
ಸಾಮಾನ್ಯವಾಗಿ, ಋತುಬಂಧದ ವಯಸ್ಸು ಸಮೀಪಿಸಿದಾಗ ಅಪಾನ ಕ್ಷೇತ್ರದಲ್ಲಿನ ತೊಂದರೆ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಅಪಾನ ವಾಯು ಇದು ದೇಹದ ಹೊಕ್ಕಳಿನ ಕೆಳಭಾಗದಲ್ಲಿ ಕಾರ್ಯನಿರ್ವಹಿಸುವ ವಾಯುವಾಗಿದೆ. ಇದು ಮುಖ್ಯವಾಗಿ ಮಲವನ್ನು ಹೊರಹಾಕುತ್ತದೆ. ಋತುಬಂಧವು ಪ್ರಾರಂಭವಾಗುವಾಗ, ವಾಯುವಿನ ಅನಿಯಮಿತತೆಯು ಹೆಚ್ಚಾಗುತ್ತದೆ. ಅಂತಹ ಸಮಯದಲ್ಲಿ, ಹೊಟ್ಟೆ ಭಾರವಾದಂತೆ (ಟೈಟ) ಅನಿಸುವುದು, ವಾತದ ಪ್ರಕೋಪ ಮತ್ತು ಗರ್ಭಾಶಯದಲ್ಲಿನ ಬದಲಾವಣೆಗಳಿಂದ ಸ್ತ್ರೀಯರ ವಿಶಿಷ್ಟ ಅವಯವಗಳು, ಅಂದರೆ ಸ್ತನಗಳಲ್ಲಿ ನೋವು, ಕಾಲು ನೋವು; ಮುಟ್ಟಿನ ರಕ್ತಸ್ರಾವ ಹೆಚ್ಚು ಅಥವಾ ಕಡಿಮೆ ಹೋಗುವುದು, ಮೂಲವ್ಯಾಧಿಯ ತೊಂದರೆಯಾಗಲು ಪ್ರಾರಂಭ ವಾಗುತ್ತದೆ. ಇದರೊಂದಿಗೆ ಮಾನಸಿಕ ತೊಂದರೆ, ಸ್ವಭಾವದಲ್ಲಿ ಬದಲಾವಣೆ, ನಿರಾಶೆಯಾಗುವುದು ಇತ್ಯಾದಿ ವಿಷಯಗಳೂ ಆಗುತ್ತವೆ. ಇಂತಹ ಸಮಯದಲ್ಲಿ ಆಯುರ್ವೇದ ಚಿಕಿತ್ಸೆಯು ಹೆಚ್ಚು ಉಪಯುಕ್ತವಾಗಿರುವುದು ಕಂಡು ಬರುತ್ತದೆ. ವಿಶೇಷವಾಗಿ ಈ ಅವಧಿಯಲ್ಲಿ, ಯಾವುದೇ ತೊಂದರೆಯನ್ನು ನಿರ್ಲಕ್ಷಿಸಬಾರದು. ಇಲ್ಲವಾದರೆ ಅದರ ಪರಿಣಾಮ ಮುಟ್ಟಿನ ಪ್ರಕೃತಿಯ ಮೇಲೆ ಕಂಡು ಬರುತ್ತದೆ.

ಋತುಬಂಧದ ತೊಂದರೆ ಕಡಿಮೆಯಾಗಲು ಪಾಲಿಸಬೇಕಾದ ನಿಯಮಗಳು
೧. ಈ ವಯಸ್ಸಿನಲ್ಲಿ ತೊಂದರೆಯಾಗಬಾರದು ಅಥವಾ ತೊಂದರೆ ಕಡಿಮೆಯಾಗಬೇಕು ಎಂದು ಪ್ರಾರಂಭದಿಂದಲೂ ಬಸ್ತಿಯ ವಾರ್ಷಿಕ ಉಪಕ್ರಮವನ್ನು ಮಾಡಿಸಿಕೊಳ್ಳಬೇಕು.
೨. ಸೊಂಟದ ವ್ಯಾಯಾಮ, ಸೇತುಬಂಧಾಸನ, ಸೂರ್ಯ ನಮಸ್ಕಾರ ತಪ್ಪದೇ ಮಾಡಬೇಕು.
