ರೋಗದ ಆಧ್ಯಾತ್ಮಿಕ ಕಾರಣಗಳು ಮತ್ತು ದೈವೀಚಿಕಿತ್ಸೆ !

ಔಷಧಿಗಳ ಜೊತೆಗೆ ಆಯುರ್ವೇದವು ‘ದೈವೀ ಚಿಕಿತ್ಸೆಯನ್ನೂ ಹೇಳುತ್ತದೆ. ಹೆಚ್ಚಿನ ಸಲ ಯಾವುದೇ ದೈಹಿಕ ಕಾಯಿಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಧ್ಯಾತ್ಮಿಕ ಮತ್ತು ಸ್ವಲ್ಪ ಪ್ರಮಾಣದಲ್ಲಿ ಮಾನಸಿಕ ಭಾಗವೂ ಇರುತ್ತದೆ. ಆಯುರ್ವೇದವು ರೋಗದ ಮೂಲ ಕಾರಣವನ್ನು ಕಂಡುಹಿಡಿಯುವಾಗ ಆಧ್ಯಾತ್ಮಿಕ ಭಾಗದ ಕಡೆಗೂ ಗಮನಹರಿಸುತ್ತದೆ. ‘ಔಷಧಿಗಳಿಂದ ಪರಿಣಾಮವಾಗದ ಕೆಲವು ಕಾಯಿಲೆಗಳು (ರೋಗಗಳು) ಹಿಂದಿನ ಜನ್ಮದ ತಪ್ಪುಗಳಿಂದ, ಅಂದರೆ ಪ್ರಾರಬ್ಧದಿಂದ ಬರುತ್ತವೆ, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಆಯುರ್ವೇದದಲ್ಲಿ ೧೪ ಪ್ರಕಾರದ ದೈವೀಚಿಕಿತ್ಸೆ ಗಳನ್ನು ಹೇಳಲಾಗಿದೆ. ಮಂತ್ರ; ಔಷಧಿಗಳು; ಮಣಿಗಳು (ಗ್ರಹಗಳ ಹರಳುಗಳು); ಹೋಮ ಮತ್ತು ಯಜ್ಞ; ಪ್ರಾಯಶ್ಚಿತ್ತ ಮತ್ತು ವ್ರತಗಳು; ಉಪವಾಸ; ದಾನ; ಜಪ; ತಪ; ದ್ವಿಜ (ಬ್ರಾಹ್ಮಣ), ದೇವತೆಗಳು ಅಥವಾ ಗುರುಗಳ ಪೂಜೆ; ದ್ವಿಜ ಮತ್ತು ಸಂತರ ಸನ್ಮಾನ, ಸತ್ಸಂಗ; ಎಲ್ಲ ಜೀವಿಗಳ ಬಗ್ಗೆ ಮೈತ್ರಿ ಭಾವನೆ; ಯೋಗಾಭ್ಯಾಸ ಮತ್ತು ಧ್ಯಾನಧಾರಣಾ; ಹಾಗೆಯೇ ಕುಲಾಚಾರ ಮೊದಲಾದವುಗಳು ಇವುಗಳ ಅಂತರ್ಗತ ಬರುತ್ತವೆ.

ಮಂತ್ರೋಪಾಯ, ನಾಮಜಪ ಮಾಡುವುದು, ಸ್ತೋತ್ರ ಗಳನ್ನು ಹೇಳುವುದು, ದೃಷ್ಟಿ ತೆಗೆಯುವುದು, ಶರೀರದ ಮೇಲಿನ ಕಪ್ಪು ಶಕ್ತಿಯ ಆವರಣ ತೆಗೆಯುವುದು ಮುಂತಾದ ಆಧ್ಯಾತ್ಮಿಕ ಉಪಾಯಗಳಿಂದ ಕೆಲವು ಕಾಯಿಲೆಗಳು ಗುಣವಾಗುತ್ತವೆ ಅಥವಾ ಅವುಗಳ ತೀವ್ರತೆಯು ಕಡಿಮೆಯಾಗುತ್ತದೆ ಅಥವಾ ಔಷಧಿಗಳು ಕಾಯಿಲೆಯ ಮೇಲೆ ಒಳ್ಳೆಯ ರೀತಿಯಿಂದ ಕಾರ್ಯ ಮಾಡುತ್ತವೆ., ಸನಾತನದ ಸಾವಿರಾರು ಸಾಧಕರು ಇದನ್ನು ಅನುಭವಿಸಿದ್ದಾರೆ.

