ವ್ಯಾಯಾಮವನ್ನು ಮಾಡಲು ಬೇಸರವಾಗುತ್ತಿದೆಯೆ ? ಹಾಗಾದರೆ ಹೀಗೆ ಮಾಡಿ !
‘ವ್ಯಾಯಾಮದ ಸಂದರ್ಭದಲ್ಲಿ ತಮ್ಮಿಂದ ನಿಜಸ್ಥಿತಿಯನ್ನು ಅರಿತು ಅಪೇಕ್ಷೆಯನ್ನಿಡಬೇಕು. ಒಂದು ವೇಳೆ ಅಪೇಕ್ಷೆಯು ವಿಪರೀತ ಅಥವಾ ದೊಡ್ಡದಾಗಿದ್ದರೆ, ಅದರಿಂದ ನಿಮಗೆ ನಿರಾಶೆ ಬರಬಹುದು ಮತ್ತು ವ್ಯಾಯಾಮದಲ್ಲಿ ಸಾತತ್ಯವಿಡಲು ಕಠಿಣವಾಗುತ್ತದೆ.
(ಭಾಗ ೮)

೧. ತನ್ನ ಕ್ಷಮತೆಗನುಸಾರ ವ್ಯಾಯಾಮಕ್ಕೆ ಆರಂಭಿಸಿ ಕ್ರಮೇಣ ವ್ಯಾಯಾಮದ ಸಮಯವನ್ನು ಹೆಚ್ಚಿಸುವುದರಿಂದ ವ್ಯಾಯಾಮವನ್ನು ಸತತವಾಗಿ ಮಾಡಲು ಸಾಧ್ಯವಾಗುವುದು !
ಒಂದು ವೇಳೆ ನೀವು ಪ್ರತಿದಿನ ೧ ಗಂಟೆ ವ್ಯಾಯಾಮವನ್ನು ಮಾಡಲು ನಿರ್ಧರಿಸಿದ್ದರೆ; ಸದ್ಯ ನಿಮ್ಮ ದೈಹಿಕ ಕ್ಷಮತೆ ಕಡಿಮೆ ಇದ್ದರೆ, ೧ ಗಂಟೆ ವ್ಯಾಯಾಮ ಮಾಡುವುದು ನಿಮಗಾಗಿ ತುಂಬಾ ಕಠಿಣವೆನಿಸುವುದು ಮತ್ತು ಮರುದಿನ ನಿಮಗೆ ಮೈನೋವು ಅಥವಾ ದಣಿವಾಗುವುದು. ಈ ಅನುಭವದಿಂದ ಮರುದಿನ ನಿಮಗೆ ವ್ಯಾಯಾಮ ಮಾಡುವ ಇಚ್ಛೆ ಕಡಿಮೆಯಾಗುತ್ತದೆ. ಇದಕ್ಕಿಂತ ಪ್ರತಿದಿನ ೨೦ ನಿಮಿಷಗಳ ವರೆಗೆ ವ್ಯಾಯಾಮ ಮಾಡಲು ಆರಂಭಿಸಿ ಕ್ರಮೇಣ ಸಮಯವನ್ನು ಹೆಚ್ಚಿಸಿರಿ. ಅದರಿಂದ ನಿಮ್ಮ ಶರೀರವು ಕ್ರಮೇಣ ವ್ಯಾಯಾಮದ ಅಭ್ಯಾಸ ಮಾಡಿಕೊಳ್ಳುವುದು ಮತ್ತು ವ್ಯಾಯಾಮವನ್ನು ನಿರಂತರವಾಗಿ ಮಾಡಬಹುದು.
೨. ‘ವ್ಯಾಯಾಮವನ್ನು ಮಾಡುವುದರಿಂದ ತನ್ನಲ್ಲಿ ಬದಲಾವಣೆಯಾಗಲು ಸಮಯ ತೆಗೆದುಕೊಳ್ಳುತ್ತದೆ’, ಇದನ್ನು ತಿಳಿಯಿರಿ !
