ಇಸ್ಲಾಮಿಕ್ ಇಂಡೋನೇಷ್ಯಾದಲ್ಲಿ, ಅವಿವಾಹಿತ ಜೋಡಿಗಳು ಚುಂಬಿಸಿದ್ದಕ್ಕಾಗಿ ಪ್ರತಿಯೊಬ್ಬರಿಗೆ 21 ಚಾಟಿ ಶಿಕ್ಷೆ

ಜಕಾರ್ತಾ (ಇಂಡೋನೇಷಿಯಾ) – ಸುಮಾತ್ರಾ ದ್ವೀಪದ ನಗರವೊಂದರಲ್ಲಿ ಅವಿವಾಹಿತರಿಬ್ಬರಿಗೆ 21-21 ಚಾಟೀಯೇಟಿನ ಶಿಕ್ಷೆ ವಿಧಿಸಲಾಯಿತು. ಇವರಿಬ್ಬರೂ ಕಾರಿನಲ್ಲಿ ಚುಂಬಿಸುತ್ತಿದ್ದರಿಂದ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯುವತಿಗೆ 23 ವರ್ಷ, ಯುವಕನು 24 ವರ್ಷದವನಾಗಿದ್ದಾನೆ. ಇಬ್ಬರಿಗೂ ಷರಿಯತ್ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಚಾಟಿಯೇಟು ಬೀಸುವಾಗ ಯುವತಿಯು ಇದ್ದಕ್ಕಿದ್ದಂತೆ ಕೆಳಗೆ ಕುಸಿದು ‘ನನಗೆ ಹೊಡೆಯಬೇಡಿ’ ಎಂದು ಅಂಗಲಾಚಿದಳು ವಾಸ್ತವದಲ್ಲಿ 25 ಚಾಟೀಯೇಟಿನ ಶಿಕ್ಷೆ ವಿಧಿಸಲಾಗಿತ್ತು. ನಂತರ ಅದನ್ನು 21ಕ್ಕೆ ಇಳಿಸಲಾಯಿತು. ಇಬ್ಬರನ್ನು ಥಳಿಸುತ್ತಿರುವಾಗ, ಜನರು ಘಟನೆಯನ್ನು ಚಿತ್ರೀಕರಿಸುತ್ತಿದ್ದರು. ಸ್ಥಳಿಯ ಸರಕಾರಿ ಅಧಿಕಾರಿಗಳು, ಇಬ್ಬರೂ ‘ಜಿನಾಯತ್’ ಅಂದರೆ ಇಸ್ಲಾಂ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.

ಇಂಡೊನೇಷ್ಯಾದಲ್ಲಿ ಶೇ. 90 ರಷ್ಟು ಇಸ್ಲಾಂ ಧರ್ಮವನ್ನು ಅನುಸರಿಸುತ್ತಾರೆ. ದೇಶದ ಕೆಲವು ರಾಜ್ಯಗಳಲ್ಲಿ ಷರಿಯತ್ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಇದರ ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳಿಗೆ ಒಟ್ಟಾಗುವುದನ್ನು ನಿಷೇಧಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಪ್ರಗತಿಪರದ ಉಪದೇಶ ನೀಡುವ ತಥಾಕಥಿತ ಅಧುನಿಕತಾವಾದಿಗಳು ಈ ಘಟನೆಯ ಬಗ್ಗೆ ಏಕೆ ಮೌನವಾಗಿದ್ದಾರೆ ?