‘ಯಾವುದೇ ರೋಗವು ಶರೀರದಲ್ಲಿನ ವಾತ, ಪಿತ್ತ, ಮತ್ತು ಕಫ ಇವುಗಳ ಪ್ರಮಾಣದಲ್ಲಿನ ಬದಲಾವಣೆಯಿಂದ ಉಂಟಾಗುತ್ತದೆ ಎಂದು ಆಯುರ್ವೇದವು ಹೇಳುತ್ತದೆ. ಆಯುರ್ವೇದಕ್ಕನುಸಾರ ಅರ್ಬುದರೋಗದಿಂದ ಹಿಡಿದು ಹೃದಯರೋಗಗಳ ವರೆಗೆ ಮತ್ತು ಪಾರ್ಶ್ವವಾಯುವಿನಿಂದ (ಪ್ಯಾರಾಲಿಸಿಸ್‌ನಿಂದ) ಹಿಡಿದು ಮಧುಮೇಹದವರೆಗೆ ಎಲ್ಲ ರೋಗಗಳಿಗೆ ಇವೇ ಮೂಲವಾಗಿವೆ. ಶರೀರದಲ್ಲಿನ ತ್ರಿದೋಷಗಳಲ್ಲಿ ಯಾವುದೇ ದೋಷದ ಪ್ರಮಾಣ ಹೆಚ್ಚು ಕಡಿಮೆಯಾದರೆ ಅಥವಾ ಅವುಗಳ ಗುಣ ಬದಲಾವಣೆಯಾಗಿ ಕಲುಷಿತವಾದರೆ, ಅವುಗಳ ಕಣಗಳಿಂದ ಶರೀರದಲ್ಲಿ ಅನಾರೋಗ್ಯವಾಗುತ್ತದೆ. ‘ಆಹಾರ ಮತ್ತು ವಿಹಾರವನ್ನು (ವ್ಯಾಯಾಮ ಮತ್ತು ಯೋಗ್ಯ ದಿನಚರ್ಯೆ) ಸಮಪರ್ಕವಾಗಿರಿಸಿ, ಹಾಗೆಯೇ ದೇಹದಲ್ಲಿ ವಾತ, ಪಿತ್ತ ಮತ್ತು ಕಫಗಳ ಕಣಗಳ ಪ್ರಮಾಣವು ಸಮತೋಲನದಲ್ಲಿದ್ದರೆ ಅಥವಾ ಸಾಮರಸ್ಯವಿದ್ದರೆ ರೋಗಗಳನ್ನು ತಡೆಯಬಹುದು ಅಥವಾ ತೀವ್ರತೆಯನ್ನು ಕಡಿಮೆ ಮಾಡಬಹುದು ಅಥವಾ ಗುಣಪಡಿಸಬಹುದು, ಎಂದು ಆಯುರ್ವೇದ ಹೇಳುತ್ತದೆ.
ರೋಗದ ಮೂಲಕ್ಕೆ ಹೋಗಿ ಅದರ ನಿವಾರಣೆಯ ಉಪಾಯವನ್ನು ಹುಡುಕಲು ಕಲಿಸುವ ಆಯುರ್ವೇದ !
‘ನನ್ನ ಪ್ರಕೃತಿ (ಆರೋಗ್ಯ) ಏಕೆ ಸರಿಯಿಲ್ಲ ? ಎಂಬ ನಿಮ್ಮ ಪ್ರಶ್ನೆಗೆ ಆಧುನಿಕ ವೈದ್ಯರಿಂದ ಏನೇನು ಉತ್ತರಗಳು ಸಿಗುತ್ತವೆ ? ‘ನಿಮ್ಮ ರಕ್ತ ಕಡಿಮೆ ಆಗಿದೆ, ನಿಮ್ಮಲ್ಲಿ ‘ಕ್ಯಾಲ್ಶಿಯಮ್ ಕಡಿಮೆ ಇದೆ, ನಿಮ್ಮ ಕಶೇರುಖಂಡಗಳಲ್ಲಿ (ವರ್‌ಟಿಬ್ರಾ) ‘ಗ್ಯಾಪ್ ಇದೆ, ನಿಮ್ಮ ಶರೀರದಲ್ಲಿನ ಕ್ಷಾರ ಕಡಿಮೆಯಾಗಿದೆ, ನಿಮ್ಮ ‘ಥೈರಾಯ್ಡ್ ದೊಡ್ಡದಾಗಿದೆ, ನಿಮ್ಮ ಮೂಳೆಗಳು ಸವೆದಿವೆ ಅಥವಾ ನಿಮ್ಮ ರಕ್ತದಲ್ಲಿ ಸಕ್ಕರೆ ಹೆಚ್ಚಿದೆ ಇತ್ಯಾದಿ. ಅವುಗಳಿಗೆ ಸಲಹೆಯನ್ನೂ ನೀಡಲಾಗುತ್ತದೆ “ಇದಕ್ಕಾಗಿ ನೀವು ಔಷಧಿಗಳನ್ನು ತೆಗೆದುಕೊಳ್ಳಬೇಕಾಗುವುದು. ಕೆಲವೊಮ್ಮೆ ಈ ಔಷಧಿಗಳನ್ನು ಜೀವಮಾನಪರ್ಯಂತ ಸೇವಿಸಬೇಕಾಗುತ್ತದೆ, ಹೀಗೂ ಸಲಹೆಯನ್ನು ನೀಡಲಾಗುತ್ತದೆ. ಇದರ ಕೊನೆ ‘ಈಗ ಈ ಅವಯವವನ್ನು ಬದಲಾಯಿಸಬೇಕು ಅಥವಾ ತೆಗೆಯ ಬೇಕು. ಇದಕ್ಕೆ ಪರ್ಯಾಯವಿಲ್ಲ ಇತ್ಯಾದಿ ಉತ್ತರಗಳಿರುತ್ತವೆ.
ಸರ್ವಸಾಧಾರಣ ಒಂದು ಮಧ್ಯಮವರ್ಗದ ಕುಟುಂಬದಲ್ಲಿನ ಊಟವು ಸಮತೋಲನದಲ್ಲಿರುತ್ತದೆ. ಇಷ್ಟು ತಿಂದರೂ ಕೂಡ ಸುಶಿಕ್ಷಿತ ಜನರಲ್ಲೂ ಒಂದು ವಿಶಿಷ್ಟ ಘಟಕದ ಕೊರತೆ (ಡೆಫಿಶಿಯನ್ಸಿ) ಅಥವಾ ಹೆಚ್ಚು ಏಕೆ ಆಗುತ್ತದೆ ? ಆದುದರಿಂದ ಜೀವಮಾನಪರ್ಯಂತ ಔಷಧಿಗಳನ್ನು ತೆಗೆದುಕೊಳ್ಳಿ, ಇದು ಕೊನೆಯ ಉತ್ತರವಲ್ಲ ! ‘ರಕ್ತ ಕಡಿಮೆ ಇದೆ; ಎಂದು ರಕ್ತವನ್ನು ಹೆಚ್ಚಿಸುವ ಔಷಧಿಗಳನ್ನು ತೆಗೆದುಕೊಳ್ಳಿ ಮತ್ತು ಸಕ್ಕರೆ ಹೆಚ್ಚಾಗಿದೆ; ಎಂದು ಸಕ್ಕರೆ ಕಡಿಮೆ ಮಾಡುವ ಇನ್ಸುಲಿನ್‌ನಂತಹ ಕೃತಕ ಔಷಧಿಯನ್ನು ಜೀವಮಾನಪರ್ಯಂತ ತೆಗೆದುಕೊಳ್ಳಿ, ಇವೇನು ಉತ್ತರಗಳಲ್ಲ. ಅದಕ್ಕಾಗಿ ಮೂಲದಿಂದಲೇ ರೋಗಮುಕ್ತ ಮಾಡುವ ಆಯುರ್ವೇದವನ್ನು ಅನುಸರಿಸುವುದು ಉತ್ತಮ !