆ ಮಾತುಕತೆ ನಡೆಸಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ರಕ್ಷಣೆಗಾಗಿ ಪ್ರಾಣಪಣಕ್ಕೆ ಇಟ್ಟು ಗಡಿಯಲ್ಲಿ ನೇಮಕಗೊಂಡಿರುವ ಸೈನಿಕನ ಪತ್ನಿಯ ಮೇಲೆ ಈ ರೀತಿ ದಾಳಿ ನಡೆಸಿರುವುದು ಲಜ್ಜಾಸ್ಪದ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !