ದೇಹದಲ್ಲಿರುವ ‘ಅಗ್ನಿಯೇ ಆರೋಗ್ಯದ ಮೂಲ !

೧. ಆರೋಗ್ಯಪ್ರಾಪ್ತಿಗಾಗಿ ದೇಹದಲ್ಲಿ ಅಗ್ನಿಯ ಮಹತ್ವ !

೧ ಅ. ದೇಹದಲ್ಲಿರುವ ಅಗ್ನಿಯು ಭಗವಂತನ ರೂಪವಾಗಿದೆ : ಬಾಹ್ಯ ಸೃಷ್ಟಿಯಲ್ಲಿ ಹೇಗೆ ಅಗ್ನಿಯಿಂದ ಆಹಾರ ಬೇಯುತ್ತದೆಯೋ, ಹಾಗೆಯೇ ತಿಂದ ಆಹಾರವು ಅಗ್ನಿಯಿಂದಲೇ ಜೀರ್ಣವಾಗುತ್ತದೆ. ದೇಹದಲ್ಲಿರುವ ಅಗ್ನಿಗೆ ‘ವೈಶ್ವಾನರ’ ಎಂಬ ಹೆಸರಿದೆ. ಅದಕ್ಕೆ ‘ಜಠರಾಗ್ನಿ’ ಎಂದೂ ಹೇಳುತ್ತಾರೆ. ಭಗವಾನ ಶ್ರೀಕೃಷ್ಣ ಹೇಳುತ್ತಾನೆ,

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತ್ |

ಪ್ರಾಣಪಾನಮಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ||

–  ಶ್ರೀಮದ್ ಭಗವದ್ಗೀತೆ, ಅಧ್ಯಾಯ ೧೫, ಶ್ಲೋಕ ೧೪

ಅರ್ಥ : ಹೇ ಅರ್ಜುನಾ, ನಾನು ‘ವೈಶ್ವಾನರ’ ಅಗ್ನಿಯಾಗಿ ಪ್ರಾಣಿಮಾತ್ರರ ದೇಹದಲ್ಲಿ ವಾಸಿಸುತ್ತೇನೆ. ಪ್ರಾಣ ಮತ್ತು ಅಪಾನ ಇವುಗಳಿಂದ ಯುಕ್ತನಾಗಿ ನಾನು (ವೈಶ್ವಾನರ ಅಗ್ನಿ) ೪ ಪ್ರಕಾರದ ಆಹಾರಗಳನ್ನು ಜೀರ್ಣಿಸುತ್ತೇನೆ. (ಕಚ್ಚಿ ತಿನ್ನುವ, ನೆಕ್ಕಿ ತಿನ್ನುವ, ನುಂಗುವ, ಕುಡಿಯುವ ಹೀಗೆ ಆಹಾರದ ೪ ವಿಧಗಳನ್ನು ಹೇಳಲಾಗಿದೆ.)

೨. ಜಾತ್ರೋ ಭಗವಾನ್ ಅಗ್ನಿ: ಈಶ್ವರೋನಸ್ಯ ಪಚಕ್: |

– ಸುಶ್ರುತಸಂಹಿತಾ, ಸೂತ್ರಸ್ಥಾನ, ಅಧ್ಯಾಯ ೩೫, ಶ್ಲೋಕ ೨೭

ಅರ್ಥ : ಜಠರಾಗ್ನಿಯು ಪ್ರತ್ಯಕ್ಷ ಭಗವಂತನ ರೂಪವಾಗಿದ್ದು, ಆ ಈಶ್ವರನೇ ದೇಹದಲ್ಲಿನ ಆಹಾರವನ್ನು ಜೀರ್ಣ ಮಾಡುತ್ತಿರುತ್ತಾನೆ. ಶರೀರದಲ್ಲಿ ಭಗವಂತನೇ ಅಗ್ನಿರೂಪದಲ್ಲಿ ವಾಸಿಸುವುದರಿಂದ ಭೋಜನವು ಕೇವಲ ಹೊಟ್ಟೆತುಂಬುವುದಕ್ಕಾಗಿ ಇರದೆ ಅದು ಒಂದು ‘ಯಜ್ಞಕರ್ಮ’ವಾಗಿದೆ.

೩. ಆಯುಷ್ಯ ಮತ್ತು ಆರೋಗ್ಯವು ದೇಹದಲ್ಲಿನ ಅಗ್ನಿಯನ್ನೇ ಅವಲಂಬಿಸಿರುತ್ತದೆ !