೩. ಸುಮ್ಮನೆ ಕುಳಿತುಕೊಳ್ಳುವಾಗಲೂ ನೀವು ಕುಳಿತುಕೊಳ್ಳುವ ಆಯಾಮದ (ಕುಳಿತುಕೊಳ್ಳುವ ಆಸನ ಪದ್ಧತಿಯ) ಕಡೆಗೆ ಅಗತ್ಯವಾಗಿ ಗಮನ ಹರಿಸಬೇಕು. ಸೊಂಟ ಅಥವಾ ಬೆನ್ನು ನೋವು ಈ ಅವಧಿಯಲ್ಲಿ ಬೇಗನೆ ಹೆಚ್ಚಾಗುತ್ತದೆ.
೪. ಪಿತ್ತದ ತೊಂದರೆ ಮೊದಲಿನಿಂದಲೂ ಇದ್ದರೆ, ಋತುಸ್ರಾವ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಪಿತ್ತದ ತೊಂದರೆಯನ್ನು ಔಷಧಿ ಮತ್ತು ಪಥ್ಯಗಳಿಂದ ಶಾಶ್ವತವಾಗಿ ಗುಣಪಡಿಸಬಹುದು.
೫. ಹೆಚ್ಚು ನೀರು ಕುಡಿಯುವುದು, ಜೇನುತುಪ್ಪ- ನಿಂಬೆ ನೀರು, ಬಿಸಿ ನೀರು- ಜೇನು ತುಪ್ಪ ಸೇವಿಸಬಾರದು.
೬. ರಾತ್ರಿ ಸಮಯಕ್ಕೆ ಸರಿಯಾಗಿ ಮಲಗುವುದು ಮತ್ತು ಬೇಗ ಏಳುವುದು ದೇಹದ ವಾತವನ್ನು ಸಮರ್ಪಕವಾಗಿಡಲು ಅಗತ್ಯವಾದ ನಿಯಮವಾಗಿದೆ.
೭. ತಂಗಳು(ತಂಗಳು ಎಂದರೆ ಇಂದು ತಯಾರಿಸಿದ ಆಹಾರ ಮರುದಿನ ಉಪಯೋಗಿಸುವುದು) ಆಹಾರವನ್ನು ಸೇವಿಸಬಾರದು.
೮. ಪ್ರತಿದಿನ ಕಡಿಮೆ ಎಂದರೂ ಕೈ, ಕಾಲು ಮತ್ತು ಸೊಂಟಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು.
೯. ಮಲಬದ್ಧತೆ ಮತ್ತು ಹೊಟ್ಟೆ ಭಾರವಾದಂತೆ (ಟೈಟ) ಅನಿಸುವುದು (ಉಬ್ಬಿದೆಂತೆನಿಸುವುದು) ಆಗುತ್ತಿದ್ದರೆ, ಶುಂಠಿ- ಸೈಂಧವ ಲವಣ ಎರಡನ್ನು ಊಟದ ಮೊದಲು ಸೇವಿಸಬೇಕು.
೧೦. ನಿಯಮಿತವಾಗಿ ಊಟದ ಸಮಯವನ್ನು ಪಾಲಿಸಬೇಕು. ಮಧ್ಯಾಹ್ನದ ಊಟ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆಯ ನಡುವೆ ಮತ್ತು ರಾತ್ರಿ ೮ ಗಂಟೆಯ ಒಳಗೆ ಮಾಡಬೇಕು. ಉಪಾಹಾರ ಮಾಡಲು ಹಸಿವೆಯಿಲ್ಲದಿದ್ದರೆ ಮಾಡಬಾರದು.
೧೧. ಮಾನಸಿಕ ಆರೋಗ್ಯವನ್ನು ಸುಧಾರಿಸಲು, ಭಾವನೆಗಳನ್ನು ಕಡಿಮೆ ಮಾಡಲು ಮತ್ತು ಸ್ವಯಂ-ಸಮನ್ವಯತೆ, ಸ್ವಯಂ ಸಮನ್ವಯ, ವೀಕ್ಷಣೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಔಷಧಿಗಳನ್ನು ತೆಗೆದುಕೊಂಡು ವಿಶೇಷ ಪ್ರಯತ್ನಗಳನ್ನು ಮಾಡಬೇಕು.
– ವೈದ್ಯ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !