‘ರೋಗವಾಗದಂತೆ ಆಯುರ್ವೇದದಲ್ಲಿ ಹೇಳಿರುವ ಉಪಾಯಗಳು !

. ಪ್ರಜ್ಞಾಪರಾಧ (ಬುದ್ಧಿ, ಸ್ಥೈರ್ಯ, ಸ್ಮೃತಿ ಇವುಗಳಿಂದ ದೂರ ಹೋಗಿ, ಹಾನಿಯ ಬಗ್ಗೆ ಗೊತ್ತಿದ್ದರೂ ಶಾರೀರಿಕ, ವಾಚಿಕ ಅಥವಾ ಮಾನಸಿಕ ಸ್ತರದಲ್ಲಿ ಮತ್ತೆ ಮತ್ತೆ ಮಾಡಿದ ಅಯೋಗ್ಯ ಕೃತ್ಯಗಳು) ಆಗಲು ಬಿಡದಿರುವುದು.

. ಮನಸ್ಸು ಮತ್ತು ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಮತ್ತು ಕಾಮ, ಕ್ರೋಧ ಇತ್ಯಾದಿಗಳ ಪ್ರಚೋದನೆಯನ್ನು ನಿಯಂತ್ರಣದಲ್ಲಿಡುವುದು.

. ಕೆಮ್ಮು, ಶೌಚ, ಮೂತ್ರ ಇತ್ಯಾದಿಗಳ ನೈಸರ್ಗಿಕ ವೇಗವನ್ನು ನಿಯಂತ್ರಿಸ ಬಾರದು.

. ಆರೋಗ್ಯಕ್ಕಾಗಿ ಹಿತಕರ ಆಹಾರ-ವಿಹಾರ ಇರಬೇಕು.

. ವಸಂತಋತುವಿನಲ್ಲಿ ಕಫ ಹೆಚ್ಚಾಗಬಾರದೆಂದು; ವಾಂತಿ ಮಾಡಿಕೊಳ್ಳುವುದು, ಶರದ ಋತುವಿನಲ್ಲಿ ಪಿತ್ತ ಹೆಚ್ಚಾಗಬಾರದೆಂದು; ಭೇದಿಯ ಔಷಧಿ ತೆಗೆದುಕೊಳ್ಳುವುದು, ಮಳೆಗಾಲದಲ್ಲಿ ವಾತ ಹೆಚ್ಚಬಾರದೆಂದು; ‘ಎನಿಮಾ ತೆಗೆದುಕೊಳ್ಳುವುದು.

. ದೇಶ-ಕಾಲಕ್ಕನುಸಾರ ದಿನಚರ್ಯೆ ಮತ್ತು ಋತುಚರ್ಯೆಯನ್ನು ಆಯೋಜಿಸುವುದು.

೭. ದಾನ ಮಾಡುವುದು ಮತ್ತು ಇತರರಿಗೆ ಸಹಾಯ ಮಾಡುವುದು.

. ಸತ್ಯ ಮಾತನಾಡುವುದು, ಹಾಗೆಯೇ ತಪ ಮತ್ತು ಯೋಗಸಾಧನೆಯನ್ನು ಮಾಡುವುದು.

. ಅಧ್ಯಾತ್ಮ ಚಿಂತನೆ ಮಾಡುವುದು ಮತ್ತು ಅದರಂತೆ ನಡೆದುಕೊಳ್ಳುವುದು

೧೦. ಸದ್ವರ್ತನೆ, ಎಲ್ಲರೊಂದಿಗೆ ಸ್ನೇಹಭಾವದಿಂದ ಮತ್ತು ಸಮಾನತೆಯಿಂದ ವರ್ತಿಸುವುದು.