ಆಯುರ್ವರ್ಣೋ ಬಲಂ ಸ್ವಾಸ್ಥ್ಯಂ ಯುಶೋಭೋಚಯೌ ಪ್ರಭಾ |

ಓಜಸ್ತೇಜೋಜ್ಗಣಾಯ: ಪ್ರಾಣಶ್ಚೋಕ್ತ ದೇಹಾಗ್ನಿಹೇತುಕಃ ||

ಶಾನ್ತೇಃಗ್ನೌ ಮ್ರಿಯತೇ ಯುಕ್ತೇ ಚಿರಂ ಜಿವ್ತ್ಯಾನಮಯ |

ರೋಗೀ ಸ್ಯಾದ್ ವರತ್ತೇ ಮೂಲಂ ಅಗ್ನಿಸ್ತಸ್ಮಾತ್ ನಿರುಚತೇ ||

– ಚರಕಸಂಹಿತಾ, ಚಿಸಿಪಾಸಾತನ, ಅಧ್ಯಾಯ ೧೫, ಶ್ಲೋಕ ೩, ೪

ಅರ್ಥ : ಆಯುಷ್ಯ; ಶರೀರದ ವರ್ಣ; ಬಲ; ಆರೋಗ್ಯ; ಉತ್ಸಾಹ; ಉಪಚಯ (ಪುಷ್ಟಿ); ಕಾಂತಿ; ಓಜ; ತೇಜ; ಶರೀರದಲ್ಲಿನ ಪಂಚಮಹಾಭೂತಗಳ ೫ ಭೂತಾಗ್ನಿ; ರಸ, ರಕ್ತ ಇತ್ಯಾದಿ ೭ ಧಾತುಗಳಲ್ಲಿನ (ಶರೀರ ಘಟಕಗಳಲ್ಲಿನ) ೭ ಧಾತ್ವ್ವಾಗ್ನಿ ಮತ್ತು ಪ್ರಾಣ ಇವು ದೇಹದಲ್ಲಿರುವ ಅಗ್ನಿಯನ್ನೇ (ಜೀರ್ಣಶಕ್ತಿಯನ್ನೇ) ಅಲಂಬಿಸಿರುತ್ತವೆ. ದೇಹದಲ್ಲಿನ ಅಗ್ನಿಯು ಶಾಂತವಾದ ಕೂಡಲೇ ಮರಣ ಬರುತ್ತದೆ. ಅಗ್ನಿಯನ್ನು ಸರಿಯಾಗಿ ಕಾಪಾಡಿಕೊಂಡರೆ, ದೀರ್ಘ ಆಯುಷ್ಯ ಮತ್ತು ಆರೋಗ್ಯ ಲಭಿಸುತ್ತದೆ. ಅಗ್ನಿ ವಿಕೃತಿಯಾಯಿತೆಂದರೆ ಅಥವಾ ಕೆಟ್ಟರೆ, ರೋಗಗಳು ಉತ್ಪನ್ನವಾಗುತ್ತವೆ. ಆದುದರಿಂದ ‘ಅಗ್ನಿ ಇದು ದೇಹದ ಮೂಲವಾಗಿದೆ’, ಎಂದು ಋಷಿಗಳು ಹೇಳುತ್ತಾರೆ.

೪. ದೇಹದ ಅಗ್ನಿಯ ರಕ್ಷಣೆಯಾಗಿ ಆರೋಗ್ಯವಂತರಾಗಲು ನಾಲ್ಕು ಮೂಲಭೂತ ಕೃತಿಗಳು

. ಬೇಗ ಮಲಗಿ, ಬೇಗ ಏಳಿ ಮತ್ತು ಮಧ್ಯಾಹ್ನ ಮಲಗಬೇಡಿ

. ಮಲಮೂತ್ರಗಳ ವೇಗವನ್ನು (ಪ್ರವೃತ್ತಿ) ತಡೆಯಬೇಡಿರಿ !

. ದೇಹದಲ್ಲಿನ ರೋಗಕಾರಕ ತ್ರಿದೋಷಗಳನ್ನು ನಾಶಮಾಡಲು ಪ್ರತಿದಿನ ವ್ಯಾಯಾಮ ಮಾಡಿರಿ !

. ಆಹಾರದ ೪ ಮೂಲಭೂತ ನಿಯಮಗಳನ್ನು ಪಾಲಿಸಿ  !

ಈ ನಿಯಮಗಳು ಹೀಗಿವೆ.

೧. ಯೋಗ್ಯ ಸಮಯಕ್ಕೆ ಊಟ ಮಾಡಿ !

೨. ಯೋಗ್ಯ ಪ್ರಮಾಣದಲ್ಲಿ ಊಟ ಮಾಡಿ !

. ಅಗತ್ಯವಿರುವಷ್ಟೇ ನೀರು ಕುಡಿಯಿರಿ !

. ಅನಾರೋಗ್ಯದಿಂದ ಬಳಲುತ್ತಿರುವಾಗ ಹಾಲು ಮತ್ತು ಹಾಲಿನ ಪಾರ್ಥಗಳನ್ನು ತ್ಯಜಿಸಿರಿ !

(ಆಧಾರ : ಸನಾತನ ನಿರ್ಮಿತ ಗ್ರಂಥ – ‘ಆಯುರ್ವೇದವನ್ನು ಪಾಲಿಸಿ ಔಷಧಿಗಳಿಲ್ಲದೇ ಆರೋಗ್ಯವಂತರಾಗಿ’ !)