ವೈದ್ಯ ಮೇಘರಾಜ ಪರಾಡಕರ್

ಮಂತ್ರೋಪಾಯ

ಪರಾತ್ಪರ ಗುರು ಪರಶರಾಮ ಪಾಂಡೆ ಮಹಾರಾಜರು ಅನೇಕ ಕಾಯಿಲೆಗಳಿಗೆ ಮಂತ್ರೋಪಾಯ ಕೊಟ್ಟಿದ್ದರಿಂದ ಸನಾತನದ ಅನೇಕ ಸಾಧಕರ ಕಾಯಿಲೆಗಳು ಕಡಿಮೆಯಾದವು  ಅಥವಾ ಅವುಗಳ ತೀವ್ರತೆ ಕಡಿಮೆ ಆಯಿತು. ಅನೇಕ ಸಂಸ್ಕೃತ ಗ್ರಂಥಗಳ ಅಧ್ಯಯನ ಮಾಡಿ ಅವರು ಆ ಮಂತ್ರಗಳನ್ನು ಹುಡುಕಿ ತೆಗೆದಿದ್ದಾರೆ.

ಪೂರ್ವಜರ ತೊಂದರೆಗಳಿಂದ ಆಗುವ ರೋಗಗಳಿಗೆ ಉಪಾಯ !

ಸದ್ಯ ಸಮಾಜದಲ್ಲಿನ ಬಹಳಷ್ಟು ವ್ಯಕ್ತಿಗಳಿಗೆ ಪೂರ್ವಜರ ತೊಂದರೆಗಳಿರುತ್ತವೆ. ಕೆಲವು ಕಾಯಿಲೆಗಳು (ರೋಗಗಳು) ಪೂರ್ವಜರ ತೊಂದರೆಗಳಿಂದ ಬರುತ್ತವೆ. ‘ಶ್ರೀ ಗುರುದೇವ ದತ್ತ ಈ ನಾಮಜಪ ಮಾಡುವುದರಿಂದ ಪೂರ್ವಜರ ತೊಂದರೆಗಳು ಕಡಿಮೆಯಾಗಿ ಆ ಕಾಯಿಲೆಗಳು ಕಡಿಮೆಯಾಗುತ್ತವೆ.  ssrf.org ಈ ಜಾಲತಾಣದಲ್ಲಿ ಇದರ ಉದಾಹರಣೆಗಳನ್ನು ಕೊಡಲಾಗಿದೆ.

ಪ್ರಾಣಶಕ್ತಿವಹನ ವ್ಯೂಹದಲ್ಲಿನ ಅಡಚಣೆಯಿಂದಾಗುವ ರೋಗಗಳಿಗೆ ಉಪಾಯ

ಶ್ವಾಸಾಂಗವ್ಯೂಹ, ಜೀರ್ಣಾಂಗವ್ಯೂಹ,, ನರಮಂಡಲ ಇತ್ಯಾದಿ ಸಂಸ್ಥೆಗಳು, ಹಾಗೆಯೇ ರಕ್ತಪರಿಚಲನಾವ್ಯೂಹ ಇವುಗಳಿಗೆ ಪ್ರಾಣವಹನ (ಚೇತನಾ) ಸಂಸ್ಥೆಯು ಪ್ರಾಣಶಕ್ತಿಯನ್ನು ಪೂರೈಸುತ್ತದೆ. ಅದರಲ್ಲಿ ಅಡಚಣೆಗಳು ಉಂಟಾದರೆ ಸಂಬಂಧಿತ ಇಂದ್ರಿಯಗಳ ಕಾರ್ಯಕ್ಷಮತೆ ಕಡಿಮೆಯಾಗಿ ರೋಗಗಳು ಉದ್ಭವಿಸುತ್ತವೆ. ಕೆಲವೊಮ್ಮೆ ವೈದ್ಯಕೀಯ ಪರೀಕ್ಷೆಗಳು (ಇನ್‌ವೆಷ್ಟಿಗೇಶನ್) ಸಾಮಾನ್ಯವಾಗಿರುತ್ತವೆ (ನಾರ‍್ಮಲ್); ಆದರೆ ತೊಂದರೆಗಳು ಆಗುತ್ತಿರುತ್ತವೆ. ಆಗ ಸಂಬಂಧಿತ ಸಂಸ್ಥೆಯಲ್ಲಿನ ಅಥವಾ ಅವಯವಗಳಲ್ಲಿನ ಪ್ರಾಣಶಕ್ತಿಯು (ಚೇತನಾ) ಕಡಿಮೆ ಆಗಿದ್ದರಿಂದ ಆ ರೋಗ ಆಗಿರುತ್ತದೆ.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾಕ್ಟರ ಆಠವಲೆಯವರು ಹಿಂದೂ ಧರ್ಮ ದಲ್ಲಿರುವ ಜ್ಞಾನದ ಉಪಯೋಗವನ್ನು ಮಾಡಿ ಪ್ರಾಣಶಕ್ತಿ (ಚೇತನಾ)ವಹನ ಸಂಸ್ಥೆಯಲ್ಲಿನ ಅಡಚಣೆಗಳನ್ನು ಕಂಡುಹಿಡಿಯುವ ಪದ್ಧತಿ, ಹಾಗೂ ವಿವಿಧ ಮುದ್ರೆಗಳು, ನ್ಯಾಸ  ಮತ್ತು ನಾಮಜಪ ಇವುಗಳ ಸಂದರ್ಭದಲ್ಲಿ ತಾವೇ ಪ್ರಯೋಗಗಳನ್ನು ಮಾಡಿದರು. ಮತ್ತು ರೋಗಗಳು ಕಡಿಮೆಯಾಗಲು ಸನಾತನದ ಸಾಧಕರಿಗೆ ಈ ಉಪಾಯಪದ್ಧತಿಯನ್ನು ಹೇಳಿದರು. ಈ ಉಪಾಯಪದ್ಧತಿಯಲ್ಲಿ ಕೈಬೆರಳುಗಳ ಮುದ್ರೆ ಮತ್ತು ನಾಮಜಪ ಮಾಡಿ ನಿರ್ದಿಷ್ಟ ಕುಂಡಲಿನಿಚಕ್ರದ ಜಾಗದಲ್ಲಿ ಅಥವಾ ಅವಯವಗಳ ಮೇಲೆ ನ್ಯಾಸ ಮಾಡಬೇಕಾಗುತ್ತದೆ. ವರ್ಷ ೨೦೧೦ ರಿಂದ ಸನಾತನದ ಸಾವಿರಾರು ಸಾಧಕರಿಗೆ ಅದರ ಲಾಭವಾಗುತ್ತಿರುವುದರಿಂದ ಈಗ ಇದು ಒಂದು ಪ್ರಮಾಣಪೂರ್ಣ ಶಾಸ್ತ್ರವೇ ಆಗಿದೆ.