ವ್ಯಾಯಾಮ ಮಾಡಲು ಪ್ರಾರಂಭಿಸಿದ ನಂತರ ಹೆಚ್ಚಿನ ಜನರಿಗೆ ತನ್ನಲ್ಲಿ ತಕ್ಷಣ ಬದಲಾವಣೆಯಾಗುವ ಅಪೇಕ್ಷೆ ಇರುತ್ತದೆ. ಉದಾ. ಕಡಿಮೆ ಅವಧಿಯಲ್ಲಿ ಸಾಕಷ್ಟು ತೂಕ ಕಡಿಮೆಯಾಗುವುದು, ಶರೀರಕ್ಕೆ ಒಳ್ಳೆಯ ಆಕಾರ ಬರುವುದು ಇತ್ಯಾದಿ. ಇಂತಹ ವಿಪರೀತ ಅಪೇಕ್ಷೆಯನ್ನಿಟ್ಟು ವ್ಯಾಯಾಮವನ್ನು ಮಾಡುವಾಗ ಹೆಚ್ಚು ಒತ್ತಡ ಕೊಡುವುದರಿಂದ ಅದು ಅಪಾಯಕಾರಿ ಆಗುವುದು, ಹಾಗೆಯೇ ಅಪೇಕ್ಷೆಯು ಪೂರ್ಣಗೊಳ್ಳದಿರುವುದರಿಂದ ನಿರಾಶೆಯೂ ಬರುವುದು.
ಆದ್ದರಿಂದ ವ್ಯಾಯಾಮ ಮಾಡುವ ಉತ್ಸಾಹ ಕಡಿಮೆಯಾಗುತ್ತದೆ. ಪ್ರತಿದಿನ ಆಗುವ ಶಾರೀರಿಕ ಚಟುವಟಿಕೆಗಳಿಂದ ದಣಿದಿರುವುದರಿಂದ ಶರೀರವು ತನ್ನನ್ನು ಸಂಭಾಳಿಸುತ್ತ ಮೊದಲನೇ ಸ್ಥಿತಿಗೆ ತರಲು ಪ್ರಯತ್ನಿಸುತ್ತಿರುತ್ತದೆ. ಆದ್ದರಿಂದ ಕೆಲವು ದಿನಗಳ ವರೆಗೆ ವ್ಯಾಯಾಮ ಮಾಡಿದರೂ ಶರೀರದಲ್ಲಿ ತಕ್ಷಣ ಬದಲಾವಣೆ ಆಗುವುದಿಲ್ಲ. ‘ತೂಕ ಕಡಿಮೆ ಮಾಡುವುದು, ಶರೀರಕ್ಕೆ ಆಕಾರವನ್ನು ಕೊಡುವುದು, ಹಾಗೆಯೇ ಶಾರೀರಿಕ ಕ್ಷಮತೆಯಲ್ಲಿ ಗಣನೀಯ ಸುಧಾರಣೆಯ ಅರಿವಾಗುವುದು’, ಇವುಗಳಿಗಾಗಿ ಎಲ್ಲರಿಗೂ ಸಮಯ ಬೇಕಾಗುತ್ತದೆ; ಆದರೆ ‘ಅದು ಅಸಾಧ್ಯವೂ ಇಲ್ಲ’, ಎಂಬುದನ್ನು ಗಮನದಲ್ಲಿಡಬೇಕು !
ತನ್ನ ಕ್ಷಮತೆಯ ಆಚೆಗೆ ಹೋಗಿ ವ್ಯಾಯಾಮ ಮಾಡುವುದಕ್ಕಿಂತ ‘ವ್ಯಾಯಾಮದಲ್ಲಿ ಸಾತತ್ಯವಿಡುವುದು ಮತ್ತು ಹಂತಹಂತವಾಗಿ ವ್ಯಾಯಾಮದ ಅವಧಿಯನ್ನು ಹೆಚ್ಚಿಸುವುದು ಮತ್ತು ತೀವ್ರತೆಯನ್ನು ಹೆಚ್ಚಿಸುತ್ತ ಹೋಗುವುದು’, ಇದು ಪ್ರಗತಿಯ ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗಿರುತ್ತದೆ. ಹೀಗೆ ಮಾಡುವುದರಿಂದ ಮೊದಲಿನ ಹಂತದಲ್ಲಿ ನಿರಾಶೆ ಬರದೇ ಮನಸ್ಸು ಉತ್ಸಾಹವಾಗಿದ್ದೂ ಪೂರ್ಣ ವ್ಯಾಯಾಮ ಮಾಡು ತ್ತಿರುವ ಆನಂದವನ್ನು ಪಡೆಯಬಹುದು ಮತ್ತು ಇದೇ ಎಲ್ಲಕ್ಕಿಂತ ಮಹತ್ವದ್ದಾಗಿರುತ್ತದೆ.’
– ಸೌ. ಅಕ್ಷತಾ ರೂಪೇಶ ರೆಡಕರ, ಭೌತಿಕೋಪಚಾರ ತಜ್ಞರು (ಫಿಜಿಯೋಥೆರಪಿಸ್ಟ್), ಫೋಂಡಾ, ಗೋವಾ. (೧೧.೮.೨೦೨೪)