ದೇವತೆಗಳ ಒಂದು ಬಿಟ್ಟು ಒಂದು ನಾಮಜಪ ಮಾಡುವುದು, ಖಾಲಿ ಪೆಟ್ಟಿಗೆಗಳ ಉಪಾಯ ಇತ್ಯಾದಿ ವೈಶಿಷ್ಟ್ಯಪೂರ್ಣ ಉಪಾಯ ಪದ್ಧತಿಗಳನ್ನು ಡಾಕ್ಟರರು ಕಂಡುಹಿಡಿದಿದ್ದಾರೆ.

ರೋಗನಿವಾರಣೆಗಾಗಿ ದೇವತೆಗಳ ನಾಮಜಪ

ಮನುಷ್ಯನ ದೇಹವು ಪಂಚಮಹಾಭೂತಗಳಿಂದ ತಯಾರಾಗಿರುವುದರಿಂದ ಯಾವುದಾದರೊಂದು ತತ್ವವು ಅಸಮತೋಲನವಾದರೆ ರೋಗಗಳು ಉದ್ಭವಿಸುತ್ತವೆ. ರೋಗಗಳು ಪಂಚತತ್ತ್ವಗಳಿಗೆ ಸಂಬಂಧಿಸಿರುತ್ತವೆ. ಪ್ರತಿಯೊಂದು ದೇವತೆಯಲ್ಲಿ ಪಂಚತತ್ವಗಳು ಇರುತ್ತವೆ. ದೇವತೆಗಳಲ್ಲಿರುವ ಪಂಚತತ್ವಗಳಲ್ಲಿನ ಯಾವುದಾದರೊಂದ ತತ್ವದ ಹೆಚ್ಚಳಕ್ಕನುಸಾರ ಆ ದೇವತೆಯು ಆ ತತ್ವಕ್ಕೆ ಸಂಬಂಧಿಸಿದ ರೋಗವನ್ನು ಬೇಗನೇ ಗುಣಪಡಿಸ ಬಹುದು. ಪಂಚತತ್ವಗಳಿಗೆ ಸಂಬಂಧಿಸಿದ ರೋಗ ನಿವಾರಣೆಯ ನಾಮಜಪದ ಜೊತೆಗೆ ಮುದ್ರೆ ಮತ್ತು ನ್ಯಾಸವನ್ನು ಮಾಡಿದರೆ ಉಪಾಯದ ಹೆಚ್ಚು ಲಾಭವಾಗುತ್ತದೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಡಾ. ಆಠವಲೆಯವರು ರೋಗ ನಿರ್ಮೂಲನೆಗಾಗಿ ನಾಮಜಪದ ಸಂಶೋಧನೆಯನ್ನು ಮಾಡಿದ್ದಾರೆ.

ಸನಾತನ ಸಂಸ್ಥೆಯ ಸದ್ಗುರು ಡಾ. ಮುಕುಲ ಗಾಡಗೀಳ ಇವರೂ ಸಹ ವಿವಿಧ ರೋಗಗಳ ಮೇಲೆ ವಿಶಿಷ್ಟ ನಾಮಜಪಗಳನ್ನು ಕಂಡುಹಿಡಿದಿದ್ದಾರೆ.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.